ಎರಡು ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರಲ್ಲಿ ಯೂರೋಪ್ ಮೂಲದ ಅಭಿಮಾನಿಯೊಬ್ಬರು ಫೋನ್ ನಂಬರ್ ಕೇಳಿ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬ್ರುಸ್ಸೆಲ್ಸ್‌ (ಬೆಲ್ಜಿಯಂ): ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತದ ಪ್ರಖ್ಯಾತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಯೂರೋಪ್ ಮೂಲದ ಅಭಿಮಾನಿಯೊಬ್ಬರು ನೀರಜ್ ಚೋಪ್ರಾ ಬಳಿ ಅವರ ಫೋನ್ ನಂಬರ್ ಕೇಳಿ ಗಮನ ಸೆಳೆದಿದ್ದಾರೆ.

ಈ ಘಟನೆ ಯಾವಾಗ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲವಾದರೂ, ಆ ಅಭಿಮಾನಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಬಳಿ ಆಟೋಗ್ರಾಫ್ ಪಡೆದುಕೊಳ್ಳುತ್ತಿರುತ್ತಾರೆ. ಈ ವೇಳೆ ಇಬ್ಬರು ಯೂರೋಪಿಯನ್ ಯುವತಿಯರು ನೀರಜ್ ಚೋಪ್ರಾ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಎರಡನೇ ಯುವತಿಯು ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ, ನೀರಜ್ ಚೋಪ್ರಾ ಬಳಿಕ ನಿಮ್ಮ ಫೋನ್ ನಂಬರ್ ಕೊಡುತ್ತೀರಾ ಎಂದು ಕೇಳುತ್ತಾರೆ. ಆಗ ನೀರಜ್ ಚೋಪ್ರಾ ಆ ಯುವತಿಯ ಮನವಿಯನ್ನು ನಯವಾಗಿ ತಿರಸ್ಕರಿಸುತ್ತಾರೆ.

ಎಡಗೈ ಮುರಿದಿದ್ದರೂ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ನೀರಜ್‌ ಚೋಪ್ರಾ ರನ್ನರ್‌-ಅಪ್‌

ಹೀಗಿತ್ತು ನೋಡಿ ಆ ವಿಡಿಯೋ: 

Scroll to load tweet…

ಇನ್ನು ಜಾವೆಲಿನ್ ಥ್ರೋ ಸ್ಪರ್ಧೆಯ ವಿಚಾರಕ್ಕೆ ಬಂದರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೀರಜ್ ಚೋಪ್ರಾ, ತಮ್ಮ ಎಡಗೈ ಗಾಯದ ಹೊರತಾಗಿತಯೂ ಬ್ರುಸ್ಸೆಲ್ಸ್‌ ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಕೈಚೆಲ್ಲಿದ್ದರು.

ಸ್ಕಾಟ್ಲೆಂಡ್‌ನ ಗ್ಲಾಸ್‌ಗೋನಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆಯೋಜನೆ?

ಕಳೆದ ಶನಿವಾರ ಮಧ್ಯರಾತ್ರಿ ನಡೆದ ಸ್ಪರ್ಧೆಯಲ್ಲಿ 87.86 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಸತತ 2ನೇ ವರ್ಷ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ನೀರಜ್, 87.86 ಮೀ. ದೂರಕ್ಕೆ ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರು. ಇನ್ನು ಪ್ಯಾರಿಸ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ 87.87 ಮೀ. ದೂರಕ್ಕೆ ಜಾವೆಲಿನ್ ಎಸೆದು, ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಜರ್ಮನಿಯ ಜೂಲಿಯನ್ ವೇಬರ್ 85.97 ಮೀ. ಎಸೆದು 3ನೇ ಸ್ಥಾನ ಗಳಿಸಿದರು.