IPL 2024: ಚೆನ್ನೈ ಚೆಪಾಕ್ ಮೈದಾನದಲ್ಲೇ ಧೋನಿ ಫ್ಯಾನ್ಸ್ ಕಾಲೆಳೆದ ಜಡೇಜಾ..! ವಿಡಿಯೋ ವೈರಲ್

ತವರಿನಾಚೆ ಸತತ 2 ಸೋಲು ಕಂಡು ಕೊಂಚ ಕುಗ್ಗಿದ್ದ ಸಿಎಸ್‌ಕೆಗೆ ಈ ಗೆಲುವು ಆತ್ಮವಿಶ್ವಾಸ ಮರಳಿ ಪಡೆಯಲು ನೆರವಾದರೆ, ಕೆಕೆಆರ್ ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಗುರಿಯಾಯಿತು. ಇನ್ನು ಇದೇ ಪಂದ್ಯದಲ್ಲಿ ರವೀಂದ್ರ ಜಡೇಜಾ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ ಅಭಿಮಾನಿಗಳ ಕಾಲೆಳೆದು ಗಮನ ಸೆಳೆದಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

IPL 2024 Ravindra Jadeja teases Chepauk crowd during CSK vs KKR kvn

ಚೆನ್ನೈ: ತವರಿನ ಪಿಚ್‌ನ ಸಂಪೂರ್ಣ ಲಾಭ ಪಡೆಯುವುದು ಹೇಗೆ ಎನ್ನುವುದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತೊಮ್ಮೆ ಸಾಬೀತುಪಡಿಸಿದೆ. ಸೋಮವಾರ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಲೋ ಸ್ಕೋರಿಂಗ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದ ಸಿಎಸ್‌ಕೆ, ಈ ಆವೃತ್ತಿಯಲ್ಲಿ ತವರಿನಲ್ಲಿ ಆಡಿದ ಮೂರೂ ಪಂದ್ಯಗಳಲ್ಲೂ ವಿಜಯಪತಾಕೆ ಹಾರಿಸಿದ ಹಿರಿಮೆ ಗಳಿಸಿತು.

ತವರಿನಾಚೆ ಸತತ 2 ಸೋಲು ಕಂಡು ಕೊಂಚ ಕುಗ್ಗಿದ್ದ ಸಿಎಸ್‌ಕೆಗೆ ಈ ಗೆಲುವು ಆತ್ಮವಿಶ್ವಾಸ ಮರಳಿ ಪಡೆಯಲು ನೆರವಾದರೆ, ಕೆಕೆಆರ್ ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಗುರಿಯಾಯಿತು. ಇನ್ನು ಇದೇ ಪಂದ್ಯದಲ್ಲಿ ರವೀಂದ್ರ ಜಡೇಜಾ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ ಅಭಿಮಾನಿಗಳ ಕಾಲೆಳೆದು ಗಮನ ಸೆಳೆದಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಗೆಲ್ಲಲು ಇನ್ನೇನು ಕೆಲವೇ ರನ್‌ಗಳು ಬೇಕಿದ್ದಾಗ ಶಿವಂ ದುಬೆ ವಿಕೆಟ್ ಕೈಚೆಲ್ಲಿದರು. ಆಗ ರವೀಂದ್ರ ಜಡೇಜಾ ಪ್ಯಾಡ್ ಕಟ್ಟಿಕೊಂಡು ಹೆಲ್ಮೆಟ್ & ಬ್ಯಾಟ್ ಹಿಡಿದು ಕ್ರೀಸ್‌ಗಿಳಿಯುವ ರೀತಿ ನಟಿಸಿ ವಾಪಾಸ್ಸಾದರು. ಆ ಬಳಿಕ ಧೋನಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರು. ಆಗ ಇಡೀ ಚೆಪಾಕ್ ಮೈದಾನದಲ್ಲಿದ್ದ ಅಭಿಮಾನಿಗಳು ಜೋರಾಗಿ ಚಿಯರ್‌ಅಪ್ ಮಾಡಿ ಮಹಿಯನ್ನು ಸ್ವಾಗತಿಸಿದರು. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಇದುವರೆಗೂ ಮೂರು ಬಾರಿ ಬ್ಯಾಟಿಂಗ್ ಆಡಲು ಮೈದಾನಕ್ಕಿಳಿದಿದ್ದು 39 ರನ್ ಬಾರಿಸಿದ್ದಾರೆ, ಆದರೆ ಇದುವರೆಗೂ ಒಮ್ಮೆಯೂ ವಿಕೆಟ್ ಒಪ್ಪಿಸಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಇವರೇ ಭಾರತದ ಟಾಪ್ ಬ್ಯಾಟರ್‌ಗಳಿರಬೇಕು: ಲಾರಾ

ಹೀಗಿತ್ತು ನೋಡಿ ಆ ವಿಡಿಯೋ:

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್‌ ಗೆದ್ದ ಚೆನ್ನೈ ಹೆಚ್ಚು ಯೋಚಿಸದೆ ಫೀಲ್ಡಿಂಗ್‌ ಆಯ್ದುಕೊಂಡಿತು. ಆರಂಭಿಕ ಆಘಾತದ ಬಳಿಕ ಪುಟಿದೆದ್ದರೂ ರವೀಂದ್ರ ಜಡೇಜಾ ದಾಳಿಗಿಳಿಯುತ್ತಿದ್ದಂತೆಯೇ ಕೆಕೆಆರ್‌ಗೆ ಕಡಿವಾಣ ಹಾಕಿದರು. ಸ್ಪಿನ್‌, ನಿಧಾನಗತಿಯ ಎಸೆತಗಳನ್ನು ಸಮರ್ಪಕವಾಗಿ ಬಳಸಿಕೊಂಡ ಚೆನ್ನೈ, ಕೆಕೆಆರ್ ಅನ್ನು 20 ಓವರಲ್ಲಿ 9 ವಿಕೆಟ್‌ಗೆ 137 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

IPL 2024: CSK ಪರ ಧೋನಿಯ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ಜಡ್ಡು..!

ಸುಲಭ ಗುರಿ ಬೆನ್ನತ್ತಿದ ಚೆನ್ನೈ, ರಚಿನ್‌(15)ರ ವಿಕೆಟನ್ನು ಬೇಗನೆ ಕಳೆದುಕೊಂಡರೂ, 2ನೇ ವಿಕೆಟ್‌ಗೆ ಜೊತೆಯಾದ ನಾಯಕ ಋತುರಾಜ್‌ ಗಾಯಕ್ವಾಡ್ ಹಾಗೂ ಡ್ಯಾರಿಲ್‌ ಮಿಚೆಲ್‌ 70 ರನ್‌ ಜೊತೆಯಾಟವಾಡಿ, ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. 25 ರನ್‌ ಗಳಿಸಿ ಮಿಚೆಲ್‌ ಔಟಾದ ಬಳಿಕ ಕ್ರೀಸ್‌ಗಿಳಿದ ಶಿವಂ ದುಬೆ, 1 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 28 ರನ್ ಚಚ್ಚಿ ತಂಡ ಬೇಗನೆ ಜಯದ ದಡ ತಲುಪುವಂತೆ ಮಾಡಿದರು. ತಾಳ್ಮೆಯಿಂದ ಬ್ಯಾಟ್‌ ಮಾಡಿದ ಋತುರಾಜ್‌, 58 ಎಸೆತದಲ್ಲಿ 67 ರನ್‌ ಗಳಿಸಿ ಔಟಾಗದೆ ಉಳಿದರು. ಇನ್ನೂ 2.2 ಓವರ್‌ ಬಾಕಿ ಇರುವಂತೆಯೇ ಚೆನ್ನೈ ಜಯಿಸಿತು.

ಇದಕ್ಕೂ ಮುನ್ನ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರೂ, ಸುನಿಲ್‌ ನರೈನ್‌ ಹಾಗೂ ಅಂಗ್‌ಕೃಷ್‌ ರಘುವಂಶಿ ಪವರ್‌-ಪ್ಲೇನಲ್ಲಿ ಕೆಕೆಆರ್‌ ಉತ್ತಮ ಮೊತ್ತ ದಾಖಲಿಸಲು ನೆರವಾದರು. ಆದರೆ 7ನೇ ಓವರ್‌ನಲ್ಲಿ ರಘುವಂಶಿ ಹಾಗೂ ನರೈನ್‌ ಇಬ್ಬರಿಗೂ ಜಡೇಜಾ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ವೆಂಕಟೇಶ್‌ ಅಯ್ಯರ್‌ ವಿಕೆಟನ್ನು ಕಬಳಿಸಿ, 4 ಓವರಲ್ಲಿ ಕೇವಲ 18 ರನ್‌ಗೆ 3 ವಿಕೆಟ್‌ ಉರುಳಿಸಿದರು.

ಕೆಕೆಆರ್ ಯಾವ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ. ಮುಸ್ತಾಫಿಜುರ್‌ ಹಾಗೂ ತುಷಾರ್ ನಿಧಾನಗತಿಯ ಎಸೆತಗಳ ಮೂಲಕ ಕೆಕೆಆರ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

Latest Videos
Follow Us:
Download App:
  • android
  • ios