ಚಿತ್ರೀಕರಣದ ವೇಳೆ ನರ್ಗಿಸ್ ಫಕ್ರಿಗೆ ವರುಣ್ ಧವನ್ ಮುತ್ತು ನೀಡುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ನಿರ್ದೇಶಕರು ಕಟ್ಎಂ ದರೂ ಮುತ್ತು ನೀಡುವುದನ್ನು ಮುಂದುವರೆಸಿದ ವರುಣ್ ಧವನ್ ಟ್ರೋಲ್ ಆಗಿದ್ದಾರೆ. 2014ರ ಮೈ ತೇರಾ ಹೀರೋ ಚಿತ್ರದ ಶೂಟಿಂಗ್ ವಿಡಿಯೋ ಇದಾಗಿದೆ.
ಬಾಲಿವುಡ್ ಸ್ಟಾರ್ ವರುಣ್ ಧವನ್ (Bollywood star Varun Dhawan) ತಮ್ಮ ನಟನೆಯಿಂದ ಲಕ್ಷಾಂತರ ಫ್ಯಾನ್ಸ್ ಮನಸ್ಸು ಗೆದ್ದಿದ್ದಾರೆ. ಹಾಸ್ಯ, ರೋಮ್ಯಾನ್ಸ್ ಎಲ್ಲ ರೀತಿಯ ಸಿನಿಮಾದಲ್ಲಿ ನಟಿಸುವ ವರುಣ್ ಧವನ್, ಫ್ಯಾನ್ಸ್ ಇಂಪ್ರೆಸ್ ಮಾಡೋದ್ರಲ್ಲಿ ಮುಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವರುಣ್, ಫಿಟ್ನೆಸ್ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಆಗಾಗ ಅವರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಗಮನ ಸೆಳೆಯುತ್ತವೆ. ಈಗ ವರುಣ್ ಧವನ್ ಕಿಸ್ಸಿಂಗ್ ವಿಡಿಯೋ ಒಂದು ವೇಗವಾಗಿ ವೈರಲ್ ಆಗಿದೆ.
ವರುಣ್ ಧವನ್, ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis Fakhri )ಗೆ ಮುತ್ತಿಡ್ತಿದ್ದಾರೆ. ನಿರ್ದೇಶಕರು ಕಟ್ ಅಂದ್ರೂ ವರುಣ್ ಮುತ್ತಿಡೋದನ್ನು ನಿಲ್ಲಿಸೋದಿಲ್ಲ. ಇದನ್ನು ನೋಡಿದ ಬಳಕೆದಾರರು ವರುಣ್ ಟ್ರೋಲ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಎಕ್ಸ್ ಖಾತೆಯಲ್ಲಿ ವರುಣ್ ಹಾಗೂ ನರ್ಗಿಸ್ ಫಕ್ರಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ನಟನೆಯಲ್ಲಿ ಮಿತಿ ಮೀರುವ ವರುಣ್ ಧವನ್. ನಿರ್ದೇಶಕರು ಕಟ್ ಅಂದ್ರೂ ತಮ್ಮ ಕೆಲಸವನ್ನು ಮುಂದುವರೆಸಿದ್ದರು ಎಂದು ಶೀರ್ಷಿಕೆ ಹಾಕಲಾಗಿದೆ.
UI ಚೆಲುವೆಯ ಸಂಕ್ರಾಂತಿ ಸಂಭ್ರಮ… ಎತ್ತುಗಳ ಜೊತೆ ಪೋಸ್ ಕೊಟ್ಟ ರೀಷ್ಮಾ ನಾಣಯ್ಯ
ವೈರಲ್ ವಿಡಿಯೋದಲ್ಲಿ ರೋಮ್ಯಾಂಟಿಕ್ ಸೀನ್ ಶೂಟ್ ಆಗ್ತಿರೋದನ್ನು ನೀವು ಕಾಣ್ಬಹುದು. ನರ್ಗಿಸ್ ಫಕ್ರಿಗೆ, ಧವನ್ ಮುತ್ತಿಡುತ್ತಿದ್ದಾರೆ. ಹಿಂದಿನಿಂದ ಕಟ್ ಕಟ್ ಎನ್ನುವ ಧ್ವನಿ ಕೇಳ್ತಿದೆ. ಆದ್ರೆ ಧವನ್ ಬಿಡ್ತಿಲ್ಲ. ಇದನ್ನು ನೋಡಿ ನರ್ಗಿಸ್ ನಗ್ತಾರೆ. ನಂತ್ರ ವಾಸ್ತವಕ್ಕೆ ಬರುವ ಧವನ್ ಕೂಡ ನಗ್ತಿರೋದನ್ನು ವಿಡಿಯೋದಲ್ಲಿ ಕಾಣ್ಬಹುದು.
ಇದು 2014 ರಲ್ಲ ತೆರೆಗೆ ಬಂದ ಮೈ ತೇರಾ ಹೀರೋ ಚಿತ್ರದ ಚಿತ್ರೀಕರಣದ ತುಣುಕು ಎಂದು ನಂಬಲಾಗಿದೆ. ಈ ಚಿತ್ರದಲ್ಲಿ ನರ್ಗಿಸ್ ಫಕ್ರಿ ಮತ್ತು ಇಲಿಯಾನಾ ಡಿಕ್ರೂಜ್ ನಾಯಕಿಯರಾಗಿ ಕಾನಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಚಿತ್ರತಂಡ ವಿಡಿಯೋ ಡಿಲಿಟ್ ಮಾಡುವಂತೆ ಹೇಳಿದೆಯಂತೆ. ವಿಡಿಯೋ ಹಂಚಿಕೊಂಡಿರುವ ಅಸದ್, ಈ ಬಗ್ಗೆ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿದ್ದಾರೆ. ಈ ವಿಡಿಯೋ, ಶೂಟಿಂಗ್ ಸೆಟ್‌ನ ವಾತಾವರಣ ಮತ್ತು ನಟರ ನಡುವಿನ ಗಡಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವರು ವರುಣ್ ವರ್ತನೆಯನ್ನು ಟೀಕಿಸುತ್ತಿದ್ದಾರೆ. ವರುಣ್ ಓವರ್ ಆಕ್ಟಿಂಗ್ ಮಾಡ್ತಾರೆ ಅಂದ್ರೆ ಮತ್ತೆ ಕೆಲವರು ಇಂಥವರನ್ನು ಬಾಲಿವುಡ್ ನಿಂದ ಹೊರಗೆ ಹಾಕ್ಬೇಕು ಎಂದಿದ್ದಾರೆ. ನಟಿಗೆ ಇದ್ರಿಂದ ಮುಜುಗರವಾಗಿದೆ ಅಂತ ಒಬ್ಬರು ಕಮೆಂಟ್ ಮಾಡಿದ್ರೆ ನರ್ಗಿಸ್ ಇದನ್ನೆಲ್ಲ ಸಹಿಸಿಕೊಂಡಿದ್ದಾರೆ, ವರುಣ್ ವರ್ತನೆ ಅತಿಯಾಯ್ತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನರ್ಗಿಸ್ ಕೂಡ ಇದನ್ನು ಎಂಜಾಯ್ ಮಾಡ್ತಿದ್ದಾರೆಂದು ಬರೆದಿದ್ದಾರೆ. ಸೆಟ್ ನಲ್ಲಿದ್ದೇನೆ ಎಂಬುದನ್ನು ವರುಣ್ ಮರೆತಂತಿದೆ. ನಟರು ತಮ್ಮ ಬಾರ್ಡರ್ ಕ್ರಾಸ್ ಮಾಡ್ತಿದ್ದಾರೆ ಹೀಗೆ ಅನೇಕರು ವರುಣ್ ವರ್ತನೆಯನ್ನು ಖಂಡಿಸಿದ್ದಾರೆ.
ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ
ಬಳಕೆದಾರರೊಬ್ಬರು ವರುಣ್ ಧವನ್ ಹಳೆಯ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ವರುಣ್ ಅನೇಕ ನಟಿಯರ ಜೊತೆ ವಿಚಿತ್ರವಾಗಿ ನಡೆದುಕೊಂಡಿದ್ದನ್ನು ಕಾಣ್ಬಹುದು. ಕಿಯಾರಾ ಅಡ್ವಾಣಿ, ಜಾಹ್ನವಿ ಕಪೂರ್, ಆಲಿಯಾ ಭಟ್ ಸೇರಿದಂತೆ ಅನೇಕ ನಟಿಯರ ಸೊಂಟ ಹಿಡಿದುಕೊಂಡಿದ್ದ ವರುಣ್, ಕ್ಯಾಮರಾ ಮುಂದೆ ನಟಿಯರು ಮುಜುಗರಕ್ಕೊಳಗಾಗುವಂತೆ ಮಾಡಿದ್ದನ್ನು ಅಲ್ಲಿ ತೋರಿಸಲಾಗಿದೆ. ವರುಣ್ ಧವನ್ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. 2024ರಲ್ಲಿ ಅವರ ಎರಡು ಸಿನಿಮಾ ತೆರೆಗೆ ಬಂದಿದೆ. ವರುಣ್ ಒಂದು ಸಿನಿಮಾಕ್ಕೆ 12 -15 ಕೋಟಿ ಹಣ ಪಡೆಯುತ್ತಾರೆ. 2010ರಲ್ಲಿ ಮೈ ನೇಮ್ ಈಸ್ ಖಾನ್ ಮೂಲಕ ಬಾಲಿವುಡ್ ಗೆ ಬಂದ ವರುಣ್ ಧವನ್, ಸ್ಟುಡೆಂಟ್ ಆಫ್ ದ ಇಯರ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದ್ರು.
