ಹೆಚ್ಚಿನ ಚಿತ್ರ ತಾರೆಯರು ರಾಜಕೀಯ ಅಭಿಪ್ರಾಯಗಳನ್ನು ಏತಕ್ಕೆ ಹಂಚಿಕೊಳ್ಳುವುದಿಲ್ಲ ಎನ್ನುವ ಬಗ್ಗೆ ನಟಿ ತಾಪ್ಸಿ ಪನ್ನು ಹೇಳಿದ್ದೇನು?
ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳು ಮತ್ತು ಕಮೆಂಟ್‌ಗಳಿಂದಲೇ ಸದಾ ಸುದ್ದಿಯಲ್ಲಿ ಇರುತ್ತಾರೆ. ತಾಪ್ಸಿ (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದು ಹಾಲಿಡೇ ಎಂಜಾಯ್ ಮಾಡೋ ಮೂಡ್‌ನಲ್ಲಿರೋ ನಟಿ ಕೈತುಂಬಾ ಸಿನಿಮಾಗಳಿವೆ. ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿರುವ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಇದಲ್ಲದೇ, ‘ಏಲಿಯನ್’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್ ಆಯಿ ಹಸೀನ್ ದಿಲ್ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನುಗೆ ಅವಕಾಶ ಸಿಕ್ಕಿದೆ. ಇದಾಗಲೇ ನಟಿ, ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. . 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಕೆಲ ಕಾಲ ದೇಶ-ವಿದೇಶಗಳ ಟೂರ್ ಮೂಡಿನಲ್ಲಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಆಗಿದ್ದಾರೆ.
ಇದೀಗ ತಾಪ್ಸಿ ಪನ್ನು ಚಿತ್ರನಟರು ಮತ್ತು ರಾಜಕಾರಣಿಗಳ ಬಗ್ಗೆ ಮಾತನಾಡಿ ಸದ್ದು ಮಾಡುತ್ತಿದ್ದಾರೆ. ಎಎನ್ಐಗೆ ನೀಡಿರುವ ಸಂದರ್ಶನದಲ್ಲಿ, ಅವರು ಹೆಚ್ಚಿನ ನಟ-ನಟಿಯರು ಯಾಕೆ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಚಿತ್ರ ತಾರೆಯರಿಗೂ ಅವರದ್ದೇ ಆದ ರಾಜಕೀಯ ಭಾವನೆಗಳು ಇರುತ್ತವೆ. ಒಬ್ಬೊಬ್ಬರು ಒಂದೊಂದು ಪಕ್ಷಕ್ಕೆ ಸೇರಿದವರೇ ಆಗಿರುತ್ತಾರೆ. ಆದರೆ ಬೇರೆಯವರ ರೀತಿ ಅವರು ಓಪನ್ ಆಗಿ ಮಾತನಾಡುವುದು ಕಷ್ಟ. ಹೀಗೆ ಮಾತನಾಡಿದ್ರೂ ಕಷ್ಟ, ಹಾಗೆ ಮಾತನಾಡಿದ್ರೂ ಕಷ್ಟ. ಚಿತ್ರರಂಗದಲ್ಲಿ ಅವಕಾಶ ಸಿಗಬೇಕು ಎಂದರೆ ಬಾಯಿ ಮುಚ್ಚಿಕೊಂಡಿರೋದೇ ಒಳ್ಳೆಯದು ಎಂದಿದ್ದಾರೆ.
ದುಬೈ ಶೇಖ್ಗೆ ಮಾರಲು ಹೊಂಚುಹಾಕಿದ್ರಂತೆ ತಾಪ್ಸಿ ಪನ್ನು ಪತಿ! ಆ ದಿನಗಳ ಕುರಿತು ನಟಿ ಹೇಳಿದ್ದೇನು?
ಮೊದಲೇ ಚಿತ್ರನಟನಿಗೆ ಬುದ್ಧಿಮತ್ತೆ ಕಡಿಮೆ ಎಂದೇ ಫೇಮಸ್ಸು. ಬುದ್ಧಿನೇ ಇಲ್ಲ ಅಂತಾರೆ. ಇನ್ನು ಹೇಗ್ಹೇಗೋ ಮಾತನಾಡಿ ಎಡವಟ್ಟು ಮಾಡಿಕೊಂಡರೆ ಚಿತ್ರರಂಗದಲ್ಲಿ ಇರುವ ಅವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
ಅಂದಹಾಗೆ, ನಟಿ ತಾಪ್ಸಿ ಪನ್ನು ಅವರು ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿದ್ದು ಇದರಿಂದ ಭಾರಿ ಸುದ್ದಿಯಾಗಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಸುಮಾರು 10 ವರ್ಷಗಳಿಂದ ಡೇಟಿಂಗ್ ಬಳಿಕ ಕಳೆದ ಮಾರ್ಚ್ನಲ್ಲಿ ಮದುವೆಯಾಗಿದ್ದರು. ತಿಂಗಳ ಬಳಿಕ ಇವರ ಮದುವೆ ವಿಡಿಯೋಗಳು ಸೋಷಿಯಲ್ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸಾಮಾನ್ಯವಾಗಿ ಚಿತ್ರತಾರೆಯರ ಮದುವೆ ಎಂದರೆ ಅದು ತಿಂಗಳುಗಟ್ಟಲೆ ಸಂಭ್ರಮದ ಜೊತೆಗೆ ಪ್ರತಿದಿನ ಇಂಚಿಂಚು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಕಾಣಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಾಪ್ಸಿ ಅವರು, ಮದುವೆ ಬಗ್ಗೆ ಯಾವುದೇ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರಲಿಲ್ಲ. ನಂತರ ಮದುವೆ ವಿಡಿಯೋ ವೈರಲ್ ಆದ ಬಳಿಕ ಫ್ಯಾನ್ಸ್ ಶಾಕ್ ಆಗಿದ್ದರು. ಮೊದಲು ಇದು ಶೂಟಿಂಗ್ ವಿಡಿಯೋ ಎಂದುಕೊಂಡಿದ್ದರು ಎಲ್ಲರೂ.ಕೊನೆಗೆ ಇದು ಅಸಲಿ ಮದುವೆ ಎನ್ನುವುದು ತಿಳಿಯಿತು.
ಕಲ್ಕಿಯಲ್ಲಿ ಗರ್ಭಿಣಿ ರೋಲ್ ಮಾಡಿದ್ದ ದೀಪಿಕಾ ಅದೇ ನಕಲಿ ಹೊಟ್ಟೆ ತೋರಿಸ್ತಿದ್ದಾರಾ? ವೈದ್ಯೆ ಹೇಳಿರೋದು ನಿಜವಾಯ್ತಾ?
