ಡಂಕಿ ಟ್ರೇಲರ್​ ರಿಲೀಸ್​: ಇಂಗ್ಲಿಷ್​ ಬರದವರ ಕಥೆ-ವ್ಯಥೆಯ ಜೊತೆಗೆ ವಯಸ್ಸಾದ ಶಾರುಖ್​!

ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಡಂಕಿ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ. ಏನಿದೆ ಇದರಲ್ಲಿ? 
 

Dunki trailer released  Shah Rukh Khan is an old man on a mission again suc

ಪಠಾಣ್​, ಜವಾನ್​ ಯಶಸ್ಸಿನ ಬಳಿಕ ಶಾರುಖ್​ ಖಾನ್​ ಅವರ ಮೂರನೆಯ ಚಿತ್ರ ಡಂಕಿಯ ಟ್ರೇಲರ್​ ಇಂದು ರಿಲೀಸ್​ ಆಗಿದೆ. ಕಳೆದ ನವೆಂಬರ್​ 2ರಂದು ಶಾರುಖ್​ ಅವವರ ಹುಟ್ಟುಹಬ್ಬದಂದು  ಟೀಸರ್​ ರಿಲೀಸ್​ ಆಗಿತ್ತು. ಟೀಸರ್ ಕೈಬಿಟ್ಟ ನಂತರ, ಶಾರುಖ್ ಖಾನ್ ಅವರ ಅಭಿಮಾನಿಗಳು ಅದರ ಬಗ್ಗೆ ಉತ್ಸುಕರಾಗಿದ್ದರು.  ಇದೀಗ ಟ್ರೇಲರ್​ ಬಿಡುಗಡೆಯಾದ ಬಳಿಕವಂತೂ ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್​ ಮತ್ತು ಜವಾನ್ ನಂತರ ನಟನ ಮುಂದಿನ ಬ್ಲಾಕ್​ಬಸ್ಟರ್​ ಚಿತ್ರ ಡಂಕಿ ಎಂದೇ ಎಲ್ಲೆಡೆ ಹೇಳಲಾಗುತ್ತಿದೆ.  ಶಾರುಖ್ ಖಾನ್ ಅವರ ಹಿಂದಿನ ಚಿತ್ರಗಳಾದ ಪಠಾಣ್​ ಮತ್ತು ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿವೆ.  ಪಠಾಣ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,055 ಕೋಟಿ ಗಳಿಸಿದರೆ, ಜವಾನ್ ವಿಶ್ವಾದ್ಯಂತ ಒಟ್ಟು 1,149.85 ಕೋಟಿ ಗಳಿಸಿದೆ. ಬಾಲಿವುಡ್​ನ ವಿವಾದಾತ್ಮಕ ವಿಮರ್ಶಕ ಎಂದು ಕರೆಸಿಕೊಳ್ಳುತ್ತಿರುವ ಕೆಆರ್​ಕೆ ಸೇರಿದಂತೆ ಹಲವರು ಇನ್ನೊಂದು ಸಾವಿರ ಕೋಟಿ ಫಿಕ್ಸ್​ ಎಂದು ಹೇಳುತ್ತಿದ್ದಾರೆ. 

 ಡಂಕಿ ಚಿತ್ರದ ಟೀಸರ್​ನಲ್ಲಿ  ಶಾರುಖ್ ಪಾತ್ರದ ಪರಿಚಯ ಇತ್ತು. ಹಾರ್ಡಿ ಅನ್ನೋದು ಶಾರುಖ್ ಪಾತ್ರದ ಹೆಸರಾಗಿದೆ. ಹಾರ್ಡಿ ತನ್ನ ಗೆಳೆಯರ ಬಗ್ಗೆ ಇರೋ ಪ್ರೀತಿಯನ್ನ ಇಲ್ಲಿ ವ್ಯಕ್ತಪಡಿಸುತ್ತಾನೆ. ಜೊತೆಗೆ ತಮ್ಮ ಗುಂಪಿನಲ್ಲಿರೋ ಮನು ಹೆಸರಿನ ಪಾತ್ರಧಾರಿ ತಾಪ್ಸಿ ಪನ್ನು ಬಗ್ಗೆನೂ ಹೇಳ್ತಾನೆ. ಇದು ಪಂಜಾಬ್​ನ ಕಥೆಯಾಗಿದೆ.  ಹಾರ್ಡಿ (ಶಾರುಖ್​ ಖಾನ್) ಮತ್ತು ಅವನ ಸ್ನೇಹಿತರಾದ ಮನು, ಸುಖಿ, ಬುಗ್ಗು ಮತ್ತು ಬಲ್ಲಿ ಅವರ ಪ್ರಪಂಚವನ್ನು ಇದು ತಿಳಿಸುತ್ತದೆ.  ಮನು ಮತ್ತು ಸುಖಿ ಪಾತ್ರಗಳನ್ನು ಕ್ರಮವಾಗಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ.  

ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?


ಇನ್ನು ಟ್ರೇಲರ್​ನಲ್ಲಿ, ಇವರ ಇಂಗ್ಲಿಷ್‌ ಟೀಚರ್‌ ಆಗಿ ಬೊಮ್ಮಾನ್‌ ಇರಾನಿ ಇದ್ದಾರೆ. ಇದಾದ ಬಳಿಕ ಇವರು ವಿದೇಶಕ್ಕೆ ಹೋಗುತ್ತಾರೆ. ತಮ್ಮ ಭಾಷಾ ಜ್ಞಾನದ ಕೊರತೆ ಇದ್ದರೂ ಇವರಿಬ್ಬರೂ ವಿದೇಶದಲ್ಲಿ ವಾಸಿಸಲು ಹೋಗುತ್ತಾರೆ. ಹಿಂದಿ ಗೊತ್ತಿಲ್ಲದೆ ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡಿಲ್ವ ಎಂದು ಅವರಿಬ್ಬರು ತಮ್ಮ ಭಾಷಾ ಜ್ಞಾನದ ಕುರಿತು ಭರವಸೆ ಹೊಂದಿದ್ದಾರೆ.ಈ ಸಿನಿಮಾದಲ್ಲಿ ಇಂಗ್ಲೀಷ್ ಬರದೆ ಇರೋರ ಕಥೆ ಮತ್ತು ವ್ಯಥೆ ಎರಡೂ ಇದೆ. ಈ ಹಿಂದೆ ಬಿಡುಗಡೆಯಾಗಿದ್ದದ ಚಿತ್ರದ  ವಿಡಿಯೋಗಳು ಕಾಮಿಡಿ ಸಿನಿಮಾ ಅನ್ನುವ  ಫೀಲ್ ಕೂಡ ಕೊಟ್ಟದ್ದವು. ಆದರೆ ಇದೀಗ ರಿಲೀಸ್​  ಆಗಿರುವ ಟ್ರೇಲರ್​ ನೋಡಿದರೆ,  ಚಿತ್ರದ ಎಮೋಷನಲ್ ಭಾಗವನ್ನ ಸಂಕ್ಷಿಪ್ತವಾಗಿಯೇ ಕಟ್ಟಿಕೊಟ್ಟಿದೆ. ಇಲ್ಲಿ ಶಾರುಖ್​ ಖಾನ್​ ಅವರನ್ನು ವಯಸ್ಸಾದ ರೀತಿಯಲ್ಲಿಯೂ ತೋರಿಸಲಾಗಿದೆ. 

ವಿದೇಶಕ್ಕೆ ಹೋಗುವ ಹಳ್ಳಿ ಯುವಕರ ಅಸಲಿ ನೋವು ಏನೂ ಅನ್ನೋದು ಇಲ್ಲಿ ತಿಳಿಯುತ್ತದೆ. ಡೈರೆಕ್ಟರ್ ರಾಜಕುಮಾರ್ ಹಿರಾನಿ ನಿಜಕ್ಕೂ ಇಲ್ಲಿ ಎಲ್ಲರ ಪ್ರಾಬ್ಲಂ ಹೇಳಿಕೊಂಡಿದ್ದಾರೆ. ವಿದೇಶಕ್ಕೆ ಹೋಗ್ಬೇಕು ಅನ್ನೋರಿಗೆ ಇಂಗ್ಲೀಷ್ ಬರಲೇಬೇಕು ಅನ್ನವು ಸತ್ಯ ಇಲ್ಲಿ ವಿಭಿನ್ನವಾಗಿಯೇ ಚಿತ್ರಿಸಲಾಗಿದೆ. ಟ್ರೇಲರ್​ನಲ್ಲಿ ಚಲಿಸುತ್ತಿರುವ ರೈಲಿನ ಬಾಗಿಲಿನ ಹತ್ತಿರ ನಿಂತಿರುವ ಶಾರುಖ್​ ಖಾನ್‌ನನ್ನು ತೋರಿಸುತ್ತ ಶಾರೂಖ್‌ ಪಾತ್ರವನ್ನು ಪರಿಚಯಿಸುತ್ತ ಟ್ರೈಲರ್‌ ಹೋಗುತ್ತದೆ. ಇವರ ಇಂಗ್ಲಿಷ್‌ ಟೀಚರ್‌ ಆಗಿ ಬೊಮ್ಮಾನ್‌ ಇರಾನಿ ಇದ್ದಾರೆ. ಇದಾದ ಬಳಿಕ ಇವರು ವಿದೇಶಕ್ಕೆ ಹೋಗುತ್ತಾರೆ. ತಮ್ಮ ಭಾಷಾ ಜ್ಞಾನದ ಕೊರತೆ ಇದ್ದರೂ ಇವರಿಬ್ಬರೂ ವಿದೇಶದಲ್ಲಿ ವಾಸಿಸಲು ಹೋಗುತ್ತಾರೆ. ಹಿಂದಿ ಗೊತ್ತಿಲ್ಲದೆ ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡಿಲ್ವ ಎಂದು ಅವರಿಬ್ಬರು ತಮ್ಮ ಭಾಷಾ ಜ್ಞಾನದ ಕುರಿತು ಭರವಸೆ ಹೊಂದಿರುವುದನ್ನು ನೋಡಬಹುದು. 

ಹೆಣ್ಣಿನ ಗೌರವದ ಬಗ್ಗೆ ಭಾಷಣ ಮಾಡೋ ನೀವೂ ಹೀಗಾ ಥೂ...! ನಟಿ ತ್ರಿಷಾಗೆ ಶಾಕ್​ ಕೊಟ್ಟ ನೆಟ್ಟಿಗರು

 ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಷ್ಟಕ್ಕೂ ಇದಕ್ಕೆ ಡಂಕಿ ಎಂದು ಹೆಸರು ಕಾರಣ,  ಪಂಜಾಬ್‌ನಲ್ಲಿ Donkey ಅಂದ್ರೆ ಕತ್ತೆಗೆ  ಡಂಕಿ ಅಂತ ಹೇಳುತ್ತಾರೆ. ಇದು ಪಂಜಾಬ್​ ಸುತ್ತ ಸುತ್ತುವ ಚಿತ್ರವಾದ್ದರಿಂದ ಡಂಕಿ ಎಂದು ಹೆಸರು ಇಡಲಾಗಿದೆ. 
 

Latest Videos
Follow Us:
Download App:
  • android
  • ios