'ಜಡೆ' ಹಾಕಿಕೊಂಡು ಬಂದ ದೀಪಿಕಾ ಪಡುಕೋಣೆ: ಸೂಪರ್ ಎಂದ್ರು ಫ್ಯಾಷನ್ ಗುರುಗಳು
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಹೇರ್ ಸ್ಟೈಲ್'ನಿಂದ ಗಮನ ಸೆಳೆದಿದ್ದು, ಅವರ ಜಡೆ ಸೂಪರ್ ಎಂದಿದ್ದಾರೆ ಫ್ಯಾಷನ್ ಗುರುಗಳು.
ಇತ್ತೀಚಿಗೆ ನಡೆದ 'ಎಲ್ಲೆ ಅವಾರ್ಡ್' ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ ಹೊಸ ಹೇರ್ ಸ್ಟೈಲ್'ನಿಂದ ಕಂಗೊಳಿಸಿದ್ದಾರೆ. ಅವರ ಲುಕ್ ನೋಡಿ ಎಲ್ಲರೂ ಫಿದಾ ಆಗಿದ್ದು, ಅವರ ಜಡೆ ಮೇಲೆ ಕ್ಯಾಮೆರಾಗಳ ಕಣ್ಣು ಬಿದ್ದಿದೆ. ಎರಡು ಜಡೆ ಎಣೆದು ಅದನ್ನು ಒಂದು ಜಡೆಯಾಗಿ ಹಾಕಿಕೊಂಡ ದೀಪಿಕಾಗೆ, ಕೆಲವರು ನಿಮ್ ಜಡೆ ಚೆನ್ನಾಗಿದೆ ಅಂದಿದ್ದಾರೆ. ಅದಕ್ಕೂ ಜಾಸ್ತಿ ಇದೇನ್ ಜಡೆ ಸ್ಪೋರ್ಟ್ಸ್'ಗೆ, ರನ್ನಿಂಗ್ ರೇಸ್'ಗೆ ಅಥವಾ ಬ್ಯಾಡ್ ಮಿಂಟನ್'ಗೆ ಹಾಕಿಕೊಂಡು ಬಂದಂತಿದೆ ಎಂದು ಟೀಕಿಸಿದವರು ಇದ್ದಾರೆ. ಏನೇ ಆದರೂ ಟಾಪ್ ಹೀರೋಯಿನ್ ಏನ್ ಮಾಡಿದರೂ ಅದು ಹೊಸ ಸ್ಟೈಲ್ ಆಗುತ್ತೆ ಅನ್ನೋದು ನಿಜ.
'ಸಾಮಿ ಸಾಮಿ..' ಎಂದು ಕುಣಿದ ನಟಿ ಜಾನ್ವಿ ಹಿಗ್ಗಾಮುಗ್ಗಾ ಟ್ರೋಲ್; ಕಾರಣವೇನು?