ದಿನಗಳ ಹಿಂದಷ್ಟೇ ನಟ ಆಮೀರ್ ಖಾನ್ ಕಾಂಗ್ರೆಸ್‌ಗೆ ವೋಟ್ ಮಾಡಿ ಎಂದು ಹೇಳುತ್ತಿರುವಂತಹ ವೀಡಿಯೋ ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬಾಲಿವುಡ್ ಮತ್ತೊಬ್ಬ ನಟ ರಣ್ವೀರ್ ಸಿಂಗ್ ಕಾಂಗ್ರೆಸ್ ಪರ ಪ್ರಚಾರ ಮಾಡಿ ಕಾಂಗ್ರೆಸ್‌ಗೆ ವೋಟು ಹಾಕಿ ಎಂದು ಹೇಳುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಿನದಿಂದ ದಿನಕ್ಕೆ ಎಐ ಡೀಪ್‌ಫೇಕ್ ವೀಡಿಯೋ ಹಾವಳಿ ತೀವ್ರವಾಗುತ್ತಿದ್ದು, ಇದು ಸೆಲೆಬ್ರಿಟಿಗಳು, ರಾಜಕೀಯ ನಾಯಕರಿಗೆ ಈಗ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಹೇಳಿ ಕೇಳಿ ಲೋಕಸಭಾ ಚುನಾವಣಾ ಸಮಯ ಇದಾಗಿದ್ದು, ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಕೆಲ ಕಿಡಿಗೇಡಿಗಳು ಡೀಪ್‌ಫೇಕ್ ಬಳಸಿ ಸಿನಿಮಾ ನಟರು ಕೆಲ ರಾಜಕೀಯ ನಾಯಕರ ಅಥವಾ ಪಕ್ಷಗಳನ್ನು ಬೆಂಬಲಿಸಿ ಪ್ರಚಾರ ಮಾಡಿದಂತೆ ವೀಡಿಯೋ ಸೃಷ್ಟಿ ಮಾಡಿ ಹಾಕುತ್ತಿದ್ದು, ಇದು ಸಿನಿಮಾ ನಟರನ್ನು ಪೇಚಿಗೆ ಸಿಲುಕುವಂತೆ ಮಾಡಿದೆ.
ದಿನಗಳ ಹಿಂದಷ್ಟೇ ನಟ ಆಮೀರ್ ಖಾನ್ ಕಾಂಗ್ರೆಸ್‌ಗೆ ವೋಟ್ ಮಾಡಿ ಎಂದು ಹೇಳುತ್ತಿರುವಂತಹ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಬಹಳಷ್ಟು ವೈರಲ್ ಆದ ನಂತರ ಇದು ಡೀಪ್ಪೇಕ್ ವೀಡಿಯೋ ನಟ ಆಮೀರ್ ಖಾನ್ ಯಾವುದೇ ಪಕ್ಷವನ್ನು ಬೆಂಬಲಿಸಿ ಪ್ರಚಾರ ಮಾಡಿಲ್ಲ ಎಂದು ತಿಳಿದು ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ನಟ ಆಮೀರ್ ಖಾನ್ ಈಗ ಪೊಲೀಸರಿಗೆ ದೂರು ನೀಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಎಫ್‌ಐಆರ್ ಅನ್ನು ಕೂಡ ದಾಖಲಿಸಿದ್ದಾರೆ. ಈ ಘಟನೆ ಮಾಸುವ ಮೊದಲೇ ಈಗ ಬಾಲಿವುಡ್ ನಟ ಕಾಂಗ್ರೆಸ್ ಪರ ಪ್ರಚಾರ ಮಾಡಿ ಕಾಂಗ್ರೆಸ್‌ಗೆ ವೋಟು ಹಾಕಿ ಎಂದು ಹೇಳುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್‌ನಿಂದ ಆಮೀರ್ ಖಾನ್ ಹೆಸರು ದುರ್ಬಳಕೆ: ಡೀಪ್‌ಫೇಕ್ ವಿರುದ್ಧ ನಟನಿಂದ ದೂರು- ಎಫ್‌ಐಆರ್
ವೀಡಿಯೋದಲ್ಲಿ ನಟ ಸುದ್ದಿಸಂಸ್ಥೆ ಎಎನ್‌ಐಗೆ ಬೈಟ್ ನೀಡುತ್ತಿರುವಂತೆ ಚಿತ್ರಿಸಲಾಗಿದ್ದು, ಮಾತಿನ ಕೊನೆಯಲ್ಲಿ ಅವರು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದಂತೆ ತೋರಿಸಲಾಗಿದೆ. ರಣ್ವೀರ್ ಸಿಂಗ್ ಅವರ ಈ ಡೀಪ್‌ಪೇಕ್ ವೀಡಿಯೋವನ್ನು ಅನೇಕ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ನಮ್ಮ ದು:ಖವನ್ನು ಸಂಭ್ರಮಿಸುತ್ತಿದ್ದಾರೆ, ನಮ್ಮ ಶ್ರಮವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ವಿಕಾಸ ನಮ್ಮ ನ್ಯಾಯವನ್ನು ನಾವು ಯಾರಿದಂಲೂ ಕೇಳುವಂತಾಗಬಾರದು. ಹೀಗಾಗಿ ಯೋಚಿಸಿ ಮತದಾನ ಮಾಡಿ ಎಂದು ರಣ್ವೀರ್ ಸಿಂಗ್ ಹೇಳುತ್ತಿರುವಂತೆ ಈ ವೀಡಿಯೋ ಇದ್ದರೆ, ವೀಡಿಯೋದ ಕೊನೆಯಲ್ಲಿ ನ್ಯಾಯದ ಪರ ಮತ ಹಾಕಿ ಕಾಂಗ್ರೆಸ್ ಪರ ಮತ ಹಾಕಿ ಎಂಬ ಧ್ವನಿಯೊಂದು ಕೇಳಿ ಬರುತ್ತಿದೆ. ಈ ವೀಡಿಯೋ ಫೇಕ್ ಎಂಬುದು ತಿಳಿಯದೇ ಅನೇಕರು ಶೇರ್ ಮಾಡಿಕೊಳ್ಳುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ಈಗಾಗಲೇ ವೀಕ್ಷಿಸಿದ್ದಾರೆ.
ಆಮೀರ್ ಖಾನ್@ 59: ಆರು ರೂ. ಶಾಲಾ ಫೀಸ್ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..
ಆದರೆ ಕೆಲವರು ಇದು ಫೇಕ್ ವೀಡಿಯೋ ಎಂಬುದನ್ನು ಪತ್ತೆ ಮಾಡಿದ್ದು, ದರಿದ್ರ ಕಾಂಗ್ರೆಸ್ ದಾರಿದ್ರ್ಯತನ ನೋಡಿ ಎಂದು ಒಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ರಣ್ವೀರ್ ಸಿಂಗ್ ಅವರು ಇತ್ತೀಚೆಗೆ ವಾರಾಣಾಸಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ವೀಡಿಯೋವನ್ನು ಬಳಸಿಕೊಂಡು ಇದಕ್ಕೆ ಅವರೇ ಮಾತನಾಡಿದಂತೆ ಲಿಪ್ ಸಿಂಕ್ ಮಾಡಲಾಗಿದೆ.
ಇತ್ತಿಚೆಗೆ ಅಯೋಧ್ಯೆಗೆ ಭೇಟಿ ನೀಡಿದ ರಣ್ವೀರ್ ಸಿಂಗ್ ಸುದ್ದಿಸಂಸ್ಥೆ ಎನ್‌ಐಗೆ ಬೈಟ್ ನೀಡ್ತಾ, 'ಇವತ್ತು ನಾನು ಅನುಭವಿಸಿದ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ನಾನು ಜೀವನಪರ್ಯಂತ ಶಿವನ ಭಕ್ತನಾಗಿಯೇ ಉಳಿಯುವೆ. ನಾನು ಇಲ್ಲಿಗೆ ಇದೇ ಮೊದಲ ಬಾರಿಗೆ ಬಂದಿದ್ದೇನೆ ಎಂದು ರಣ್ವೀರ್ ಹೇಳಿಕೊಂಡಿದ್ದರು. ಈ ವೀಡಿಯೋದ ಆಡಿಯೋ ತೆಗೆದ ಡೀಪ್‌ಫೇಕ್ ಕಿಡಿಗೇಡಿಗಳು ಅದಕ್ಕೆ ಮೋದಿಯನ್ನು ರಣ್ವೀರ್ ಸಿಂಗ್ ದೂರುವಂತಹ ರೀತಿ ರಣ್ವೀರ್ ದನಿಯಂತಿರುವ ವಾಯ್ಸ್ ನೀಡಿ ವೀಡಿಯೋ ಸೃಷ್ಟಿಸಿದ್ದಾರೆ.
ಇನ್ನು ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೋ ಅವರ ಪ್ರಸಿದ್ಧ ಸತ್ಯಮೇವ ಜಯತೇ ಕಾರ್ಯಕ್ರಮದ ದೃಶ್ಯವಾಗಿದ್ದು, ಪ್ರತಿ ಚುನಾವಣೆಯ ಸಮಯದಲ್ಲೂ ವೈರಲ್ ಆಗುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆಮೀರ್ ಖಾನ್ ಕಾನೂನು ಕ್ರಮಕ್ಕೆ ಮುಂದಾಗಿದ್ದು ಪ್ರಕರಣವೂ ದಾಖಲಾಗಿದೆ.