Asianet Suvarna News Asianet Suvarna News

ಹರಿದಾಡುತ್ತಿದೆ ಅಕ್ಷಯ್ ಕುಮಾರ್ ಡೀಪ್ ಫೇಕ್ ವಿಡಿಯೋ, ಆತಂಕಗೊಂಡ ಬಾಲಿವುಡ್!

ಡೀಪ್ ಫೇಕ್ ವಿಡಿಯೋ ಆತಂಕ ಹೆಚ್ಚಾಗುತ್ತಿದೆ. ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಟೇಲರ್ ಸ್ವಿಫ್ಟ್ ಸೇರಿದಂತೆ ಹಲವು ಸೆಲೆಬ್ರೆಟಿಗಳ ಡೀಪ್ ಫೇಕ್ ವಿಡಿಯೋ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಕ್ಷಯ್ ಕುಮಾರ್‌ಗೆ ಡೀಪ್ ಫೇಕ್ ಸಂಕಷ್ಟ ಎದುರಾಗಿದೆ. ಒಂದಿಷ್ಟು ಅನುಮಾನ ಬರದಂತೆ ಅಕ್ಷಯ್ ಕುಮಾರ್ ಗೇಮ್ ಆ್ಯಪ್ಲಿಕೇಶನ್ ಪ್ರಚಾರ ಮಾಡುವ ವಿಡಿಯೋವನ್ನು ಹರಿಬಿಡಲಾಗಿದೆ.

Bollywood Akshay Kumar Deep fake video circulated on social media Actor plan to file complaint ckm
Author
First Published Feb 3, 2024, 6:40 PM IST

ಮುಂಬೈ(ಪೆ.03) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ತಂತ್ರಜ್ಞಾನದಲ್ಲಿ ಆಗಿರುವ ಮಹತ್ತರ ಆವಿಷ್ಕಾರಗಳಿಂದ ಹೊಸ ಸವಾಲು ಎದುರಾಗುತ್ತಿದೆ. ಈ ಪೈಕಿ ಡೀಪ್ ಫೇಕ್ ವಿಡಿಯೋ ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಡೀಪ್ ಫೇಕ್ ವಿಡಿಯೋವನ್ನು ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ರಶ್ಮಿಕಾ ಮಂದಣ್ಣ, ಟೇಲರ್ ಸ್ವಿಫ್ಟ್, ಕತ್ರಿನಾ ಕೈಫ್ ಸೇರಿದಂತೆ ಕೆಲ ಸೆಲೆಬ್ರೆಟಿಗಳ ಡೀಪ್ ಫೇಕ್ ವಿಡಿಯೋ ಹರಿದಾಡಿ, ಪ್ರಕರಣ ಕೂಡ ದಾಖಲಾಗಿದೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸರದಿ. ಅಕ್ಷಯ್ ಕುಮಾರ್ ಡೀಪ್ ಫೇಕ್ ವಿಡಿಯೋಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗೇಮ್ ಆ್ಯಪ್ಲಿಕೇಶನ್ ಪ್ರಚಾರ ಮಾಡುತ್ತಿರುವ ಈ ವಿಡಿಯೋ ನಕಲಿ ಎಂದು ಪ್ರತ್ಯೇಕಿಸಲು ಸಾಧ್ಯವಾಗದಷ್ಟು ನೈಜತೆಯಲ್ಲಿ ವಿಡಿಯೋ ಕ್ರಿಯೆಟ್ ಮಾಡಲಾಗಿದೆ.

ಅಕ್ಷಯ್ ಕುಮಾರ್ ಖುದ್ದು ವಿಡಿಯೋ ಮಾಡಿ ಪೋಸ್ಟ್ ಮಾಡಿರುವ ರೀತಿ ಡೀಪ್ ಫೇಕ್ ವಿಡಿಯೋ ಕ್ರಿಯೆಟ್ ಮಾಡಲಾಗಿದೆ. ಗೇಮ್ ಆ್ಯಪ್ಲಿಕೇಶನ್ ಕುರಿತು ಅಕ್ಷಯ್ ಕುಮಾರ್ ಮಾತಾನಾಡುತ್ತಿರುವ ವಿಡಿಯೋ ಇದಾಗಿದೆ. ಗೇಮ್ ಆ್ಯಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಎಂದು ಪ್ರಚಾರ ಮಾಡುತ್ತಿರುವ ಈ ವಿಡಿಯೋಗೂ ಅಕ್ಷಯ್ ಕುಮಾರ್‌ಗೂ ಸಂಬಂಧವಿಲ್ಲ. 

ಫ್ಯಾನ್‌ ಫೇಜ್‌ ನಡೆಸುತ್ತಿದ್ದವನಿಂದಲೇ ರಶ್ಮಿಕಾ ಡೀಪ್ ಫೇಕ್‌ ವಿಡಿಯೋ ಸೃಷ್ಟಿ: ಆಂಧ್ರದಲ್ಲಿ ಆರೋಪಿ ಬಂಧನ

ಡೀಪ್ ಫೇಕ್ ಮೂಲಕ ಈ ವಿಡಿಯೋ ಸೃಷ್ಟಿಸಲಾಗಿದೆ. ಅಕ್ಷಯ್ ಕುಮಾರ್ ಈ ರೀತಿಯ ಯಾವುದೇ ಪ್ರಚಾರ ಜಾಹೀರಾತು ಒಪ್ಪಂದ ಮಾಡಿಕೊಂಡಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಕ್ಷಯ್ ಕುಮಾರ್ ಕಾನೂನು ಮೊರೆ ಹೋಗಿದ್ದಾರೆ. ಸೈಬರ್ ದೂರು ದಾಖಲಲಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿರುವ ಸಾಮಾಜಿಕ ಮಾಧ್ಯಮ ಖಾತೆ ವಿರುದ್ದವೂ ದೂರು ದಾಖಲಾಗಿದೆ.

 

 

ನಟ ಅಕ್ಷಯ್ ಕುಮಾರ್ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಆ್ಯಪ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಖುದ್ದು ಅಕ್ಷಯ್ ಕುಮಾರ್, ನೀವು ಪ್ಲೇ ಟೂ ಇಷ್ಟಪಡುತ್ತೀರಾ? ಈ ಆ್ಯಪ್ಲಿಕೇಶನ್ ಡೌನ್ಲೋಡ್ ಮಾಡಿ, ಗೇಮ್ ಆಡಲು ಪ್ರಯತ್ನಿಸಿ. ಗೇಮ್‌ಗಾಗಿ ಈ ತಾಣ ಜಾಗತಿಕವಾಗಿ ಉತ್ಯುತ್ತಮವಾಗಿದೆ. ನಾವಿಲ್ಲ ಕ್ಯಾಸಿನೋ ವಿರುದ್ಧ ಆಡುತ್ತಿಲ್ಲ, ನಾವು ಪ್ರತಿಸ್ಪರ್ಧಿಗಳ ವಿರುದ್ದ ಆಡುತ್ತೇವೆ ಎಂದು ಹೇಳುವ ವಿಡಿಯೋ ಇದಾಗಿದೆ. 

ಡೀಫ್‌ ಫೇಕ್‌ ಆಯ್ತು, ಈಗ ಕ್ಲಿಯರ್‌ ಫೇಕ್‌ ಕಾಟ ಶುರು: ಇದು ಇನ್ನೂ ಡೇಂಜರಸ್

ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದು ಡೀಪ್ ಫೇಕ್ ವಿಡಿಯೋ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

Follow Us:
Download App:
  • android
  • ios