Asianet Suvarna News Asianet Suvarna News

ಊಟಕ್ಕೆ ಪಾರ್ಲೆ ಜಿ ಬಿಸ್ಕತ್…ಸ್ಕೂಲ್ ಫೀ ಕಟ್ಟಿದ್ದು ಟೀಚರ್.. ಸ್ತ್ರೀ 2 ನಟ ನಡೆದು ಬಂದ ಕಠಿಣ ದಾರಿ

ಸ್ತ್ರೀ 2 ಸಿನಿಮಾದ ಮೂಲಕ ಭಾರಿ ಗಳಿಕೆ ಮಾಡಿರುವ ರಾಜ್ ಕುಮಾರ್ ರಾವ್ ಅವರ ಜೀವನ ಸುಲಭವಾಗಿರಲಿಲ್ಲ. ಬಡತನದಿಂದ ಬಂದ ರಾಜ್ ಕುಮಾರ್ ರಾವ್, ಶಾಲಾ ಶುಲ್ಕ ಕಟ್ಟಲು ಸಹ ಹಣವಿಲ್ಲದೆ ಸಂಘರ್ಷ ನಡೆಸಿದ್ದರು.

actor rajkumar rao recalled the days of financial struggle roo
Author
First Published Aug 31, 2024, 3:30 PM IST | Last Updated Sep 2, 2024, 9:01 AM IST

ಸ್ತ್ರೀ 2 ಸಿನಿಮಾ (Shree 2 movie) ಮೂಲಕ ತಮ್ಮ ಗಳಿಕೆ ಡಬಲ್ ಮಾಡ್ಕೊಂಡ ಬಾಲಿವುಡ್ ನಟ ರಾಜ್ ಕುಮಾರ್ ರಾವ್ (Bollywood actor Rajkumar Rao) ದಾರಿ ಸುಗಮವಾಗೇನಿರಲಿಲ್ಲ. ಯಾವುದೇ ನಟನಾ ಹಿನ್ನಲೆ ಇರದ ರಾಜ್ ಕುಮಾರ್ ರಾವ್ ಬಡ ಕುಟುಂಬದಿಂದ ಬಂದವರು. ಅನೇಕ ಬಾಲಿವುಡ್, ಸ್ಯಾಂಡಲ್ವುಡ್ ನಟರಂತೆ ಹೊತ್ತಿನ ಊಟಕ್ಕೆ ಹೋರಾಟ ನಡೆಸಿದವರು ಈಗ 81 ಕೋಟಿ ನೆಟ್ ವರ್ತ್ (Net Worth) ಹೊಂದಿದ್ದಾರೆ. ಅವರ ಚೊಚ್ಚಲ ಸಿನಿಮಾ ಲವ್ ಸೆಕ್ಸ್ ಔರ್ ದೋಖಾಗೆ ಸಿಕ್ಕ ಫೀಸ್ 11 ಸಾವಿರವಾದ್ರೆ ಲೇಟೆಸ್ಟ್ ಸಿನಿಮಾ ಸ್ತ್ರೀ 2ಗೆ ಅವರು ಪಡೆದಿದ್ದು ಬರೋಬ್ಬರಿ 6 ಕೋಟಿ ರೂಪಾಯಿ.

ಬಾಲ್ಯದಲ್ಲಿ ಶಾಲೆ ಶುಲ್ಕ ಕಟ್ಟಲು ಹಣವಿಲ್ಲದ ರಾಜ್ ಕುಮಾರ್ ರಾವ್, ನಂತ್ರ ಕೆಲಸಕ್ಕೆ ಕಷ್ಟಪಟ್ಟಿದ್ದರು. 40 ವರ್ಷದ ರಾಜ್ ಕುಮಾರ್ ರಾವ್ ತಮ್ಮ ಸಂಘರ್ಷದ ಜೀವನವನ್ನು ಸದಾ ನೆನೆಯುತ್ತಾರೆ. ಬಡ ಮಧ್ಯಮ ಕುಟುಂಬ (Poor Middle Family) ದಲ್ಲಿ ಜನಿಸಿರುವ ರಾಜ್ ಕುಮಾರ್ ರಾವ್ ಅವರ ತಂದೆ ಸರ್ಕಾರಿ ಕೆಲಸದಲ್ಲಿದ್ದರು. ಹೈಸ್ಕೂಲ್ ನಲ್ಲಿರುವಾಗಲೇ ದುಡಿಮೆ ಶುರು ಮಾಡಿದ್ದ ರಾಜ್ ಕುಮಾರ್ ರಾವ್, ಚಿಕ್ಕ ಹುಡುಗಿಗೆ ಡಾನ್ಸ್ ಹೇಳ್ಕೊಟ್ಟು 300 ರೂಪಾಯಿ ಪಡೆದಿದ್ದರು. 50ರ ಆರು ನೋಟು ಸಿಗುತ್ತಿದ್ದಂತೆ ನನ್ನ ಮುಖದಲ್ಲಿ ನಗು ಬಂದಿತ್ತು. ದಿನಸಿ ಖರೀದಿ ಮಾಡಿದ್ದ ನಾನು, ದೇಸಿ ತುಪ್ಪವನ್ನು ಖರೀದಿ ಮಾಡಿದ್ದೆ ಎಂದು ರಾಜ್ ಕುಮಾರ್ ರಾವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕರೀನಾ ಮಾತ್ರವಲ್ಲ, ಕನ್ನಡಿಗರೂ ಹೀಗೆ! ಇನ್ನೇನು ಡೆಲಿವರಿ ದಿನ ಹತ್ತಿರವಾದರೂ, ಕೆಲಸ ನಿಲ್ಲಿಸದ ಮಿಲನಾ

ಒಂದು ಸಮಯದಲ್ಲಿ ಶಾಲೆ ಶುಲ್ಕ ಪಾವತಿಗೆ ಹಣವಿಲ್ಲದ ಅವರು ಶಿಕ್ಷಕ (teacher ) ರ ಸಹಾಯ ಪಡೆದಿದ್ದರು. ಎರಡು ವರ್ಷ ಶಿಕ್ಷಕರ ನೆರವಿನಿಂದ ವಿದ್ಯೆ ಕಲಿತಿದ್ದರು ರಾಜ್ ಕುಮಾರ್ ರಾವ್. ಬಾಲ್ಯದಲ್ಲಿ ಮಾತ್ರವಲ್ಲ ಹದಿಹರೆಯಕ್ಕೆ ಬಂದಾಗ್ಲೂ ಅವರ ಸ್ಥಿತಿ ಬದಲಾಗಲಿಲ್ಲ. ಆಕ್ಟಿಂಗ್ ಕಲಿಯಲು ಮುಂಬೈಗೆ ಬಂದ ರಾಜ್ ಕುಮಾರ್ ರಾವ್ ಗೆ ಉಳಿಯಲು ಜಾಗವಿರಲಿಲ್ಲ. ಅನೇಕ ದಿನ ಪಾರ್ಲೇಜಿ ಬಿಸ್ಕತ್ (Parleji Biscuit) ತಿಂದು ಹೊಟ್ಟೆ ತುಂಬಿಸಿಕೊಂಡಿದ್ದ ರಾಜ್ ಕುಮಾರ್ ರಾವ್ ಅವರಿಗೆ, ಕೋರ್ಸ್ ಮುಗಿಸಿ ಹೊರ ಬಿದ್ದ ನಂತ್ರ ಜೀವನ ಮತ್ತಷ್ಟು ಕಠಿಣವಾಗಿತ್ತು. ಕೆಲಸಕ್ಕಾಗಿ ಅಲೆಯುವ ಸ್ಥಿತಿ ನಿರ್ಮಾಣವಾಯ್ತು. ಯಾವತ್ತೂ ಕಷ್ಟದಿಂದ ದೂರ ಓಡುವ ಪ್ರಯತ್ನ ಮಾಡದ ರಾಜ್ ಕುಮಾರ್ ರಾವ್ ಎಲ್ಲವನ್ನೂ ಧೈರ್ಯವಾಗಿ ಎದುರಿಸಿದ್ರು. ಅನೇಕ ಸಂಘರ್ಷದ ನಂತ್ರ ರಾಜ್ ಕುಮಾರ್ ರಾವ್ ಗೆ ಲವ್, ಸೆಕ್ಸ್ ಔರ್ ದೋಖಾ (Love Sex Aur Dhokha) ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದ್ರೆ ಆಗ ಸಿಕ್ಕ ಸಂಬಳ ಬರೀ 11 ಸಾವಿರ. 

ಆ ನಂತ್ರ ರಾಜ್ ಕುಮಾರ್ ರಾವ್ ತಿರುಗಿ ನೋಡ್ಲಿಲ್ಲ. ಒಂದಾದ್ಮೇಲೆ ಒಂದು ಆಫರ್ ಗಿಟ್ಟಿಸಿಕೊಂಡ ರಾಜ್ ಕುಮಾರ್ ರಾವ್ ಈಗ ಸಾಧಿಸಿ ತೋರಿಸಿದ್ದಾರೆ. ರಾಜ್ ಕುಮಾರ್ ರಾವ್, ಕ್ವೀನ್,  ಬರೇಲಿ ಕಿ ಬರ್ಫಿ,  ಸ್ತ್ರೀ, ಲುಡೋ ಮತ್ತು ಕೈ ಪೋ ಚೆ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ಈಗ ಅವರು ಸೈ ಎನ್ನಿಸಿಕೊಂಡಿದ್ದಾರೆ. ತಂದೆ ಹಾಗೂ ತಾಯಿ ಇಬ್ಬರನ್ನು ರಾಜ್ ಕುಮಾರ್ ರಾವ್ ಕಳೆದುಕೊಂಡಿದ್ದಾರೆ.  2016 ರಲ್ಲಿ ತಂದೆ ಮತ್ತು 2019 ರಲ್ಲಿ ತಾಯಿ ನಿಧನರಾಗಿದ್ದಾರೆ. 

ಮತ್ತೊಂದು ಸಮಾಜ ಮುಖಿ ಕಾರ್ಯಕ್ಕೆ ಮುಂದಾದ ಸಂಯುಕ್ತಾ ಹೊರನಾಡು, ಹುಲಿ ರಕ್ಷಣೆಗೆ ಮುಂದಾದ ಲೈಫ್‌ ಇಷ್ಟೆನೆ ನಟಿ

ರಾಜ್ ಕುಮಾರ್ ರಾವ್, ನಟಿ ಪತ್ರಲೇಖಾ (Actress Patralekha) ಅವರನ್ನು ವಿವಾಹವಾಗಿದ್ದು, ದಂಪತಿ ತ್ರಿಬಲ್ ಎಕ್ಸ್ ಅಪಾರ್ಟ್ಮೆಂಟ್ (Triple X Apartment) ನಲ್ಲಿ ವಾಸವಾಗಿದ್ದಾರೆ. ಈ ಅಪಾರ್ಟ್ಮೆಂಟ್ ಬೆಲೆ ಸುಮಾರು 44 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 

Latest Videos
Follow Us:
Download App:
  • android
  • ios