ಪಾಕಿಸ್ತಾನಿಯರು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ ಟಾಪ್ 10 ಸಿನಿಮಾಗಳ ಮಾಹಿತಿ ಬಹಿರಂಗ

ಪಾಕಿಸ್ತಾನಿಯರು ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಿಸಿದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ಚಿತ್ರಗಳು ಸಹ ಸೇರಿವೆ, ಇದು ಪಾಕಿಸ್ತಾನಿ ಪ್ರೇಕ್ಷಕರಲ್ಲಿ ಭಾರತೀಯ ಸಿನಿಮಾಗಳ ಜನಪ್ರಿಯತೆಯನ್ನು ಸೂಚಿಸುತ್ತದೆ.

10 most watched movies on Netflix in Pakistan this week  mrq

10 most watched movies on Netflix in Pakistan: ಪ್ರಮುಖ ಒಟಿಟಿ ಜಾಲತಾಣವಾಗಿರುವ ನೆಟ್‌ಫ್ಲಿಕ್ಸ್ ಕೆಲ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ವಾರ ಪಾಕಿಸ್ತಾನಿಯರು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ 10 ಸಿನಿಮಾಗಳ ಮಾಹಿತಿ ಹೊರಬಂದಿದ್ದು, ಇದರಲ್ಲಿ ಭಾರತದ ಚಿತ್ರಗಳು ಸೇರಿವೆ. ಪಾಕಿಸ್ತಾನಿಯರು ಭಾರತದ ಸಿನಿಮಾಗಳತ್ತ ಹೆಚ್ಚು ಆಕರ್ಷಿತರಾಗಿರುತ್ತಾರೆ. ಭಾರತದಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದ್ರೂ ತಮ್ಮಲ್ಲಿ ರಿಲೀಸ್ ಆಗುತ್ತಾ ಅಂತ ಚೆಕ್ ಮಾಡುತ್ತಿರುತ್ತಾರೆ. ಈ ವಾರ ಪಾಕಿಸ್ತಾನದ ಜನತೆ ನೋಡಿದ 10 ಸಿನಿಮಾಗಳು ಯಾವವು ಅಂತ ನೋಡೋಣ ಬನ್ನಿ.

ಟಾಪ್ 10: The Children’s Train
ಪಾಕಿಸ್ತಾನಿಯರು ಅತಿ ಹೆಚ್ಚು ನೋಡಿದ ಸಿನಿಮಾಗಳ ಪೈಕಿ The Children’s Train ಹತ್ತನೇ ಸ್ಥಾನದಲ್ಲಿದೆ. ಇಟಾಲಿಯನ್ ಸಿನಿಮಾ 20ನೇ ಅಕ್ಟೋಬರ್ 2024ರಂದು ರೋಮ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಅಗಿತ್ತು. 4ನೇ ಡಿಸೆಂಬರ್ 2024ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. 

ಟಾಪ್ 9: That Christmas
ಬ್ರಿಟಿಷ್ ಎನಿಮೇಟೆಡ್  ಸಿನಿಮಾ "ದ್ಯಾಟ್ ಕ್ರಿಸ್ಮಸ್" ಕಾಮಿಡಿ ಕಥಾ ಹಂದರವುಳ್ಳ ಚಿತ್ರವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಧಿಕವಾಗಿ ನೋಡಿದ ಸಿನಿಮಾಗಳಲ್ಲಿ 9ನೇ ಸ್ಥಾನದಲ್ಲಿದೆ. 

ಟಾಪ್ 8:  Devara: Part 1
ಭಾರತದ ತೆಲುಗು ಸಿನಿಮಾವನ್ನು ಪಾಕಿಸ್ತಾನಿಯರು ವೀಕ್ಷಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ "ದೇವರಾ ಭಾಗ-1" ಟಾಪ್ 10ರಲ್ಲಿ 8ನೇ ಸ್ಥಾನದಲ್ಲಿದೆ. 

ಟಾಪ್ 7: Mary
ಈ ವಾರ ಪಾಕಿಸ್ತಾನಿಯರು ವೀಕ್ಷಿಸಿದ ಟಾಪ್ 10 ಸಿನಿಮಾಗಳ ಪೈಕಿ ಮೇರಿ 7ನೇ ಸ್ಥಾನದಲ್ಲಿದೆ. ಬೈಬಲ್ ಆಧಾರಿತ ಸಿನಿಮಾ ಇದಾಗಿದ್ದು, 6ನೇ ಡಿಸೆಂಬರ್ 2024ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. 

ಟಾಪ್ 6: Amaran
ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾವನ್ನು ಸಹ ಪಾಕಿಸ್ತಾನಿಯರು ವೀಕ್ಷಣೆ ಮಾಡಿದ್ದಾರೆ. ಅಮರನ್ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗಿತ್ತು. ಟಾಪ್ 10ರಲ್ಲಿ ಅಮರನ್ ಸಿನಿಮಾ 6ನೇ ಸ್ಥಾನದಲ್ಲಿದೆ. 

ಟಾಪ್ 5: Sikandar Ka Muqaddar
ಭಾರತದ "ಸಿಕಂದರ್ ಕಾ ಮುಖಾದರ್" ಸಿನಿಮಾ ಪಾಕಿಸ್ತಾನಿಯರಿಗೆ ಹೆಚ್ಚುಇಷ್ಟವಾಗಿದೆ. ಈ ವಾರ ಪಾಕಿಸ್ತಾನಿಯರ ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ ಟಾಪ್ 10 ಸಿನಿಮಾಗಳಲ್ಲಿ 5ನೇ ಸ್ಥಾನದಲ್ಲಿದೆ. 29ನೇ ನವೆಂಬರ್ 2024ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಿತ್ತು.

ಇದನ್ನೂ ಓದಿ:  ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್

ಟಾಪ್ 4:  Carry-On
ಈ ವಾರ ಪಾಕಿಸ್ತಾನಿಯರ ನೆಟ್‌ಫ್ಲಿಕ್ಸ್‌ನಲ್ಲಿ ನೋಡಿದ ಟಾಪ್ 10 ಸಿನಿಮಾಗಳಲ್ಲಿ 5ನೇ ಸ್ಥಾನದಲ್ಲಿ "ಕ್ಯಾರಿ-ಆನ್" ಇದೆ. ಅಮೆರಿಕಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.

ಟಾಪ್ 3: Lucky Baskhar
ದಕ್ಷಿಣ ಭಾರತದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಲಕ್ಕಿ ಭಾಸ್ಕರ್‌ ಚಿತ್ರಕ್ಕೆ ಪಾಕಿಸ್ತಾನಿಯರು ಫಿದಾ ಆಗಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ಈ ಸಿನಿಮಾ ಭಾರತದಲ್ಲಿ 100 ಕೋಟಿಯ ಕ್ಲಬ್ ಸೇರಿದ್ದು, ಪಾಕಿಸ್ತಾನಿಯರು ವೀಕ್ಷಿಸಿದ ಚಿತ್ರಗಳ ಪೈಕಿ  3ನೇ ಸ್ಥಾನದಲ್ಲಿದೆ. 

ಟಾಪ್ 2: Jigra
ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ನಟನೆಯ "ಜಿಗ್ರಾ" ಈ ವಾರ ಪಾಕಿಸ್ತಾನಿಯರು ವೀಕ್ಷಿಸಿದ ಟಾಪ್ 10ರಲ್ಲಿ 2ನೇ ಸ್ಥಾನದಲ್ಲಿದೆ. ಈ ವರ್ಷ ಆಲಿಯಾ ಭಟ್ ನಟನೆ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿದೆ. 

ಟಾಪ್ 1: Vicky Vidya ka Woh Wala Video
ಈ ಲಿಸ್ಟ್‌ನಲ್ಲಿ ವಿಕ್ಕಿ  ವಿದ್ಯಾ ಕಾ ವ್ಹೋ ವಾಲಾ ವಿಡಿಯೋ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಧಿಕ ಬಾರಿ ವೀಕ್ಷಣೆಯಾದ ಸಿನಿಮಾ ಇದಾಗಿದ್ದು, ಟಾಪ್ 10ರಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 2025ಕ್ಕೆ ಆಕ್ಷನ್-ಡ್ರಾಮಾಗಳ ಭರಪೂರ ಮನರಂಜನೆ; ರಿಲೀಸ್ ಆಗ್ತಿವೆ ದೇಶವೇ ಕಾಯ್ತಿರೋ ಸಿನಿಮಾ, ವೆಬ್ ಸಿರೀಸ್

Latest Videos
Follow Us:
Download App:
  • android
  • ios