2025ಕ್ಕೆ ಆಕ್ಷನ್-ಡ್ರಾಮಾಗಳ ಭರಪೂರ ಮನರಂಜನೆ; ರಿಲೀಸ್ ಆಗ್ತಿವೆ ದೇಶವೇ ಕಾಯ್ತಿರೋ ಸಿನಿಮಾ, ವೆಬ್ ಸಿರೀಸ್
OTT Release 2025: ಹಲವು ಬಹುನಿರೀಕ್ಷಿತ ಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿವೆ. ಪಾತಾಳ ಲೋಕ 2, ದಿ ಫ್ಯಾಮಿಲಿ ಮ್ಯಾನ್ 3, ಮತ್ತು ಪುಷ್ಪ 2 ಸೇರಿದಂತೆ ಹಲವು ಜನಪ್ರಿಯ ಸರಣಿಗಳ ಮುಂದುವರಿದ ಭಾಗಗಳು ಬಿಡುಗಡೆಯಾಗಲಿವೆ.
ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ಕಡಿಮೆ ದಿನಗಳು ಬಾಕಿ ಉಳಿದಿವೆ. ಪ್ರತಿಯೊಬ್ಬರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಜಗತ್ತು ಸಹ ಹೊಸ ಚಿತ್ರ, ವೆಬ್ ಸಿರೀಸ್ ಬಿಡುಗಡೆ ಮಾಡಲು 2025ಕ್ಕಾಗಿ ಕಾಯುತ್ತಿದೆ. 2025ರಲ್ಲಿ ಇಡೀ ದೇಶವೇ ಕಾಯುತ್ತಿರೋ ಹಲವು ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಒಟಿಟಿ ಅಂಗಳಕ್ಕೆ ಬರುತ್ತಿವೆ. 2025ರ ಸಿನಿಮಾ ಪ್ರಿಯರಿಗೆ ಭರಪೂರ ಮನರಂಜನೆಯನ್ನು ನೀಡೋದು ಖಚಿತವಾಗಿದೆ.
2025-ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಪ್ರಮುಖ ಸಿನಿಮಾ, ಡಾಕ್ಯೂಮೆಂಟರಿ ಮತ್ತು ವೆಬ್ ಸಿರೀಸ್ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಡೋಂಟ್ ಡೈ (Don't Die)
ಅಮೆರಿಕದ ಖ್ಯಾತ ಉದ್ಯಮಿ ಬ್ರಿಯಾನ್ ಜಾನ್ಸನ್ ಅವರ ಜೀವನಾಧರಿತ ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. Don't Die: The Man Who Wants to Live Forever ಹೆಸರಿನ ಈ ಡಾಕ್ಯೂಮೆಂಟರಿ ಹೊಸ ವರ್ಷದ ಮೊದಲ ದಿನವೇ ಅಂದ್ರೆ ಜನವರಿ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
ಪಾತಾಳ ಲೋಕ 2 (Paatal Lok 2)
2020ರಲ್ಲಿ ಬಿಡುಗಡೆಯಾಗಿದ್ದ ಪಾತಾಳ ಲೋಕ ಒಟಿಟಿ ಅಂಗಳದಲ್ಲಿ ಸಂಚಲವನ್ನು ಸೃಷ್ಟಿಸಿತ್ತು. ಇದರ ಮುಂದುವರಿದ ಭಾಗ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ. 2025-ಜನವರಿಯಲ್ಲಿ ಪಾತಾಳ ಲೋಕ-2 ವೆಬ್ ಸಿರೀಸ್ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.
ನೈಟ್ ಏಜೆಂಟ್ ಸೀಸನ್ 2 (Night Agent 2)
ಹಾಲಿವುಡ್ ಸೂಪರ್ ಸ್ಟಾರ್ ಪೀಟರ್ ಸದರ್ಲ್ಯಾಂಡ್ ಅಭಿನಯದ ಥ್ರಿಲ್ಲರ್ ವೆಬ್ ಸಿರೀಸ್ ನೈಟ್ ಏಜೆಂಟ್‌ನ ಮುಂದುವರಿದ ಭಾಗ 23ನೇ ಜನವರಿ 2025ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಟುಕ್ರಾ ಕೇ ಮೇರೆ ಪ್ಯಾರ್ 2 (Thukra Ke Mera Pyaar 2)
2024ರ ಅಂತ್ಯದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿರೋ ಅತಿದೊಡ್ಡ ವೆಬ್ ಸಿರೀಸ್ ಬಿಡುಗಡೆಯಾಗಿತ್ತು. ವೀಕ್ಷಕರನ್ನು ಮನರಂಜಿಸಿರುವ ಈ ವೆಬ್ ಸಿರೀಸ್‌ನ ಮುಂದುವರಿದ ಭಾಗ 2025ರಲ್ಲಿ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ದಿನಾಂಕ ಪ್ರಕಟವಾಗಿಲ್ಲ.
ದಿ ಫ್ಯಾಮಿಲಿ ಮ್ಯಾನ್ 3 (The Family Man Season 3)
ನಿರ್ದೇಶಕ ರಾಜ್ ಆಂಡ್ ಡಿಕೆ ಜೋಡಿಯ ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ದಿ ಫ್ಯಾಮಿಲಿ ಮ್ಯಾನ್-3 2025ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದ್ರೆ ನಿಖರ ದಿನಾಂಕ ಇದುವರೆಗೂ ಪ್ರಕಟವಾಗಿಲ್ಲ. ಈ ಹಿಂದಿನ ಎರಡು ಸೀಸನ್‌ಗಳು ಪ್ರೈಮ್ ವಿಡಿಯೋ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಿದ್ದವು.
ಪ್ರೀತಮ್ ಪೆಡ್ರೋ (Pritam Pedro)
ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾಣಿ ವೆಬ್ ಸಿರೀಸ್ ಮೂಲಕ ಒಟಿಟಿ ಪ್ಲಾಟ್‌ಫಾರಂಗೆ ಬರಲು ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದ್ದಾರೆ. ವಿಕ್ರಾಂತ್ ಮೆಸ್ಸಿ ಮತ್ತು ಅರ್ಷದ್ ವಾರ್ಸಿ ಅಭಿನಯದ ಥ್ರಿಲ್ಲರ್ ಸಿರೀಸ್ 2025ರಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಸ್ಟ್ರೇಂಜರ್ ಥಿಂಗ್ಸ್ 5 (Strangers Things 5)
ಹಾಲಿವುಡ್ ಜನಪ್ರಿಯ ವೆಬ್ ಸಿರೀಸ್‌ಗಳಲ್ಲಿ ಒಂದಾಗಿರುವ ಸ್ಟ್ರೇಂಜರ್ ಥಿಂಗ್ಸ್-5 ಮುಂದಿನ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಫ್ಯಾಂಟಸಿ ಜಗತ್ತಿನ ಕಥೆಯನ್ನು ಹೊಂದಿರುವ ಸಿರೀಸ್ 2025ರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.
ದಿ ಟ್ರಾಯಲ್ಸ್ ಸೀಸನ್ 2 (The TrialS 2)
ಬಾಲಿವುಡ್ ನಟಿ ಕಾಜೋಲ್ ಅಭಿನಯದ ಕೋರ್ಟ್‌ರೂಮ್ ಕಥೆ ಹೊಂದಿರುವ ದಿ ಟ್ರಾಯಲ್ಸ್ ಮುಂದುವರಿದ ಭಾಗ 2025ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ ವೆಬ್ ಸಿರೀಸ್ ತಂಡದಿಂದ ಬಿಡುಗಡೆ ಕುರಿತು ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಸ್ಟಾರ್‌ಡಮ್ (Stardom)
ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಆರ್ಯನ್ ಖಾನ್ ನಿರ್ದೇಶನದ ವೆಬ್ ಸಿರೀಸ್ ನೆಟ್‌ಫ್ಲಿಕ್ ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್
ಮಟ್ಕಾ ಕಿಂಗ್ (Matka King)
ನಟ ವಿಜಯ್ ವರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಟ್ಕಾ ಕಿಂಗ್ ಹಲವು ದಿನಗಳಿಂದ ಸದ್ದು ಮಾಡುತ್ತಿದೆ. ಹೊಸ ವರ್ಷದಲ್ಲಿ ಪ್ರೈಮ್ ವಿಡಿಯೋದಲ್ಲಿ ಮಟ್ಕಾ ಕಿಂಗ್ ಸ್ಟ್ರೀಮ್ ಆಗಲಿದೆ. ಆದ್ರೆ ಇದುವರೆಗೆ ವೆಬ್ ಸಿರೀಸ್ ಬಿಡುಗಡೆ ದಿನಾಂಕ ಅಂತಿಮಗೊಂಡಿಲ್ಲ.
ಡಬ್ಬಾ ಕಾರ್ಟಲ್ (Dabba Cartal)
ಶಬನಾ ಅಜ್ಮಿ, ಜ್ಯೋತಿಕಾ, ಶಾಲಿನಿ ಪಾಂಡೆ ಮತ್ತು ಗಜರಾವ್ ಸ್ಟಾರ್ ಕಲಾವಿದರು ನಟಿಸಿರುವ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್ ಡಬ್ಬಾ ಕಾರ್ಟಲ್ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಈ ಸರಣಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯನ್ನು ತೋರಿಸಲಾಗುತ್ತದೆ ಎಂದು ಹೇಳಲಾಗಿದೆ.
ಪುಷ್ಪಾ 2 (Pushpa 2)
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಗ ಸೌಥ್ ಸೂಪರ್ ಹಿಟ್ ಸಿನಿಮಾ 2025ರಲ್ಲಿ ಒಟಿಟಿಗೆ ಪ್ರವೇಶವಾಗಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತ್ತು.
ಇದನ್ನೂ ಓದಿ: ಇವರು ಬಾಲಿವುಡ್‌ನ ಫ್ಲಾಪ್ ನಟ, ಆದ್ರೆ ಸೌಥ್‌ನಲ್ಲಿ ಸೂಪರ್‌ಸ್ಟಾರ್; ಅಮಿತಾಬ್‌ಗೆ ಸ್ಪರ್ಧೆ ನೀಡಿದ್ದ ಹೀರೋ ₹1650 ಕೋಟಿ ಒಡೆ