SSC CGL Notification 2022: ಸಿಬ್ಬಂದಿ ನೇಮಕಾತಿ ಆಯೋಗದ ಸಿಜಿಎಲ್ ಪರೀಕ್ಷಾ ದಿನಾಂಕ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗವು ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ  ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2021ರ ಅಧಿಸೂಚನೆ ಪ್ರಕಟಿಸಿದೆ. 

Staff Selection Commission has released the notification for Combined Graduate Level Examination gow

ಬೆಂಗಳೂರು(ಡಿ.31): ಸಿಬ್ಬಂದಿ ನೇಮಕಾತಿ ಆಯೋಗವು ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ  ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2021ರ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಲು ಜನವರಿ 23, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್  https://ssc.nic.in/ ಗೆ ಭೇಟಿ ನೀಡಲು ಕೋರಲಾಗಿದೆ. 2022ರ ಏಪ್ರಿಲ್ ನಲ್ಲಿ ಟಯರ್ ಪರೀಕ್ಷೆ ನಡೆಯಲಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಸಿಬ್ಬಂದಿ ನೇಮಕಾತಿ ಆಯೋಗದ ನೇಮಕಾತಿಯ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

ವಯೋಮಿತಿ: ಸಿಬ್ಬಂದಿ ನೇಮಕಾತಿ ಆಯೋಗದ ನೇಮಕಾತಿಯ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಜನವರಿ 1,2022ರ ಅನ್ವಯ ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 30 ವರ್ಷ ವಯೋಮಿತಿ ಹೊಂದಿರಬೇಕು.  ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಟಯರ್ I , ಟಯರ್ II , ಟಯರ್ III ಮತ್ತು ಟಯರ್ IV ಪರೀಕ್ಷೆಗಳ ಮೂಲಕ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500/- ರಿಂದ 1,51,000/-ರೂ ಗಳ ವರೆಗೆ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: SSC CGL ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಜನವರಿ 23,2022ರ ರಾತ್ರಿ 11:30ರೊಳಗೆ ಮತ್ತು ಆಫ್‌ಲೈನ್ ಮೂಲಕ ಜನವರಿ 25,2022ರೊಳಗೆ ಪಾವತಿಸಬೇಕು. ಪ.ಜಾ/ಪ.ಪಂ/ಮಹಿಳಾ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ. 

SSC CGL ನೇಮಕಾತಿ 2021 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜನವರಿ 23,2022ರ ರಾತ್ರಿ 11:30
ಆನ್‌ಲೈನ್‌ ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಜನವರಿ 25,2022ರ ರಾತ್ರಿ 11:30
ಆಫ್‌ಲೈನ್ ಚಲನ್ ಜನರೇಟ್ ಆಗಲು ಕೊನೆಯ ದಿನಾಂಕ : ಜನವರಿ 26,2022ರ ರಾತ್ರಿ 11:30
ಅರ್ಜಿ ಶುಲ್ಕ ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ : ಜನವರಿ 27,2022
ಅರ್ಜಿಯನ್ನು ವಿತ್‌ಡ್ರಾ ಮಾಡುವ ದಿನಾಂಕ : ಜನವರಿ 28,2022 ರಿಂದ ಫೆಬ್ರವರಿ 1,2022
ಟಯರ್ ಪರೀಕ್ಷೆ ದಿನಾಂಕ : ಏಪ್ರಿಲ್ 2022

ಅಭ್ಯರ್ಥಿಗಳು ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://ssc.nic.in/SSCFileServer/PortalManagement/UploadedFiles/Important_Notice_CGLE-2021_12.29.2021_29122021.pdf

Indian Army Artillery Recruitment 2022: 10, 12 ನೇ ತರಗತಿ ಉತ್ತೀರ್ಣರಾದವರಿಗೆ ಭಾರತೀ

CGWB ಕಾರ್​ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿ: ಕರ್ನಾಟಕ ಕೇಂದ್ರೀಯ ಅಂತರ್ಜಲ ಮಂಡಳಿ-ಬೆಂಗಳೂರು (Central Ground Water Board Bengaluru) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24  ಸ್ಟಾಫ್​ ಕಾರ್​ ಡ್ರೈವರ್ (Staff Car Driver) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್​ಎಸ್​ಎಲ್​ಸಿ (SSLC) ಪಾಸಾದ ಅಭ್ಯರ್ಥಿಗಳು ಈ ಸಿ ಗ್ರೂಪ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 1, 2022. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.cgwb.gov.in ಗೆ ಭೇಟಿ ನೀಡಬಹುದು. 

ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ/ಬೋರ್ಡ್​​ನಿಂದ 10ನೇ ತರಗತಿ/ಎಸ್​ಎಸ್​ಎಲ್​ಸಿ ಪಾಸಾಗಿರಬೇಕು. ಕೇಂದ್ರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಉದ್ಯಮ/ಖಾಸಗಿ ವಲಯದ ಕಂಪನಿಯಿಂದ ಕಂಪನಿ ಕಾಯಿದೆಯಡಿ ನೋಂದಣಿಯಾಗಿರುವ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಮೂರು ವರ್ಷಗಳ ಅನುಭವ ಇರಬೇಕು. ಮೋಟಾರು ವಾಹನ ಯಾಂತ್ರಿಕತೆಯ ಜ್ಞಾನ ಹೊಂದಿರಬೇಕು. ಹಿಂದಿ ಅಥವಾ ಇಂಗ್ಲಿಷ್ ಭಾಷೆ ಮತ್ತು ಸಂಖ್ಯೆಗಳನ್ನು ಓದಲು ಮತ್ತು ಬರೆಯಲು ಗೊತ್ತಿರಬೇಕು. 

KSP Recruitment 2022: ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆ

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಎನ್ವಲಪ್​​ ಮೇಲೆ “APPLICATION FOR THE POST OF STAFF CAR DRIVER (ORDINARY GRADE)” ಎಂದು ಬರೆದು ಈ ಕೆಳಕಂಡ ವಿಳಾಸಕ್ಕೆ ಫೆಬ್ರವರಿ 1, 2022ರೊಳಗೆ ಕಳುಹಿಸಬೇಕು. 
ಪ್ರಾದೇಶಿಕ ನಿರ್ದೇಶಕರು
ಕೇಂದ್ರೀಯ ಅಂತರ್ಜಲ ಮಂಡಳಿ (CGWB)
ಜಲ ಶಕ್ತಿ ಸಚಿವಾಲಯ
ಜಲಸಂಪನ್ಮೂಲ ಇಲಾಖೆ
ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
ನೈಋತ್ಯ ಪ್ರದೇಶ, ಭುಜಲ್ ಭವನ
27ನೇ ಮೇನ್​​, 7ನೇ ಕ್ರಾಸ್, HSR ಲೇಔಟ್ ಸೆಕ್ಟರ್-1
ಬೆಂಗಳೂರು-560102

Latest Videos
Follow Us:
Download App:
  • android
  • ios