ನಂಬರ್ ಪ್ಲೇಟ್ ತೆಗೆದು ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್, ಫಾರ್ಚುನರ್ ಕಾರು ಸೀಜ್!

ನಂಬರ್ ಪ್ಲೇಟ್ ತೆಗೆದು ದೆಹಲಿಯ ಪ್ರಮುಖ ರಸ್ತೆಯಲ್ಲಿ ಫಾರ್ಚುನರ್ ಕಾರು ಮಾಲೀಕ ಹಾಗೂ ಆತನ ಗೆಳೆಯರು ಭಾರಿ ಸ್ಟಂಟ್ ಮಾಡಿದ್ದಾರೆ. ಅಪಾಯಾಕಾರಿ ಡ್ರೈವಿಂಗ್ ಮಾಡಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ ಫಾರ್ಚುನರ್ ಕಾರನ್ನು ಸೀಜ್ ಮಾಡಿದ್ದಾರೆ.
 

Fortuner SUV car Owner remove number plate to perform stunts Delhi police seize vehicle ckm

ದೆಹಲಿ(ಮಾ.06) ಸಾರ್ವಜನಿಕ ರಸ್ತೆಯಲ್ಲಿ ಅಪಾಯಾಕಾರಿ ಡ್ರೈವಿಂಗ್, ಸ್ಟಂಟ್ ಮಾಡುವುದು ಕಾನೂನು ಬಾಹಿರ. ಟ್ರಾಫಿಕ್ ನಿಯಮ ಪಾಲನೆ ಮಾಡದಿದ್ದರೆ ದುಬಾರಿ ದಂಡ ಪಾವತಿ ಮಾಡಬೇಕಾಗುತ್ತಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳಡಿಕೆ ಮಾಡಿರುವ ಟ್ರಾಫಿಕ್ ಪೊಲೀಸರು ಇ ಚಲನ್ ಮೂಲಕವೇ ನಿಯಮ ಉಲ್ಲಂಘಿಸುವ ಮಾಲೀಕರಿಗೆ ಬಿಸಿ ಮುಟ್ಟಿಸುತ್ತಾರೆ. ಇಲ್ಲೊಬ್ಬ ತನ್ನ ಟೋಯೋಟಾ ಫಾರ್ಚುನರ್ ಕಾರಿನ ನಂಬರ್ ಪ್ಲೇಟ್ ತೆಗೆದು, ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದ. ಅಪಾಯಾಕಾರಿಯಾಗಿ ಡ್ರೈವಿಂಗ್ ಮಾಡಿ ಜರನ್ನು ಭಯಭೀತಗೊಳಿಸಿದ್ದರು.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇದೀಗ  ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ದೆಹಲಿಯ ನಜಾಫಘಡ ರಸ್ತೆಯಲ್ಲಿ ಫಾರ್ಚುನರ್ ಕಾರು ಅಜ್ಜಾದಿಡ್ಡಿ ಚಲಿಸಲು ಆರಂಭಿಸಿತ್ತು. ಕಾರಿನ ಡೋರ್ ಓಪನ್ ಮಾಡಿ ಸ್ಟಂಟ್ ಮಾಡುತ್ತಾ ಸಾಗಿದ್ದರು. ಚಾಲಕ ಹಾಗೂ ಆತನ ಗೆಳೆಯರು ಕಾರಿನಲ್ಲಿ ಕುಳಿತು ಸ್ಟಂಟ್ ಮಾಡಿದ್ದರು.ಅತೀ ವೇಗವಾಗಿ ವಾಹನ ಚಲಾಯಿಸಿದ್ದರು. ಇತರ ವಾಹನ ಸವಾರರನ್ನು ಭಯಭೀತಗೊಳಿಸಿದ್ದ ಘಟನೆ ನಡೆದಿತ್ತು. ಈತನ ಸ್ಟಂಟ್ ವೇಳೆ ಕಾರಿನ ನಂಬರ್ ಪ್ಲೇಟ್ ತೆಗೆಯಲಾಗಿತ್ತು. ಹೀಗಾಗಿ ಇ ಚಲನ್ , ಸಿಸಿಟಿವಿಗಳಿಂದ ತಪ್ಪಿಸಿಕೊಳ್ಳಲು ಉಪಾಯ ಮಾಡಿದ್ದರು.  ಈ ಕುರಿತು ವಿಡಿಯೋ ಭಾರಿ ವೈರಲ್ ಆಗಿತ್ತು. ರಜೌರಿ ವೆಲ್‌ಫೇರ್ ಅಸೋಸಿಯೇಶನ್ ಈ ಕುರಿತು ರಜೌರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭವಲ್ಲ, ಟ್ರಾಫಿಕ್ ರಸ್ತೆಯಲ್ಲೂ ಮಾಡಬೇಕು ಡ್ರೈವ್!

ದೂರು ಹಾಗೂ ವಿಡಿಯೋ ದಾಖಲೆ ಪಡೆದುಕೊಂಡ ರಜೌರಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಸಿಟಿಸಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದ ಕಾರಣ ವಿಡಿಯೋ ದಾಖಲೆ ಜೊತೆಗೆ ಸಿಸಿಟಿವಿ ಪರಿಶೀಲಿಸಿದ್ದಾರೆ. ಬಳಿಕ ವಾಹನ ಪತ್ತೆ ಹಚ್ಚಿ ಸೀಝ್ ಮಾಡಿದ್ದಾರೆ. ಇತ್ತ ವಾಹನ ಮಾಲೀಕನ ವಿಚಾರಣೆಯನ್ನೂ ನಡೆಸಿದ್ದಾರೆ. ಶೀಘ್ರದಲ್ಲೇ ಮಾಲೀಕನ ಬಂಧನ ಸಾಧ್ಯತೆ ಇದೆ. ಐಪಿಎಲ್ ಸೆಕ್ಷನ್ 279ರ ಅಡಿಯಲ್ಲಿ ಅಪಾಯಾಕಾರಿ ಚಾಲನೆ ಸೇರಿದಂತೆ ಇತರ ಕೆಲ ಪ್ರಕರಣ ದಾಖಲಿಸಲಾಗಿದೆ. 

 

 

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಸ್ಟಂಟ್ ಮಾಡುವವರಿಗೆ ಈ ಪ್ರಕರಣ ಪಾಠವಾಗಬೇಕು. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಲು ಯಾರೂ ಕೂಡ ಯೋಚಿಸಬಾರದು. ಅನಾಹುತ ಸಂಭವಿಸಿದ್ದರೆ ಇದಕ್ಕೆ ಯಾರು ಹೊಣೆ? ಈ ರೀತಿಯ ಸ್ಟಂಟ್ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಿದೆ. ಆದರೂ ಈ ಹುಚ್ಚು ಮಾತ್ರ ಬಿಡುತ್ತಿಲ್ಲ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಹೆಚ್ಚಾಗಿದೆ.

ದೇಶದ 32 FASTagಗೆ ಮಾತ್ರ ಅಧಿಕೃತ ಮಾನ್ಯತೆ, ಲಿಸ್ಟ್‌ನಲ್ಲಿ ನಿಮ್ಮ ಬ್ಯಾಂಕ್ ಇಲ್ಲದಿದ್ರೆ ಬದಲಾಯಿಸಿ!
 

Latest Videos
Follow Us:
Download App:
  • android
  • ios