ಪದೇ ಪದೇ ತಲೆ ಮೇಲೆ ಸೆರಗು ಮುಚ್ಚಿಕೊಳ್ತಿದ್ದ ಮಹಿಳೆ ನೋಡಿಯೇ ಬ್ಯುಸಿನೆಸ್ ಶುರು ಮಾಡಿದ ಯುವತಿ…

ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ತಲೆ ಮೇಲಿನ ಕೂದಲು ಕಡಿಮೆ ಆಗ್ತಿದೆ ಎಂದಾಗ ಅವರ ಆತ್ಮವಿಶ್ವಾಸ ತಗ್ಗುತ್ತದೆ. ದಟ್ಟ ಹಾಗೂ ಕಪ್ಪು ಕೂದಲನ್ನು ಪಡೆಯಲು ಅವರು ಸದಾ ಸಿದ್ಧರಿರುತ್ತಾರೆ. ಅದನ್ನು ಅರಿತ ಈ ಯುವತಿ ಹೊಸ ಬ್ಯುಸಿನೆಸ್ ಶುರು ಮಾಡಿ ಯಶಸ್ವಿಯಾಗಿದ್ದಾಳೆ.

Women And Finance Entrepreneur Shelly Bulchandani Makes Wigs And Hair Extention roo

ಕೆಲಸದಲ್ಲಿ ಯಶಸ್ವಿಯಾದ್ಮೇಲೆ ಅವರ ಮೇಲೆ ನಮ್ಮ ಕಣ್ಣು ಬೀಳುವ ಕಾರಣ ಅವರು ಸುಖಿಗಳು ಅಂತಾ ಎಲ್ಲರೂ ಭಾವಿಸ್ತೇವೆ. ಆದ್ರೆ ಅವರ ಜೀವನದಲ್ಲಿ ಇಣುಕಿ ನೋಡಿದಾಗ್ಲೇ ಅವರು ಪಟ್ಟ ಪರಿಶ್ರಮ, ಯಶಸ್ಸಿಗೆ ಅವರು ತುಳಿದ ದಾರಿ ನಮಗೆ ಗೊತ್ತಾಗುತ್ತೆ. ಕೆಲವರ ಜೀವನ ಸಿನಿಮಾ ಕಥೆಯಂತಿರುತ್ತದೆ. ಎಲ್ಲೋ, ಯಾವುದೋ ಸಂದರ್ಭದಲ್ಲಿ ತಮಗಾದ ಅನುಭವ ಅಥವಾ ಬೇರೆಯವರ ಕಷ್ಟವನ್ನು ನೋಡಿದ ಅವರು ಅದಕ್ಕೆ ಪರಿಹಾರ ಕಂಡುಹಿಡಿಯಲು ಮುಂದಾಗ್ತಾರೆ. ಅದ್ರಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸ್ತಾರೆ. ಆದ್ರೂ ಅದ್ರಿಂದ ಹಿಂದೆ ಸರಿಯೋದಿಲ್ಲ. ತಮ್ಮ ಇಪ್ಪನ್ನಾಲ್ಕನೇ ವಯಸ್ಸಿನಲ್ಲಿ ಮಹಿಳೆಯರ ಸಮಸ್ಯೆ ಅರಿತು ಅದಕ್ಕೆ ಪರಿಹಾರ ಕಂಡುಕೊಂಡು ಅನೇಕ ಮಹಿಳೆಯರಿಗೆ ಸಂತೋಷ, ಆತ್ಮವಿಶ್ವಾಸ ನೀಡಿದ ಶೈಲಿ ಕೆಲವರಿಗೆ ದಾರಿದೀಪವಾಗಿದ್ದಾರೆ. 

ಟಿವಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದ (Shark Tank India) ಕ್ಯಾಂಪಸ್ ವಿಶೇಷ ಕಾರ್ಯಕ್ರಮದಲ್ಲಿ ಶೈಲಿ ಪಾಲ್ಗೊಂಡಿದ್ದರು. ಶೈಲಿ ಹೇರ್ ಎಕ್ಸ್ ಟೆನ್ಶನ್, ಬ್ಯಾಂಗರ್ಸ್ ಅಂದರೆ ಮುಂಗುರುಳು, ಹೇರ್ ಕಲರ್ ಸೇರಿದಂತೆ ಅನೇಕ ಕೂದಲಿಗೆ ಸಂಬಂಧಿಸಿದ ಉತ್ಪನ್ನ (Product)ಗಳನ್ನು ತಯಾರಿಸುತ್ತಾರೆ.  ಶೈಲಿ ವಿಗ್ ಗಳನ್ನು ಕೂಡ ತಯಾರಿಸಿ ಮಾರಾಟ ಮಾಡುತ್ತಾರೆ. ಶೈಲಿ ಆರಂಭ ಕೂಡ ಸುಲಭವಾಗಿರಲಿಲ್ಲ. ಸಾಕಷ್ಟು ಪ್ರಯತ್ನ, ಓದಿನ ಮಧ್ಯೆಯೇ ಶೈಲಿ ತಮ್ಮ ಉದ್ಯಮ ಶುರು ಮಾಡಿದ್ದು, ಕಥೆ ತುಂಬಾ ಕುತೂಹಲಕಾರಿಯಾಗಿದೆ.

ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆ; ಇಲ್ಲಿದ್ದಾರೆ ಬರೋಬ್ಬರಿ 568 ಮಿಲಿಯನ್ ಗೇಮರ್ಸ್

ಮದುವೆ (Marriage) ಮನೆಯಿಂದ ಬಂತು ಐಡಿಯಾ : ಮದುವೆಯೊಂದಕ್ಕೆ ಶೈಲಿ ಹೋದಾಗ ಮಹಿಳೆಯೊಬ್ಬಳು ಗಮನ ಸೆಳೆದಿದ್ದರು. ಅವರು ತಮ್ಮ ತಲೆ ಮೇಲೆ ಸೆರಗು ಮುಚ್ಚಿಕೊಂಡಿದ್ದರು. ಆಗಾಗ ಆ ಸೆರಗು ಜಾರಿ ಬೀಳ್ತಿತ್ತು. ಮತ್ತೆ ತಲೆ ಮೇಲೆ ಸೆರಗು ಎಳೆದುಕೊಳ್ತಿದ್ದರು. ಇದಕ್ಕೆ ಕಾರಣವೇನೆಂದು ಶೈಲಿ ಪ್ರಶ್ನಿಸಿದ್ದರು. ಈ ವೇಳೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ದು, ಅದ್ರಿಂದ ಆತ್ಮವಿಶ್ವಾಸ (Confidence) ಕಡಿಮೆ ಆಗಿದೆ ಎಂದು ಮಹಿಳೆ ಹೇಳಿದ್ದರು. ವಿಗ್, ಹೇರ್ ಎಕ್ಸ್ ಟೆನ್ಶನ್ (Hair extension)  ಬಳಸುವಂತೆ ಅವರಿಗೆ ಶೈಲಿ ಸಲಹೆ ನೀಡಿದ್ದರು. ಈ ವೇಳೆ ಮಹಿಳೆ, ಕಳಪೆ ಗುಣಮಟ್ಟ ಹಾಗೂ ದುಬಾರಿ ಬೆಲೆಯ ದೂರು ನೀಡಿದ್ದರು.

ಮಹಿಳೆ ಮಾತು ಕೇಳಿದ ಮೇಲೆ ನೈಜ ಸಮಸ್ಯೆ ಅರಿತ ಶೈಲಿ, ಶೇಕಡಾ 100ರಷ್ಟು ನಿಜವಾದ ಕೂದಲು ಬಳಸಿ ಹೇರ್ ಎಕ್ಸ್ ಟೆನ್ಶನ್  (Hair Extension) ತಯಾರಿಸುವ ನಿರ್ಧಾರಕ್ಕೆ ಬಂದರು. ಸದ್ಯ ಎಂಬಿಎ ಓದುತ್ತಿರುವ ಶೈಲಿ ಓದಿನ ಮಧ್ಯೆಯೇ ವ್ಯಾಪಾರದಲ್ಲಿ ಯಶಸ್ವಿಯಾಗ್ತಿದ್ದಾರೆ. ಕೇವಲ 2000 ರೂಪಾಯಿಯಿಂದ ತಮ್ಮ ಕೆಲಸ ಶುರು ಮಾಡಿದವರು ಅವರು. ಅಜ್ಮೀರ್ ನಿವಾಸಿ ಶೈಲಿ ಅವರು ಜೈಪುರದಲ್ಲಿ ಮೊದಲ ಬಾರಿ  2000 ರೂಪಾಯಿಗೆ ನಿಜವಾದ ಕೂದಲು ಖರೀದಿಸಿ ಅದನ್ನು ಹೊಲಿಗೆ ಮಶಿನ್ ನಲ್ಲಿ ಸ್ಟಿಚ್ ಮಾಡಿ ಹೇರ್ ಎಕ್ಸ್ ಟೆನ್ಶನ್ ತಯಾರು ಮಾಡಿ ಸಂಬಂಧಿಕರಿಗೆ ಮಾರಿದರು. ಅವರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದಲ್ಲದೆ ನಿಧಾನವಾಗಿ ಆರ್ಡರ್ ಬರಲು ಶುರುವಾಯ್ತು. ಉತ್ತಮ ಗುಣಮಟ್ಟದ ಕೂದಲನ್ನು ಅವರು ಬಳಸುವ ಕಾರಣ, ವ್ಯಾಪಾರ ಹೆಚ್ಚಾಗ್ತಿದ್ದಂತೆ ಶೈಲಿ, ದಿ ಶೆಲ್ ಹೇರ್ ಕಂಪನಿ ತೆರೆದು ವ್ಯಾಪಾರ ಶುರು ಮಾಡಿದ್ರು. 

ಶೈಲಿ ಸದ್ಯ ಆನ್ಲೈನ್ (Online) ಮತ್ತು ಆಫ್‌ಲೈನ್ (Offline) ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. 2021-22 ರಲ್ಲಿ ಶೈಲಿ 36 ಲಕ್ಷ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಮಾರಿದ್ದಾರೆ. 1.2 ಕೋಟಿ ವಾರ್ಷಿಕ ಆದಾಯವನ್ನು ಅವರು ಪಡೆಯುತ್ತಿದ್ದಾರೆ. ಅವರು ತಯಾರಿಸುವ ಉತ್ಪನ್ನ ಬಹಳ ಚಿಕ್ಕದಾದ್ರೂ ಅದ್ರಿಂದ ಬರ್ತಿರುವ ಲಾಭ ಹೆಚ್ಚಿದೆ. 

Latest Videos
Follow Us:
Download App:
  • android
  • ios