*  ಈ ಮಹಿಳಾ ಉದ್ಯಮಿ ಗುರಿ ಎಲ್ಲರಿಗೂ ಸುರಕ್ಷಿತ ಆಹಾರ* ಸುರಕ್ಷಿತ ಆಹಾರ ಭವಿಷ್ಯದ ಉದ್ಯಮ* ಕ್ಯಾನ್ಸರ್ ಕಾರಕ ಅಂಶಗಳನ್ನು ಪತ್ತೆ ಮಾಡಿ ಪರಿಹಾರ* ಎಲ್ಲ ಬಗೆಯ ಆಹಾರ ಬೆಳೆಗಳಿಗೆ ಅಳವಡಿಕೆ ಮಾಡುವ ಗುರಿ

ಬೆಂಗಳೂರು(ಆ. 12) ಕೊರೋನಾ ಸಂಕಷ್ಟದ ಕಾಲದಲ್ಲಿ ನೂರಾರು ಸವಾಲುಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಎದುರಾಗಿದೆ. ಅದರಲ್ಲಿಯೂ ಉದ್ಯಮಿಗಳು, ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅದನ್ನು ಮೀರಿಯೂ ಸಾಧನೆ ಮಾಡಿದ್ದಾರೆ. 

ಉದ್ಯಮವೊಂದನ್ನು ಕಟ್ಟಿದ ಮಹಿಳೆ ಮಾನಸ ಗೊಂಚಿಗರ್ ಜೀವನದ ಕತೆಯನ್ನು ಕೇಳಲೇಬೇಕು. ಮೂರು ಮೀಟಿಂಗ್ ಗಳು ಮಾನಸಾ ಅವರ ಆಲೋಚನೆಯ ದಿಕ್ಕನ್ನೇ ಬದಲಿಸಿದವು.

ಮಾನಸಾ ಅವರೆ ಘಟನಾವಳಿಗಳ ವಿವರಣೆ ನೀಡುತ್ತ ಹೋಗುತ್ತಾರೆ ಮೊದಲನೆಯದು MARS ಇಂಟರ್‌ನ್ಯಾಷನಲ್‌ನೊಂದಿಗಿನ ಸಭೆ, ಅಲ್ಲಿ ನಾನು ಅಫ್ಲಾಟಾಕ್ಸಿನ್ (ಶಿಲೀಂಧ್ರ ಕ್ಯಾನ್ಸರ್ ಕಾರಕ) ಜೋಳಕ್ಕೆ ಇವು ನೀಡುವ ತೊಂದರೆಯನ್ನು ಅರ್ಥ ಮಾಡಿಕೊಂಡೆ. ಇದಾದ ಮೇಲೆ ICRISAT ವಿಜ್ಞಾನಿಗಳನ್ನು ಭೇಟಿ ಮಾಡಿದ ನಂತರ ಮತ್ತಷ್ಟು ಹೊಸ ಸಂಗತಿಗಳು ಗೊತ್ತಾದವು.

ಸ್ತನ ಕ್ಯಾನ್ಸರ್..ಕಾರಲ್ಲೇ ಜೀವನ ಮಾಡ್ತಿದ್ದ ಪೋರ್ನ್ ಸ್ಟಾರ್

ಇಕ್ರಿಸ್ಯಾಟ್ ವಿಜ್ಞಾನಿಗಳಾದ ಡಾ. ಹರಿ ಸುದಿನಿ ಮತ್ತು ಡಾ ಶ್ರೀಕಾಂತ್ ರೂಪಾವತಾರಂ ಅವರೊಂದಿಗೆ ಮಾತನಾಡಿದ ನಂತರ ಅಫ್ಲಾಟಾಕ್ಸಿನ್‌ಗೆ(ಕ್ಯಾನ್ಸರ್ ಕಾರಕ) ಸಂಬಂಧಿಸಿದ ಸಮಸ್ಯೆಗಳ ಸಂಪೂರ್ಣ ಅರ್ಥ ನನಗಾಯಿತು. ಇಕ್ರಿಸ್ಯಾಟ್ 80 ರ ದಶಕದಿಂದ ಅಫ್ಲಾಟಾಕ್ಸಿನ್ ಕುರಿತು ಸಂಶೋಧನೆ ನಡೆಸುತ್ತಿತ್ತು ಮತ್ತು ಅಗತ್ಯವಿರುವ ಪರಿಹಾರಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಬಂದಿದೆ.

ಮೂರನೇ ಸಭೆ ದೆಹಲಿಯಲ್ಲಿ ಎಫ್‌ಎಸ್‌ಎಸ್‌ಎಐ ಸಿಇಒ ಪವನ್ ಅಗರ್‌ವಾಲ್ ಅವರೊಂದಿಗೆ ನಡೆಯಿತು. ಆಹಾರದಲ್ಲಿ ಕಲಬೆರಕೆ, ವಿಷ, ರಾಸಾಯನಿಕಗಳು ಇತ್ಯಾದಿಗಳ ಬಗ್ಗೆ ಮತ್ತು ಅವುಗಳನ್ನು ಇಂದು ಹೇಗೆ ಪರೀಕ್ಷಿಸಲಾಗಿದೆ ಎಂಬುದರ ಕುರಿತು ಉತ್ತಮ ತಿಳುವಳಿಕೆಯನ್ನು ನೀಡಿತು. 

ಇದು ಮೆಕ್ಕೆಜೋಳ ಮತ್ತು ಕಡಲೆಕಾಯಿಗಳಲ್ಲಿ ಶೀಘ್ರವಾಗಿ ಅಫ್ಲಾಟಾಕ್ಸಿನ್ ಹೆಚ್ಚಳ ಹೇಗೆ ಆಗುತ್ತದೆ? ಇದರ ತಡೆಗೆ ಏನು ಮಾಡಬಹುದು? ಮೆಣಸಿನಕಾಯಿ ಮತ್ತು ಒಣ ಹಣ್ಣುಗಳಲ್ಲಿ ಅಂಶ ಇದೆಯೇ? ಎಂಬ ಮಾಹಿತಿಯನ್ನು ಪಡೆದುಕೊಂಡೆ ಎಂದು ತಮ್ಮ ಉದ್ಯಮ ಆರಂಭಕ್ಕೆ ಮುನ್ನ ಮಾಡಿಕೊಂಡ ಸಿದ್ಧತೆಯನ್ನು ತಿಳಿಸುತ್ತಾರೆ.

ಬೆಂಗಳೂರು, ಚಿತ್ರದುರ್ಗ ಮತ್ತು ಹೊಸೂರು ಪ್ರದೇಶಗಳ ಸಂಪೂರ್ಣ ಪರಿಚಯವಿದ್ದ ಮಾನಸ ಒಂದೊಂದೆ ಹೆಜ್ಜೆಯನ್ನು ಇಟ್ಟರು. ಐಐಟಿ-ಮದ್ರಾಸ್‌ನಲ್ಲಿ ಫಿಸಿಕ್ಸ್ ಅಧ್ಯಯನ ಮಾಡಿದ್ದ ಅವರು ಸಂಶೋಧಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಇ-ರುಪಿ ಅಂದರೆ ಏನು? ಪ್ರಯೋಜನಗಳು ಹಲವಾರು

ಆರೋಗ್ಯ ಮಾರುಕಟ್ಟೆ ಅಧ್ಯಯನ: ಆರೋಗ್ಯ ಮಾರುಕಟ್ಟೆ ಬಗ್ಗೆ ತಿಳಿವಳಿಕೆ ಹೊಧಿದ್ದ ಮಾನಸ ತಮ್ಮ ಕೋ ಫೌಂಡರ್ ಆಯುಷ್ ನಿಗಮ್ ಜತೆ ಸೇರಿ ಸಾಹಸಕೈ ಹಾಕಿದರು. ಎಲ್ಲರ ಕನಸು ಎಂಬಂತೆ PureScan AI ಸಂಸ್ಥೆ ಆರಂಭವಾಯಿತು. ಆಹಾರದಿಂದ ಆರೋಗ್ಯ ಎನ್ನುವ ಉದ್ದೇಶದೊಂದಿಗೆ ಸಂಸ್ಥೆ ಹೆಜ್ಜೆ ಇಡಲು ಆರಂಭಿಸಿತು.

ಪ್ರವಾಸ ಮಾಡುವುದರೊಂದಿಗೆ ಅಧ್ಯಯನ್ಕ್ಕೆ ಆದ್ಯತೆ ನೀಡಿದೆವು. ಕ್ಯಾನ್ಸರ್ ಕಾರಕವಿಲ್ಲದ ಆಹಾರವನ್ನು ಜನರಿಗೆ ತಲುಪಿಸುವ ಪಣ ನಮ್ಮದಾಗಿತ್ತು ಎಂದು ಮಾನಸ ವಿವರಣೆ ನೀಡುತ್ತಾರೆ. ಚೆನ್ನೈ ಮತ್ತು ಹೈದರಾಬಾದಿನಲ್ಲಿಯೂ ಅನೇಕ ಸಂಶೋಧನೆಗಳನ್ನು ಮಾಡಿಕೊಂಡೆವು ಎಂದು ತಿಳಿಸುತ್ತಾರೆ.

ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವ ಕೃಷಿ ಆಧಾರಿತ ವ್ಯಾಪಾರ ಉದ್ಯಮ ನಮ್ಮ ಮುಂದಿನ ಹೆಜ್ಜೆಯಾಗಿತ್ತು. ಕಡಲೆಕಾಯಿ ಮತ್ತು ಮೆಕ್ಕೆಜೋಳಕ್ಕೆ ಮೊದಲ ಆದ್ಯತೆ ನೀಡಿದೆವು. ಅವುಗಳ ಆಹಾರ ವಸ್ತು ಮಾರುಕಟ್ಟೆ ನಿರ್ಮಾಣ ಮಾಡಿಕೊಂಡೆವು. ರೈತ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಸಾಯನಿಕ ರಹಿತ ಬೆಳೇ ಬೆಲೆದು ಅದನ್ನು ಖರೀದಿ ಮಾಡಿ ವ್ಯಾಪಾರಿಗಳಿಗೆ ತಲುಪಿಸುವ ಯೋಜನೆ ಆರಂಭವಾಯಿತು. ಕಡಲೆಕಾಯಿ ಮತ್ತು ಮೆಕ್ಕೆಜೋಳದ ಮಾರುಕಟ್ಟೆ ನಿರ್ಮಾಣವಾಯಿತು. ಇತರೆ ಬೆಳೆಗಳಿಗೆ ವಿಸ್ತರಿಸುವ ಆಲೋಚನೆ ಇದೆ ಎಂದು ಮಾನಸಾ ತಿಳಿಸುತ್ತಾರೆ.

ಸುರಕ್ಷಿತ ಆಹಾರಕ್ಕೆ ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಇದೆ. ಕಡಿಮೆ ವೆಚ್ಚದಲ್ಲಿ ಸರಿಯಾದ ರೀತಿ ಬೆಳೆ ಬೆಳೆಯುವುದು ಮೊದಲ ಆದ್ಯತೆ. PureScan ಸಂಸ್ಥೆಯೇ ಮುಂದೆ ನಿಂತು ಮೇಲ್ವಿಚಾರಣೆ ನೋಡಿಕೊಳ್ಳುತ್ತದೆ. ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿದ್ದು ರೈತರಿಗೆ ಮಾರ್ಗದರ್ಶನ ನೀಡುತ್ತೇವೆ. 

ಕ್ಯಾನ್ಸರ್ ಕಾರಕಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತೇವೆ. ಇದಕ್ಕಾಗಿ ಒಂದಿಷ್ಟು ಶುಲ್ಕ ನಿಗದಿ ಮಾಡಿದ್ದೇವೆ. ಕೇಂದ್ರ ಸರ್ಕಾರವೂ ಸಂಶೊಧನೆಗೆ ನೆರವು ನೀಡಿದ್ದು ಸುರಕ್ಷಿತ ಆಹಾರ ನೀಡಿಕೆ ಭವಿಷ್ಯದ ಉದ್ಯಮ. ಇಂಥ ಸ್ಟಾರ್ಟ್ ಅಪ್ ಗಳಿಗೆ ಮಾರುಕಟ್ಟೆಯೂ ತೆರೆದುಕೊಳ್ಳುತ್ತದೆ ಎಂದು ಮಾನಸಾ ತಿಳಿಸುತ್ತಾರೆ.