Investment Plans: ಹೂಡಿಕೆ ಮುನ್ನ ಈ ಯೋಜನೆ ಬಗ್ಗೆ ತಿಳಿದಿರಿ

ದುಡಿದ ಸ್ವಲ್ಪ ಹಣವನ್ನಾದ್ರೂ ಸುರಕ್ಷಿತವಾಗಿಡ್ಬೇಕು. ಹಣ ಕೆಲ ವರ್ಷದಲ್ಲಿ ಡಬಲ್ ಆಗ್ಬೇಕು ಎನ್ನುವವರು ಸರ್ಕಾರದ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ತಾರೆ. ಈ ಪಟ್ಟಿಯಲ್ಲಿ ಎನ್ ಎಸ್ಸಿ ಹಾಗೂ ಎಫ್ಡಿ ಬರುತ್ತೆ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
 

Which Is Better FD Or NSC plans for investment know more roo

ಹೂಡಿಕೆ ಎಂಬ ವಿಷ್ಯ ಬಂದಾಗ ಎಲ್ಲರೂ ಗೊಂದಲಕ್ಕೆ ಈಡಾಗ್ತಾರೆ. ಯಾವುದು ಹೂಡಿಕೆಗೆ ಒಳ್ಳೆಯ ಯೋಜನೆ ಎಂಬ ಚಿಂತೆ ಕಾಡುತ್ತದೆ. ಜನರು ಸುರಕ್ಷಿತ ಹೂಡಿಕೆ ಜೊತೆಗೆ ಹೆಚ್ಚು ಬಡ್ಡಿ ಸಿಗುವ ಯೋಜನೆಯನ್ನು ಹುಡುಕುತ್ತಾರೆ. ಎಫ್ ಡಿ ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಹೆಸರು ಹೂಡಿಕೆಯಲ್ಲಿ ಮೊದಲು ಕೇಳಿಬರುತ್ತದೆ. ಈ ಎರಡೂ ಯೋಜನೆಗಳು ಸುರಕ್ಷಿತ ಯೋಜನೆಯಾಗಿದೆ. ಇವೆರಡರಲ್ಲೂ ಉತ್ತಮ ಆದಾಯ ಲಭ್ಯವಿದೆ. ನಾವಿಂದು ಎಫ್ ಡಿ ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಇದ್ರ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.

ಎನ್ಎಸ್ಸಿ (NSC) vs ಎಫ್ಡಿ (FD) ಹೂಡಿಕೆ : ತಜ್ಞರ ಪ್ರಕಾರ, ಇವೆರಡೂ ಒಳ್ಳೆಯ ಹೂಡಿಕೆಯೇ ಆಗಿದೆ. ಆದ್ರೆ ಎಫ್ ಡಿಗಿಂತ ಹೆಚ್ಚು ಸೌಲಭ್ಯವನ್ನು ನೀವು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಪಡೆಯುತ್ತೀರಿ. ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ನಲ್ಲಿ ಹೂಡಿಕೆ (Investment) ಮಾಡೋದು ನಿಮ್ಮ ಅತ್ಯುತ್ತಮ ಆಯ್ಕೆ ಎನ್ನಬಹುದು. 

Personal Finance: ಮಹಿಳೆ ಭವಿಷ್ಯ ಸುರಕ್ಷಿತವಾಗಿರಬೇಕೆಂದ್ರೆ ಈ ವಿಮೆ ಬೆಸ್ಟ್

ಎನ್ ಎಸ್ಸಿಯಲ್ಲಿ ನೀವು ಐದು ವರ್ಷಕ್ಕೆ ಹೂಡಿಕೆ ಮಾಡಬೇಕಾಗುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸುತ್ತದೆ. ಪ್ರಸ್ತುತ ಎನ್ ಎಸ್ಸಿಯ ಬಡ್ಡಿ ದರವು ಶೇಕಡಾ 7.7ರಷ್ಟಿದೆ. ಇದು ಬದಲಾಗ್ತಿರುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ನೀವು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರವನ್ನು ಖರೀದಿ ಮಾಡಬಹುದು. ಇದ್ರಲ್ಲಿ ನೀವು ಕನಿಷ್ಠ ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ. ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ, ಎನ್ ಎಸ್ಸಿಯಲ್ಲಿ ಹೂಡಿಕೆ ಮಾಡುವ ಮೂಲ ಮೊತ್ತದ ಮೇಲೆ 1.5 ಲಕ್ಷ ರೂಪಾಯಿ ತೆರಿಗೆ ರಿಯಾಯಿತಿ ಸಿಗುತ್ತದೆ. ವಾರ್ಷಿಕವಾಗಿ ಬಡ್ಡಿ ಜಮಾ ಆಗುತ್ತದೆ. ಹೂಡಿಕೆದಾರರು ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿರುತ್ತಾರೆ. 

ಎನ್ ಎಸ್ಸಿಯಲ್ಲಿ ಮೂರು ರೀತಿಯಲ್ಲಿ ಪ್ರಮಾಣ ಪತ್ರವನ್ನು ಖರೀದಿ ಮಾಡಬಹುದು. ವ್ಯಕ್ತಿ ತನಗಾಗಿ ಅಥವಾ ಅಪ್ರಾಪ್ತ ವ್ಯಕ್ತಿಗಾಗಿ ಖರೀದಿ ಮಾಡಬಹುದು. ಇದನ್ನು ಸಿಂಗಲ್ ಹೋಲ್ಡರ್ ಪ್ರಮಾಣ ಪತ್ರ ಎನ್ನಲಾಗುತ್ತದೆ. ಇಬ್ಬರು ಸೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಖರೀದಿ ಮಾಡಿ, ಕೊನೆಯಲ್ಲಿ ಬಂದ ಹಣವನ್ನು ಹಂಚಿಕೊಳ್ಳೋದು ಎರಡನೇಯದು. ಇದನ್ನು  ಡಬಲ್ ಎ ಟೈಪ್ ಪ್ರಮಾಣ ಪತ್ರ ಎನ್ನಲಾಗುತ್ತದೆ. ಮೂರನೇಯದು ಡಬಲ್ ಬಿ ಟೈಪ್ ಪ್ರಮಾಣ ಪತ್ರವಾಗಿದ್ದು, ಇದ್ರಲ್ಲಿ ಪ್ರಮಾಣ ಪತ್ರ ಖರೀದಿ ಮಾಡೋರು ಇಬ್ಬರಾಗಿದ್ದರೂ, ಕೊನೆಯಲ್ಲಿ ಒಬ್ಬರೇ ಹಣ ಪಡೆಯುತ್ತಾರೆ.

Personal Finance: ಯಾವುದೇ ಕೆಲಸವಿಲ್ಲವೆಂದ್ರೂ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ?

ಇನ್ನು ಎಫ್‌ಡಿ ಅಂದರೆ ಫಿಕ್ಸೆಡ್ ಡೆಪಾಸಿಟ್. ಎಫ್ ಡಿ ಅಡಿಯಲ್ಲಿ ಹೂಡಿಕೆದಾರರು ಹೂಡಿಕೆ ಮಾಡಿದ ಹಣವನ್ನು ನಿರ್ದಿಷ್ಟ ಅವಧಿಗೆ ಬಿಡಬೇಕಾಗುತ್ತದೆ. ಎಫ್ ಡಿಯಲ್ಲಿನ ಬಡ್ಡಿದರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಎಫ್‌ಡಿ ಖಾತೆಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲೇ ಹೂಡಿಕೆದಾರರಿಗೆ ಮೆಚ್ಯೂರಿಟಿಯಲ್ಲಿ ಎಷ್ಟು ಲಾಭ ಸಿಗುತ್ತದೆ ಎಂಬುದು ತಿಳಿದಿರುತ್ತದೆ. ಯಾವುದೇ ಸಂದರ್ಭದಲ್ಲಿ ಅವರು ನಿಗದಿತ ಮೊತ್ತಕ್ಕಿಂತ ಕಡಿಮೆ ಅಥವಾ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ. ಹೊರಗಿನ ಬದಲಾವಣೆಯಿಂದ ಎಫ್ ಡಿ ಬಡ್ಡಿಯಲ್ಲಿ ಬದಲಾವಣೆ ಆಗುವುದಿಲ್ಲ. ಇದ್ರ ಕನಿಷ್ಠ ಅವಧಿ 6 ತಿಂಗಳು ಹಾಗೂ ಗರಿಷ್ಠ ಅವಧಿ 10 ವರ್ಷವಾಗಿರುತ್ತದೆ. ಎಫ್‌ಡಿಯಲ್ಲಿ ಪಡೆದ ವಾರ್ಷಿಕ ಬಡ್ಡಿ 40,000 ರೂಪಾಯಿಗಿಂತ ಕಡಿಮೆ ಇದ್ದರೆ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ. 40,000 ಕ್ಕಿಂತ ಹೆಚ್ಚಿನ ಬಡ್ಡಿಯ ಮೇಲೆ ಶೇಕಡಾ 10 ರಷ್ಟು ಟಿಡಿಎಸನ್ನು ಕಡಿತಗೊಳಿಸಲಾಗುತ್ತದೆ. ಪಾನ್ ಕಾರ್ಡನ್ನು ಕೆವೈಸಿಗೆ ಸಲ್ಲಿಸದಿದ್ದಕ್ಕಾಗಿ ಬ್ಯಾಂಕ್ ಶೇಕಡಾ 20ರಷ್ಟು ಟಿಡಿಎಸ್ ಕಡಿತಗೊಳಿಸಬಹುದು. ಸೇವಿಂಗ್ ಅಕೌಂಟ್ ಹಾಗೂ ಕರೆಂಟ್ ಅಕೌಂಟ್ ಕಿಂತ ಇಲ್ಲಿ ಬಡ್ಡಿ ಹೆಚ್ಚು ಸಿಗುತ್ತದೆ. 

Latest Videos
Follow Us:
Download App:
  • android
  • ios