Asianet Suvarna News Asianet Suvarna News

ಮುಂದಿನ 23 ದಿನಗಳಲ್ಲಿ ದೇಶದಲ್ಲಿ ಒಟ್ಟು 38 ಲಕ್ಷ ಮದುವೆ, CAIT ವರದಿ!

Indian wedding season ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 32 ಲಕ್ಷ ವಿವಾಹಗಳು ನಡೆದಿದ್ದವು. ಇಕ್ಕಾಗಿ ಒಟ್ಟು ₹3.75 ಲಕ್ಷ ಕೋಟಿ ವೆಚ್ಚವಾಗಿದ್ದವು ಎಂದು ಸಿಎಐಟಿ ತನ್ನ ವರದಿಯಲ್ಲಿ ತಿಳಿಸಿದೆ.

Wedding Season in India 38 lakh marriage scheduled in 23 days auspicious dates  san
Author
First Published Nov 21, 2023, 7:23 PM IST

ಮುಂಬೈ (ನ.21): ದೇಶದಲ್ಲಿ ಹಬ್ಬದ ಋತು ಮುಕ್ತಾಯವಾಗುತ್ತಿರುವಂತೆಯೇ, ಮದುವೆಯ ಋತು ಆರಂಭವಾಗಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಈ ಮದುವೆಯ ಋತುವಿನಲ್ಲಿ ಆಗಲಿರುವ 38 ಲಕ್ಷ ಮದುವೆಗಳಿಂದ ₹ 4.74 ಲಕ್ಷ ಕೋಟಿ ಗಳಿಸುವ ನಿರೀಕ್ಷೆಯಿದೆ, ಇದು ಇದುವರೆಗಿನ ಅತಿ ಹೆಚ್ಚು ಮೊತ್ತವಾಗಿದೆ. ನವೆಂಬರ್ 23 ರಿಂದ ಡಿಸೆಂಬರ್ 15, 2023 ರ ನಡುವೆ ಕೇವಲ 23 ದಿನಗಳ ಅವಧಿಯಲ್ಲಿ 38 ಲಕ್ಷ ವಿವಾಹಗಳು ದೇಶದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು CAIT ಅಂದಾಜು ಮಾಡಿದೆ. ಅದರ ಬಳಿಕವೇ ಈ ಲೆಕ್ಕಾಚಾರ ಹಾಲಾಗಿದೆ. ಕಳೆದ ತಿಂಗಳು ಸಿಎಐಟಿ ನಡೆಸಿದ ಅಂದಾಜಿನಲ್ಲಿ ಈ 38 ಲಕ್ಷ ಮದುವೆಗಳಿಂದ 4.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ಗಳಿಸುವ ನಿರೀಕ್ಷೆಯಿದೆ ಎಂದು ಅಂದಾಜು ಮಾಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 32 ಲಕ್ಷ ವಿವಾಹಗಳು ನಡೆದಿದ್ದವು. ಇದರಿಂದ ಒಟ್ಟು ₹3.75 ಲಕ್ಷ ಕೋಟಿ ವ್ಯವಹಾರವಾಗಿತ್ತು. ಈ 23 ದಿನಗಳಲ್ಲಿ ಸುಮಾರು 3.5 ಲಕ್ಷ ವಿವಾಹಗಳು ದೆಹಲಿಯಲ್ಲಿಯೇ ನಡೆಯಲಿವೆ, ಇದು ಸುಮಾರು ₹ 1 ಲಕ್ಷ ಕೋಟಿ ವ್ಯವಹಾರವನ್ನು ಮಾಡುವ ಸಾಧ್ಯತೆಯಿದೆ.

ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುವ ಪ್ರಕಾರ, ಸೇಲ್ಸ್‌ಗಳು ಹಾಗೂ ದೀಪಾವಳಿ ಸಂಭ್ರಮದ ಕಾರಣದಿಂದಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕಾಯಿತು. ಇದೇ ವೇಳೆ ಮದುವೆಯ ಖರ್ಚಿನ ಮೇಲೆ ಹಣದುಬ್ಬರ ಪರಿಣಾಮ ಬೀರಲಿದೆ ಎನ್ನುವ ಅಂಶವನ್ನೂ ತಳ್ಳಿ ಹಾಕಿದರು. "ಹಣದುಬ್ಬರವು ಮದುವೆಯ ಋತುವಿನ ಮೇಲೆ ಪರಿಣಾಮ ಬೀರುವುದಿಲ್ಲ, ಏಕೆಂದರೆ ಜನರು ಏನು ಬೇಕಾದರೂ ಖರ್ಚು ಮಾಡುತ್ತಾರೆ. ಮದುವೆಯ ಶಾಪಿಂಗ್ ಅನ್ನು ಕಡಿಮೆ ಮಾಡಲು ಹೆಚ್ಚಿನ ಅವಕಾಶವಿರೋದಿಲ್ಲ. ಹಬ್ಬದ ಶಾಪಿಂಗ್‌ಗೆ ಮಾತ್ರವೇ ಹಣದುಬ್ಬರ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.

ಸಿಎಐಟಿಯ ಆಧ್ಯಾತ್ಮಿಕ ಮತ್ತು ವೈದಿಕ ಜ್ಞಾನ ಸಮಿತಿಯ ಅಧ್ಯಕ್ಷ ಆಚಾರ್ಯ ದುರ್ಗೇಶ್ ತಾರೆ ಅವರ ಪ್ರಕಾರ, ನವೆಂಬರ್ 23, 24, 27, 28 ಮತ್ತು 29 ವಿವಾಹಗಳಿಗೆ ಶುಭ ದಿನಾಂಕಗಳು, ನಂತರ ಡಿಸೆಂಬರ್ 3, 4, 7, 8, 9 ಮತ್ತು 15 ಮದುವೆಯ ಋತುವಿನ ಮುಂದಿನ ಹಂತವು 2024 ರ ಜನವರಿ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಆ ವರ್ಷದ ಜುಲೈ ವರೆಗೆ ಇರುತ್ತದೆ ಎಂದಿದ್ದಾರೆ.

ಮುಂಬರುವ ಹಬ್ಬ ಮತ್ತು ಮದುವೆ ಸೀಸನ್‌ಗಳು ಆಭರಣಗಳು, ಸೀರೆಗಳು, ಪೀಠೋಪಕರಣಗಳು, ಸಿದ್ಧ ಉಡುಪುಗಳು, ಪಾದರಕ್ಷೆಗಳು ಮತ್ತು ಇತರ ಪರಿಕರಗಳ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು CAIT ತಿಳಿಸಿದೆ.

ಪಿಎಂ ಅಂದ್ರೆ 'ಪನೌತಿ ಮೋದಿ' ಪ್ರೈಮ್‌ ಮಿನಿಸ್ಟರ್‌ ಘನತೆಗೆ ಅವಮಾನಿಸಿದ್ರಾ ರಾಹುಲ್‌ ಗಾಂಧಿ?

ಸಮೀಕ್ಷೆ ನಡೆದಿದ್ದು ಹೇಗೆ?: ಸಮೀಕ್ಷಾ ವಿಧಾನದ ಬಗ್ಗೆ ಮಾಹಿತಿ ನೀಡಿದ ಪ್ರವೀಣ್ ಖಂಡೇಲ್ವಾಲ್, ವಿತರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ 30 ನಗರಗಳನ್ನು ನಮ್ಮ ಸಂಸ್ಥೆ ಗುರುತಿಸಿದೆ. CAIT ಸಕ್ರಿಯವಾಗಿರುವ 600 ಪ್ಲಸ್ ಜಿಲ್ಲೆಗಳ ಒಳಹರಿವುಗಳಿಗೆ ಸಂಯೋಜಿತ ಡೇಟಾವನ್ನು ಇದಕ್ಕೆ ಸೇರಿಸಲಾಗಿದೆ. ಸಮೀಕ್ಷೆಯು ಗ್ರಾಹಕರಿಗೆ ಅನುಕೂಲಕರ ಮತ್ತು ಅನುಕೂಲಕರವಲ್ಲದ ಸಂದರ್ಭಗಳನ್ನು ಆಧರಿಸಿದೆ ಮತ್ತು ದೊಡ್ಡ ವ್ಯಾಪಾರವನ್ನು ಉತ್ಪಾದಿಸುವ ಅಂಶಗಳನ್ನು ಪಟ್ಟಿ ಮಾಡುತ್ತದೆ. ಸ್ಥಳೀಯ ವ್ಯಾಪಾರ ಸಂಸ್ಥೆಗಳು ಗ್ರಾಹಕರಿಂದ ಒಳಹರಿವು ಸಂಗ್ರಹಿಸಿವೆ ಎಂದು ಅವರು ಹೇಳಿದರು. "ಕಳೆದ ವರ್ಷವೂ, ನಮ್ಮ ಡೇಟಾ ಸರಿಯಾಗಿತ್ತು. ಸಮೀಕ್ಷೆಯು ಗ್ರೌಂಡ್‌ ಡೇಟಾವನ್ನು ಆಧರಿಸಿದೆಯೇ ಹೊರತು ಟೇಬಲ್‌ನಲ್ಲಿ ಕುಳಿತು ಮಾಡಿದ ವಿಶ್ಲೇಷಣೆಯಲ್ಲ ಎಂದಿದ್ದಾರೆ.

Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ ಇಸ್ರೋ!

Follow Us:
Download App:
  • android
  • ios