Asianet Suvarna News Asianet Suvarna News

ಸಾಲ ಕೊಟ್ಟಿದ್ದಕ್ಕೆ ಸಾಕ್ಷಿ‌ ಇಲ್ವಾ? ಹೀಗೆ ಮಾಡಿದ್ರೆ ಹಣ ವಾಪಸ್ ಸಿಗುತ್ತೆಂದ ಮಹಿಳೆ ವಿಡಿಯೋ ವೈರಲ್!

ಸಾಲ ಕೊಟ್ಮೆಲೆ ಅದನ್ನು ವಾಪಸ್ ಪಡೆಯೋದು ದೊಡ್ಡ ಸಾಹಸ. ಯುದ್ಧ ಗೆದ್ದು ಬಂದಷ್ಟು ದಣಿವಾಗುತ್ತೆ. ಗುದ್ದಾಡಿ, ಚೀರಾಡಿ, ಕೂಗಾಡಿ ನಮ್ಮ ಹಣ ವಾಪಸ್ ಪಡೆಯೋದು ಕಷ್ಟ ಎನ್ನುವವರು ಇವರು ಹೇಳಿದ ಟ್ರಿಕ್ಸ್ ಫಾಲೋ ಮಾಡಿ.
 

Viral Police Dress Technique for Recovering Borrowed Money roo
Author
First Published Jun 21, 2024, 1:19 PM IST

ಸಾಲ ಕೊಟ್ಟೋನು ಕೋಡಂಗಿ ಇಸ್ಕೊಂಡವನು ಈರಭದ್ರ ಎನ್ನುವ ಮಾತಿದೆ. ಅನೇಕರು ಇಂಥ ಸ್ಥಿತಿಯನ್ನು ಅನುಭವಿಸಿರುತ್ತಾರೆ. ಆಪ್ತರು, ಸ್ನೇಹಿತರು ಸಾಲ ಕೇಳಿದಾಗ ಇಲ್ಲ ಎನ್ನೋಕೆ ಸಾಧ್ಯವಾಗೋದಿಲ್ಲ. ನಾವೇ ಸಾಲದಲ್ಲಿ ಇದ್ರೂ ಅವರಿಗೆ ಬೇಸರ ಮಾಡ್ಬಾರದು ಎನ್ನುವ ಕಾರಣಕ್ಕೆ ಕೈನಲ್ಲಿರೋ ಅಷ್ಟೋ ಇಷ್ಟೋ ಹಣ ತೆಗೆದು ಕೊಟ್ಟಿರ್ತೇವೆ. ಒಮ್ಮೆ ಅವರ ಕೈಗೆ ಹೋದ್ರೆ ಮುಗೀತು. ಅನೇಕರಿಗೆ ತಾವು ಸಾಲ ಪಡೆದಿದ್ದೇ ನೆನಪಿರೋದಿಲ್ಲ. ಇನ್ನು ತೀರಿಸೋದು ಹೇಗೆ? ಸಾಲ ಕೊಟ್ಟವರು ಮಾತ್ರ, ತೆಗೆದುಕೊಂಡಾತ ಎದುರಿಗೆ ಸಿಕ್ಕಾಗೆಲ್ಲ ಹಣ ಕೈಗೆ ಬರ್ಬಹುದೇನೋ ಅನ್ನೋ ಆಸೆಯಲ್ಲಿ ಆತನನ್ನು ನೋಡ್ತಿರುತ್ತಾನೆ. ತಾವು ಕೊಟ್ಟ ಸಾಲವನ್ನು ಕೇಳೋಕೂ ಅನೇಕರಿಗೆ ಮುಜುಗರ. ಇನ್ನು ಕೆಲವರು ಮುಲಾಜಿಲ್ಲದೆ ಸಾಲ ವಾಪಸ್ ನೀಡುವಂತೆ ಕೇಳಿದ್ರೂ ತೆಗೆದುಕೊಂಡವ ಕ್ಯಾರೆ ಅನ್ನೋದಿಲ್ಲ. ಈ ಬಗ್ಗೆ ಸಾಕ್ಷಿ ಇಲ್ಲ ಅಂದ್ರೆ ಕಥೆ ಮುಗಿದಂತೆ. ಸಣ್ಣಪುಟ್ಟದ್ದಿರಲಿ ಅನೇಕರು ದೊಡ್ಡ ಮೊತ್ತದ ಹಣ ಪಡೆದಾಗ್ಲೂ ಯಾವುದೇ ಸಾಕ್ಷಿ ಇಟ್ಟುಕೊಳ್ಳೋದಿಲ್ಲ. ಕ್ಯಾಶ್ ನೀಡುವ ಸಮಯದಲ್ಲಿ ಇಂಥ ತಪ್ಪಾಗೋದು ಹೆಚ್ಚು. ಆನ್ಲೈನ್ ವಹಿವಾಟಿನಲ್ಲಿ ನಮಗೆ ಅದ್ರ ದಾಖಲೆ ಇರುತ್ತೆ. ಅದೇ ಕ್ಯಾಶ್ ನೀಡಿದಾಗ ಬಾಂಡ್ ಮೇಲೆ ಸಹಿ ಹಾಕಿಕೊಳ್ಳುವಷ್ಟು ಪುರಸೊತ್ತು ಜನರಿಗಿರೋದಿಲ್ಲ. ನಂತ್ರ ಸಾಲ ವಾಪಸ್ ಪಡೆಯೋದು ದೊಡ್ಡ ಸವಾಲಾಗುತ್ತದೆ.

ನೀವೂ ಇಂಥ ಸ್ಥಿತಿಯಲ್ಲಿದ್ದರೆ ಇನ್ಮುಂದೆ ಹೆಚ್ಚು ತಲೆಕೆಡಿಸಿಕೊಳ್ಬೇಡಿ. ನೀವು ಸಾಲ ಕೊಟ್ಟಿದ್ದಕ್ಕೆ ಸಾಕ್ಷಿ ಇಲ್ಲ ಅಂತ ಆಲೋಚನೆ ಮಾಡ್ಬೇಕಾಗಿಲ್ಲ. ಪೊಲೀಸ್ ಡ್ರೆಸ್ ನಲ್ಲಿರುವ ಮಹಿಳೆಯೊಬ್ಬರು ಸಾಲದ ಸಾಕ್ಷಿಯನ್ನು ಹೇಗೆ ಪಡೆಯಬೇಕು, ಅದನ್ನು ಎಲ್ಲಿ ದಾಖಲಿಸಬೇಕು ಎಂಬ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ (Social Network) ಎಕ್ಸ್ ನ ಆಯಶ್ ಹೆಸರಿನ ಖಾತೆಯಲ್ಲಿ ಪೊಲೀಸ್ ಡ್ರೆಸ್ ಧರಿಸಿರುವ ಮಹಿಳೆಯೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಸಾಲ (loan) ವಾಪಸ್ ಪಡೆಯುವ ಸಮಯದಲ್ಲಿ ನೀವು ಪೊಲೀಸ್ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಸಾಕ್ಷಿ ಇಲ್ಲ ಎನ್ನುವ ಚಿಂತೆ ಬೇಡ. ನೀವು ಮಾಡಬೇಕಾಗಿದ್ದು ಇಷ್ಟೆ.. ಮೊದಲು ನೀವು ಸಾಲ ನೀಡಿದ ವ್ಯಕ್ತಿಗೆ ಮೆಸ್ಸೇಜ್ (message) ಮಾಡಿ. ನನಗೆ ನನ್ನ ಹಣ ಬೇಕು, ಅದನ್ನು ಯಾವಾಗ ವಾಪಸ್ ಮಾಡ್ತೀರಾ ಎಂದು ಸಂದೇಶ ಕಳುಹಿಸಿ. ಅದಕ್ಕೆ ಅವರು ನೀಡುವ ಉತ್ತರವನ್ನು ಸಾಕ್ಷಿಯಾಗಿ ಇಟ್ಟುಕೊಳ್ಳಿ. ನಂತ್ರ ನ್ಯಾಯಾಲಯಕ್ಕೆ ಹೋಗಿ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 65 ಬಿ ಅಡಿಯಲ್ಲಿ ಸರ್ಟಿಫಿಕೆಟ್ ಸಲ್ಲಿಸಿ. ನಂತರ ನೀವು ಹಣವನ್ನು ಕಂತುಗಳಲ್ಲಿ ಪಡೆಯುತ್ತೀರಿ ಎನ್ನುತ್ತಾರೆ ಅವರು. 

ಬ್ಯಾಂಕ್​ ಲೋನ್​ ಪಡೆಯಲು ನಟರಿಗೆ ಈ ಪರಿ ಕಷ್ಟನಾ? ಬಿಗ್​ಬಾಸ್​ ನಮ್ರತಾ ಗೌಡ ಬಿಚ್ಚಿಟ್ಟ ಕಹಿ ಅನುಭವ...

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. 7 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಐದು ಸಾವಿರಕ್ಕೂ ಹೆಚ್ಚು ಬಾರಿ ವಿಡಿಯೋ ಸೇವ್ ಆದ್ರೆ, ಇನ್ನೂರಕ್ಕೂ ಹೆಚ್ಚು ಕಮೆಂಟ್ ಬಂದಿದೆ. ಅನೇಕ ಬಳಕೆದಾರರು ಈ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ. ಸಲಹೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಮತ್ತೆ ಕೆಲವರು, ಹಣ ಪಡೆದ ವ್ಯಕ್ತಿ ಕೂಡ ಈ ವಿಡಿಯೋ ನೋಡಿದ್ರೆ ನಮ್ಮ ಕಥೆ ಮುಗಿದಂತೆ ಎಂದು ಕಮೆಂಟ್ ಮಾಡಿದ್ದಾರೆ.

ಭಾರತೀಯ ಸಾಕ್ಷಿ ಕಾಯಿದೆ 1872 ರ ಸೆಕ್ಷನ್ 65 ಎಂದರೇನು : ಪ್ರಾಥಮಿಕ ಸಾಕ್ಷ್ಯವನ್ನು ಸಲ್ಲಿಸದೆಯೇ ದ್ವಿತೀಯ ಸಾಕ್ಷ್ಯವನ್ನು ನೀಡಬಹುದಾದ ಸಂದರ್ಭಗಳಿಗೆ ವಿಭಾಗ 65 ಬಳಸಲಾಗುತ್ತದೆ.  ಇದರಲ್ಲಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ನೀಡಬಹುದು. ಆದ್ರೆ ಎಲೆಕ್ಟ್ರಾನಿಕ್ ಪುರಾವೆ ನೀಡುವ ಸಮಯದಲ್ಲೂ ಪ್ರಾಮಾಣಿಕ ಕಾರಣ ನೀಡಬೇಕಾಗುತ್ತದೆ. 

ಅಕೌಂಟಲ್ಲಿ ಕೇವಲ 500 ರೂ. ಇದ್ರೂ ಒಂದೇ ವರ್ಷದಲ್ಲಿ 11 ಲಕ್ಷ ಸಾಲ ತೀರಿಸಿದ ದಂಪತಿ!
 

Latest Videos
Follow Us:
Download App:
  • android
  • ios