Mysuru: ಕೋಚನಹಳ್ಳಿಯಲ್ಲಿ 3425 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ Silectric Semiconductor

ಜೋಹೋ ಕಂಪನಿಯ ನಿರ್ದೇಶಕರು ರಚಿಸಿರುವ ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್, ಮೈಸೂರಿನಲ್ಲಿ ರೂ 3,425.60 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ 460 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯು ಒಟ್ಟು 9,823 ಕೋಟಿ ರೂಪಾಯಿ ಮೌಲ್ಯದ 10 ಪ್ರಸ್ತಾವನೆಗಳನ್ನು ಅನುಮೋದಿಸಿದೆ.

Silectric Semiconductor Manufacturing to invest Rs 3425 crore in Karnataka san

ಬೆಂಗಳೂರು (ಡಿ.23): ಜೋಹೋ ಕಂಪನಿಯ ನಿರ್ದೇಶಕರು ರಚಿಸಿರುವ  ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್, ಮೈಸೂರಿನ ಕೋಚನಹಳ್ಳಿಯಲ್ಲಿರುವ ಕರ್ನಾಟಕದ ಮೊದಲ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ನಲ್ಲಿ ರೂ 3,425.60 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ ಕಂಪನಿಒಟ್ಟು 460 ಕೆಲಸಗಳು ಸೃಷ್ಟಿ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ 64ನೇ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು 9,823 ಕೋಟಿ ರೂಪಾಯಿ ಮೌಲ್ಯದ 10 ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದ್ದು, ಇವುಗಳು 5,605 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಮೈಸೂರಿನ ಕೋಚನಹಳ್ಳಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ನಲ್ಲಿ ಮೊದಲ ಸೆಮಿಕಂಡಕ್ಟರ್ ಯೋಜನೆಯು ರಾಜ್ಯದ ಪ್ರಮುಖ ಮೈಲಿಗಲ್ಲು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ಕಡಕೋಳ ಸಮೀಪದ ಕೋಚನಹಳ್ಳಿಯಲ್ಲಿ 234 ಎಕರೆ ಭೂಮಿಯನ್ನು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಂಸಿ) ಮತ್ತು ಸೆಮಿಕಂಡಕ್ಟರ್ ಘಟಕಗಳಿಗೆ ರಾಜ್ಯ ಸರ್ಕಾರ ಮೀಸಲಿಟ್ಟಿತ್ತು. ಕರ್ನಾಟಕವು ಹೊಸ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ನೀತಿಯನ್ನು ಹೊರತರಲು ಯೋಜಿಸುತ್ತಿದೆ.

ಸೆಮಿಕಂಡಕ್ಟರ್ ವಲಯಕ್ಕಾಗಿ ನಾಲ್ಕು ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ 901 ಎಕರೆ ಭೂಮಿಯನ್ನು ರಾಜ್ಯ ಗುರುತಿಸಿದೆ. 'ಹುಬ್ಬಳ್ಳಿಯಲ್ಲಿ ಬೇಲೂರು-ಕೋಟೂರು ಸಮೀಪದ  224.5 ಎಕರೆ ಕ್ಲಸ್ಟರ್, ಮೈಸೂರಿನ ಕೋಚನಹಳ್ಳಿಯಲ್ಲಿ 245.67 ಎಕರೆ, ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 218.20 ಎಕರೆ, ಬೆಂಗಳೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ 213.14 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಈ ಮೊದಲು ತಿಳಿಸಿದ್ದರು.

ರಾಜ್ಯದ ಸೆಮಿಕಂಡಕ್ಟರ್‌ ಉದ್ದಿಮೆಗಳನ್ನು ಕೇಂದ್ರ ಸರ್ಕಾರ ಗುಜರಾತ್‌ಗೆ ನೀಡುತ್ತಿದೆ ಎನ್ನುವ ಪ್ರಿಯಾಂಕ್‌ ಖರ್ಗೆ ಅವರ ಕಳವಳಕ್ಕೆ  ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಕೂಡ ದನಿಗೂಡಿಸಿದ್ದಾರೆ. ಗುಜರಾತ್‌ನಲ್ಲಿ ಅನೇಕ ಕಂಪನಿಗಳು ಹೂಡಿಕೆ ಮಾಡುತ್ತಿವೆ ಏಕೆಂದರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ 30% ಪ್ರೋತ್ಸಾಹಕಗಳ ಜೊತೆಗೆ 50% ಪ್ರೋತ್ಸಾಹಕಗಳನ್ನು ನೀಡುತ್ತಿದೆ, ಕಂಪನಿಗಳು ವೆಚ್ಚದ 20% ಅನ್ನು ಮಾತ್ರ ಭರಿಸುತ್ತವೆ," ಎಂದು ಪಾಟೀಲ್ ಹೇಳಿದ್ದರು. ಕರ್ನಾಟಕಕ್ಕೂ ಇದೇ ರೀತಿಯ ಪ್ರೋತ್ಸಾಹ ನೀಡಿದರೆ ರಾಜ್ಯವು ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ, ನಾನು ಈ ವಿಷಯವನ್ನು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದೇನೆ ಎಂದು ಪಾಟೀಲ್ ತಿಳಿಸಿದ್ದಾರೆ.

ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್‌, ಜನವರಿ ಒಳಗಾಗಿ ಈ ಕೆಲಸ ಮಾಡಿ!

ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಕಮಿಟಿ ಸಭೆಯಲ್ಲಿ ಅನುಮೋದಿಸಲಾದ 9,823 ಕೋಟಿ ಹೂಡಿಕೆಗಳಲ್ಲಿ ಮೂರು ಹೊಸ ಹೂಡಿಕೆಗಳು ರೂ. 6,573.6 ಕೋಟಿಗಳನ್ನು ಒಳಗೊಂಡಿವೆ, ಇದು 4,427 ಉದ್ಯೋಗಗಳನ್ನು ಸೃಷ್ಟಿಸಬಹುದು ಎನ್ನಲಾಗಿದೆ. ಡಿಎನ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ರೂ. 998 ಕೋಟಿ ಹೂಡಿಕೆ, 467 ಉದ್ಯೋಗಗಳು) ITIR, ದೇವನಹಳ್ಳಿಯಲ್ಲಿ , ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಮೈಸೂರಿನಲ್ಲಿ (ರೂ. 3,425.6 ಕೋಟಿ ಹೂಡಿಕೆ, 460 ಉದ್ಯೋಗಗಳು) ಮತ್ತು ಹಾರೋಹಳ್ಳಿಯಲ್ಲಿ ಸೆನ್‌ಸೆರಾ ಇಂಜಿನಿಯರಿಂಗ್ ಲಿಮಿಟೆಡ್ (ರೂ. 2,150 ಕೋಟಿ ಹೂಡಿಕೆ, 3,500 ಉದ್ಯೋಗಗಳು) ಹೂಡಿಕೆ ಮಾಡಲಿದೆ. ಹೆಚ್ಚುವರಿಯಾಗಿ, 3,249.7 ಕೋಟಿ ಮೌಲ್ಯದ ಆರು ಅಸ್ತಿತ್ವದಲ್ಲಿರುವ ಹೂಡಿಕೆ ಪ್ರಸ್ತಾಪಗಳಿವೆ, ಇದು 1,178 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

New GST rates for popcorn: ಪಾಪ್‌ಕಾರ್ನ್‌ಗೆ ಹೊಸ ಜಿಎಸ್‌ಟಿ, ಫ್ಲೇವರ್‌ ಮೇಲೆ ಬದಲಾಗುತ್ತೆ ಟ್ಯಾಕ್ಸ್‌!

Latest Videos
Follow Us:
Download App:
  • android
  • ios