100 ,200, 500 ರೂ ಸೇರಿದಂತೆ ನೋಟುಗಳ ಬದಲಾವಣೆಗೆ RBIನಿಂದ ಮಹತ್ವದ ಮಾರ್ಗಸೂಚಿ!
ಡಿಮಾನಿಟೈಸೇಶನ್ ಬಳಿಕ ಬಹುತೇಕರು ಡಿಜಿಟಲ್ ವ್ಯವಾಹರ ಮಾಡುತ್ತಿದ್ದಾರೆ. ಇದರಿಂದ ನೋಟುಗಳು, ನಾಣ್ಯಗಳ ಚಲಾವಣೆ ಕಡಿಮೆ. ಇದೀಗ ಆರ್‌ಬಿಐ 100, 200, 500 ರೂಪಾಯಿ ಸೇರಿದಂತೆ ನೋಟುಗಳ ಬದಲಾವಣೆಗ ಮಹತ್ವದ ಮಾರ್ಗಸೂಚಿ ನೀಡಿದೆ.
ನವದೆಹಲಿ(ಫೆ.02): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮದ ಪ್ರಕಾರ ನಿಮ್ಮ ಬಳಿ ಹಳೇ ನೋಟುಗಳಿದ್ದರೆ ಅವುಗಳನ್ನು ಬ್ಯಾಂಕಿನ ಶಾಖೆಗಳಲ್ಲಿ ಬದಲಾಯಿಸಿ ಹೊಸ ನೋಟುಗಳನ್ನು ಪಡೆಯಬಹುದು. ಇದರಲ್ಲೇನಿದೆ ಹೊಸದು ಅಂತೀರಾ? ನಿಮ್ಮಲ್ಲಿರುವ ಹರಿದಿರುವ ನೋಟು, ಒಂದು ಭಾಗ ಇಲ್ಲದಿರುವ ನೋಟು, ಸುಟ್ಟ ನೋಟುಗಳು ಸೇರಿದಂತೆ ಚಲಾವಣೆಗೆ ಸಾಧ್ಯವಾಗದ ನೋಟುಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಬದಲಾಯಿಸಬಹುದು. ಒಂದು ವೇಳೆ ಬ್ಯಾಂಕಿನ ಸಿಬ್ಬಂದಿಗಳು ನೋಟು ಬದಲಿಸಲು ನಿರಾಕರಿಸಿದೆ ನೇರವಾಗಿ ದೂರು ನೀಡುವ ಅವಕಾಶವನ್ನು ನೀಡಲಾಗಿದೆ. ಆರ್‌ಸಿಬಿ ಹೊಸ ನೀತಿಯಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಮ್ಮ ಶಾಖೆಗಳಲ್ಲಿ ಹರಿದಿರುವ ಸೇರಿದಂತೆ ಚಲಾವಣೆಗೆ ಯೋಗ್ಯವಾಗಿರದ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ.
ಆರ್‌ಸಿಬಿಐ ಯಾವೆಲ್ಲಾ ನೋಟುಗಳನ್ನು ಬ್ಯಾಂಕ್ ಸ್ವೀಕರಿಸಿ ಹೊಸ ನೋಟು ನೀಡಲಿದೆ ಅನ್ನೋದನ್ನು ಹೊಸ ನೀತಿಯಲ್ಲಿ ಹೇಳಿದೆ. ಎರಡು ತುಂಡಾದ ನೋಟಿದ್ದರೆ, ನೋಟಿನ ಎರಡೂ ತುಂಡುಗಳು ಇರಬೇಕು. ಇನ್ನು ಅಂಟಿಸಿದ ನೋಟು, ಹರಿದು ಹಂಚಿಹೋಗಿದ್ದರೂ, ಎಲ್ಲಾ ಬಿಡಿಭಾಗಗಳಿದ್ದರು ನೋಟು ಬದಲಿಸಬಹುದು. ಆದರೆ ನೋಟಿನಲ್ಲಿರುವ ಪ್ರಮುಖ ವಿಷಗಳಾದ ಷರತ್ತು, ಸಹಿ, ಅಸಲಿ ಸಾಬೀತುಪಡಿಸುವ ಗುರುತು, ಅಶೋಕಸ್ಥಂಬ, ಗಾಂಧಿ ಫೋಟೋ ಸೇರಿದಂತೆ ಪ್ರಮುಖ ವಿಷಯಗಳು ನೋಟಿನಲ್ಲಿ ಇಲ್ಲದಿದ್ದರೆ ಈ ನೋಟುಗಳು ಬದಲಾವಣೆಗೆ ಯೋಗ್ಯವಲ್ಲ ಎಂದು ಆರ್‌ಬಿಐ ಹೇಳಿದೆ.
Bank Holidays:ಫೆಬ್ರವರಿಯಲ್ಲಿ 10 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ
ಸುಟ್ಟಿರುವ ನೋಟುಗಳು, ತುಂಬಾ ತುಣುಕುಗಳಾಗಿರುವ ನೋಟುಗಳನ್ನು ಬ್ಯಾಂಕ್ ಶಾಖೆಯಲ್ಲಿ ಸ್ವೀಕರಿಸುವುದಿಲ್ಲ. ಇವುಗಳನ್ನು ಆರ್‌ಬಿಐ ಶಾಖೆಯಲ್ಲಿ ನೀಡಿ ಹೊಸ ನೋಟು ಪಡೆಯಬಹುದು. ಯಾರೂ ಬೇಕಾದರು ಕೇಂದ್ರ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಕನಿಷ್ಠ ಮಿತಿ ನಿಗದಿಪಡಿಸಿಲ್ಲ. ಹೀಗಾಗಿ ನಿಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದೆ.
10 ರೂಪಾಯಿ ಮೇಲ್ಪಟ್ಟ ಯಾವುದೇ ನೋಟುಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಬದಲಾಯಿಸಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಆರ್‌ಬಿಐ ಸರಳೀಕರಣಗೊಳಿಸಿದೆ. ಯಾವುದೇ ಫಾರ್ಮ್ ಭರ್ತಿ ಮಾಡದೇ ನೋಟು ಬದಲಿಸುವ ಅವಕಾಶ ನೀಡಿದೆ. ಬ್ಯಾಂಕ್‌ನಲ್ಲಿ TLR ಮೂಲಕ ಹಳೇ ನೋಟುಗಳನ್ನು ಡಿಪಾಸಿಟ್ ಮಾಡಿ ಕೆಲ ದಾಖಲೆ ನೀಡಬೇಕು. ಬಳಿಕ ಸುಲಭವಾಗಿ ಹೊಸ ನೋಟು ಪಡೆಯಬಹುದು ಅಥವಾ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಬಹುದು.
ನೋಟಿನ ಮೇಲೆ ಏನಾದ್ರೂ ಬರೆದಿದ್ರೆ ಅಮಾನ್ಯವಾಗುತ್ತ? ಈ ಸುದ್ದಿ ನಿಜಾನಾ?
ಚಿಲ್ಲರೆ ಹಣದುಬ್ಬರ ಶೇ.5.72ಕ್ಕೆ ಇಳಿಕೆ:
ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರವು ಒಂದು ವರ್ಷದ ಕನಿಷ್ಠವಾದ ಶೇ.5.72ಕ್ಕೆ ಇಳಿಕೆಯಾಗಿದೆ. ತರಕಾರಿ ಬೆಲೆಗಳಲ್ಲಿ ಇಳಿಕೆ ದಾಖಲಾಗಿದ್ದು ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವೆನ್ನಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಸಲುವಾಗಿ ಆರ್‌ಬಿಐ ಕಳೆದ ಮೇ ತಿಂಗಳಿನಿಂದ ಸತತವಾಗಿ ಸಾಲದ ಮೇಲಿನ ಬಡ್ಡಿದರಗಳನ್ನು ಏರಿಕೆ ಮಾಡುತ್ತಲೇ ಬಂದಿತ್ತು. ಅದರ ಪರಿಣಾಮ ಎನ್ನುವಂತೆ ನವೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣವು ಶೇ.5.88ಕ್ಕೆ ಇಳಿದಿತ್ತು. ಇದೀಗ ಡಿಸೆಂಬರ್‌ನ ಹಣದುಬ್ಬರೂ ಇಳಿದಿರುವ ಕಾರಣ, ಮುಂದಿನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿದರ ಏರಿಕೆಯಿಂದ ಆರ್‌ಬಿಐ ಹಿಂದಡಿ ಇಡಬಹುದು ಎಂದು ನಿರೀಕ್ಷಿಸಲಾಗಿದೆ.