ದೇಸಿಯಾದ ಮೋತಿಲಾಲ್ ಓಸ್ವಾಲ್, ನೆಟ್ಟಿಗರಿಗೆ ಇಷ್ಟವಾಗಿಲ್ಲ ಸ್ಟೈಲ್!

ಉದ್ಯಮಿ ಮೋತಿಲಾಲ್ ಓಸ್ವಾಲ್ ತಮ್ಮ ಜೀವನಶೈಲಿ ಬದಲಿಸಿದ್ದಾರೆ. ಸ್ವದೇಶಿ ವಸ್ತು ಖರೀದಿ ಮಾಡಿ, ಸರಳ ಜೀವನ ಅಳವಡಿಸಿಕೊಳ್ತಿರೋದಾಗಿ ಹೇಳಿದ್ದಾರೆ. ಆದ್ರೆ ಮೋತಿಲಾಲ್ ಓಸ್ವಾಲ್ ಸ್ಟೈಲ್ ಯಾಕೋ ನೆಟ್ಟಿಗರಿಗೆ ಇಷ್ಟವಾದಂತಿಲ್ಲ. ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. 
 

Motilal Oswal Vows To Buy Only Indian Cars Why Internet Is Not Impressed roo

ಸೆಲೆಬ್ರಿಟಿಗಳು, ಉದ್ಯಮಿಗಳು, ದೊಡ್ಡ ಹುದ್ದೆಯನ್ನು ಅಲಂಕರಿಸಿರುವ ಜನರು ಸಾಮಾನ್ಯರಿಗೆ ರೋಲ್ ಮಾಡೆಲ್ ಗಳಾಗಿರ್ತಾರೆ. ಅವರ ಜೀವನಶೈಲಿ, ಅವರ ಸ್ಟೈಲ್, ಅವರ ಆಹಾರವನ್ನು ಜನರು ಫಾಲೋ ಮಾಡಲು ಮುಂದಾಗ್ತಾರೆ. ಪ್ರಸಿದ್ಧಿ ಪಡೆದ ಜನರ ಒಳ್ಳೆ ಅಭ್ಯಾಸವನ್ನು ಜನಸಾಮಾನ್ಯರು ಫಾಲೋ ಮಾಡಿದರೆ ಇದ್ರಿಂದ ಲಾಭವೇ ಹೆಚ್ಚು. ದೇಸಿ ವಸ್ತುಗಳನ್ನು ಬಳಸಿ, ದೇಶದ ಅಭಿವೃದ್ಧಿಗೆ ಮುಂದಾಗಿ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳ್ತಾನೆ ಬಂದಿದ್ದಾರೆ. ಮೋದಿ ಹೇಳಿಕೆ, ಸಲಹೆ ನಂತ್ರ ಬಹುತೇಕರು ದೇಸಿ ಸ್ಟೈಲ್ ಅವಳಡಿಸಿಕೊಳ್ತಿದ್ದಾರೆ. ದೀಪದಿಂದ ಹಿಡಿದು ವಾಚ್, ಬಟ್ಟೆ ಸೇರಿದಂತೆ ಅವರು ಬಳಸುವ ಬಹುತೇಕ ವಸ್ತುಗಳು ದೇಸಿಯಾಗಿವೆ. ವಿದೇಶಿ ವಸ್ತುಗಳನ್ನು ಬೈಕಾಟ್ ಮಾಡಿದ ಅನೇಕರಲ್ಲಿ ಈಗ ಮೋತಿಲಾಲ್ ಓಸ್ವಾಲ್ ಸೇರಿದ್ದಾರೆ. ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೋತಿಲಾಲ್ ಓಸ್ವಾಲ್ ಈ ವಿಷ್ಯವನ್ನು ಸ್ಪಷ್ಟಪಡಿಸಿದ್ದಾರೆ. 

ಮೋತಿಲಾಲ್ ಓಸ್ವಾಲ್ (Motilal Oswal) ರನ್ನು ಮಾರುಕಟ್ಟೆಯ ದಿಗ್ಗಜ ಎಂದೇ ಕರೆಯಲಾಗುತ್ತದೆ. ಅವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿರೋದನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ಕಾರ್ ಹಾಗೂ ವಾಚ್ ಗಳಂತಹ ಐಷಾರಾಮಿ (luxury) ವಿದೇಶಿ ವಸ್ತುಗಳಿಗೆ ಗುಡ್ ಬೈ ಹೇಳಿದ್ದು, ಸ್ವದೇಶಿ ವಸ್ತುಗಳನ್ನು ಬಳಸಲು ಶುರು ಮಾಡಿರೋದಾಗಿ ಹೇಳಿದ್ದಾರೆ. ನಾನು ದೇಶಿಯಾಗಿದ್ದೇನೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ. 

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಪ್ರಮುಖ ನಿರ್ಬಂಧ ವಿಧಿಸಿದ ಆರ್‌ಬಿಐ!

ಟಾಟಾ ಸಫಾರಿ (Tata Safari ) ಯ ಒಂದು ಫೋಟೋ ಹಂಚಿಕೊಂಡಿರುವ ಮೋತಿಲಾಲ್ ಓಸ್ವಾಲ್, ನನ್ನ ಮುಂದಿನ ವಾಹನ ಮಹೀಂದ್ರಾ ಗ್ರೂಪ್ ನದ್ದಾಗಿರುತ್ತದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ. ಕನಿಷ್ಠ ಮತ್ತು ಸರಳ ಜೀವನದ ಅನ್ವೇಷಣೆಯಲ್ಲಿ, ನಾನು ಈಗ ದೇಸಿಯಾಗಿದ್ದೇನೆ. ವಿದೇಶಿ ಕಾರುಗಳು, ಕೈಗಡಿಯಾರಗಳು ಮತ್ತು ಇತರ ಐಷಾರಾಮಿ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ. ವಿಶ್ವ ದರ್ಜೆಯ ಭಾರತೀಯ ಉತ್ಪನ್ನಗಳು ಈಗ ಲಭ್ಯವಿದೆ. ನಾನು ಟಾಟಾ ಸಫಾರಿಯೊಂದಿಗೆ ಪ್ರಾರಂಭಿಸಿದೆ, ಮುಂದಿನ ತಿರುವು ಮಹೀಂದ್ರಾ ಆಗಿರಲಿದೆ. ಲೋಕಲ್ ಗಾಗಿ ಓಕಲ್ ಎಂದು ಹೇಳಿರುವ ಮೋತಿಲಾಲ್ ಓಸ್ವಾಲ್, ರತನ್ ಟಾಟಾ, ಆನಂದ್ ಮಹೀಂದ್ರಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಟಾಟಾ ಮೋಟಾರ್ಸ್ ಗೆ ಟ್ಯಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, 2020 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಲೋಕಲ್ ಫಾರ್ ಓಕಲ್ ಮಂತ್ರವನ್ನು ಹೇಳಿದ್ದರು.  ಎಲ್ಲರೂ ಇದನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆತ್ಮನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತಕ್ಕೆ ಅನೇಕರು ಬೆಂಬಲ ಸೂಚಿಸಿದ್ದರು. ಮೋತಿಲಾಲ್ ಓಸ್ವಾಲ್ ಪೋಸ್ಟ್ ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. 30-40 ಲಕ್ಷ ರೂಪಾಯಿ ಮೌಲ್ಯದ 5-6 ಎಸ್ಯುವಿ ಖರೀದಿಸಿ ನಂತ್ರ ನಿಮ್ಮನ್ನು ಮಿನಿಮಲಿಸ್ಟ್ ಎಂದು ಕರೆದುಕೊಳ್ಳುತ್ತೀರಿ. ನೀವು ತುಂಬಾ ಸರಳರು ಸರ್ ಎಂದು ಬಳಕೆದಾರರು ಕಾಲೆಳೆದಿದ್ದಾರೆ. , ಮೋತಿಲಾಲ್ ಓಸ್ವಾಲ್ ಎಸ್ಯುವಿ ಏಕೆ ಖರೀದಿ ಮಾಡ್ತಿದ್ದಾರೆ, ಮಾರುತಿ ಸ್ವಿಫ್ಟ್‌ನಂತಹ ಸಣ್ಣ ವಾಹನವನ್ನು ಏಕೆ ಖರೀದಿ ಮಾಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಅವರ ಕೆಲಸವನ್ನು ಸ್ವಾಗತಿಸಿದ್ರೆ, ಮತ್ತೆ ಕೆಲವರು ಈ ಸರಳ ಜೀವನ ಕಾರು, ವಾಚ್ ಗಷ್ಟೆ ಸೀಮಿತವಾಗಿದ್ರೆ ಸಾಲದು ಎಂದಿದ್ದಾರೆ. 

ವಿಶ್ವದಲ್ಲೇ ಅತಿ ಹೆಚ್ಚು ಭ್ರಷ್ಟ ದೇಶಗಳು ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ಓಸ್ವಾಲ್, 1987 ರಲ್ಲಿ ರಾಮ್‌ದೇವ್ ಅಗರ್ವಾಲ್ ಅವರೊಂದಿಗೆ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಅನ್ನು ಪ್ರಾರಂಭಿಸಿದರು. ರಾಜಸ್ಥಾನದ ಬಾರ್ಮರ್‌ನಲ್ಲಿ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಓಸ್ವಾಲ್ ಮುಂಬೈಗೆ ತೆರಳಿ ಅಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಮುಗಿಸಿದ್ದರು. 

Latest Videos
Follow Us:
Download App:
  • android
  • ios