ಪಿಂಚಣಿ ತಗೊಳ್ತಾ ಇದ್ದೀರಾ? ಈ ದಾಖಲೆ ಕೊಡದಿದ್ರೆ ಹಣ ಬರೋದು ಬಂದ್ ಆಗಲಿದೆ, ಇದೇ ಕೊನೇ ದಿನ!
ಕೇಂದ್ರ ಸರ್ಕಾರಿ ನೌಕರರು ಲೈಫ್ ಸರ್ಟಿಫಿಕೇಟ್ ಅಥವಾ ಜೀವನ್ ಪ್ರಮಾಣ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಪಿಂಚಣಿ ನಿಲ್ಲುವ ಸಾಧ್ಯತೆ ಇದೆ. ಸರ್ಟಿಫಿಕೇಟ್ ಸೆಂಟ್ರಲ್ ಪಿಂಚಣಿ ಪ್ರೋಸೆಸಿಂಗ್ ಸೆಂಟರ್‌ಗಳಿಗೆ (CPPC) ತಲುಪಿದ ನಂತರವೇ ಹಣ ಬಿಡುಗಡೆಯಾಗುತ್ತದೆ
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ಅಕ್ಟೋಬರ್ 1 ರಿಂದ ತಮ್ಮ ಜೀವನ್ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬಹುದು. ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ 1 ರಿಂದ ಆರಂಭವಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ ನಿಂದಲೇ ಸಲ್ಲಿಸಬಹುದು. 2024 ರ ಅಕ್ಟೋಬರ್ 1 ರಂದು ಲೈಫ್ ಸರ್ಟಿಫಿಕೇಟ್ ಸಲ್ಲಿಸಿದರೆ, ಅದು ಮುಂದಿನ ವರ್ಷ ನವೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿದೆ.
ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಬೇಕಾದ ದಾಖಲೆಗಳು
-ಪಿಪಿಒ ಸಂಖ್ಯೆ
-ಆಧಾರ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರಗಳು
-ಆಧಾರ್ ಜೊತೆಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆ
ಯಾವುದೇ ಕಾರಣಕ್ಕಾಗಿ ಸಮಯಕ್ಕೆ ಸರಿಯಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಸಾಧ್ಯವಾಗದಿದ್ದರೆ ಮುಂದಿನ ತಿಂಗಳು ಅಥವಾ ನಂತರ ಸಲ್ಲಿಸಬಹುದು. ಆದರೆ, ನೆನಪಿಡಿ, ನವೆಂಬರ್ 30 ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಪಿಂಚಣಿ ನಿಲ್ಲುವ ಸಾಧ್ಯತೆ ಇದೆ. ಸರ್ಟಿಫಿಕೇಟ್ ಸೆಂಟ್ರಲ್ ಪಿಂಚಣಿ ಪ್ರೋಸೆಸಿಂಗ್ ಸೆಂಟರ್‌ಗಳಿಗೆ (CPPC) ತಲುಪಿದ ನಂತರವೇ ಹಣ ಬಿಡುಗಡೆಯಾಗುತ್ತದೆ.
ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್‌ಗಳನ್ನು ಈ ಏಳು ವಿಧಾನಗಳ ಮೂಲಕ ಸಲ್ಲಿಸಬಹುದು.
1) ಜೀವನ್ ಪ್ರಮಾಣ್ ಪೋರ್ಟಲ್
2) "UMANG" ಮೊಬೈಲ್ ಆ್ಯಪ್
3) ಡೋರ್‌ಸ್ಟೆಪ್ ಬ್ಯಾಂಕಿಂಗ್ (DSB)
4) ಅಂಚೆ ಕಚೇರಿಗಳಲ್ಲಿ ಬಯೋಮೆಟ್ರಿಕ್ ಸಾಧನಗಳ ಮೂಲಕ.
5) ವಿಡಿಯೋ ಆಧಾರಿತ ಗ್ರಾಹಕ ಗುರುತಿಸುವಿಕೆ ಪ್ರಕ್ರಿಯೆಯ ಮೂಲಕ
6) ಫೇಸ್ ದೃಢೀಕರಣ
7) ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಲೈಫ್ ಸರ್ಟಿಫಿಕೇಟ್ ನಮೂನೆಗಳನ್ನು ಸಲ್ಲಿಸಬಹುದು.
ದೀಪಾವಳಿ ಧಮಾಕಾ: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ?
ನಿವೃತ್ತಿಯ ನಂತರ ನಿಯಮಿತ ಆದಾಯ ಅಥವಾ ಉಳಿತಾಯ ಇರುವುದು ಹಿರಿಯ ನಾಗರಿಕರಿಗೆ ದೊಡ್ಡ ನೆಮ್ಮದಿ. ನಿವೃತ್ತಿಯ ನಂತರದ ಜೀವನವನ್ನು ಸುಗಮವಾಗಿ ನಡೆಸಲು ಪಿಂಚಣಿ ಒಂದು ಮುಖ್ಯ ಆದಾಯ ಮೂಲವಾಗಿದೆ. 60 ರಿಂದ 80 ವರ್ಷ ವಯಸ್ಸಿನ ಎಲ್ಲಾ ಪಿಂಚಣಿದಾರರು ಮಾಸಿಕ ಪಿಂಚಣಿ ಪಡೆಯಲು ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಕೆಲಸ ಹುಡುಕ್ತಾ ಇರೋರಿಗೆ ಗುಡ್ ನ್ಯೂಸ್, ರಾಜ್ಯದಲ್ಲಿ ಖಾಲಿ ಇರುವ 34,863 ಹುದ್ದೆ ಭರ್ತಿಗೆ ಸಿಎಂ ಸೂಚನೆ!