Asianet Suvarna News Asianet Suvarna News

ITR Filing:ಈಗ ಆನ್ ಲೈನ್ ನಲ್ಲಿ ಐಟಿಆರ್ ಫಾರ್ಮ್ 2 ಲಭ್ಯ; ಇದನ್ನು ಯಾರು ಬಳಸಬಹುದು?

ಐಟಿಆರ್ ಫಾರ್ಮ್ 2 ಆದಾಯ ತೆರಿಗೆ ಇಲಾಖೆ ಪೋರ್ಟಲ್ ನಲ್ಲಿ ಲಭ್ಯವಿದೆ. ಇದನ್ನು ಬಳಸಿ ತೆರಿಗೆದಾರರು ಐಟಿಆರ್ ಸಲ್ಲಿಕೆ ಮಾಡಬಹುದು. ಐಟಿಆರ್-1 ಹಾಗೂ ಐಟಿಆರ್ -4 ಫಾರ್ಮ್ ಗಳನ್ನು ಮೇ 20ರಂದೇ ಬಿಡುಗಡೆ ಮಾಡಲಾಗಿತ್ತು.ಇನ್ನು ಐಟಿಆರ್ ಫಾರ್ಮ್ 2 ಅನ್ನು ಯಾರು ಬಳಸಬಹುದು? ಇಲ್ಲಿದೆ ಮಾಹಿತಿ.
 

ITR filing for FY 2022 23 ITR Form 2 available online who is eligible all you need to know anu
Author
First Published Jun 2, 2023, 5:49 PM IST

ನವದೆಹಲಿ (ಜೂ.2): ವೇತನ ಪಡೆಯುವ ಉದ್ಯೋಗಿಗಳು ಹಾಗೂ ಅಡಿಟ್ ಗೊಳಪಡದ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ 2022-23ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿದೆ. ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡೋದು ಅಗತ್ಯ. ಇಲ್ಲವಾದ್ರೆ ದಂಡ ಬೀಳುತ್ತದೆ. ಐಟಿಆರ್ ಸಲ್ಲಿಕೆಗೆ ವಿವಿಧ ನಮೂನೆಯ ಫಾರ್ಮ್ ಗಳಿವೆ. ಇವುಗಳಲ್ಲಿ ನಿಮ್ಮ ಆದಾಯದ ಮೂಲಕ್ಕೆ ಅನುಗುಣವಾಗಿ ಸೂಕ್ತವಾದ ಫಾರ್ಮ್ ಆಯ್ಕೆ ಮಾಡಬೇಕು. ಐಟಿಆರ್-1 ಹಾಗೂ ಐಟಿಆರ್ -4 ಫಾರ್ಮ್ ಗಳನ್ನು 2023ರ ಮೇ 20ರಂದೇ ಬಿಡುಗಡೆ ಮಾಡಲಾಗಿತ್ತು. ಇದೀಗ ಐಟಿಆರ್-2 ಫಾರ್ಮ್ ಅನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆಗೊಳಿಸಿದೆ.  ತೆರಿಗೆದಾರರು ತಮ್ಮ ಐಟಿಆರ್ ಅನ್ನು ಐಟಿಆರ್ ಫಾರ್ಮ್ -2 ಬಳಸಿ ಆನ್ ಲೈನ್ ಪೋರ್ಟಲ್ ನಲ್ಲಿ ಫೈಲ್ ಮಾಡಬಹುದು ಎಂದು ಆದಾಯ ತೆರಿಗೆ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಇನ್ನು ಐಟಿಆರ್ -2 ಫಾರ್ಮ್ ಆಪ್ ಲೈನ್ ನಮೂನೆಯನ್ನು ಆದಾಯ ತೆರಿಗೆ ಇಲಾಖೆ ಮೇ 17ರಂದೇ ಬಿಡುಗಡೆಗೊಳಿಸಿತ್ತು. 

ITR FORM 2: ಡೌನ್ ಲೋಡ್ ಮಾಡೋದು ಹೇಗೆ?
*https://www.incometaxindiaefiling.gov.in/home ಲಾಗಿನ್ ಆಗಿ.
*ಡೌನ್ ಲೋಡ್ ಟ್ಯಾಬ್ ಅಡಿಯಲ್ಲಿ 'Offline Utilities'ಮೇಲೆ ಕ್ಲಿಕ್ ಮಾಡಿ.
* ಆ ಬಳಿಕ 'Income Tax Return Preparation Utilities'ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ.
*'Excel Utility'ಮೇಲೆ ಕ್ಲಿಕ್ ಮಾಡಿ. ಕೈಯಿಂದ ಐಟಿಆರ್ 2 ಕಾಲಂನಲ್ಲಿ ಮಾಹಿತಿಗಳನ್ನು ಭರ್ತಿ ಮಾಡಲು ಫೈಲ್ ಡೌನ್ ಲೋಡ್ ಮಾಡಿ.
*ಡೌನ್ ಲೋಡ್ ಮಾಡಿರುವ ಫೈಲ್ ತೆರೆದು, ಮಾಹಿತಿಗಳನ್ನು ಭರ್ತಿ ಮಾಡಿ.

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್‌ ಮೂಲಕವೇ ಹೀಗೆ ಸಲ್ಲಿಸಿ..

ಯಾರು ಐಟಿಆರ್ -2 ಬಳಸಬಹುದು?
ಉದ್ಯಮ ಅಥವಾ ವೃತ್ತಿಯಿಂದ ಲಾಭ ಅಥವಾ ಆದಾಯ ಗಳಿಸದ ವ್ಯಕ್ತಿಗಳು ಹಾಗೂ ಅವಿಭಜಿತ ಹಿಂದೂ ಕುಟುಂಬ (HUF) ಐಟಿಆರ್ -2 ಅರ್ಜಿ ನಮೂನೆ ಬಳಸಬಹುದು. 'Profits and Gains of Business or Profession' ಎಂಬ ಶೀರ್ಷಿಕೆಯಡಿಯಲ್ಲಿ ಆದಾಯ ಹೊಂದಿರುವ ವ್ಯಕ್ತಿ ಅಥವಾ ಅವಿಭಜಿತ ಹಿಂದೂ ಕುಟುಂಬ ಈ ಫಾರ್ಮ್ ಬಳಸುವಂತಿಲ್ಲ. ಹಾಗೆಯೇ ಐಟಿಆರ್ -1 ಬಳಸಲು ಅರ್ಹತೆ ಹೊದಿರುವ ವ್ಯಕ್ತಿಗಳು ಐಟಿಆರ್-2 ಸಲ್ಲಿಕೆ ಮಾಡುವಂತಿಲ್ಲ. ಐಟಿಆರ್‌ 2ನಲ್ಲಿ ಉದ್ಯಮಿಗಳು, ವೃತ್ತಿಪರರರು ಮತ್ತು ವಾರ್ಷಿಕ 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದು. ಐಟಿಆರ್‌ 1ರ ಮೂಲಕ ವೇತನ ವರ್ಗ, ಹಿರಿಯ ನಾಗರಿಕರು ಸೇರಿದಂತೆ ವೈಯಕ್ತಿಕ ತೆರಿಗೆದಾರರು ಮಾಹಿತಿ ಸಲ್ಲಿಸಬಹುದು. ಯಾರು ಸ್ವ ಉದ್ಯೋಗ ಮಾಡುವವರು ಹಾಗೂ ಬ್ಯುಸಿನೆಸ್ ಉದ್ಯಮದಿಂದ ಗಳಿಸಿದ ಲಾಭದ ಆದಾಯಕ್ಕೆ ಐಟಿಆರ್ ಫಾರ್ಮ್ 3 ಫೈಲ್ ಮಾಡಬೇಕು.

ITR ಫೈಲ್ ಮಾಡುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡ್ಬೇಡಿ

2022-23ನೇ ಸಾಲಿನಲ್ಲಿ ಫಾರ್ಮ್‌ 1, 2 ಮತ್ತು ಫಾರ್ಮ್‌ 4ರ ಮೂಲಕ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡುವವರಿಗೆ, ಆದಾಯ ತೆರಿಗೆ ಇಲಾಖೆ ತನ್ನ ವೆಬ್‌ಸೈಟ್‌ ಅನ್ನು ಮುಕ್ತಗೊಳಿಸಿದೆ. ಹೀಗಾಗಿ ವೈಯಕ್ತಿಕ ತೆರಿಗೆದಾರರು, ವೃತ್ತಿಪರರು ಮತ್ತು ಸಣ್ಣ ಉದ್ಯಮಿಗಳು, ಇ- ಫೈಲಿಂಗ್‌ ಪೋರ್ಟಲ್‌ ಬಳಸಿಕೊಂಡು ಆನ್‌ಲೈನ್‌ ಮೂಲಕ ಮಾಹಿತಿ ಸಲ್ಲಿಕೆ ಮಾಡಬಹುದಾಗಿದೆ. ವಿಧದ ಆದಾಯ ಹಾಗೂ ತೆರಿಗೆದಾರರಿಗೆ ವಿವಿಧ ನಮೂನೆಯ ಐಟಿಆರ್ ಅರ್ಜಿಗಳಿವೆ. ಹೀಗಾಗಿ ನಿಮ್ಮ ಆದಾಯ ಮೂಲಗಳು ಹಾಗೂ ತೆರಿಗೆದಾರರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬ ಆಧಾರದಲ್ಲಿ ಸಮರ್ಪಕವಾದ ಐಟಿಆರ್ ಅರ್ಜಿ ಆಯ್ಕೆ ಮಾಡಿ.ನೀವು ತಪ್ಪಾದ ಐಟಿಆರ್ ಅರ್ಜಿ ಭರ್ತಿ ಮಾಡಿದರೆ ನಿಮ್ಮ ಐಟಿಆರ್ ಫೈಲಿಂಗ್ ತಪ್ಪಾಗಲಿದೆ. 

Follow Us:
Download App:
  • android
  • ios