ಯುಎವಿ, ಸಿ-ಯುಎಎಸ್ ಜಾಮರ್‌ ಖರೀದಿಗೆ ವೇಗ ನೀಡುತ್ತಿದೆ ಭಾರತೀಯ ಸೇನೆ; ವಿಶೇಷತೆಗಳು ಹೀಗಿವೆ..

ಈ ಮಲ್ಟಿ ಸೆನ್ಸರ್ ವ್ಯವಸ್ಥೆಗಳು ಯುಎವಿಗಳನ್ನು, ಅವುಗಳ ಸಮೂಹವನ್ನೂ ಗುರುತಿಸಬಲ್ಲವಾಗಿದ್ದು, ಜಾಮಿಂಗ್ ವ್ಯವಸ್ಥೆಗಳ ಮೂಲಕ ಪ್ರತ್ಯುತ್ತರ ನೀಡಬಲ್ಲವು. ಭಾರತೀಯ ಸೇನೆ ಈ ವ್ಯವಸ್ಥೆ ರೇಡಿಯೋ ಫ್ರೀಕ್ವೆನ್ಸಿ (ಆರ್‌ಎಫ್) ಜಾಮರ್, 3ಡಿ ರೇಡಾರ್, ಆರ್‌ಎಫ್ ಮತ್ತು ಉಪಗ್ರಹ ನ್ಯಾವಿಗೇಶನ್ ಜಾಮರ್, ಹಾಗೂ ಸಿ2 ಸೆಂಟರ್‌ಗಳನ್ನು ಹೊಂದಿರಬೇಕು ಎಂದು ಬಯಸುತ್ತಿದೆ.

indian army floats rfp for 20 vehicle based drone jammers ash

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ಸೇನೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಲವು ಯುಎವಿಗಳು ಹಾಗೂ ಕೌಂಟರ್-ಯುಎಎಸ್ (ಸಿ-ಯುಎಎಸ್) ವ್ಯವಸ್ಥೆಗಳನ್ನು ಖರೀದಿಸಲು ಹಲವಾರು ಗುತ್ತಿಗೆಗಳನ್ನು ಪ್ರಕಟಿಸಿದೆ. ಡಿಸೆಂಬರ್ 16ರಂದು 2 ಆವೃತ್ತಿಗಳಲ್ಲಿ 570 ಯುಎವಿಗಳ ಖರೀದಿಗಾಗಿ ಪ್ರಸ್ತಾವನೆಗಾಗಿ ವಿನಂತಿ (ಆರ್‌ಎಫ್ಎಲ್) ನೀಡಲಾಯಿತು. ಸಾಮಾನ್ಯ ಆವೃತ್ತಿಯ ಯುಎವಿಗಳು 12,000 ಅಡಿಗಳ ತನಕದ ಎತ್ತರದಲ್ಲಿ ಹಾರಾಟ ನಡೆಸಲು ಸೂಕ್ತವಾಗಿದೆ. ಇನ್ನೊಂದೆಡೆ, ಎರಡನೆಯ ಅಭಿವೃದ್ಧಿ ಹೊಂದಿದ ಆವೃತ್ತಿಯ ಯುಎವಿಗಳು 18,000 ಅಡಿಗಳಿಗೂ ಹೆಚ್ಚು ಎತ್ತರದಲ್ಲಿ ಹಾರಾಟ ನಡೆಸಬಲ್ಲವು.

ಈ ಯುಎವಿಗಳನ್ನು ಭಾರತದ ಗಡಿಯಾದ್ಯಂತ ನಿಯೋಜನೆಗೊಂಡಿರುವ ಸೇನಾಪಡೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಬಳಸಬಹುದಾಗಿದೆ. ಸಾಮಾನ್ಯ ಆವೃತ್ತಿಯ ಯುಎವಿಗಳು 40-80 ಕೆಜಿ ತೂಕದ ಪೇಲೋಡ್ ಹೊತ್ತು ಸಾಗಬಲ್ಲವಾದರೆ, ಹೆಚ್ಚು ಎತ್ತರಕ್ಕೆ ಹಾರುವ ಆವೃತ್ತಿ 20-40 ಕೆಜಿ ಹೊತ್ತು ಸಾಗಬಲ್ಲದು. ಇವುಗಳು ಕನಿಷ್ಠ 45 ನಿಮಿಷಗಳ ಕಾಲ ಹಾರಾಟ ನಡೆಸಬಲ್ಲವು. ಆರ್‌ಎಫ್ಎಲ್ ಪ್ರತಿಕ್ರಿಯೆಗಳು ಫೆಬ್ರವರಿ 10ರಂದು ಕೊನೆಗೊಂಡವು ಎಂದೂ ತಿಳಿದುಬಂದಿದೆ.

ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಭಾರತೀಯ ಸೇನೆಯ ಖರೀದಿ ಪಟ್ಟಿಯಲ್ಲಿ ಯುಎವಿ ಜಾಮರ್‌ಗಳೂ ಹೆಚ್ಚಿನ ಪ್ರಾಶಸ್ತ್ಯ ಹೊಂದಿವೆ. ಜನವರಿ 18ರಂದು ಭಾರತದಲ್ಲೇ ನಿರ್ಮಾಣಗೊಂಡಿರುವ, 20 ವಾಹನಗಳಿಗೆ ಅಳವಡಿಸಬಲ್ಲ ಜಾಮರ್‌ಗಳಿಗೆ ಫೆಬ್ರವರಿ 28ಕ್ಕೆ ಅನ್ವಯವಾಗುವಂತೆ ಆರ್‌ಎಫ್ಎಲ್ ಬಿಡುಗಡೆಗೊಳಿಸಲಾಯಿತು.

ಈ ಮಲ್ಟಿ ಸೆನ್ಸರ್ ವ್ಯವಸ್ಥೆಗಳು ಯುಎವಿಗಳನ್ನು, ಅವುಗಳ ಸಮೂಹವನ್ನೂ ಗುರುತಿಸಬಲ್ಲವಾಗಿದ್ದು, ಜಾಮಿಂಗ್ ವ್ಯವಸ್ಥೆಗಳ ಮೂಲಕ ಪ್ರತ್ಯುತ್ತರ ನೀಡಬಲ್ಲವು. ಭಾರತೀಯ ಸೇನೆ ಈ ವ್ಯವಸ್ಥೆ ರೇಡಿಯೋ ಫ್ರೀಕ್ವೆನ್ಸಿ (ಆರ್‌ಎಫ್) ಜಾಮರ್, 3ಡಿ ರೇಡಾರ್, ಆರ್‌ಎಫ್ ಮತ್ತು ಉಪಗ್ರಹ ನ್ಯಾವಿಗೇಶನ್ ಜಾಮರ್, ಹಾಗೂ ಸಿ2 ಸೆಂಟರ್‌ಗಳನ್ನು ಹೊಂದಿರಬೇಕು ಎಂದು ಬಯಸುತ್ತಿದೆ. ಇದು 100 ಮೆಗಾ ಹರ್ಟ್ಸ್ ನಿಂದ 6 ಗಿಗಾ ಹರ್ಟ್ಸ್ ತನಕದ ತರಂಗ ವ್ಯಾಪ್ತಿ ಹೊಂದಿದ್ದು, 10 ಕಿಲೋಮೀಟರ್‌ಗಳ ಗುರುತಿಸುವ ವ್ಯಾಪ್ತಿ ಹೊಂದಿದೆ.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಆಸಕ್ತಿಕರ ವಿಚಾರವೆಂದರೆ, ಈ ಘೋಷಣೆಯಾದ ಬೆನ್ನಲ್ಲೇ, ಅಂದರೆ 6 ದಿನಗಳಲ್ಲಿ ಸಿಗ್ನಲ್ಸ್ ಡೈರೆಕ್ಟರೇಟ್ ಒಂದು ಆರ್‌ಎಫ್‌ಪಿ ಬಿಡುಗಡೆಗೊಳಿಸಿತು. ಇದು ಆರ್‌ಎಫ್ಎಲ್ ಅಂಶವನ್ನೇ ಅನಗತ್ಯವೆನಿಸುವಂತೆ ಮಾಡಿತು. ಮಾರಾಟಗಾರರು ಫೆಬ್ರವರಿ 25ರ ಒಳಗಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಇದಕ್ಕೆ ನೀಡಬೇಕಾಗಿದೆ.

ಜನವರಿ 20ರಂದು ಇದೇ ನಿರ್ದೇಶನಾಲಯ 200 ಮಾನವರು ಸಾಗಿಸಬಲ್ಲಂತಹ ಯುಎವಿ ಜಾಮರ್‌ಗಳ ಖರೀದಿಗೆ ಆದೇಶ ನೀಡಿತು. ಇದನ್ನು ಖರೀದಿ ನಿಯಮಗಳಡಿ ಭಾರತೀಯ ಉತ್ಪನ್ನಗಳ ಖರೀದಿ ವರ್ಗದಲ್ಲಿ ಫಾಸ್ಟ್ ಟ್ರ್ಯಾಕ್ ಮಾಡಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಮಾನವರು ಸಾಗಿಸಬಹುದಾದ ಸಿ-ಯುಎಸಿ ಉಪಕರಣ 5 ಕಿಲೋಮೀಟರ್‌ಗಳ ಗುರುತಿಸುವ ವ್ಯಾಪ್ತಿ ಹೊಂದಿದ್ದು, 2 ಕಿಲೋಮೀಟರ್‌ಗಳ ಜಾಮಿಂಗ್ ವ್ಯಾಪ್ತಿ ಹೊಂದಿದೆ. ಇದು ಸತತವಾಗಿ 2 ಗಂಟೆಗಳ ಕಾಲ ಕಾರ್ಯಾಚರಿಸಬಲ್ಲದು. ಇದರಲ್ಲಿನ ಯಾವುದೇ ಬಿಡಿಭಾಗವೂ 25 ಕೆಜಿಗಿಂತ ಹೆಚ್ಚಿರುವ ಹಾಗಿಲ್ಲ. ಒಟ್ಟಾರೆ ಈ ವ್ಯವಸ್ಥೆಯೂ ನೂರು ಕೆಜಿಗಿಂತ ಹೆಚ್ಚು ಭಾರ ಹೊಂದಿರುವುದಿಲ್ಲ.

ಈ ಮಾನವ ಸಾಗಾಟ ನಡೆಸಬಲ್ಲ ಜಾಮಿಂಗ್ ವ್ಯವಸ್ಥೆಗಳು ಎಂಟು ವರ್ಷಗಳ ಸೇವಾ ಆಯುಷ್ಯ ಹೊಂದಿದೆ. ಇದರ ಪೂರೈಕೆಗೆ ವ್ಯಾಪಾರಿಗಳು ಫೆಬ್ರವರಿ 9ರ ಒಳಗೆ ಉತ್ತರ ನೀಡಬೇಕಿದೆ.

ಜನವರಿ 24ರಂದು ಭಾರತೀಯ ಸೇನೆ ತನ್ನ ಸತತ ವಿಚಕ್ಷಣೆಗೆ ಅನುಕೂಲಕೆವಾದ 130 ಟೆದರ್ಡ್ ಯುಎವಿಗಳ ಖರೀದಿಗೆ ಆರ್‌ಎಫ್‌ಪಿ ಬಿಡುಗಡೆಗೊಳಿಸಿತು. ಇದರಲ್ಲಿ ಪ್ರತಿಯೊಂದು ವ್ಯವಸ್ಥೆಯೂ ಎರಡು ಯುಎವಿಗಳನ್ನು ಹೊಂದಿದ್ದು, ಒಂದು ಸಾಗಾಣಿಕೆ ನಡೆಸಬಲ್ಲ ಭೂ ನಿಯಂತ್ರಣ ಕೇಂದ್ರ, ಟೆದರ್ ಕೇಂದ್ರ, ಒಂದು ರಿಮೋಟ್ ವೀಡಿಯೋ ಟರ್ಮಿನಲ್, ಜನರೇಟರ್ ಸೆಟ್ ಮತ್ತು ಹೆಚ್ಚುವರಿ ಬ್ಯಾಟರಿಗಳನ್ನು ಹೊಂದಿದೆ.

ಅವುಗಳು ಸಾಮಾನ್ಯವಾಗಿ ಬಂಧಿಸಲ್ಪಟ್ಟ ಯುಎವಿಗಳಾದರೂ, 15 ಕೆಜಿಗಿಂತ ಕಡಿಮೆ ತೂಕ ಹೊಂದಿರುವ ಇವುಗಳು ಸ್ವತಂತ್ರವಾಗಿಯೂ ಕಾರ್ಯ ನಿರ್ವಹಿಸಬಲ್ಲವು. ಟೆದರ್ ಮಾಡಿರುವ ಸಂದರ್ಭದಲ್ಲಿ ಈ ಯುಎವಿಗಳು 60 ಮೀಟರ್‌ಗಳ ಎತ್ತರದಲ್ಲಿ ಕನಿಷ್ಠ 6 ಗಂಟೆಗಳ ಕಾಲ ಹಾರಾಟ ನಡೆಸಬಲ್ಲವು.

ಯುಎವಿಗಳಲ್ಲಿ ಕಲರ್ ಟಿವಿ ಕ್ಯಾಮರಾ (ಕನಿಷ್ಠ 30X ಆಪ್ಟಿಕಲ್ ಜ಼ೂಮ್) ಹಾಗೂ ರಾತ್ರಿಯ ವೇಳೆ ಕಾರ್ಯಾಚರಿಸಬಲ್ಲ ಥರ್ಮಲ್ ಕ್ಯಾಮರಾಗಳಿರಲಿವೆ. ಇವುಗಳ ಗುತ್ತಿಗೆ ಫೆಬ್ರವರಿ 24ರಂದು ಕೊನೆಗೊಳ್ಳಲಿದೆ.

250 ಗ್ರಾಂಗಳಿಗೂ ಕಡಿಮೆ ತೂಕ ಹೊಂದಿರುವ ಯುಎವಿಗಳು ಗಡಿ ಪ್ರದೇಶಗಳಲ್ಲಿ ಹೆಚ್ಚು ಅಪಾಯಕಾರಿ ಕಾರ್ಯಾಚರಣೆ ನಡೆಸಲು, ಅಥವಾ ದೇಶದೊಳಗೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ, ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಸೇನಾಪಡೆಗಳಿಗೆ ಅಗತ್ಯವಿರುತ್ತವೆ. ಈ ಸಣ್ಣ ಯುಎವಿಗಳು ಸೇನಾಪಡೆಗಳ ಸಾಂದರ್ಭಿಕ ಅರಿವು ಮೂಡಿಸಲು ಸಹಾಯಕವಾಗಿವೆ.

2 ಕಿಲೋಮೀಟರಗಿಂತ ಹೆಚ್ಚಿನ ವ್ಯಾಪ್ತಿ ಮತ್ತು 30 ನಿಮಿಷಗಳಿಗಿಂತ ಹೆಚ್ಚು ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿರುವ ಯುಎವಿಗಳ ಖರೀದಿ ಗುತ್ತಿಗೆಗೆ ಪ್ರತಿಕ್ರಿಯಿಸಲು ಫೆಬ್ರವರಿ 20 ಅಂತಿಮ ದಿನವಾಗಿದೆ.

ಈ ಗುತ್ತಿಗೆಗಳು ಅಕ್ಟೋಬರ್ 2022ರಲ್ಲಿ ಪ್ರಕಟಿಸಿದ ಹಲವು ಗುತ್ತಿಗೆಗಳಲ್ಲಿ ಪ್ರಮುಖವಾಗಿವೆ. ಪ್ಯಾರಾಶೂಟ್ (ವಿಶೇಷ ಪಡೆಗಳು) ಬೆಟಾಲಿಯನ್‌ಗೆ 750 ಯುಎವಿಗಳು, ಆರ್ಟಿಲರಿಗೆ 80 ಮಿನಿ ಯುಎವಿಗಳು ಹಾಗೂ 1,000 ಚಲಿಸುವ ರೆಕ್ಕೆಗಳುಳ್ಳ ಯುಎವಿಗಳನ್ನೂ ಇವು ಒಳಗೊಂಡಿವೆ.

ಇವೆಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಭಾರತೀಯ ಸೇನೆ ಚೀನಾದ ಗಡಿ ಪ್ರಾಂತ್ಯದಲ್ಲಿ ಚೀನಾದೊಡನೆ ನಡೆಯುವ ಕದನಗಳನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ತನ್ನ ಯೋಧರ ಕೈಗೆ ಇನ್ನಷ್ಟು ಸ್ವಯಂಚಾಲಿತ ವ್ಯವಸ್ಥೆಗಳನ್ನು ಒದಗಿಸಲು ಪ್ರಯತ್ನ ನಡೆಸುತ್ತಿದೆ. ಸೇನೆ ಭಾರತೀಯ ಉಪಕರಣಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಭಾರತೀಯ ಉದ್ಯಮಿಗಳಿಗೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತಿವೆ.

Latest Videos
Follow Us:
Download App:
  • android
  • ios