ಮೊದಲ ಬಾರಿಗೆ 400 ಲಕ್ಷ ಕೋಟಿ ತಲುಪಿದ ಬಿಎಸ್ ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ; ಐತಿಹಾಸಿಕ ದಾಖಲೆ ಸೃಷ್ಟಿ
ಬಿಎಸ್ ಇಯಲ್ಲಿ ಲಿಸ್ಟ್ ಆಗಿರುವ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳ ಇಂದು 400 ಲಕ್ಷ ಕೋಟಿ ರೂ. ದಾಟುವ ಮೂಲಕ ಹೊಸ ದಾಖಲೆ ಬರದಿವೆ.
ನವದೆಹಲಿ (ಏ.8): ಬಿಎಸ್ ಇಯಲ್ಲಿ ಲಿಸ್ಟ್ ಆಗಿರುವ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳ ಇಂದು (ಏ.8) ಇದೇ ಮೊದಲ ಬಾರಿಗೆ 400 ಲಕ್ಷ ಕೋಟಿ ರೂ. ದಾಟಿದೆ. ಬಾಂಬೆ ಷೇರು ಮಾರುಕಟ್ಟೆ (ಬಿಎಸ್ ಇ) 2014ರ ಮಾರ್ಚ್ ನಲ್ಲಿ ಮೊದಲ ಬಾರಿಗೆ 100 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಸಾಧಿಸಿತ್ತು. ಇನ್ನು 2021ರ ಫೆಬ್ರವರಿಯಲ್ಲಿ 200 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿತ್ತು. ಜುಲೈ 2023ರಲ್ಲಿ ಇದು 300 ಲಕ್ಷ ಕೋಟಿ ರೂ. ಮೈಲಿಗಲ್ಲು ಸಾಧಿಸಿತ್ತು. ಈಗ ಕೇವಲ 9 ತಿಂಗಳ ಬಳಿಕ 400 ಲಕ್ಷ ಕೋಟಿ ರೂ. ತಲುಪಿದೆ. 2023ರ ಏಪ್ರಿಲ್ ನಿಂದ ಬಿಎಸ್ ಇ ಲಿಸ್ಟೆಡ್ ಸಂಸ್ಥೆಗಳು ಒಟ್ಟು 145 ಟ್ರಿಲಿಯನ್ ರೂ. ಮಾರುಕಟ್ಟೆ ಬಂಡವಾಳ ಗಳಿಸಿವೆ. ಅಂದರೆ ಶೇ.57ರಷ್ಟು ಏರಿಕೆಯ ಗಳಿಕೆ ದಾಖಲಿಸಿವೆ. ಈ ಪ್ರಗತಿಗೆ ಅಭಿವೃದ್ಧಿ ಹೊಂದಿದ ಅತ್ಯಧಿಕ ಫ್ರಿಕ್ವೆನ್ಸಿ ಸೂಚ್ಯಂಕಗಳು, ಬಲಿಷ್ಠ ಕಾರ್ಪೋರೇಟ್ ಗಳಿಕೆಗಳು, ಸ್ಥಿರ ಪಾಲಿಸಿ ಕಾರಣದಿಂದ ಸಕಾರಾತ್ಮಕ ಹೂಡಿಕೆದಾರರ ಹೇಳಿಕೆಗಳು ಹಾಗೂ ಗಮನಾರ್ಹ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಣದ ಹರಿವು ಇನ್ನಷ್ಟು ವೇಗ ನೀಡಲಿವೆ.
ಇನ್ನು ಮಧ್ಯಮ ಹಾಗೂ ಕಿರು ಬಂಡವಾಳ ಸೂಚ್ಯಂಕಗಳು ಕ್ರಮವಾಗಿ ಶೇ.60ರಿಂದ ಶೇ.63ರಷ್ಟು ಏರಿಕೆ ಕಂಡಿವೆ. ಲಾರ್ಜ್ ಕ್ಯಾಪ್ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಶೇ.28.6ರಷ್ಟು ಏರಿಕೆ ಕಂಡಿವೆ. ರಿಯಲ್ಟಿ, ಪಿಎಸ್ ಯು ಬ್ಯಾಂಕ್ ಗಳು, ಅಟೋ, ಇಂಧನ, ಇನ್ಫ್ರಾ ಹಾಗೂ ಫಾರ್ಮಾ ವಲಯಗಳು ಗಳಿಕೆಯಲ್ಲಿ ಮುಂಚೂಣಿಯಲ್ಲಿವೆ. ಇನ್ನು ಮೊತಿಲಾಲ್ ಒಸ್ವಾಲ್ ಸೆಕ್ಯುರಿಟೀಸ್ ಪ್ರಕಾರ ಭಾರತದ ಜಿಡಿಪಿ2025-26ನೇ ಹಣಕಾಸು ಸಾಲಿನಲ್ಲಿ 4 ಟ್ರಿಲಿಯನ್ ಡಾಲರ್ ಗಡಿದಾಟುವ ಸಾಧ್ಯತೆಯಿದೆ. ಹಾಗೆಯೇ 2034ನೇ ಹಣಕಾಸು ಸಾಲಿನಲ್ಲಿ 8 ಟ್ರಿಲಿಯನ್ ಡಾಲರ್ ಗಡಿದಾಟಲಿದೆ. 2024ರ ಲೋಕ ಸಭೆ ಚುನಾವಣೆ ಬಳಿಕ ರಾಜಕೀಯ ಸ್ಥಿರತೆ ನಿರೀಕ್ಷಿಸಲಾಗಿದ್ದು, ಮೂಲಸೌಕರ್ಯ, ಬಂಡವಾಳ ವೆಚ್ಚ ಹಾಗೂ ಉತ್ಪಾದನಾ ವಲಯಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಲಿರುವ ಕಾರಣ ಆರ್ಥಿಕತೆ ಇನ್ನಷ್ಟು ಬೆಳವಣಿಗೆ ದಾಖಲಿಸಲಿದೆ.
ಸಾಲಗಾರರಿಗೆ ಗುಡ್ ನ್ಯೂಸ್; ಈ ಬಾರಿಯೂ ರೆಪೋ ದರ ಬದಲಾಯಿಸದ ಆರ್ ಬಿಐ
ವೇಗದ ಬೆಳವಣಿಗೆ ಸಾಧ್ಯತೆಗಳನ್ನು ಒಳಗೊಂಡಿರುವ ಭಾರತದ ಬಂಡವಾಳ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಹೆಚ್ಚು ಸಂಪದ್ಭರಿತವಾಗಿರಲಿದೆ. ಬಲಿಷ್ಠ ಆರ್ಥಿಕತೆ, ಆರೋಗ್ಯಕರ ಗಳಿಕೆಗಳು, ಸ್ಥಿರ ಬಡ್ಡಿದರಗಳು, ಮಿತವಾದ ಹಣದುಬ್ಬರ ಹಾಗೂ ಸ್ಥಿರವಾದ ನೀತಿಯಿಂದ ಭಾರತದ ಷೇರು ಮಾರುಕಟ್ಟೆ ಉತ್ತಮ ಕ್ಷಣಗಳನ್ನು ಆನಂದಿಸುತ್ತಿದೆ. ಭಾರತದ ಮಾರುಕಟ್ಟೆ ಏಪ್ರಿಲ್ 4ರಂದು ಹೊಸ ದಾಖಲೆ ಬರೆದಿತ್ತು. ಆದರೆ, ಏಪ್ರಿಲ್ 5ರಂದು ಸ್ಥಿರವಾಗಿತ್ತು. ಆದರೆ, ಮತ್ತೆ ಅಧಿಕ ಮಟ್ಟಕ್ಕೆ ಏರಿಕೆಯಾಗಿದೆ. ಮೌಲ್ಯಮಾಪಮ, ಮಾರುಕಟ್ಟೆ ತಿದ್ದುಪಡಿಗೆ Q4 ಗಳಿಕೆ ನಿರ್ಣಾಯಕವಾಗಿದೆ.
ಆರ್ ಬಿಐಗೆ 90 ವರ್ಷ, ಈ ಸಂಭ್ರಮದ ಸವಿನೆನಪಿಗೆ 90ರೂ. ವಿಶೇಷ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ
ಏಪ್ರಿಲ್ 5ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಹಣದುಬ್ಬರ ತಗ್ಗಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಅದು ಸಲಹೆ ನೀಡಿದೆ. ಪ್ರಮುಖ ಬೆಲೆಗಳ ಒತ್ತಡ ತಗ್ಗುತ್ತಿದ್ದು, ಒಟ್ಟು ಮೌಲ್ಯ ಒಳಗೊಂಡ ಪ್ರಗತಿ ತಗ್ಗಿರುವ ಕಾರಣ ಬೆಳವಣಿಗೆಯನ್ನು ಉತ್ತೇಜಿಸಲು ಬಡ್ಡಿದರ ಕಡಿತದ ಅಗತ್ಯವನ್ನುತಜ್ಞರು ಪ್ರತಿಪಾದಿಸಿದ್ದಾರೆ. ರೆಪೋ ದರವನ್ನು ಸತತ 7 ತಿಂಗಳಿಂದ ಆರ್ ಬಿಐ ಯಥಾಸ್ಥಿತಿಯಲ್ಲಿಟ್ಟಿದೆ. ಹಣದುಬ್ಬರ ದರವನ್ನು ಆರ್ ಬಿಐಯ ನಿಗದಿತ ದರ ಶೇ.4ಕ್ಕೆ ಇಳಿಸುವ ಉದ್ದೇಶದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೆಪೋ ದರ 6.5ರಲ್ಲೇ ಇದೆ. ಆರ್ ಬಿಐ 2023ರ ಫೆಬ್ರವರಿಯಂದು ಕೊನೆಯದಾಗಿ ರೆಪೋ ದರದಲ್ಲಿ ಬದಲಾವಣೆ ಮಾಡಿತ್ತು.