Global Technology Summit: ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ IN-SPACe, ನವೋದ್ಯಮಗಳ ಚರ್ಚೆ
ಶೃಂಗಸಭೆಯು ತಂತ್ರಜ್ಞಾನ ನೀತಿ, ಸೈಬರ್ ರೆಸಿಲೆನ್ಸ್, ಸಾರ್ವಜನಿಕ ಆರೋಗ್ಯ, ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್‌ಗಳು, ಭಾರತದ G20 ಅಧ್ಯಕ್ಷತೆ ಸೇರಿದಂತೆ ಹೆಚ್ಚಿನ ವಿಷಯಗಳ ಮೇಲೆ ಕೇಂದ್ರೀಕರಿಸುವ ಉದ್ಯಮ ತಜ್ಞರು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಭಾರತ ಮತ್ತು ವಿದೇಶದ ಇತರ ತಜ್ಞರನ್ನು ಒಟ್ಟುಗೂಡಿಸಲಿದೆ.
ಕಾರ್ನೆಗೀ ಇಂಡಿಯಾದ ವಾರ್ಷಿಕ ಫ್ಲ್ಯಾಗ್‌ಶಿಪ್ ಶೃಂಗಸಭೆ, ಗ್ಲೋಬಲ್ ಟೆಕ್ನಾಲಜಿ ಸಮ್ಮಿಟ್‌ನಲ್ಲಿ (Global Technology Summit) (GTS), ಬಾಹ್ಯಾಕಾಶ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (Ayushman Bharat Digital Mission) (ABDM), ಸೆಮಿಕಂಡಕ್ಟರ್ ಪಾಲುದಾರಿಕೆಗಳು (Semiconductor Partnerships) ಮತ್ತು ಭಾರತದಲ್ಲಿ ಹೊಸ ಆರೋಗ್ಯ ಕ್ಷೇತ್ರವನ್ನು ನಿರ್ಮಿಸುವ ಕುರಿತು ಚರ್ಚೆಯಾಗಲಿದೆ. ಶೃಂಗಸಭೆಯ ಎರಡನೇ ದಿನ "Navigating Partnerships and Alliances for the Future" ಸಬ್‌ಥೀಮ್ ಜತೆ ಈ ವಿಷಯಗಳು ಚರ್ಚೆಯಾಗಲಿವೆ.
ಸಮಾವೇಶದ ಎರಡನೇ ದಿನ “What’s new IN- SPACe?” “India as a Startup Nation,” “Startup 20: An Agenda for G20,” “Panel: Bridgital USP: Building Unique Semiconductor Partnerships,” “Technology & Trade: Opportunities and Challenges,” “National Quantum Mission,” “Responsible AI: A Strategic Imperative.” ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಇದನ್ನು ಓದಿ: Global Technology Summit: ನ.29ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ
ವಿಜಯ್ ಗೋಖಲೆ ಅವರು ತಮ್ಮ ಪುಸ್ತಕ After Tiananmen: The Rise of China ಕುರಿತು ನವೆಂಬರ್ 30 ರಂದು ಸಂಜೆ 7:30 ಕ್ಕೆ ನವದೆಹಲಿಯ ದಿ ಒಬೆರಾಯ್‌ನಲ್ಲಿ ಮಾತನಾಡಲಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಿ: https://events.ceip.org/btgts2022
ಸಮಾವೇಶದ ಎರಡನೇ ದಿನ ವಿಕ್ಟರ್ ಜೋಸೆಫ್ ಟಿ (ಅಸೋಸಿಯೇಟ್ ಸೈಂಟಿಫಿಕ್ ಸೆಕ್ರೆಟರಿ, ಇಸ್ರೋ); ವಿಜಯ್ ಗೋಖಲೆ (ನಾನ್ ರೆಸಿಡೆಂಟ್ ಸಿನಿಯರ್ ಫೆಲೋ, ಕಾರ್ನೆಗೀ ಇಂಡಿಯಾ); ಅಜಯ್ ಕುಮಾರ್ ಸೂದ್ (ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ); ಶ್ರೀನಾಥ್ ರಾಘವನ್ (ನಾನ್ ರೆಸಿಡೆಂಟ್ ಸಿನಿಯರ್ ಫೆಲೋ, ಕಾರ್ನೆಗೀ ಇಂಡಿಯಾ); ನಿಕ್ ಕ್ಲೆಗ್ (ಅಧ್ಯಕ್ಷರು, ಜಾಗತಿಕ ವ್ಯವಹಾರಗಳು, ಮೆಟಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಮಾಜಿ ಉಪ ಪ್ರಧಾನ ಮಂತ್ರಿ); ಮಾರ್ಗರೆಥ್ ವೆಸ್ಟೇಜರ್ (ಕಾರ್ಯನಿರ್ವಾಹಕ ಉಪಾಧ್ಯಕ್ಷ, ಯುರೋಪಿಯನ್ ಕಮಿಷನ್ ಫಾರ್ ಎ ಯುರೋಪ್ ಫಿಟ್ ಫಾರ್ ದಿ ಡಿಜಿಟಲ್ ಏಜ್ ಮತ್ತು ಸಹ-ಅಧ್ಯಕ್ಷ, ಟ್ರೇಡ್ ಅಂಡ್ ಟೆಕ್ನಾಲಜಿ ಕೌನ್ಸಿಲ್); ರೋಹಿಣಿ ಶ್ರೀವತ್ಸ (ರಾಷ್ಟ್ರೀಯ ತಂತ್ರಜ್ಞಾನ ಅಧಿಕಾರಿ, ಮೈಕ್ರೋಸಾಫ್ಟ್ ಇಂಡಿಯಾ); ಮತ್ತು ಸಮಂತಾ ಹಾಫ್ಮನ್ (ಹಿರಿಯ ವಿಶ್ಲೇಷಕ, ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್) ಮಾತನಾಡಲಿದ್ದಾರೆ.
ಇದನ್ನೂ ಓದಿ: Global Tech Summit: ನ. 29ರಿಂದ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ
ಜಿಟಿಎಸ್‌ನ ಏಳನೇ ಆವೃತ್ತಿಯ ಥೀಮ್ "ಜಿಯೋಪಾಲಿಟಿಕ್ಸ್ ಆಫ್ ಟೆಕ್ನಾಲಜಿ" ಆಗಿದ್ದು ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿದೆ. ಸಭೆಯಲ್ಲಿ ಅಂತಾರಾಷ್ಟ್ರೀಯ ಮೈತ್ರಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಜಿಯೋಪಾಲಿಟಿಕ್ಸ್‌ನ ಕುರಿತು ಚರ್ಚೆಗಳಾಗಲಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಾಗತಿಕ ತಂತ್ರಜ್ಞಾನ ಶೃಂಗಸಭೆಯ ಕೋ-ಹೋಸ್ಟ್ ಆಗಿದೆ. ಶೃಂಗಸಭೆಯು ತಂತ್ರಜ್ಞಾನ ನೀತಿ, ಸೈಬರ್ ರೆಸಿಲೆನ್ಸ್, ಸಾರ್ವಜನಿಕ ಆರೋಗ್ಯ, ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್‌ಗಳು, ಭಾರತದ G20 ಅಧ್ಯಕ್ಷತೆ ಸೇರಿದಂತೆ ಹೆಚ್ಚಿನ ವಿಷಯಗಳ ಮೇಲೆ ಕೇಂದ್ರೀಕರಿಸುವ ಉದ್ಯಮ ತಜ್ಞರು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಭಾರತ ಮತ್ತು ವಿದೇಶದ ಇತರ ತಜ್ಞರನ್ನು ಒಟ್ಟುಗೂಡಿಸಲಿದೆ.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರತ ಮತ್ತು ವಿದೇಶಗಳಿಂದ ಪ್ರಭಾವಿ ಸಚಿವರ ಭಾಷಣಗಳು, ಪ್ಯಾನೆಲ್‌ಗಳು, ಮುಖ್ಯ ಭಾಷಣಗಳು ನಡೆಯಲಿವೆ. ಜತೆಗೆ ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ಸಂಭಾಷಣೆಗಳನ್ನೂ ಒಳಗೊಂಡಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸುವ ಮೂಲಕ ಸಾರ್ವಜನಿಕರು ವರ್ಚುವಲ್ ಮೂಲಕ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗವಹಿಸಬಹುದು.