ಯಪ್ಪಾ..ಕೆನಡಾದಲ್ಲಿ ಅಮೆಜಾನ್ ಪ್ರಾಡಕ್ಟ್ ರಿಟರ್ನ್ ಮಾಡೋದು ಇಷ್ಟೊಂದು ಕಷ್ಟನಾ?
ಅಮೆಜಾನ್‌ನಲ್ಲಿ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು. ಮಾತ್ರವಲ್ಲ ಇಷ್ಟವಾಗದ ವಸ್ತುಗಳನ್ನು ಸುಲಭವಾಗಿ ರಿಟರ್ನ್ ಸಹ ಮಾಡಬಹುದು. ಭಾರತದಲ್ಲೇನೋ ಹೀಗೆ ಆಗುತ್ತದೆ. ಆದರೆ ಕೆನಡಾದಲ್ಲಿ ಈ ವ್ಯವಸ್ಥೆಯಿಲ್ಲ.ಅಲ್ಲಿ ಅಮೆಜಾನ್ ಪಾರ್ಸೆಲ್ ಅನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿರುವಾಗ ಮಹಿಳೆ ತಾವು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಇವತ್ತಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್‌ನ್ನು ಎಲ್ಲರೂ ಇಷ್ಟಪಡುತ್ತಾರೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿಕೊಳ್ಳುತ್ತಾರೆ. ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು ಮಾತ್ರವಲ್ಲ ಇಷ್ಟವಾಗದ ವಸ್ತುಗಳನ್ನು ರಿಟರ್ನ್ ಸಹ ಮಾಡಬಹುದು. ಆದರೆ ಕೆನಡಾದಲ್ಲಿ ಈ ವ್ಯವಸ್ಥೆಯಿಲ್ಲ. ಡಾ.ಸೆಲೀನ್ ಖೋಸ್ಲಾ ಎಂಬವರು ಭಾರತ ಮತ್ತು ಕೆನಡಾದಲ್ಲಿ ಅಮೆಜಾನ್ ರಿಟರ್ನ್ ಪಾಲಿಸಿಗಳನ್ನು ಹೋಲಿಸಿದ ವೀಡಿಯೊ ವೈರಲ್ ಆಗಿದೆ. 'ಅಮೆಜಾನ್ ಇಂಡಿಯಾ ವರ್ಸಸ್ ಕೆನಡಾ' ಎಂಬ ಶೀರ್ಷಿಕೆಯ ವೀಡಿಯೊವು ಕೆನಡಾದಲ್ಲಿ ಅಮೆಜಾನ್ ಪಾರ್ಸೆಲ್ ಅನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿರುವಾಗ ಅವಳು ಅನುಭವಿಸಿದ ಸಮಸ್ಯೆಯ ಬಗ್ಗೆ ತಿಳಿಸುತ್ತದೆ.
ಕೆನಡಾದಲ್ಲಿ ಗ್ರಾಹಕರು ಅಮೆಜಾನ್‌ನಿಂದ ಸಿಕ್ಕ ಉತ್ಪನ್ನವನ್ನು ಪ್ಯಾಕ್ ಮಾಡಬೇಕು, ರಿಟರ್ನ್ ಲೇಬಲ್‌ನ್ನು ಮುದ್ರಿಸಬೇಕು ಮತ್ತು ಪ್ಯಾಕೇಜ್‌ನ್ನು ಪೋಸ್ಟ್ ಆಫೀಸ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಡಾ.ಖೋಸ್ಲಾ ವಿವರಿಸುತ್ತಾರೆ. ಇದು ಭಾರತದಲ್ಲಿ ಅಮೆಜಾನ್ ಪ್ರಾಡಕ್ಟ್ ಹಿಂತಿರುಗಿಸುವ ರೀತಿಗಿಂತ ತುಂಬಾ ವಿಭಿನ್ನವಾಗಿದೆ. ಭಾರತದಲ್ಲಿ ಪ್ರಾಡಕ್ಟ್ ರಿಟರ್ನ್ ಪ್ರಕ್ರಿಯೆಯು ಹೆಚ್ಚು ಸುಲಭವಾಗಿದೆ ಎಂದು ಮಹಿಳೆ ತಿಳಿಸುತ್ತಾರೆ.
600 ರೂ.ಗಿಂತ ಕಡಿಮೆ ಮೌಲ್ಯದ ಉತ್ಪನ್ನಗಳಿಗಾಗಿ ಶುರುವಾಯ್ತು ಅಮೇಜಾನ್ ಬಜಾರ್!
ಭಾರತದಲ್ಲಿ ಕೇವಲ ಒಂದು ಕ್ಲಿಕ್ ಮಾಡಿದರೆ ಸಾಕು ಡೆಲಿವರಿ ಏಜೆಂಟ್ ಮತ್ತು ಪ್ರಾಡಕ್ಟ್‌ನ್ನು ಕೊಂಡೊಯ್ಯುತ್ತಾನೆ. ಯಾವುದೇ ವೆಚ್ಚವಿಲ್ಲದೆ ಪ್ರಾಡಕ್ಟ್‌ನ್ನು ಮರಳಿ ಅಮೆಜಾನ್‌ಗೆ ತಲುಪಿಸಬಹುದಾಗಿದೆ. ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಡೆಲಿವರಿ ಏಜೆಂಟರು ಈ ಸೇವೆಯನ್ನು ಒದಗಿಸುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.
ಕೆನಡಾದಲ್ಲಿ ಪಾರ್ಸೆಲ್‌ನ್ನು ಹಿಂದಿರುಗಿಸುವುದು ಅಂಚೆ ಕಚೇರಿಗೆ ಹೋಗುವುದನ್ನು ಒಳಗೊಂಡಿರುತ್ತದೆ. ಭಾರತದಲ್ಲಿ, ಅಂಚೆ ಕಛೇರಿಯಲ್ಲಿ ಕೆಲಸ ಮಾಡುವ ಜನರು ಸಹ ಅಂಚೆ ಕಚೇರಿಗೆ ಭೇಟಿ ನೀಡುವುದಿಲ್ಲ ಎಂದು ಡಾ.ಖೋಸ್ಲಾ ಹಾಸ್ಯಮಯವಾಗಿ ಗಮನಿಸಿದ್ದಾರೆ. ಕೆನಡಾದಲ್ಲಿ, ಅಮೆಜಾನ್ ರಿಟರ್ನ್ಸ್‌ಗಾಗಿ ಎಲ್ಲರೂ ಇದನ್ನು ಮಾಡುತ್ತಾರೆ. ಅಂಚೆ ಕಛೇರಿಯನ್ನು ಹುಡುಕಲು Google Maps ಅನ್ನು ಬಳಸುವ ತನ್ನ ಕಷ್ಟಗಳನ್ನು ಅವರು ವಿವರಿಸಿದ್ದಾರೆ.
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮನೆ ಮಾರಾಟಕ್ಕಿದೆ, ಕೊಳ್ಳೋ ಯೋಚನೆ ಇದ್ದರೆ ಟ್ರೈ ಮಾಡಿ!
ಡಾ.ಖೋಸ್ಲಾ ಭಾರತದಲ್ಲಿ ವಾಸಿಸುವ ಅನುಕೂಲವನ್ನು ಪ್ರತಿಬಿಂಬಿಸುತ್ತಾರೆ. 'ನೀವು ಶಾಂಪೂ ಬಾಟಲಿಯನ್ನು ಆರ್ಡರ್ ಮಾಡಿದರೂ, ಅವರು ಬಂದು ಅದನ್ನು ವಾಪಾಸ್ ತೆಗೆದುಕೊಂಉಡ ಹೋಗುತ್ತಾರೆ. ಏಕೆಂದರೆ ನಾವು ಅಭಿವೃದ್ಧಿ ಹೊಂದಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ' ಎಂದು ಮಹಿಳೆ ಹೇಳಿದ್ದಾರೆ. ಇಂಟರ್‌ನೆಟ್‌ನಲ್ಲಿ ಈ ವೀಡಿಯೋ ವೈರಲ್ ಆಗಿದೆ.