ಮಾರ್ಕೆಟಿಂಗ್ ಗೊತ್ತಿದ್ರೆ ವ್ಯಾಪಾರ ಮಾಡಿದಂತೆ. ಇದು ನೂರಕ್ಕೆ ನೂರು ಸತ್ಯ. ಅನೇಕಾನೇಕ ವರ್ಷಗಳಿಂದ ಗ್ರಾಹಕರನ್ನು ಹಿಡಿದಿಟ್ಟುಕೊಂಡ ಅಂಗಡಿಗಳು ಈಗ ಬದಲಾವಣೆ ಹಾದಿ ಹಿಡಿದಿವೆ. ಗ್ರಾಹಕರನ್ನು ಸೆಳೆಯಲು ಹೊಸ ತಂತ್ರ ಬಳಸ್ತಿವೆ.
ಉತ್ಪನ್ನ ಚೆನ್ನಾಗಿರಲಿ, ಇಲ್ಲದಿರಲಿ, ಮಾರ್ಕೆಟಿಂಗ್ ಚೆನ್ನಾಗಿದ್ದರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಈ ಮಾತು ಅನೇಕ ಬಾರಿ ಸತ್ಯವಾಗಿದೆ. ನೀವು ಹೇಗೆ ವಸ್ತುಗಳನ್ನು ಪ್ಯಾಕೇಜ್ ಮಾಡ್ತೀರಿ, ಹೇಗೆ ಅದನ್ನು ಜನರಿಗೆ ನೀಡ್ತಿರಿ, ಅದ್ರ ಜಾಹೀರಾತು ಹೇಗೆ ಮಾಡ್ತಿರಿ ಎಂಬುದರ ಮೇಲೆ ನಿಮ್ಮ ವಸ್ತುಗಳು ಮಾರಾಟವಾಗುತ್ತದೆ. ನೋಡಲು ಆಕರ್ಷಕವಾಗಿರುವ ವಸ್ತು ಅಥವಾ ಜಾಗಕ್ಕೆ ಜನರು ಹೋಗಲು ಹೆಚ್ಚು ಇಷ್ಟಪಡ್ತಾರೆ. ಜನರನ್ನು ಬಾಹ್ಯ ಸೌಂದರ್ಯ ಸೆಳೆಯುತ್ತದೆ. ಹೊಸದಾಗಿ ಶುರುವಾದ ಅಂಗಡಿ, ಮಳಿಗೆಗಳಿಗಿಂತ ಹಳೆಯ ಅಂಗಡಿ ಮೇಲೆ ಜನರಿಗೆ ಭರವಸೆ ಹೆಚ್ಚು. ಅನೇಕರು ಎಷ್ಟೋ ವರ್ಷಗಳಿಂದ ಒಂದೇ ಅಂಗಡಿಯಲ್ಲಿ ಸಾಮಾನು ಖರೀದಿ ಮಾಡ್ತಿರುತ್ತಾರೆ. ಅಂಥ ಹಳೆ ಅಂಗಡಿಗಳು ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತೆ. ಬೆಂಗಳೂರಿನ ಒಂದು ಸೂಪರ್ ಮಾರ್ಕೆಟ್ ಈ ಸತ್ಯವನ್ನು ಅರಿತಿದೆ. ಅಲ್ಲಿರುವ ಆಸಕ್ತಿದಾಯಕ ವಸ್ತುಗಳು ಸೂಪರ್ ಮಾರ್ಕೆಟ್ ಎಷ್ಟು ಹಳೆಯದು ಎಂಬುದನ್ನು ತೋರಿಸೋದಲ್ಲದೆ, ಗ್ರಾಹಕರನ್ನು ಸೆಳೆಯುತ್ತಿವೆ. ಅಷ್ಟಕ್ಕೂ ಆ ಸೂಪರ್ ಮಾರ್ಕೆಟ್ ನಲ್ಲಿ ಇರೋದು ಏನು ಗೊತ್ತಾ?
ಸೂಪರ್ ಮಾರ್ಕೆಟ್ (Supermarket) ಗೋಡೆ ಮೇಲೆ ಏನಿದೆ?: ನಾವು ದೊಡ್ಡವರಾಗ್ತಿದ್ದಂತೆ ನಮ್ಮ ಬಾಲ್ಯದ ನೆನಪು, ಆಗ ಬಳಸಿದ ವಸ್ತುಗಳು ನಮ್ಮ ಮನಸ್ಸಿನಲ್ಲೊಂದು ವಿಶೇಷ ಜಾಗವನ್ನು ಪಡೆದಿರುತ್ತವೆ. ಹಳೆ ವಸ್ತುಗಳನ್ನು ನೋಡ್ತಿದ್ದಂತೆ ಬಾಲ್ಯದ ನೆನಪುಗಳಿಗೆ ನಾವು ಹೋಗಿ ಬರ್ತೇವೆ. ನಮ್ಮ ಬಾಲ್ಯ (Childhood) ವನ್ನು ನೆನಪಿಸುವ ವಸ್ತುಗಳು ಈ ಸೂಪರ್ ಮಾರ್ಕೆಟ್ ಗೋಡೆ (Wall) ಮೇಲಿದೆ.
ಹಳ್ಳಿ ಹಳ್ಳಿಗಳಲ್ಲೂ ಬಿಸಿನೆಸ್ ಆರಂಭಿಸಲು ಅಂಬಾನಿ ಪ್ಲಾನ್, ಬರೋಬ್ಬರಿ 500 ಕೋಟಿ ರೂ. ಹೂಡಿಕೆ!
ಹಳೆ ಕಾಲದ ಟೋಫಿ ಮತ್ತು ಚಾಕೊಲೇಟ್, ಟೂತ್‌ಪೇಸ್ಟ್ ಮತ್ತು ಚೂಯಿಂಗ್ ಗಮ್‌ನ ಕೆಲವು ಹಳೆಯ ರ್ಯಾಪರ್ ಗಳನ್ನು ಗಾಜಿನ ಕ್ಯಾಬಿನೆಟ್‌ನಲ್ಲಿ ಅಂಟಿಸಲಾಗಿದೆ. ಅಮುಲ್ ಕ್ರಂಚ್, ಪರ್ಕ್ ಮತ್ತು ಕಿಟ್‌ಕ್ಯಾಟ್‌ನ ಹಳೆಯ ವಿನ್ಯಾಸದ ಪ್ಯಾಕೆಟ್‌ಗಳು ಮತ್ತು ನಕಲಿ ಫ್ಯಾಂಟಮ್ ಸಿಗರೇಟ್ ರ್ಯಾಪರ್ ಸಹ ಇದ್ರಲ್ಲಿದೆ. ಇದಲ್ಲದೆ ಬಾಲ್ಯವನ್ನು ನೆನಪಿಸುವ ಇನ್ನೂ ಅನೇಕ ವಸ್ತುಗಳ ಇದ್ರಲ್ಲಿವೆ. ಮಧ್ಯಮ ವರ್ಗದ ಜನರನ್ನು ಸಂಪರ್ಕಿಸುವ ವಸ್ತುಗಳು ಇದ್ರಲ್ಲಿ ಸೇರಿವೆ.
ಈ ವಸ್ತುಗಳನ್ನೆಲ್ಲ ನಾವು ಮಾರಾಟ ಮಾಡಿದ್ದೇವೆ ಎಂಬ ಹೆಮ್ಮೆ ನಮಗಿದೆ. 94 ವರ್ಷಗಳಿಂದ ಗ್ರಾಹಕರಿಗೆ ನಾವು ಸೇವೆ ಸಲ್ಲಿಸುತ್ತಿದ್ದೇವೆ ಎಂದು ಇದ್ರ ಮೇಲೆ ಬರೆಯಲಾಗಿದೆ.
ಮಾಯಾ ಹೆಸರಿನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಇದ್ರ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದು ಸೂಪರ್ ಮಾರ್ಕೆಟ್‌ನಿಂದ ಬಹಳ ನಾಸ್ಟಾಲ್ಜಿಕ್ ಮತ್ತು ಸುಂದರವಾದ ಮಾರ್ಕೆಟಿಂಗ್ ಕಲ್ಪನೆಯಾಗಿದೆ ಎಂದು ಈ ಪೋಸ್ಟ್ ಗೆ ಶೀರ್ಷಿಕೆ ಹಾಕಲಾಗಿದೆ. ಗ್ಲಾಸ್ ಒಳಗೆ ಇರುವ ಉತ್ಪನ್ನಗಳು ಇಂದಿನ ಉತ್ಪನ್ನಗಳು, ಪ್ಯಾಕೇಜ್ ಗಿಂತ ಸಂಪೂರ್ಣ ಭಿನ್ನವಾಗಿರೋದನ್ನು ನೀವು ನೋಡ್ಬಹುದು. ಈಗ ಮಾರ್ಕೆಟಿಂಗ್ ತಂತ್ರವನ್ನು ಅತಿಯಾಗಿ ಬಳಕೆ ಮಾಡಲಾಗ್ತಿದೆ. ಆದ್ರೆ ಆಗಿನ ಕಾಲದಲ್ಲಿ ತುಂಬಾ ಸರಳ ರ್ಯಾಪರ್ ಗಳನ್ನು ಬಳಕೆ ಮಾಡಲಾಗ್ತಿತ್ತು ಎಂಬುದಕ್ಕೆ ಈ ಫೋಟೋ ಸಾಕ್ಷ್ಯ.
ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 10 ಲಕ್ಷ ರೂ. ಸಾಲ
ತಮ್ಮ ಪಾಕೆಟ್ ಮನಿ ಇಟ್ಕೊಂಡು ಇಂಥ ವಸ್ತುಗಳನ್ನು ಖರೀದಿ ಮಾಡಿದ್ದ ಜನರಿಗೆ ಈ ಸುಪರ್ ಮಾರ್ಕೆಟ್ ನಲ್ಲಿರುವ ರ್ಯಾಪರ್ ಗಳು ಅವರ ಹಳೆ ನೆನಪುಗಳನ್ನು ತಾಜಾಗೊಳಿಸುತ್ತವೆ. ಎಕ್ಸ್ ಖಾತೆಯಲ್ಲಿ ವೈರಲ್ ಆದ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಕೆಲವರು ಇದು ನಮ್ಮನ್ನು ಭಾವುಕಗೊಳಿಸಿದೆ ಎಂದಿದ್ದಾರೆ. ಇದನ್ನು ನೋಡ್ತಿದ್ದಂತೆ ನನ್ನ ಇಡೀ ಬಾಲ್ಯ ಒಮ್ಮೆ ಕಣ್ಣು ಮುಂದೆ ಬಂತು ಹೋಯ್ತು ಎಂದು ಕಮೆಂಟ್ ಮಾಡಿದ್ದಾರೆ. ಫ್ಯಾಂಟಮ್ ಸಿಗರೆಟ್‌ನೊಂದಿಗೆ ಸ್ಟೈಲ್ ಮಾಡ್ತಿದ್ದ ನೆನಪು ಇನ್ನೂ ಮಾಸಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
