ಬೆಂಗಳೂರಿನ ಈ ಪಾರ್ಕ್‌ನಲ್ಲಿ ವಾಕಿಂಗ್ ರನ್ನಿಂಗ್ ಜಾಗಿಂಗ್ ಮಾಡಂಗಿಲ್ಲ: BBMP ಬೋರ್ಡ್ ವೈರಲ್

ಕೆಲ ದಿನಗಳ ಹಿಂದೆ  ಬೆಂಗಳೂರಿನಲ್ಲಿ ಮನೆ ಮುಂದೆ ಮನೆ ಮಾಲೀಕರು ಅಳವಡಿಸಿದ್ದ ನೋ ಪಾರ್ಕಿಂಗ್‌ ಬೋರ್ಡ್‌ನ ಫೋಟೋಗಳು ವೈರಲ್ ಆಗಿದ್ದವು. ಈಗ ಬೆಂಗಳೂರಿನ ಪಾರ್ಕೊಂದರ ಬೋರ್ಡ್‌ ಒಂದು ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.  

No jogging, No running No anti clockwise walking signboard of Bengaluru park goes viral akb

ನಾವೀಗ ಸಾಮಾಜಿಕ ಜಾಲತಾಣದ ಯುಗದಲ್ಲಿದ್ದೇವೆ. ಪ್ರತಿಯೊಬ್ಬರ ಕೈಗಳಲ್ಲೂ ಮೊಬೈಲ್ ಫೋನ್‌ಗಳಿದ್ದು, ಕಣ್ಣಿಗೆ ಕಂಡಿದ್ದೆಲ್ಲವೂ ಸಾಮಾಜಿಕ ಜಾಲತಾಣ ಸೇರಿ ವೈರಲ್ ಆಗುತ್ತಿವೆ. ಕೆಲ ದಿನಗಳ ಹಿಂದೆ  ಬೆಂಗಳೂರಿನಲ್ಲಿ ಮನೆ ಮುಂದೆ ಮನೆ ಮಾಲೀಕರು ಅಳವಡಿಸಿದ್ದ ನೋ ಪಾರ್ಕಿಂಗ್‌ ಬೋರ್ಡ್‌ನ ಫೋಟೋಗಳು ವೈರಲ್ ಆಗಿದ್ದವು. ಈಗ ಬೆಂಗಳೂರಿನ ಪಾರ್ಕೊಂದರ ಬೋರ್ಡ್‌ ಒಂದು ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.    

ಬೆಂಗಳೂರಿನ ಪಾರ್ಕೊಂದರಲ್ಲಿ ವಾಕಿಂಗ್ ಮಾಡುವ ಹಾಗಿಲ್ಲ, ಜಾಗಿಂಗ್ ಮಾಡುವ ಹಾಗಿಲ್ಲ, ಅಪ್ರದಕ್ಷಿಣೆ (anti-clockwise) ವಾಕ್ ಕೂಡ ಮಾಡುವ ಹಾಗಿಲ್ಲ ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆದೇಶ ಎಂಬ ಬೋರ್ಡ್ ಅನ್ನು ಹಾಕಲಾಗಿದೆ. ಇದು ಪಾರ್ಕ್‌ಗೆ ಭೇಟಿ ನೀಡುವವರು ಪಾಲಿಸಲು ಬಿಬಿಎಂಪಿ ವಿಧಿಸಿರುವ ನಿಯಮಗಳಾಗಿವೆ. No jogging. No running. No anti-clockwise walking By order BBMP ಎಂದು ಬೋರ್ಡ್‌ನಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಈ ಬೋರ್ಡ್‌ನ ಫೋಟೋ ತೆಗೆದು ಯಾರೋ ಸಾಮಾಜಿಕ ಜಾಲತಾಣದ ರೆಡಿಟ್‌ನಲ್ಲಿ ಹಾಕಿದ್ದಾರೆ. ಇದು ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದೆ. 

ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಹಾಗಿದ್ರೆ ನಾಗಿಣಿ ಡಾನ್ಸ್ ಮಾಡ್ಬಹುದಾ ಅಂತ ಒಬ್ಬರು ಕೇಳಿದರೆ, ಮತ್ತೊಬ್ಬರು ಮೂನ್‌ವಾಕ್‌ ಮಾಡ್ಬಹುದು ಅಂತ ಕೇಳಿದ್ದಾರೆ. ಹಾಗಾದರೆ ಆ ಪಾರ್ಕ್‌ನಲ್ಲಿ ನಾವು ಓಡಲು ಶುರು ಮಾಡಿದರೆ ಅವರು ಕೂಡ ನಮ್ಮನ್ನು ನಿಲ್ಲಿಸುವ ಸಲುವಾಗಿ ಓಡಲು ಶುರು ಮಾಡುವರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನಿಜವಾಗಿಯೂ ಈ ಪಾರ್ಕ್‌ಗೆ ಹೋಗಬೇಕು. ನಂತರ ಅಲ್ಲಿ ವೇಗವಾಗಿ ಓಡಲು  ಶುರು ಮಾಡಬೇಕು ಎಂದು ಮಗದೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. 

ವೈರಲ್ ಆಯ್ತು ಪಾರ್ಕಿಂಗ್ ಬೋರ್ಡ್‌:
ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂದೆಲ್ಲಾ ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಟ್ರಾಫಿಕ್‌ ಸಮಸ್ಯೆ ಹಾಗೂ ಪಾರ್ಕಿಂಗ್‌ ಸಮಸ್ಯೆ ನಿತ್ಯದ ಗೋಳು. ಮೆಟ್ರೋ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ವಾಹನಗಳ ಸಂಖ್ಯೆ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲ ಸೆಕೆಂಡುಗಳ ಕಾಲವೂ ಕೆಲವೊಮ್ಮೆ ಪಾರ್ಕಿಂಗ್ ಮಾಡಲು ಮಹಾನಗರಿಯಲ್ಲಿ ಸ್ಥಳವಿಲ್ಲದಂತಾಗಿದೆ. ಹೆಚ್ಚು ಟ್ರಾಫಿಕ್‌ ಜಾಮ್‌ ಉಂಟಾಗದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ಜಾಗಗಳನ್ನು ನಿಗದಿಪಡಿಸಲಾಗಿದೆ. 

ಬೈಕ್‌ನಲ್ಲಿ ಪ್ರಯಾಣಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ: ಯುವಕನ ಫೋಟೋ ವೈರಲ್

ಒಂದು ವೇಳೆ ಇದನ್ನು ಮೀರಿದವರನ್ನು ಶಿಕ್ಷಿಸಲು ಪಾರ್ಕಿಂಗ್ ಮಾರ್ಷಲ್‌ಗಳು ಮತ್ತು ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹೊತ್ತೊಯ್ಯಲು ಟ್ರಕ್‌ಗಳು ನಗರಗಳಲ್ಲಿ ಸುಳಿದಾಡುತ್ತಿರುತ್ತವೆ. ಅದಾಗ್ಯೂ ಕೆಲವರು ಪಾರ್ಕಿಂಗ್ ನಿಯಮಗಳ ಬಗ್ಗೆ ತೀರಾ ನಿರ್ಲಕ್ಷ್ಯ ತೋರುತ್ತಿರುತ್ತಾರೆ. ಎಲ್ಲಿ ಪಾರ್ಕಿಂಗ್‌ ನಿಷೇಧ ಇದೆಯೋ ಅಲ್ಲೇ ವಾಹನಗಳನ್ನು ನಿಲ್ಲಿಸಿ ತೆರಳುತ್ತಾರೆ. ಇದರಿಂದ ಅನೇಕರಿಗೆ ತೊಂದರೆ ಉಂಟಾಗುತ್ತದೆ. 

ಈ ಕಾರಣಕ್ಕೆ ಬೆಂಗಳೂರಿನಲ್ಲಿ (Bengaluru) ಕೆಲವು ಮನೆಗಳ ಮಾಲೀಕರು ತಮ್ಮ ಮನೆ ಮುಂದೆ ವಾಹನ ನಿಲ್ಲಿಸದಿರುವಂತೆ ಮನೆ ಮುಂದೆಯೇ ನೋ ಪಾರ್ಕಿಂಗ್ ಬೋರ್ಡ್‌ ಅಳವಡಿಸಿರುತ್ತಾರೆ. ಅಂತಹ ನೋ ಪಾರ್ಕಿಂಗ್ ಬೋರ್ಡ್‌ (No Parking Board) ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರ ಆದಿತ್ಯ ಮೊರಾರ್ಕ (Aditya Morark) ಅವರು ನೋ ಪಾರ್ಕಿಂಗ್‌ನ ವಿಭಿನ್ನ ಬೋರ್ಡ್‌ಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬೆಂಗಳೂರಿನ ಕೋರಮಂಗಲದ ಮನೆ ಮುಂದೆ ಇದ್ದ ನೋ ಪಾರ್ಕಿಂಗ್ ಬೋರ್ಡ್ ಇದಾಗಿದೆ. 

ನಮ್ಮ ಪ್ರೀತಿಗೆ ಯಾವ ಗೇಟ್ ಕೂಡ ಅಡ್ಡಿಯಾಗದು... ಶ್ವಾನಗಳ ಮುದ್ದಾದ ಫೋಟೋ ವೈರಲ್‌

ಈ ಎರಡು ಬೋರ್ಡ್‌ಗಳಲ್ಲಿ ಒಂದು ಬೋರ್ಡ್‌ನಲ್ಲಿ, ಇಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಯೋಚನೆಯೂ ಮಾಡದಿರಿ' ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ನೋ ಪಾರ್ಕಿಂಗ್ ಕೇವಲ ಐದು ನಿಮಿಷಕ್ಕೂ ಇಲ್ಲ, 30 ಸೆಕೆಂಡ್‌ಗೂ ಇಲ್ಲ, ಎಂದೆಂದಿಗೂ ಇಲ್ಲ ಎಂದು ಅವರು ಬರೆದಿದ್ದಾರೆ (No parking, not 5 minutes, not 30 seconds, not at all!)

Latest Videos
Follow Us:
Download App:
  • android
  • ios