ಬೆಂಗಳೂರು(ನ.08): ಬಾಷ್ ಇಂಡಿಯಾ ಮತ್ತು ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಕೌಶಲ್ಯ ತರಬೇತಿ ಸೌಲಭ್ಯವನ್ನು ಆರಂಭಿಸಿದೆ. ಬಾಷ್ ನ ವಿಶೇಷ ಮಹಡಿ ಪ್ರಮುಖ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವಾದ ಬ್ರಿಡ್ಜ್ ನಡಿ ಮರಗೆಲಸಕ್ಕಾಗಿ ಕರಕುಶಲಕರ್ಮಿಗಳ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಬಹುತರಬೇತಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಿದೆ.

ಕೊರೋನಾ ಹೋರಾಟಕ್ಕೆ ಬಾಷ್ ಮತ್ತಷ್ಟು ನೆರವು; ಮಾಸ್ಕ್ ಉತ್ಪಾದನಾ ಘಟಕಕ್ಕೆ ಚಾಲನೆ!

ಕಂಪನಿಗಳು ಮತ್ತು ಎನ್ ಜಿಒಗಳು ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವುದು ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಉಪಕ್ರಮಗಳ ಜೊತೆಗೆ ಪ್ರಮುಖ ಪಾತ್ರ ವಹಿಸುತ್ತದೆ. ನಿಖರತೆ ವಿಚಾರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಾಷ್ ಯಾವಾಗಲೂ ಕೌಶಲ್ಯದಲ್ಲಿ ಉನ್ನತ ಮಟ್ಟವನ್ನು ಅಳವಡಿಸಿಕೊಳ್ಳುತ್ತದೆ. ನಮ್ಮ ಉತ್ಸಾಹ, ಬದ್ಧತೆ, ಕಾಳಜಿಯುಳ್ಳ ಹಾಗೂ ಹಂಚಿಕೆಯ ಮೌಲ್ಯಗಳು ಬಾಷ್ ನೊಂದಿಗೆ ಉತ್ತಮವಾದ ರೀತಿಯಲ್ಲಿ ಅನುರಣಿಸುತ್ತವೆ. ಇದು ಈ ಸಂಸ್ಥೆಯ ಸಿಎಸ್ಆರ್ ಪಾಲುದಾರಿಕೆಗೆ ಕಾರಣವಾಗುತ್ತದೆ. ನಮ್ಮ ದೇಶದ ಯುವಪೀಳಿಗೆಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಮತ್ತು ಅವಕಾಶಗಳನ್ನು ಸೃಷ್ಟಿಸಲು ಈ ಕೇಂದ್ರವನ್ನು ಅಭಿವೃದ್ಧಿಪಡಿಸಿರುವುದಕ್ಕೆ ನಮಗೆ ಸಂತೋಷವಾಗಿದೆ’’ ಎಂದರು.

ಕೌಶಲ್ಯ ಕಾರ್ಯಕ್ರಮಗಳನ್ನು ಆರಂಭಿಸಿ ಮಾತನಾಡಿದ ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಮತ್ತು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಅವರು, ``ಭಾರತದಲ್ಲಿ, ಸಿಎಸ್ಆರ್ ಕೇವಲ ಹೊಂದುತ್ತಿರುವುದು ಸಂತಸ. ಈ ನಿಟ್ಟಿನಲ್ಲಿ ಬಾಷ್ ಇಂಡಿಯಾ ಯುವಪೀಳಿಗೆಯಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು BRIDGE ಮತ್ತು ಕರಕುಶಲ ತರಬೇತಿಯನ್ನು ರೂಪಿಸಿದೆ. ಬಾಷ್ ನಲ್ಲಿ ನಾವು ಹೆಚ್ಚಿನ ಸಾಮಾಜಿಕ ಪ್ರಭಾವ ಮತ್ತು ಪ್ರಮಾಣಕ್ಕಾಗಿ ಸ್ಪಷ್ಟವಾದ ವ್ಯಾಖ್ಯಾನಿತ ಸಮಯ ಮತ್ತು ಫಲಿತಾಂಶಗಳೊಂದಿಗೆ ಸುಧಾರಿತ ಕೌಶಲ್ಯಾಭಿವೃದ್ಧಿಯನ್ನು ಮುನ್ನಡೆಗೆ ಕೊಂಡೊಯ್ಯಲು ಬದ್ಧರಾಗಿದ್ದೇವೆ’’ ಎಂದು ತಿಳಿಸಿದರು.

BRIDGE ಮೂರು ತಿಂಗಳ ತರಬೇತಿ ಕಾರ್ಯಕ್ರಮವಾಗಿದೆ (2 ತಿಂಗಳು ತರಗತಿ ಮತ್ತು 1 ತಿಂಗಳು ಉದ್ಯೋಗದ ತರಬೇತಿ)ಯನ್ನು ನೀಡುತ್ತದೆ. ಉನ್ನತ ಶಿಕ್ಷಣ, ಕಲಿಕೆ ಪಡೆದಿಲ್ಲದ ಯುವ ಅಭ್ಯರ್ಥಿಗಳು ಪ್ರಮುಖ ಉದ್ಯೋಗ, ಡೊಮೇನ್ ಮತ್ತು ಮೃದು ಕೌಶಲ್ಯಗಳನ್ನು ಕಲಿಯಬಹುದಾಗಿದೆ. ದೇಶಾದ್ಯಂತ ಇರುವ 466 BRIDGE ಕೇಂದ್ರಗಳಲ್ಲಿ 30,000 ಕ್ಕೂ ಅಧಿಕ ಯುವ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲಿದ್ದಾರೆ’’ ಎಂದರು.

ಮರಗೆಲಸದ ಕರಕುಶಲ ತರಬೇತಿ ಕೇಂದ್ರದಲ್ಲಿ 9 ತಿಂಗಳ ತರಬೇತಿ ಕಾರ್ಯಕ್ರಮವನ್ನೂ ಉದ್ಘಾಟನೆ ಮಾಡಲಾಯಿತು. ಇದರಡಿ ಅಭ್ಯರ್ಥಿಗಳು ಅತ್ಯುನ್ನತ ಗುಣಮಟ್ಟದ ಕೌಶಲ್ಯ ಮತ್ತು ವೃತ್ತಿಪರ ಪ್ರಮಾಣೀಕೃತ ತರಬೇತಿಯನ್ನು ಪಡೆಯಲಿದ್ದಾರೆ. ಇಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳು 10/12(ಪಿಯುಸಿ)/ಐಟಿಐ ಉತ್ತೀರ್ಣರಾಗಿರಬೇಕು. ಇಲ್ಲಿ ತರಬೇತಿ ಹೊಂದುವ ಅಭ್ಯರ್ಥಿಗಳಿಗೆ ಬಾಷ್ ಪ್ರಮಾಣಪತ್ರವನ್ನು ನೀಡಲಿದೆ ಮತ್ತು ಹೋಂ & ಆಫೀಸ್ ರಿನ್ನೋವೇಷನ್/ಮಾಡರ್ನ್ ಫರ್ನಿಚರ್ ಅಪ್ಲಾಯನ್ಸ್ ಉದ್ಯಮದಲ್ಲಿ ಉದ್ಯೋಗವನ್ನು ಪಡೆಯಲಿದ್ದಾರೆ