ನವದೆಹಲಿ(ಆ.23):  ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮತ್ತೊಂದು ಮಹತ್ವದ ಪ್ರಸ್ತಾವನೆಯನ್ನು ಮಂದಿಟ್ಟಿದೆ. ದೇಶದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಈ ಮೂಲಕ ಸಂಗ್ರಹವಾದ ಹಣವನ್ನು ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಮುಂದಾಗಿದೆ. ಈ ಕುರಿತು ಶೀಘ್ರದಲ್ಲೇ ಪ್ರಕರಣೆ ಹೊರಬೀಳುವ ಸಾಧ್ಯತೆ ಇದೆ.

ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?.

ವಿಮೆ ಇಲ್ಲದ ವಾಹನಗಳು, ವಿಮೆ ಇಲ್ಲದ ವ್ಯಕ್ತಿಗಳು ಹಾಗೂ ಹಿಟ್ ಅಂಡ್ ರನ್ ಕೇಸ್‌ಗಳಲ್ಲಿ ಅಪಘಾತಕ್ಕೀಡಾದವರಿಗೆ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಮುಂದಾಗಿದೆ. ಪ್ರತಿ ವರ್ಷ ಈ ರೀತಿ ಪ್ರಕರಣಗಳು ದಾಖಲಾಗುತ್ತಿದೆ. ಈ ವೇಳೆ ಹಣವಿಲ್ಲದೆ ಸೂಕ್ತ ಚಿಕಿತ್ಸೆ ಸಿಗದೆ ಅಪಘಾತಕ್ಕೀಡಾದ ವ್ಯಕ್ತಿಗಳು ಅಪಾಯಕ್ಕೆ ಸಿಲುಕಿದ ಹಲವು ಊದಾಹರಣೆಗಳಿವೆ. ಇದಕ್ಕಾಗಿ ಇಂತವರಿಗೆ ಉಚಿತ ಚಿಕಿತ್ಸೆ ನೀಡಲು ಟೋಲ್ ಬೆಲೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ನಲ್ಲಿ ಬದಲಾವಣೆ; ಹೊಸ ನಿಯಮ ಪ್ರಕಟಿಸಿದ MoRTH

ಹಿಟ್ ಅಂಡ್ ರನ್ ಹಾಗೂ ವಿಮೆ ಇಲ್ಲದ  ಅಪಘಾತಕ್ಕೀಡಾದ ವ್ಯಕ್ತಿಗಳ ಚಿಕಿತ್ಸೆಗಾಗಿ ಪ್ರತಿ ವರ್ಷ 2,000 ರೂಪಾಯಿ ಕೋಟಿ ಅವಶ್ಯಕತೆ ಇದೆ. ಇತ್ತೀಚಿನ ಕೆಲ ವರ್ಷಗಳಲ್ಲಿನ ಸರಾಸರಿ ಚಿಕಿತ್ಸೆ ವೆಚ್ಚವಾಗಿದೆ. ಈ ರೀತಿ ಅಫಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳಿಗೆ ಪರಿಹಾರ, ಗಾಯಗೊಂಡವರಿಗೆ ಪರಿಹಾರ ನೀಡಲು ಹಣವದ ಅವಶ್ಯಕತೆ ಇದೆ. ಇದಕ್ಕಾಗಿ ಟೋಲ್ ಬೆಲೆಯಲ್ಲಿ ಹಣ ಸಂಗ್ರಹಿಸಲು ಕೇಂದ್ರ ಮುಂದಾಗಿದೆ.

ಸದ್ಯ ಟೋಲ್ ಹಣವನ್ನು ಫಾಸ್ಟಾಗ್ ಮೂಲಕವೇ ಹೆಚ್ಚಾಗಿ ಸಂಗ್ರಹಿಸಲಾಗುತ್ತಿದೆ. 5 ರೂಪಾಯಿ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಸುಮಾರು 5 ಲಕ್ಷ ಮಂದಿ ಅಪಘಾತದಿಂದ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಅಪಘಾತದ ವೇಳೆ ತಕ್ಷಣ ಸೂಕ್ತ ಚಿಕಿತ್ಸೆ ಲಭ್ಯವಾದರೆ ಹಲವು ಜೀವಗಳು ಉಳಿಸಬಹುದು ಅನ್ನೋದು ಆರೋಗ್ಯ ಇಲಾಖೆ ವರದಿಯಾಗಿದೆ.