ಮನೆಯ ಮೂಲೆಯಲ್ಲೆಲ್ಲೋ ಅಶ್ವಥ ಸಸಿ ಚಿಗುರೊಡೆದ್ರೆ ಈ ಕೆಲಸ ತಪ್ಪದೆ ಮಾಡಿ
ದೇವಸ್ಥಾನದ ಬಳಿ ದೊಡ್ಡ ಅಶ್ವತ್ಥ ಮರ ಇರೋದು ಮಾಮೂಲಿ. ಹಿಂದೂ ಧರ್ಮದಲ್ಲಿ ಪವಿತ್ರ ಗಿಡ ಎನ್ನಿಸಿಕೊಂಡಿರುವ ಇದು ಮನೆ ಮುಂದೆ ಬೆಳೆದ್ರೆ? ಅದ್ರಿಂದ ಲಾಭವಿದ್ಯಾ? ನಷ್ಟವಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಳೆಗಾಲ ಬರ್ತಿದ್ದಂತೆ ಮನೆ ಸುತ್ತಮುತ್ತ ಅನೇಕ ಗಿಡಗಳು ತಾನಾಗಿಯೇ ಬೆಳೆದುಕೊಳ್ಳಲು ಶುರುವಾಗುತ್ವೆ. ಬೀಜ ಹಾಕೇ ಇಲ್ಲ, ಆದ್ರೂ ಈ ಗಿಡ ಎಷ್ಟು ಚೆನ್ನಾಗಿ ಬೆಳೆದಿದೆ ಅಂತ ಮನೆಯವರು ಮಾತನಾಡೋದನ್ನು ನೀವು ಕೇಳಿರ್ಬಹುದು. ಅದ್ರಲ್ಲಿ ತರಕಾರಿ ಗಿಡದಿಂದ ಹಿಡಿದು ಕಾಡು ಗಿಡಗಳವರೆಗೆ ಎಲ್ಲ ಸೇರಿವೆ. ಹಿಂದೂ ಧರ್ಮ (Hinduism) ದಲ್ಲಿ ಪವಿತ್ರ ಎಂದು ಪರಿಗಣಿಸಲಾಗಿರುವ ಅಶ್ವತ್ಥ ಗಿಡ (Peepul Tree) ಕೂಡ ಇದ್ರಲ್ಲಿ ಒಂದು. ಕೆಲವೊಮ್ಮೆ ನಿಮ್ಮ ಮನೆಯ ಗೇಟ್ ಬಳಿ ಇಲ್ಲವೆ ಕಂಪೌಂಡ್ ಮೂಲೆಯಲ್ಲಿ ಅಶ್ವತ್ಥ ಸಸಿ ಬೆಳೆಯಲು ಶುರುವಾಗುತ್ತದೆ. ಅಶ್ವತ್ಥ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬೆಳೆದು ದೊಡ್ಡದಾಗ್ತಿದ್ದಂತೆ ಅದಕ್ಕೆ ಉಪನಯನ ಮಾಡಿ, ಪೂಜೆ ಮಾಡಬೇಕು. ಈ ಗಿಡ ದೇವರ ನೆಲೆ ಎಂದು ನಂಬಲಾಗಿದೆ. ಹಾಗಾಗಿ ಮನೆ ಬಳಿ ಗಿಡ ಬೆಳೆದುಕೊಳ್ತಿದ್ದಂತೆ ಅನೇಕರು ಖುಷಿಯಾಗ್ತಾರೆ. ಆದ್ರೆ ವಾಸ್ತವದಲ್ಲಿ ಇದು ಖುಷಿಪಡುವ ವಿಷ್ಯವಲ್ಲ. ಶಾಸ್ತ್ರಗಳ ಪ್ರಕಾರ, ಮನೆಯ ಬಳಿ ಅಶ್ವತ್ಥ ಸಸಿ ಬೆಳೆಯುವುದು ಒಳ್ಳೆಯ ಸಂಕೇತವಲ್ಲ.
ಮನೆಯ ಬಳಿ ಅಶ್ವತ್ಥ ಸಸಿ ಬೆಳೆಯೋದು ಅಶುಭ ಸಂಕೇತ : ಮನೆಯ ಬಳಿ ಅಶ್ವತ್ಥ ಸಸಿ ಬೆಳೆಯುತ್ತಿದೆ ಅಂದ್ರೆ ಅದಕ್ಕೆ ನಾನಾ ಕಾರಣಗಳನ್ನು ಹೇಳಲಾಗುತ್ತದೆ.
• ಪೂರ್ವಜರ ಅಸಮಾಧಾನ : ಮನೆಯ ಬಳಿ ಅಶ್ವತ್ಥ ಗಿಡ ಕಾಣಿಸಿಕೊಂಡಿದೆ ಅಂದ್ರೆ ನಿಮ್ಮ ಪೂರ್ವಜರು ನಿಮ್ಮ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದರ್ಥ. ನೀವು ಮಾಡ್ತಿರುವ ಕೆಲಸದಲ್ಲಿ ಅವರಿಗೆ ತೃಪ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ.
• ಪಿತೃ ದೋಷ (Pitru Dosha) : ನಿಮ್ಮ ಮನೆ ಸುತ್ತ ಪದೇ ಪದೇ ಅಶ್ವತ್ಥ ಗಿಡ ಬೆಳೆದುಕೊಳ್ತಿದೆ ಅಂದ್ರೆ ಪಿತೃ ದೋಷಕ್ಕೆ ನೀವು ಒಳಗಾಗಿದ್ದೀರಿ ಎಂದರ್ಥ. ಪಿತೃ ದೋಷದಿಂದ ಅನೇಕ ಸಮಸ್ಯೆಗಳು ಸದಾ ನಿಮ್ಮ ಕಾಡುತ್ತವೆ. ಕುಟುಂಬದ ಸುಖ, ಸಂತೋಷ, ನೆಮ್ಮದಿಗೆ ಅಡ್ಡಿಯಾಗುತ್ತದೆ. ಅನಾರೋಗ್ಯ ಆಗಾಗ ಕಾಡುತ್ತದೆ.
ತಿರುಮಲದ ಲಡ್ಡುವಿಗಿದೆ 500 ವರ್ಷದ ಇತಿಹಾಸ, ಲಡ್ಡು ಮಾರಾಟದಿಂದಲೇ ಬರುತ್ತೆ ವರ್ಷಕ್ಕೆ 500 ಕೋಟಿ ಆದಾಯ
ಅಶ್ವತ್ಥ ಗಿಡ ಕೀಳೋದು ಹೇಗೆ? : ಮನೆ ಬಳಿ ಅಶ್ವತ್ಥ ಗಿಡವನ್ನು ಬೆಳೆಸೋದು ವಾಸ್ತು ಶಾಸ್ತ್ರದ ಪ್ರಕಾರ ಮಾತ್ರವಲ್ಲ ವೈಜ್ಞಾನಿಕ ಕಾರಣಕ್ಕೂ ಒಳ್ಳೆಯದಲ್ಲ. ಅಶ್ವತ್ಥ ಮರದ ಬೇರು ಆಳವಾಗಿದ್ದು, ಸುತ್ತಮುತ್ತ ಹರಡುವುದ್ರಿಂದ ಇದು ಮನೆಗೆ ಹಾನಿ ಮಾಡುತ್ತದೆ.
ಸುಮಾರು ಸಾವಿರ ಎಲೆಗಳನ್ನು ಹೊಂದಿರುವ ಅಶ್ವತ್ಥ ಮರವನ್ನು ಕತ್ತರಿಸುವುದು ಅಥವಾ ತೆಗೆಯುವುದು ಮಹಾಪಾಪ. ಸಾಕ್ಷಾತ್ ವಿಷ್ಣು ಆ ಮರದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಮನೆ ಬಳಿ ಬೆಳೆಯುತ್ತಿರುವ ಅಶ್ವತ್ಥ ಗಿಡ ಚಿಕ್ಕದಿರುವಾಗ್ಲೇ ಅದನ್ನು ತೆಗೆಯುವುದು ಒಳ್ಳೆಯದು. ನೀವು ಅಶ್ವತ್ಥ ಸಸಿಯನ್ನು ಕೀಳುವಾಗ್ಲೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಶನಿವಾರ ಮತ್ತು ಗುರುವಾರ ಹೊರತುಪಡಿಸಿ, ಬೇರೆ ದಿನಗಳಲ್ಲಿ ನೀವು ಅಶ್ವತ್ಥ ಗಿಡವನ್ನು ಕೀಳಬಹುದು. ಮೊದಲು ಅದನ್ನು ಪೂಜಿಸಿ, ಅದರ ಮುಂದೆ ಕ್ಷಮೆ ಕೇಳಿ ನಂತ್ರ ಅಶ್ವತ್ಥ ಗಿಡವನ್ನು ಬೇರುಸಹಿತ ಕಿತ್ತು ಅದನ್ನು ಬೇರೆ ಸ್ಥಳದಲ್ಲಿ ನೆಡಬೇಕು. ಮಣ್ಣು ಸಮೇತ ಅಶ್ವತ್ಥ ಗಿಡವನ್ನು ಕೀಳಬೇಕು. ಅದರ ಬೇರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಅಶ್ವತ್ಥ ಗಿಡ ಬೆಳೆದಿದ್ದ ಸ್ಥಳವನ್ನು ನೀವು ಪವಿತ್ರವೆಂದು ಪರಿಗಣಿಸಿ. ಆ ಸ್ಥಳವನ್ನು ಅಶುದ್ಧಗೊಳಿಸಬೇಡಿ.
2025 ರಲ್ಲಿ ಶುಕ್ರ ಶನಿ ಸಂಯೋಗ, ಹೊಸ ವರ್ಷಕ್ಕೆ ಈ ರಾಶಿಗೆ ಕೈ ತುಂಬಾ ಹಣ ಲಕ್ಷಾಧಿಪತಿ ಯೋಗ
ನೀವು ಅಶ್ವತ್ಥ ಗಿಡವನ್ನು ಕೀಳುವ ವೇಳೆ ಓಂ ನಮಃ ಶಿವಾಯ ಅಥವಾ ಓಂ ಶಾಂತಿ ಮಂತ್ರವನ್ನು ಪಠಿಸಬೇಕಾಗುತ್ತದೆ. ಇದ್ರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ. ಅಗತ್ಯವೆನ್ನಿಸಿದ್ರೆ ನೀವು ಪಿತೃದೋಷ ನಿವಾರಣೆಗೆ ಶ್ರಾದ್ಧ ಅಥವಾ ಪಿಂಡದಾನ ಮಾಡಬಹುದು. ಅಶ್ವತ್ಥ ಗಿಡವನ್ನು ಮನೆಯಿಂದ ಬೇರೆ ಸ್ಥಳಕ್ಕೆ ನಿಯಮದಂತೆ ಹಸ್ತಾಂತರಿಸಿ, ಅದಕ್ಕೆ ನೀರು ಹಾಕಿದ್ರೆ ಪಿತೃದೋಷ ಕಡಿಮೆಯಾಗಿ, ದೇವಾನುದೇವತೆಗಳ ಆಶೀರ್ವಾದ ನಿಮಗೆ ಸಿಗುತ್ತದೆ.