Asianet Suvarna News Asianet Suvarna News

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ 30 ಸಾವಿರಕ್ಕೂ ಅಧಿಕ ಭಕ್ತರ ಭೇಟಿ

ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರ ದೇವತೆ ಕುಕ್ಕೆನಾಥನ ದರುಶನಕ್ಕಾಗಿ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ದಸರಾ ರಜೆ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು.

More than 30 thousand devotees visit Kukke Subrahmanya Kshetra rav
Author
First Published Oct 10, 2022, 9:17 AM IST

ಸುಬ್ರಹ್ಮಣ್ಯ (ಅ.10) : ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರ ದೇವತೆ ಕುಕ್ಕೆನಾಥನ ದರುಶನಕ್ಕಾಗಿ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ದಸರಾ ರಜೆ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು. ಶುಕ್ರವಾರ ಹಾಗೂ ಶನಿವಾರ ಕೂಡ ಭಾರಿ ಜನಸಂಖ್ಯೆ ಕ್ಷೇತ್ರದಲ್ಲಿ ಕಂಡುಬಂದಿತ್ತು. ಈ ದಿನ ಶ್ರೀ ಕ್ಷೇತ್ರದಲ್ಲಿ 142 ತುಲಾಭಾರ ಸೇವೆ ನೆರವೇರಿದೆ. 142 ಮಂದಿ ತುಲಾಭಾರ ಸೇವೆ ನೆರವೇರಿಸುವುದರ ಮೂಲಕ ಶ್ರೀ ದೇವರಿಗೆ ತಾವು ತೂಗಿದ ದವಸ ಧಾನ್ಯಗಳನ್ನು ಅರ್ಪಿಸಿದರು.

 

ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣುಪಾಲು

ಇದರೊಂದಿಗೆ 1350 ಆಶ್ಲೇಷ ಬಲಿ, ನಾಗಪ್ರತಿಷ್ಠೆ- 445, ಶೇಷ ಸೇವೆ- 205, 300ಕ್ಕೂ ಅಧಿಕ ಕಾರ್ತಿಕ ಪೂಜೆ, ಉಳಿದಂತೆ ಮಹಾಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರಿದೆ. 30ಸಾವಿರಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ಈ ದಿನ ಜಾತ್ರೆಯನ್ನು ಹೊರತು ಪಡಿಸಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರಾಗಮಿಸಿದ ದಿನವಾಗಿ ಕಂಡು ಬಂತು. ಅಲ್ಲದೆ ಕ್ಷೇತ್ರದಲ್ಲಿ ಈ ದಿನ ಜಾತ್ರೆಯ ವಾತಾವರಣವೇ ತುಂಬಿತು. ದಾಖಲೆ ಪ್ರಮಾಣದಲ್ಲಿ ಜನರು ನೆರೆದಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.

ಭಕ್ತ ಸಂದಣಿ:

ವಾರದಿಂದ ದಸರಾ ರಜೆ ಇತ್ತು. ಹಬ್ಬ ಮುಗಿದ ನಂತರ ಎರಡನೇ ಶನಿವಾರದ ರಜೆ ಇತ್ತು. ನಿರಂತರ ರಜಾ ಸರಣಿ ಬಂದುದರಿಂದ ಕ್ಷೇತ್ರದತ್ತ ಭಕ್ತರ ಆಗಮನ ಅಧಿಕವಿತ್ತು. ಭಾನುವಾರ ಇದು ಗಣನೀಯವಾಗಿ ಏರಿಕೆಯಾಗಿತ್ತು. ಇದರಿಂದಾಗಿ ಶ್ರೀ ದೇವಳದ ವಸತಿ ಗೃಹಗಳು ತುಂಬಿತ್ತು. ಇದರೊಂದಿಗೆ ಇಲ್ಲಿರುವ ಖಾಸಗಿ ವಸತಿ ಗೃಹಗಳು ಕೂಡಾ ಭರ್ತಿಯಾಗಿತ್ತು. ಅಧಿಕ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಶನಿವಾರ ಸಂಜೆ ವೇಳೆ ಆಗಮಿಸಿದ್ದರಿಂದ ವಸತಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ಭಕ್ತಾದಿಗಳು ವಸತಿ ಇಲ್ಲದೆ ತಮ್ಮ ಊರಿಗೆ ಹಿಂದಿರುಗುವ ಪ್ರಸಂಗ ಕಂಡುಬಂತು.

ಮಂಗಳೂರು: ದೇವಸ್ಥಾನದಲ್ಲಿ ಅಂಗಿ-ಬನಿಯನ್ ತೆಗೆದಿಡೋ ಸಂಪ್ರದಾಯಕ್ಕೆ ಆಕ್ಷೇಪ!

Follow Us:
Download App:
  • android
  • ios