ಜವಾಹಿರಿ ಹತ್ಯೆ ಖಂಡಿಸಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ ತಾಲಿಬಾನ್‌..!

By BK Ashwin  |  First Published Aug 2, 2022, 2:46 PM IST

ತಾಲಿಬಾನ್‌ ಉಗ್ರ ಸಂಘಟನೆಯ ಮುಖ್ಯಸ್ಥರಾಗಿದ್ದ ಅಯ್ಮನ್‌ ಅಲ್‌ ಜವಾಹಿರಿ ಅವರನ್ನು ಅಮೆರಿಕ ಡ್ರೋನ್‌ ದಾಳಿಯಲ್ಲಿ ಹತ್ಯೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲಿಬಾನ್‌, ಇದು ದೋಹಾ ಒಪ್ಪಂದದ ಉಲ್ಲಂಘನೆ ಎಂದು ತಿಳಿಸಿದೆ.


ಅಲ್‌ಖೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ ಹತ್ಯೆಗೀಡಾಗಿರುವುದನ್ನು ತಾಲಿಬಾನ್‌ (Taliban) ಭಯೋತ್ಪಾದಕ ಸಂಘಟನೆ ಒಪ್ಪಿಕೊಂಡಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್‌ ದಾಳಿಗೆ (Drone Attack) ಅಯ್ಮನ್‌ ಅಲ್‌ ಜವಾಹಿರಿ ಬಲಿಯಾಗಿದ್ದ ಬಗ್ಗೆ ಅಮೆರಿಕ ಸೋಮವಾರ ಮಾಹಿತಿ ನೀಡಿತ್ತು. ಅಫ್ಘಾನಿಸ್ತಾನದ ಆಡಳಿತ ಮಾಡುತ್ತಿರುವ ತಾಲಿಬಾನ್‌, ಈ ಬೆಳವಣಿಗೆಯನ್ನು ಖಂಡಿಸಿದ್ದು, ಇದು ನಮ್ಮ ಸಂಘಟನೆ ಹಾಗೂ ಅಮೆರಿಕದ ನಡುವಿನ ದೋಹಾ ಒಪ್ಪಂದದ (Doha Agreement) ಸ್ಪಷ್ಟ ಉಲ್ಲಂಘನೆ ಎಂದು ಪ್ರತಿಕ್ರಿಯೆ ನೀಡಿದೆ. 
ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (Islamic Emirate) ಈ ದಾಳಿಯನ್ನು ಸಾಧ್ಯವಾದಷ್ಟು ಪ್ರಬಲ ಪದಗಳಲ್ಲಿ ಖಂಡಿಸುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸುತ್ತದೆ ಎಂದು ಆಡಳಿತದ ವಕ್ತಾರರು ಪಾಷ್ಟೋದಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ಪ್ರಸ್ತುತ, ಇಸ್ಲಾಮಿಸ್ಟ್ ಗುಂಪಿನ ನೇತೃತ್ವದ ಆಡಳಿತದ ಅಡಿಯಲ್ಲಿ ಅಫ್ಘಾನಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿಯ ಉಪ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮುಜಾಹಿದ್, ಅಫ್ಘಾನ್ ನೆಲದಲ್ಲಿ ಇದೇ ರೀತಿಯ ಯಾವುದೇ ಭವಿಷ್ಯದ ಕಾರ್ಯಾಚರಣೆಯ ಬಗ್ಗೆ ಅಮೆರಿಕದ ಜೋ ಬೈಡೆನ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಕ್ರಮವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಅಫ್ಘಾನಿಸ್ತಾನದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಭವಿಷ್ಯದ ಯಾವುದೇ ಪುನರಾವರ್ತನೆಯು ಅಸ್ತಿತ್ವದಲ್ಲಿರುವ ಅವಕಾಶಗಳಿಗೆ ಹಾನಿಯಾಗಬಹುದು ಎಂದು ಅವರು ಹೇಳಿಕೆ ನೀಡಿದ್ದಾರೆ.

21 ವರ್ಷದ ಸೇಡು ತೀರಿಸಿಕೊಂಡ ಅಮೆರಿಕ, ಅಲ್‌ಖೈದಾ ಮುಖ್ಯಸ್ಥ Ayman al-Zawahiri ಹತ್ಯೆ

Tap to resize

Latest Videos

ಮೇ 2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ನೇವಿ ಸೀಲ್ಸ್‌ (US Navy Seals) ಒಸಾಮಾ ಬಿನ್ ಲಾಡೆನ್‌ರನ್ನು ಹತ್ಯೆಗೈದಿತ್ತು. ಬಿನ್‌ ಲಾಡೆನ್‌ ನಂತರ 71 ವರ್ಷದ ಈಜಿಪ್ಟ್ ಪ್ರಜೆ ಅಯ್ಮನ್‌ ಅಲ್‌ ಜವಾಹಿರಿ, ಒಸಾಮಾ ಬಿನ್ ಲಾಡೆನ್‌ನ ಉತ್ತರಾಧಿಕಾರಿಯಾಗಿ ಅಂದರೆ ತಾಲಿಬಾನ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ನೇಮಕವಾಗಿದ್ದರು. ಹಿರಿಯ ತಾಲಿಬಾನ್ ನಾಯಕ ಮತ್ತು ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಅವರ ಒಡೆತನದ ಮನೆಯಲ್ಲಿ ಅಲ್‌ ಜವಾಹಿರಿ ಅವರ ಸಾವು ಸಂಭವಿಸಿದೆ.

ಈ ಮಧ್ಯೆ, ಅಲ್‌ ಖೈದಾ ಮುಖ್ಯಸ್ಥರಾಗಿದ್ದ ಅಯ್ಮನ್‌ ಅಲ್‌ ಜವಾಹಿರಿಯನ್ನು ಹತ್ಯೆ ಮಾಡುವ ಕಾರ್ಯಾಚರಣೆಯನ್ನು ಜುಲೈ 30 ರಂದು ನಡೆಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ, ಜೋ ಬೈಡೆನ್‌ ಅವರು ಸೋಮವಾರ ಸಂಜೆ  (ವಾಷಿಂಗ್ಟನ್‌ ಡಿಸಿ ಸ್ಥಳೀಯ ಸಮಯ) ಶ್ವೇತಭವನದಲ್ಲಿ ನೀಡಿದ ರಾಷ್ಟ್ರೀಯ ಭಾಷಣದಲ್ಲಿ ಈ ಬಗ್ಗೆ ದೃಢಪಡಿಸಿದರು. ಅಲ್ಲದೆ, ಈ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ನಾಗರಿಕ ಮತ್ತು ಭಯೋತ್ಪಾದಕ ನಾಯಕನ ಕುಟುಂಬ ಸದಸ್ಯರಿಗೆ ಹಾನಿಯಾಗಿಲ್ಲ ಎಂದು ತನ್ನ ಭಾಷಣದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇತರ ವಿಷಯಗಳ ಜೊತೆಗೆ ಹಂಚಿಕೊಂಡಿದ್ದರು. 

ಅಘ್ಘಾನಿಸ್ತಾನದಲ್ಲಿದ್ದ ತನ್ನ ಸೇನೆಯನ್ನು ಅಮೆರಿಕ ಸಂಪೂರ್ಣ ಹಿಂತೆಗೆದುಕೊಂಡ ಬಳಿಕ ನಡೆದ ಮೊದಲ ದಾಳಿಯಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಅಘ್ಘಾನಿಸ್ತಾನ ಉಗ್ರ ಸಂಘಟನೆ ತಾಲಿಬಾನ್ ಅಧಿಪತ್ಯದಲ್ಲಿದೆ. ಶನಿವಾರ, ನನ್ನ ನಿರ್ದೇಶನದ ಮೇರೆಗೆ,  ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಸೇನೆ ಯಶಸ್ವಿಯಾಗಿ ವೈಮಾನಿಕ ದಾಳಿಯನ್ನು ನಡೆಸಿತು. ಈ ವೇಳೆ ಅಲ್-ಖೈದಾದ  ಜವಾಹಿರಿಯನ್ನು ಕೊಂದಿತು.  ನ್ಯಾಯ ದೊರೆತಿದೆ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಟ್ವೀಟ್ ಮಾಡಿದ್ದಾರೆ.

ಮುಲ್ಲಾ ಒಮರ್‌ ಕಾರು ಉತ್ಖನನ ಮಾಡಿದ ತಾಲಿಬಾನ್‌!

ಯುನೈಟೆಡ್ ಸ್ಟೇಟ್ಸ್ ತನ್ನ ಸಂಕಲ್ಪವನ್ನು  ಮುಂದುವರೆಸಿದೆ. ನಮಗೆ ಹಾನಿ ಮಾಡಲು ಬಯಸುವವರ ವಿರುದ್ಧ ಅಮೆರಿಕನ್ ಜನರನ್ನು ರಕ್ಷಿಸುವ ನಮ್ಮ ಸಾಮರ್ಥ್ಯವನ್ನು ತೋರಿಸಿದೆ.  ಇಂದು ರಾತ್ರಿ ನಾವು ಸ್ಪಷ್ಟಪಡಿಸಿದ್ದೇವೆ. ಎಷ್ಟು ಹೊತ್ತಾದರೂ ಸರಿ. ಎಲ್ಲಿ ಅಡಗಲು ಪ್ರಯತ್ನಿಸಿದರೂ ಸರಿ. ನಾವು ನಿಮ್ಮನ್ನು ಹುಡುಕುತ್ತೇವೆ ಎಂದು ಎಚ್ಚರಿಕೆಯ ಟ್ವೀಟ್ ಕೂಡ ಮಾಡಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್.

click me!