Snake Smuggling: ಬ್ರಾನಲ್ಲಿ 5 ಜೀವಂತ ಹಾವುಗಳನ್ನು ಸಾಗಿಸಿದ ಮಹಿಳೆ

By BK Ashwin  |  First Published Jul 18, 2023, 3:27 PM IST

ಭದ್ರತಾ ಪರಿಶೀಲನೆ ವೇಳೆ ಮಹಿಳೆಯಲ್ಲಿ ಕಂಡುಬಂದ ಅನುಮಾನಾಸ್ಪದ ನಡವಳಿಕೆ ಹಾಗೂ ಆಕೆಯ ವಿಚಿತ್ರ ಬಟ್ಟೆಯನ್ನು ನೋಡಿದ ವಿಮಾನ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.


ಬೀಜಿಂಗ್ (ಜುಲೈ 18, 2023): ವಿಚಿತ್ರ ಕೆಲಸಗಳನ್ನು ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡು ತೊಂದರೆ ಅನುಭವಿಸುವವರನ್ನು ನೋಡಿರುತ್ತೀರಿ. ಅತ್ಯಂತ ವಿಲಕ್ಷಣವಾದ ಕೆಲಸಗಳನ್ನು ಮಾಡುವವರು ಮತ್ತು ಅದರಿಂದ ತೊಂದರೆಗೆ ಸಿಲುಕುವವರ ಬಗ್ಗೆ ಕೇಳುವುದು ಸಾಮಾನ್ಯವಾಗಿದೆ. ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಬ್ರಾದಲ್ಲಿ ಜೀವಂತ ಹಾವುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಆದರೆ ಇಲ್ಲೊಬ್ಬಳು ಮಹಿಳೆ 5 ಹಾವುಗಳನ್ನು ತನ್ನ ಒಳ ಉಡುಪಿನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಚೀನಾದ ವಿಮಾನ ನಿಲ್ದಾಣವೊಂದರಲ್ಲಿ ನಡೆದಿದ್ದು, ಮಹಿಳೆಯನ್ನು ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. 

ಭದ್ರತಾ ಪರಿಶೀಲನೆ ವೇಳೆ ಮಹಿಳೆಯಲ್ಲಿ ಕಂಡುಬಂದ ಅನುಮಾನಾಸ್ಪದ ನಡವಳಿಕೆ ಹಾಗೂ ಆಕೆಯ ವಿಚಿತ್ರ ಬಟ್ಟೆಯನ್ನು ನೋಡಿದ ವಿಮಾನ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಹಿಳೆಯ ಈ ವೇಳೆ ಆಕೆಯ ಒಳ ಉಡುಪಿನೊಳಗೆ 5 ಕೆಂಪು ಕೇರೆಹಾವುಗಳು ದೊರಕಿವೆ. 

Tap to resize

Latest Videos

ಇದನ್ನು ಓದಿ: ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ವಿಷಕಾರಿಯಲ್ಲದ ಈ ಐದು ಜೀವಂತ ಕಾರ್ನ್ ಹಾವುಗಳನ್ನು ಸಾಗಿಸುತ್ತಿದ್ದಾಗ ಮಹಿಳೆ ಸಿಕ್ಕಿಬಿದ್ದಿದ್ದಾಳೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಶೆನ್‌ಜೆನ್ ಕಸ್ಟಮ್ಸ್ ತಡೆದಿದೆ. ಮಹಿಳೆ ಶೆನ್‌ಜೆನ್‌ನ ಫುಟಿಯಾನ್ ಬಂದರಿನಲ್ಲಿ ಗಡಿ ದಾಟಲು ಪ್ರಯತ್ನಿಸುತ್ತಿದ್ದಳು. ಆದರೆ, ವಿಮಾನ ನಿಲ್ದಾಣದ ಅಧಿಕಾರಿಗಳು ಮಹಿಳೆಯ ಅಸಂಬದ್ಧ ದೇಹದ ಆಕಾರವನ್ನು ಗಮನಿಸಿದಾಗ ಆಕೆಯನ್ನು ತಡೆದು ನಿಲ್ಲಿಸಿದರು.. ಅನುಮಾನ ಬಂದ ಮೇಲೆ ಆಕೆಯನ್ನು ತಡೆದು ತೀವ್ರ ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ. ಆಗ ಅವರಿಗೆ ಆಘಾತಕಾರಿ ಸತ್ಯ ತಿಳಿಯಿತು.

ಮಹಿಳೆಯ ಬಟ್ಟೆಯೊಳಗೆ ಅಡಗಿಸಿಟ್ಟಿದ್ದ ಸ್ಟಾಕಿಂಗ್ಸ್‌ನಲ್ಲಿ ಐದು ಹಾವುಗಳನ್ನು ಅಧಿಕಾರಿಗಳು ಪತ್ತೆ ಮಾಡಿದರು. ಹಾವುಗಳು ಪತ್ತೆಯಾದ ತಕ್ಷಣ ಅಧಿಕಾರಿಗಳು ಜೀವಿಗಳನ್ನು ವಶಪಡಿಸಿಕೊಂಡು ಪ್ರಾಣಿಗಳ ಆರೈಕೆ ಇಲಾಖೆಗೆ ಹಸ್ತಾಂತರಿಸಿದರು. ಮಹಿಳೆಯ ಗುರುತು ಬಹಿರಂಗಗೊಂಡಿಲ್ಲ. 

 

ಇದನ್ನೂ ಓದಿ: ಪ್ರಧಾನಿಯಾಗಲು ಏನ್‌ ಮಾಡ್ಬೇಕು ಅಂತ ಕೇಳಿದ ಯುವತಿಗೆ ಜೈಶಂಕರ್ ಹೇಳಿದ್ದೇನು? ವಿಡಿಯೋ ವೈರಲ್‌

ಇದೇ ವೇಳೆ ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ನಡೆದಿವೆ. ಈ ಹಿಂದೆ ನಡೆದ ಘಟನೆಯೊಂದರಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಾವು, ಕೋತಿ, ಆಮೆಗಳಿರುವ ಚೀಲಗಳು ಪತ್ತೆಯಾಗಿದ್ದವು. ಈ ಬ್ಯಾಗ್‌ಗಳನ್ನು ವಿಮಾನ ನಿಲ್ದಾಣದ ಲಗೇಜ್ ಕ್ಲೇಮ್‌ ಬಳಿ ಗಮನಿಸದೆ ಬಿಡಲಾಗಿದೆ. ಚೀಲವನ್ನು ಗಮನಿಸಿದ ಅಧಿಕಾರಿಗಳು ಅವುಗಳನ್ನು ಪರೀಕ್ಷಿಸಲು ಮುಂದಾದರು. ಆಗ ಬ್ಯಾಗ್‌ನಲ್ಲಿದ್ದ ವಸ್ತುಗಳು ಪತ್ತೆಯಾಗಿವೆ. ಅವರಿಗೆ ಆಶ್ಚರ್ಯವಾಗುವಂತೆ, ಚೀಲದಲ್ಲಿ 45 ಬಾಲ್ ಹೆಬ್ಬಾವುಗಳು, ಮೂರು ಮಾರ್ಮೊಸೆಟ್ ಮಂಗಗಳು, ಮೂರು ನಕ್ಷತ್ರ ಆಮೆಗಳು ಮತ್ತು ಎಂಟು ಕಾರ್ನ್ ಹಾವುಗಳು ಇದ್ದವು. 

ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ

click me!