ಕ್ರಿಫ್ಟೋ ಕರೆನ್ಸಿ ರೋಮ್ಯಾನ್ಸ್ ಸ್ಕ್ಯಾಮ್‌ಗೆ ಬಲಿಯಾದ ಭಾರತೀಯ ಮಹಿಳೆಯೊಬ್ಬರು ತಮ್ಮ ಜೀವಮಾನದ ಉಳಿಕೆಯನ್ನೆಲ್ಲಾ ಕಳೆದುಕೊಂಡು ಆಕಾಶ ನೋಡುವಂತದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ನ್ಯೂಯಾರ್ಕ್: ಕ್ರಿಫ್ಟೋ ಕರೆನ್ಸಿ ರೋಮ್ಯಾನ್ಸ್ ಸ್ಕ್ಯಾಮ್‌ಗೆ ಬಲಿಯಾದ ಭಾರತೀಯ ಮಹಿಳೆಯೊಬ್ಬರು ತಮ್ಮ ಜೀವಮಾನದ ಉಳಿಕೆಯನ್ನೆಲ್ಲಾ ಕಳೆದುಕೊಂಡು ಆಕಾಶ ನೋಡುವಂತದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಫಿಲಿಡೆಲ್ಫಿಯಾದ 37 ವರ್ಷದ ಶ್ರೇಯಾ ದತ್ ಎಂಬುವವರೇ ಹೀಗೆ ಕ್ರಿಫ್ಟೋಕರೆನ್ಸಿ ರೋಮ್ಯಾನ್ಸ್ ಜಾಲಕ್ಕೆ ಬಲಿಯಾಗಿ ತಮ್ಮ ಖಾತೆಯಲ್ಲಿದ್ದ ಸುಮಾರು 4, 50, 000 ಡಾಲರ್ (3,72,93,637 ಭಾರತೀಯ ರೂಪಾಯಿ) ಹಣ ಕಳೆದುಕೊಂಡವರು.
ಡೇಟಿಂಗ್ ಅಪ್ಲಿಕೇಶನ್ ಹಿಂಜ್‌ನಲ್ಲಿ 'ಅನ್ಸೆಲ್' ಎಂಬ ಫ್ರೆಂಚ್ ವೈನ್ ವ್ಯಾಪಾರಿಯಂತೆ ವಂಚಕ ಫೋಸ್ ನೀಡಿದ್ದು, ಈತ ಈ ವಂಚನೆಗಾಗಿ ಡೀಫ್‌ಫೇಕ್ ವೀಡಿಯೋ ಹಾಗೂ ಸ್ಕ್ರಿಫ್ಟ್‌ನ್ನು ಬಳಸಿದ್ದಾನೆ. ಈತನ ಜಾಲದ ಬಲೆಗೆ ಬಿದ್ದ ಶ್ರೇಯಾ ದತ್ ಅವರು ಈಗ ತಮ್ಮ ಜೀವಮಾನದ ಉಳಿಕೆಯನ್ನೆಲ್ಲಾ ಕಳೆದುಕೊಂಡಿದ್ದು, ಆಘಾತಕ್ಕೊಳಗಾಗಿದ್ದಾರೆ.
FTX ಸಹ ಸಂಸ್ಥಾಪಕ ಅಳುವಂತೆ ಮಾಡಿದ ಈ ಭಾರತೀಯ ಸಂಜಾತ ಯಾರು ಗೊತ್ತಾ?
ಹಂದಿ ಕಡಿಯೋದು ಅಥವಾ( ಪಿಗ್ ಬೂಚರಿಂಗ್) ಎಂದು ಕರೆಯಲ್ಪಡುವ ಈ ಮೋಸದ ಜಾಲವೂ ತಮ್ಮ ಬಲೆಗೆ ಬೀಳುವ ಬಲಿಪಶುಗಳಿಗೆ ನಕಲಿ ಪ್ರೀತಿ ವಾತ್ಸಲ್ಯ ತೋರುತ್ತಾರೆ. ನಂತರ ನಕಲಿ ಕ್ರಿಫ್ಟೋ ಕರೆನ್ಸಿ ಹೂಡಿಕೆ ಮಾಡುವಂತೆ ಪ್ರೇಮದಿಂದಲೇ ಅವರನ್ನು ಸೆಳೆಯುತ್ತಾರೆ. ತಮ್ಮ ಬಲೆಗೆ ಬಿದ್ದ ಜನರ ಮನವೊಲಿಸಲು ಕೇವಲ ಡೀಪ್‌ಫೇಕ್ ವೀಡಿಯೋ ಹಾಗೂ ಸಂಭಾಷಣೆಗಳನ್ನೇ ಬಳಸುವ ಇವರು ಜನರನ್ನು ಸುಲಭವಾಗಿ ಮನವೊಲಿಯುವಂತೆ ಮಾಡುತ್ತಾರೆ.
ಅದೇ ರೀತಿ ಇಲ್ಲಿ ಡೇಟಿಂಗ್ ಆಪ್ ಹಿಂಜ್ ಮೂಲಕ ಈ ನಕಲಿ ಪ್ರೇಮ ಜಾಲಕ್ಕೆ ಬಿದ್ದ ಶ್ರೇಯಾ ದತ್ತಾ, ಅಲ್ಲಿ ಕಳೆದ ಜನವರಿಯಲ್ಲಿ ವಂಚಕ ಅನ್ಸೆಲ್ ಎಂಬಾತನನ್ನು ಭೇಟಿಯಾಗಿದ್ದಾರೆ. ಆತ ಈ ಫಿಲಿಡೆಲ್ಫಿಯಾ ಮೂಲದ ಶ್ರೇಯಾ ದತ್ತಾಗೆ ತಾನೋರ್ವ ಫ್ರೆಂಚ್ ವೈನ್ ವ್ಯಾಪಾರಿ ಎಂದು ಹೇಳಿದ್ದಾನೆ. ನಂತರ ಇವರ ಸಂಭಾಷಣೆ ವಾಟ್ಸಾಪ್‌ಗೂ ಮುಂದುವರೆದಿದ್ದು, ಅಲ್ಲಿ ಅವರು ಸೆಲ್ಪಿಗಳನ್ನು ರೋಮ್ಯಾಂಟಿಕ್ ಮೆಸೇಜ್‌ಗಳನ್ನು ಪರಸ್ಪರ ಕಳುಹಿಸಿಕೊಂಡಿದ್ದಾರೆ. ಇದರ ಜೊತೆಗೆ ವೀಡಿಯೋ ಕಾಲ್‌ನಲ್ಲಿಯೂ ಗಂಟೆಗಟ್ಟಲೇ ಮಾತನಾಡಿದ್ದಾರೆ. ಈ ರೀತಿ ವಂಚನೆ ಮಾಡಿದ ವ್ಯಕ್ತಿ ಡೀಪ್‌ಫೇಕ್ ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಉದ್ಯೋಗಿಯಾಗಿದ್ದು ಈ ವಂಚನೆ ವೇಳೆ ಆತ ತಾನೊಬ್ಬ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ ಎಂಬಂತೆ ಬಿಂಬಿಸಿಕೊಂಡಿದ್ದ ಎನ್ನಲಾಗಿದೆ.
Cryptocurrency: ಮಹಿಳೆಯ ಖಾತೆಗೆ ಆಕಸ್ಮಿಕವಾಗಿ ₹ 83 ಕೋಟಿ ವರ್ಗಾಯಿಸಿದ ಕ್ರಿಪ್ಟೋ ಸಂಸ್ಥೆ..!
ಈತ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದರಿಂದ ಹಣಕಾಸಿನಲ್ಲಿ ಸಮೃದ್ಧಿ ಸಾಧಿಸಬಹುದು, ಹಾಗೂ ಬೇಗ ಕೆಲಸದಿಂದ ನಿವೃತ್ತಿ ಪಡೆಯಬಹುದು ಎಂದು ಆಸೆ ಹುಟ್ಟಿಸಿದ್ದ ನಂತರ ಆಕೆಗೆ ಫೇಕ್ ಕ್ರಿಫ್ಟೊಕರೆನ್ಸಿ ಟ್ರೇಡಿಂಗ್ ಆಫ್ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಲು ಹೇಳಿದ್ದ ಇದನ್ನು 2 ಪ್ಯಾಕ್ಟರ್ ಅಥೆಂಟಿಕೇಷನ್ (ಎರಡು ಅಂಶದ ದೃಢೀಕರಣ) ಮೂಲಕ ಪೂರ್ಣಗೊಳಿಸಬೇಕಿತ್ತು. ಇದಾದ ನಂತರ ಈ ವಂಚಕ ಯಶಸ್ವಿ ಟ್ರೇಡಿಂಗ್ ಆಗಿರುವ ಬಗ್ಗೆ ಎಡಿಟೆಡ್ ಸ್ಕ್ರಿನ್ ಶಾಟ್‌ಗಳನ್ನು ಕಳುಹಿಸುತ್ತಿದ್ದ, ಈ ಮೂಲಕ ಆಕೆಯ ಎಲ್ಲಾ ಸೇವಿಂಗ್ಸ್‌ಗಳನ್ನು ಕ್ರಿಫ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ಮನವೊಲಿಸಿದ್ದ ಇದರ ಜೊತೆಗೆ ಲೋನ್ ಪಡೆದು ಹಾಗೂ ರಿಟೈರ್‌ಮೆಂಟ್ ವೇಳೆ ಸಿಗುವ ಫಂಡನ್ನು ತೆಗೆದು ಹೂಡಿಕೆ ಮಾಡಲು ಆಕೆಯನ್ನು ಒಪ್ಪಿಸಿದ್ದ.
ಮಾರ್ಚ್ ಆರಂಭದ ವೇಳೆಗೆ ಶ್ರೇಯಾ ದತ್ತ ಅವರ 4,50,000 ಹೂಡಿಕೆ ಎರಡುಪಟ್ಟು ಹೆಚ್ಚಾದಂತೆ ಪೇಪರ್‌ಗಳಲ್ಲಿ ತೋರಿಸಿತ್ತು ಆದರೆ ಈಕೆ ಹಣವನ್ನು ವಿತ್ ಡ್ರಾ ಮಾಡಲು ಮುಂದಾದಾಗ ಈ ಆಪ್ ವೈಯಕ್ತಿಕ ಟಾಕ್ಸ್ ಕಟ್ಟುವಂತೆ ಕೇಳಿದ್ದು, ಈ ವೇಳೆ ಅವರಿಗೆ ವಂಚನೆಯ ಅರಿವಾಗಿದೆ. ಈ ಘಟನೆಯಿಂದ ತಾನು ಆಘಾತಕ್ಕೊಳಗಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ.
ಈ ರೋಮ್ಯಾನ್ಸ್ ಕ್ರಿಪ್ಟೋಕರೆನ್ಸಿ ಹಗರಣ ಅಮೆರಿಕಾದಲ್ಲಿ ಇತ್ತೀಚೆಗೆ ವ್ಯಾಪಕವಾಗಿದ್ದು, ಇದರ ಜಾಲಕ್ಕೆ ಬಲಿಯಾದವರು ಆರ್ಥಿಕ ಸಂಕಷ್ಟದ ಜೊತೆಗೆ ಭಾವನಾತ್ಮಕವಾಗಿ ಖಿನ್ನತೆಗೆ ಜಾರುತ್ತಾರೆ. ಅಮೆರಿಕಾದಲ್ಲಿ ಕಳೆದೊಂದು ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಈ ಕ್ರಿಫ್ಟೋಕರೆನ್ಸಿ ರೋಮ್ಯಾನ್ಸ್ ಹಗರಣದ ಜಾಲಕ್ಕೆ ಬಲಿಯಾಗಿದ್ದು, ಅಂದಾಜು 3.5 ಶತಕೋಟಿ ಡಾಲರ್ ಹಣವನ್ನು ಕಳೆದುಕೊಂಡಿದ್ದಾರೆ . ಬಹುತೇಕ ಸಂತ್ರಸ್ತರು ಅವಮಾನ ಹಾಗೂ ಮುಜುಗರದ ಕಾರಣಕ್ಕೆ ಈ ಬಗ್ಗೆ ದೂರು ನೀಡುವುದಕ್ಕೂ ಮುಂದಾಗುತ್ತಿಲ್ಲ ಎಂದು ಎಫ್‌ಬಿಐ ಹೇಳಿದೆ