ಚೀನಾದ ಮಹಾ ಎಚ್ಚರಿಕೆಯ ನಡುವೆ ತೈವಾನ್‌ಗೆ ಕಾಲಿಟ್ಟ ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ!

By Santosh Naik  |  First Published Aug 2, 2022, 8:23 PM IST

ಚೀನಾದ ಮಹಾ ಎಚ್ಚರಿಕೆಯ ನಡುವೆ ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ದೇಶಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆ ವಿಶ್ವದ ಎರಡು ಸೂಪರ್‌ ಪವರ್‌ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದು, ಚೀನಾದ ವಾಯುಪಡೆಯ ಸು-35 ಫೈಟರ್ ಜೆಟ್‌ಗಳು ತೈವಾನ್ ಜಲಸಂಧಿಯನ್ನು ದಾಟುತ್ತಿವೆ ಎಂದು ವರದಿಯಾಗಿದೆ.
 


ತೈಪೆ ಸಿಟಿ (ಆ.2): ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು, ತೈವಾನ್‌ ದೇಶಕ್ಕೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಇದರೊಂದಿಗೆ ತೈವಾನ್‌ ದೇಶವನ್ನು ತನ್ನದೇ ಭೂಭಾಗ ಎಂದು ಪರಿಗಣಿಸುವ ಚೀನಾದೊಂದಿಗೆ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ತೈವಾನ್‌ ದೇಶವನ್ನು ಸ್ವತಂತ್ರ ದೇಶ ಎಂದು ಪರಿಗಣಿಸುವಂತೆ ವಿಶ್ವ ಸಮುದಾಯಕ್ಕೆ ಇಲ್ಲಿಯವರೆಗೂ ತೈವಾನ್‌ ದೇಶ ಬೇಡಿಕೆ ಇಡುತ್ತಲೇ ಇತ್ತು. ಇದಕ್ಕೆ ಚೀನಾ ಅಡ್ಡಗಾಲು ಹಾಕುತ್ತಲೇ ಇದ್ದ ನಡುವೆ, ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ, ತೈವಾನ್‌ನ ಆಸೆಯನ್ನು ಇನ್ನಷ್ಟು ಇಮ್ಮಡಿ ಮಾಡಿದೆ. ಇನ್ನೊಂದೆಡೆ ನ್ಯಾನ್ಸಿ ಪೆಲೋಸಿ ಭೇಟಿಗೆ ಚೀನಾ ನಕಶಿಖಾಂತ ಉರಿದುಹೋಗಿದ್ದು, ಚೀನಾದ ವಾಯುಪಡೆಯ ಸು-35 ಫೈಟರ್ ಜೆಟ್‌ಗಳು ತೈವಾನ್ ಜಲಸಂಧಿಯನ್ನು ದಾಟುತ್ತಿವೆ ಎಂದು ವರದಿಯಾಗಿದೆ. ನ್ಯಾನ್ಸಿ ಪೆಲೋಸಿ ಭೇಟಿಗೆ ಚೀನಾ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಅಮೆರಿಕದದ ಆಡಳಿತ ಹೇಳಿದ್ದರೂ, ಚೀನಾ ಮಾತ್ರ ಈ ಮಾತನ್ನು ಒಪ್ಪುತ್ತಿಲ್ಲ. ಅಮೆರಿಕವು ತನ್ನ ಪ್ರಕಟಣೆಯಲ್ಲಿ, ತೈವಾನ್‌ ಕುರಿತಾಗಿ ಇರುವ ನನ್ನ ನಿಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿದೆ. ತೈವಾನ್ ಮಾಧ್ಯಮ ವರದಿಗಳ ಪ್ರಕಾರ, ತೈವಾನ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನು ಹೊತ್ತೊಯ್ಯುವ ಯುಎಸ್ ಸರ್ಕಾರದ ವಿಶೇಷ ವಿಮಾನವನ್ನು ಬೆಂಗಾವಲು ಮಾಡಿದವು. ಕಳೆದ 25 ವರ್ಷಗಳಲ್ಲಿ ದ್ವೀಪದೇಶ ತೈವಾನ್‌ಗೆ ಭೇಟಿ ನೀಡಿದ ಅತ್ಯುನ್ನತ ಶ್ರೇಣಿಯ ಚುನಾಯಿತ ಅಮೆರಿಕದ ರಾಜಕಾರಣಿ ಇವರಾಗಿದ್ದಾರೆ.

| US aircraft carrying House of Representatives Speaker Nancy Pelosi lands in Taipei, Taiwan.

(Source: Reuters) pic.twitter.com/pOpl9NHaio

— ANI (@ANI)

ಅಮೆರಿಕವು ತೈವಾನ್ ಕಾರ್ಡ್ ಅನ್ನು ಪ್ರಯೋಗ ಮಾಡುವ ಮನಸ್ಸನ್ನು ಹೊಂದಿದ್ದರೆ, ಅದನ್ನು ಈ ಕೂಡಲೇ ತ್ಯಜಿಸಬೇಕು. ಒಂದು-ಚೀನಾ ತತ್ವ ಮತ್ತು ಮೂರು ಜಂಟಿ ಸಂವಹನಗಳನ್ನು ಪದಗಳು ಮತ್ತು ಕಾರ್ಯಗಳು ಮತ್ತು ಪತ್ರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ. ಈ ನಡುವೆ ಬುಧವಾರ ಅಧ್ಯಕ್ಷ ತ್ಸೈ ಇಂಗ್-ವೆನ್, ಶಾಸಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಪೆಲೋಸಿ ಭೇಟಿಯಾಗುವ ನಿರೀಕ್ಷೆಯಿದೆ.

Tap to resize

Latest Videos

ತೈವಾನ್‌ ಪ್ರಜಾಪ್ರಭುತ್ವಕ್ಕೆ ನಮ್ಮ ಬೆಂಬಲ: ಈ ನಡುವೆ ಅಮೆರಿಕಕ್ಕೆ ಭೇಟಿ ನೀಡಿದ ಬೆನ್ನಲ್ಲಿಯೇ ನ್ಯಾನ್ಸಿ ಪೆಲೋಸಿ ನೇತೃತ್ವದ ನಿಯೋಗ ಪ್ರಕಟಣೆಯನ್ನು ನೀಡಿದೆ. "ನಮ್ಮ ಕಾಂಗ್ರೆಷನಲ್ ನಿಯೋಗದ ತೈವಾನ್ ಭೇಟಿಯು ತೈವಾನ್‌ನ ಅದ್ಬುತ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ' ಎಂದು ಹೇಳಲಾಗಿದೆ.

ಇತಿಹಾಸದಲ್ಲೇ ಇದೇ ಮೊದಲು: ಅಧ್ಯಕ್ಷರ ಭಾಷಣ ಪ್ರತಿ ಹರಿದ ಸ್ಪೀಕರ್!

"ನಮ್ಮ ಭೇಟಿಯು ಇಂಡೋ-ಪೆಸಿಫಿಕ್‌ಗೆ ನಮ್ಮ ವಿಶಾಲ ಪ್ರವಾಸದ ಭಾಗವಾಗಿದೆ - ಸಿಂಗಾಪುರ್, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ - ಪರಸ್ಪರ ಭದ್ರತೆ, ಆರ್ಥಿಕ ಪಾಲುದಾರಿಕೆ ಮತ್ತು ಪ್ರಜಾಪ್ರಭುತ್ವದ ಆಡಳಿತದ ಮೇಲೆ ಕೇಂದ್ರೀಕರಿಸಿದೆ. ತೈವಾನ್ ನಾಯಕತ್ವದೊಂದಿಗಿನ ನಮ್ಮ ಚರ್ಚೆಗಳು ನಮ್ಮ ಪಾಲುದಾರರಿಗೆ ನಮ್ಮ ಬೆಂಬಲವನ್ನು ಪುನರುಚ್ಚರಿಸುವುದರ ಮೇಲೆ ಮತ್ತು ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುನ್ನಡೆಸುವುದು ಸೇರಿದಂತೆ ನಮ್ಮ ಹಂಚಿಕೆಯ ಆಸಕ್ತಿಗಳನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ತೈವಾನ್‌ನ 23 ಮಿಲಿಯನ್ ಜನರೊಂದಿಗೆ ಅಮೆರಿಕದ ಒಗ್ಗಟ್ಟು ಎಂದಿಗಿಂತಲೂ ಇಂದು ಹೆಚ್ಚು ಮುಖ್ಯವಾಗಿದೆ, ಏಕೆಂದರೆ ಜಗತ್ತು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಆಯ್ಕೆಯನ್ನು ಎದುರಿಸುತ್ತಿದೆ ಎಂದು ಪ್ರಕಟಣೆ ನೀಡಿದೆ.

ಸ್ಪೀಕರ್ ತೈವಾನ್ ಭೇಟಿಗೆ ಕೆಂಡ, ಭಾರತದ ಚೀನಾ ರಾಯಭಾರ ಕಚೇರಿಯಿಂದ ಅಮೆರಿಕಾಗೆ ಎಚ್ಚರಿಕೆ!

"ನಮ್ಮ ಭೇಟಿಯು ತೈವಾನ್‌ಗೆ ಹಲವಾರು ಕಾಂಗ್ರೆಷನಲ್ ನಿಯೋಗಗಳಲ್ಲಿ ಒಂದಾಗಿದೆ - ಮತ್ತು ಇದು 1979 ರ ತೈವಾನ್ ಸಂಬಂಧಗಳ ಕಾಯಿದೆ, ಯುಎಸ್-ಚೀನಾ ಜಂಟಿ ಸಂವಹನಗಳು ಮತ್ತು ಆರು ಭರವಸೆಗಳಿಂದ ಮಾರ್ಗದರ್ಶಿಸಲ್ಪಟ್ಟ ದೀರ್ಘಕಾಲದ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ಯಾವುದೇ ರೀತಿಯಲ್ಲಿ ವಿರೋಧಿಸುವುದಿಲ್ಲ. ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ವಿರೋಧಿಸುತ್ತಲೇ ಇದೆ ಎಂದು ವೈಟ್‌ಹೌಸ್‌ ನೀಡಿದ ಪ್ರಕಟಣೆಯಲ್ಲಿ ಹೇಳಲಾಗಿದೆ.

 

click me!