ಟ್ರಾಫಿಕ್ ಜಾಮ್‌: ಬಾತುಕೋಳಿ ತಾಯಿ, ಮರಿಗಳು ರಸ್ತೆ ದಾಟಲು ನೆರವಾದ ಟ್ರಾಫಿಕ್ ಪೊಲೀಸ್

By Suvarna News  |  First Published Jun 28, 2022, 10:54 AM IST

ಮನುಷ್ಯರೆನೋ ಟ್ರಾಫಿಕ್ ಸಿಗ್ನಲ್ ನೋಡಿಕೊಂಡು ಸಿಗ್ನಲ್ ಬೀಳುವವರೆಗೆ ಕಾದು ರಸ್ತೆ ದಾಟುತ್ತಾರೆ. ಆದರೆ ಪ್ರಾಣಿ ಪಕ್ಷಿಗಳಿಗೆ ಇದು ಬಲು ಪ್ರಯಾಸದ ಕೆಲಸ. ವಾಹನಗಳ ಅಡಿಗೆ ಬಿದ್ದು, ಎಷ್ಟು ಪ್ರಾಣಿಗಳು ಸಾವನ್ನಪಿರುವುದನ್ನು ನೀವು ನೋಡಿರಬಹುದು. ಪ್ರಾಣಿ ಪಕ್ಷಿಗಳ ಭಯವನ್ನರಿತ ಟ್ರಾಫಿಕ್ ಪೊಲೀಸ್ ಒಬ್ಬರು ರಸ್ತೆ ದಾಟಲು ಅವುಗಳಿಗೆ ನೆರವಾಗಿದ್ದಾರೆ. ಟ್ರಾಫಿಕ್‌ ಪೊಲೀಸರ ಈ ಕಾರ್ಯ ಜನಮನ್ನಣೆಗೆ ಪಾತ್ರವಾಗಿದೆ. 


ರಸ್ತೆ ದಾಟುವುದು ಬಲು ಕಷ್ಟದ ಕೆಲಸ ಸದಾ ವಾಹನ ದಟ್ಟಣೆಯಿಂದ ತುಂಬಿರುವ ಮಹಾನಗರಗಳಲ್ಲಿ ರಸ್ತೆ ದಾಟಲು ನಿಮಿಷಗಟ್ಟಲೇ ಕಾಯಬೇಕು. ಮನುಷ್ಯರೆನೋ ಟ್ರಾಫಿಕ್ ಸಿಗ್ನಲ್ ನೋಡಿಕೊಂಡು ಸಿಗ್ನಲ್ ಬೀಳುವವರೆಗೆ ಕಾದು ರಸ್ತೆ ದಾಟುತ್ತಾರೆ. ಆದರೆ ಪ್ರಾಣಿ ಪಕ್ಷಿಗಳಿಗೆ ಇದು ಬಲು ಪ್ರಯಾಸದ ಕೆಲಸ. ವಾಹನಗಳ ಅಡಿಗೆ ಬಿದ್ದು, ಎಷ್ಟು ಪ್ರಾಣಿಗಳು ಸಾವನ್ನಪಿರುವುದನ್ನು ನೀವು ನೋಡಿರಬಹುದು. ಪ್ರಾಣಿ ಪಕ್ಷಿಗಳ ಭಯವನ್ನರಿತ ಟ್ರಾಫಿಕ್ ಪೊಲೀಸ್ ಒಬ್ಬರು ರಸ್ತೆ ದಾಟಲು ಅವುಗಳಿಗೆ ನೆರವಾಗಿದ್ದಾರೆ. ಟ್ರಾಫಿಕ್‌ ಪೊಲೀಸರ ಈ ಕಾರ್ಯ ಜನಮನ್ನಣೆಗೆ ಪಾತ್ರವಾಗಿದೆ. 

ಭದ್ರತಾ ಅಧಿಕಾರಿಯೊಬ್ಬರು ವಾಹನ ದಟ್ಟಣೆಯ ರಸ್ತೆಯಲ್ಲಿ ತಾಯಿ ಬಾತುಕೋಳಿ ಹಾಗೂ ಅದರ ಮರಿಗಳು ರಸ್ತೆ ದಾಟಲು ವಾಹನ ಸಂಚಾರಕ್ಕೆ ಕೆಲ ಕಾಲ ತಡೆ ನೀಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 2 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Meanwhile in Paris.. 🙏

🎥 IG: licsu pic.twitter.com/xWRIfKwkXN

— Buitengebieden (@buitengebieden)

Latest Videos

ಬಿಟ್ಟಿಂಗ್ಬಿಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಪ್ಯಾರಿಸ್‌ನ ನಗರವೊಂದರಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಪಾದಚಾರಿ ಮಾರ್ಗದಲ್ಲಿ ನಿಂತಿರುವಾಗ ಭದ್ರತಾ ಸಿಬ್ಬಂದಿ ತನ್ನ ಕೈಯಿಂದ ಸಂಚಾರವನ್ನು ನಿಲ್ಲಿಸುವಂತೆ ಸನ್ನೆ ಮಾಡುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಆಗ  ತಾಯಿ ಬಾತುಕೋಳಿಯು ರಸ್ತೆಯ ಕಡೆಗೆ ಹೋಗುತ್ತಿದ್ದು, ಕೆಲವು ಚಿಕ್ಕ ಬಾತುಕೋಳಿಗಳು ಅವಳನ್ನು ಹಿಂಬಾಲಿಸುವುದನ್ನು ಕಾಣಬಹುದು. ಪೊಲೀಸ್‌ ಸಂಚಾರವನ್ನು ಸ್ಥಗಿತಗೊಳಿಸಿ ಈ ಮುದ್ದಾದ ಕುಟುಂಬವೂ ಸುರಕ್ಷಿತವಾಗಿ ರಸ್ತೆ ದಾಟಲು ನೆರವಾಗುತ್ತಾನೆ. ನೋಡುಗರು ಕೂಡ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮ್ಯಾರಥಾನ್‌ನಲ್ಲಿ ಓಡಿ ಪದಕ ಗಳಿಸಿದ ಬಾತುಕೋಳಿ: ವಿಡಿಯೋ ವೈರಲ್‌

ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ತನ್ನಿಂತಾನೇ ಆಮ್ಲಜನಕ ಹೆಚ್ಚಾಗುತ್ತದೆ ಎಂದು ಈ ಹಿಂದೆ ತ್ರಿಪುರ ಮುಖ್ಯಮಂತ್ರಿ ಆಗಿದ್ದ ಬಿಪ್ಲಬ್‌ ಕುಮಾರ್‌ ದೇಬ್‌ ಈ ಹಿಂದೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ನಂತರ ಅನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಗೆಪಾಟಲಿಗೀಡಾಗಿತ್ತು. ಇದಾದ ಬೆನ್ನಲ್ಲೇ ಬಿಪ್ಲಬ್‌ ಹೇಳಿಕೆ ಸರಿಯಾಗಿಯೇ ಇದೆ ಎಂದು ತಜ್ಞರು ಸಮರ್ಥಿಸಿಕೊಂಡಿದ್ದರು. ಬಾತುಕೋಳಿಗಳು ಕೆರೆ, ಕೊಳಗಳಲ್ಲಿ ನೀರಿಗೆ ಗಾಳಿ ತುಂಬುವ ಏರೇಟರ್‌ ರೀತಿ ಕೆಲಸ ಮಾಡುತ್ತವೆ. ಅವುಗಳಿಂದ ನೀರಿನಲ್ಲಿ ಆಮ್ಲಜನಕ ಹೆಚ್ಚಾಗುತ್ತದೆ ಎಂದು ಪಶು ಸಂಗೋಪನೆ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಮನೋರಂಜನ್‌ ಸರ್ಕಾರ್‌ ತಿಳಿಸಿದ್ದರು.

ಪುಟ್ಟ ಬಾತುಕೋಳಿಗಳ ಕಾಯುವ ಜರ್ಮನ್ ಶೆಫರ್ಡ್: ವಿಡಿಯೋ ವೈರಲ್
 

ಬಾತುಕೋಳಿಗಳು ನೀರು ಹೀರಿಕೊಳ್ಳುವ ವ್ಯವಸ್ಥೆ ವಿಶಿಷ್ಟವಾಗಿದೆ. ಅಕ್ವೇರಿಯಂ ರೀತಿ ಇವು ಕೆಲಸ ಮಾಡುತ್ತವೆ. ಬಾತುಕೋಳಿಗಳು ನೀರು ಹೀರಿಕೊಂಡು ನೀರಿನ ಗುಳ್ಳೆ ಸೃಷ್ಟಿಯಾಗುತ್ತವೆ. ಅದರಿಂದ ಜಲಮೂಲಗಳಲ್ಲಿ ಆಮ್ಲಜನಕ ಪ್ರಮಾಣ ವೃದ್ಧಿಯಾಗುತ್ತದೆ. ಹೀಗಾಗಿ ಬಾತುಕೋಳಿಗಳು ಈಜಾಡುವ ನೀರಿನಲ್ಲಿ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ ಎಂದು ತ್ರಿಪುರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಮಿಹಿರ್‌ ಕುಮಾರ್‌ ದಾಸ್‌ ಕೂಡ ಹೇಳಿದ್ದಾರೆ.

ಬಿಪ್ಲಬ್‌ ಕುಮಾರ್‌ ದೇಬ್‌ ತ್ರಿಪುರ ಸಿಎಂ ಆಗಿದ್ದಾಗ ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ಏರಿಕೆಯಾಗಲಿದೆ. ಆದ ಕಾರಣ, ತ್ರಿಪುರದ ಗ್ರಾಮಸ್ಥರಿಗೆ 50 ಸಾವಿರ ಬಾತುಕೋಳಿ ಮರಿಗಳನ್ನು ವಿತರಣೆ ಮಾಡುತ್ತೇನೆ ಎಂದು ಪ್ರಕಟಿಸಿದ್ದರು. ಬಾತುಕೋಳಿಗಳ ತ್ಯಾಜ್ಯದಿಂದ ಮೀನುಗಳಿಗೂ ಅನುಕೂಲವಾಗುತ್ತದೆ. ಸಾವಯವ ರೀತಿಯಲ್ಲಿ ಮೀನುಗಳು ಬೆಳೆಯುತ್ತವೆ. ಆದ ಕಾರಣ 50 ಸಾವಿರ ಬಾತುಕೋಳಿ ಮರಿಗಳನ್ನು ಜನರಿಗೆ ನೀಡುತ್ತೇವೆ. ಇದರಿಂದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗುವುದಲ್ಲದೆ, ಕೆರೆಗಳ ಸೌಂದರ್ಯವೂ ಹೆಚ್ಚುತ್ತದೆ ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 

click me!