96 ವರ್ಷಗಳ ತುಂಬು ಜೀವನ ನಡೆಸಿದ 2ನೆ ಎಲಿಜಬೆತ್ ರಾಣಿ ಗುರುವಾರ ನಿಧನರಾಗಿದ್ದಾರೆ. ರಾಣಿಯ ನಿಧನದ ಬಳಿಕ, ಇಡೀ ಬಕಿಂಗ್‌ಹ್ಯಾಂ ಪ್ಯಾಲೇಸ್‌ನ ಎಲ್ಲಾ ಸಿಬ್ಬಂದಿಗಳು ಶೋಕದ ವಸ್ತ್ರವನ್ನು ಧರಿಸಲಿದ್ದಾರೆ. ಪ್ಯಾಲೇಸ್‌ಹ ಹೊರಗಡೆ ರಾಣಿ ನಿಧನರಾಗಿರುವ ಕುರಿತಾಗಿ ನೋಟಿಸ್‌ಅನ್ನು ಹಾಕಲಾಗಿದೆ. ರಾಣಿಯ ನಿಧನದ ಬೆನ್ನಲ್ಲಿಯೇ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಹಾಗೂ ಉತ್ತರ ಐರ್ಲೆಂಡ್‌ನ ಸಂಸತ್ ಅಧಿವೇಶನವನ್ನು ಮುಂದೂಡಲಾಗಿದೆ.
ಲಂಡನ್ (ಸೆ.9): ಬರೋಬ್ಬರಿ 70 ವರ್ಷದ ಆಡಳಿತದ ಬಳಿಕ ಬ್ರಿಟನ್‌ನ 2ನೇ ರಾಣಿ ಎಲಿಜಬೆತ್ ಹಾಗೂ ಎಲಿಜಬೆತ್ ರಾಣಿಯ ಸೊಸೆ ತಮ್ಮ 96ನೇ ವರ್ಷದಲ್ಲಿ ನಿಧನರಾದರು. ರಾಣಿಯ ನಿಧನದ ಬಳಿಕ, ಬ್ರಿಟಿಷ್ ರಾಜಮನೆತನದ ಮುಂದಿನ ಉತ್ತರಾಧಿಕಾರಿಯ ನೇಮಕಕ್ಕೆ ಪ್ರಕ್ರಿಯೆ ಅರಂಭವಾಗಿದೆ. ಈಗಾಗಲೇ ಪ್ರಿನ್ಸ್ ಚಾರ್ಲ್ಸ್ ಮುಂದಿನ ರಾಜನಾಗುವುದು ಖಚಿತವಾಗಿದ್ದರೆ, ಅದರ ಕೊನೇ ಹಂತದ ಪ್ರಕ್ರಿಯೆಗಳು ರಾಣಿಯ ಅಂತಿಮ ವಿದಿವಿಧಾನದ ಬಳಿಕ ನಡೆಯಲಿದೆ. ಸಾವಿನ ನಂತರ ಇಡೀ ಪ್ರಕ್ರಿಯೆಯನ್ನು ಹೇಗೆ ಅನುಸರಿಸಬೇಕು ಎಂಬುದಕ್ಕೆ ಬ್ರಿಟಿಷ್ ಸರ್ಕಾರ ಒಂದು ಯೋಜನೆಯನ್ನು ಸಿದ್ಧಮಾಡಿದೆ. ಈಗಾಗಲೇ ರಾಣಿಯ ಅಂತ್ಯಕ್ರಿಯೆಯನ್ನು ಯಾವ ರೀತಿಯಲ್ಲಿ ಸಂಪ್ರದಾಯ ಹಾಗೂ ಶಿಸ್ತುಬದ್ಧ ಮಾದರಿಯಲ್ಲಿ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ಶಿಷ್ಟಾಚಾರ ಪಾಲನೆಯನ್ನೂ ಮಾಡಲಾಗುತ್ತಿದೆ. ರಾಣಿ ಎಲಿಜಬೆತ್ ಅವರ ಸಾವಿನ ಸುದ್ದಿಯನ್ನು ಘೋಷಿಸಿದಂತೆಯೇ, ವಿಂಡ್ಸರ್ ಕ್ಯಾಸಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾಮನಬಿಲ್ಲುಗಳು ಕಾಣಿಸಿಕೊಂಡವು, ಇಡೀ ಬ್ರಿಟನ್‌ನಲ್ಲಿ ಒಕ್ಕೂಟದ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿದ್ದರೆ, ಬಕಿಂಗ್‌ಹ್ಯಾಂ ಪ್ಯಾಲೇಸ್‌ನ ಹೊರಗಡೆ ಸಾಕಷ್ಟು ಜನರು ಜಮಾಯಿಸಿದ್ದರು. ಬಹುತೇಕರು ರಾಣಿಯ ನಿಧನಕ್ಕೆ ಕಣ್ಣೀರಿಟ್ಟಿದ್ದರು. 1926ರ ಏಪ್ರಿಲ್ 21 ರಂದು ಲಂಡನ್‌ನಲ್ಲಿ ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ ಎನ್ನುವ ಹೆಸರಿನಲ್ಲಿ ಜಯಿಸಿದ್ದ ಇವರು, 1952ರಲ್ಲಿ ಔಪಚಾರಿಕವಾಗಿ ಸಿಂಹಾಸನವನ್ನು ಒಪ್ಪಿಕೊಂಡಿದ್ದರು.
10 ದಿನಗಳ ನಂತರ ಅಂತ್ಯಕ್ರಿಯೆ: ರಾಣಿಯ ಅಂತ್ಯಸಂಸ್ಕಾರ 10 ದಿನಗಳ ನಂತರ ನಡೆಯುತ್ತದೆ. ರಾಣಿಯ ಮರಣವಾಗಿ ಐದು ಐದು ದಿನಗಳ ನಂತರ ಅವರ ಶವಪೆಟ್ಟಿಗೆಯನ್ನು ಲಂಡನ್‌ನಿಂದ ಬಕಿಂಗ್‌ಹ್ಯಾಮ್ ಅರಮನೆಗೆ ಹಾಗೂ ವೆಸ್ಟ್‌ಮಿನಿಸ್ಟರ್ ಅರಮನೆಗೆ ಅಧಿಕೃತ ಮಾರ್ಗದ ಮೂಲಕ ಒಯ್ಯಲಾಗುತ್ತದೆ. ಅಲ್ಲಿ ಮೂರು ದಿನಗಳ ಕಾಲ ರಾಣಿಯ ಶವವನ್ನು ಇಡಲಾಗುತ್ತದೆ. ಈ ಸಮಯದಲ್ಲಿ ಜನರು ತಮ್ಮ ಕೊನೆಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಸ್ಥಳವು ದಿನದ 23 ಗಂಟೆಗಳ ಕಾಲ ತೆರೆದಿರುತ್ತದೆ. ಅಂತ್ಯಕ್ರಿಯೆಯ ದಿನವು ರಾಷ್ಟ್ರೀಯ ಶೋಕಾಚರಣೆಯ ದಿನವಾಗಿದ್ದು, ವೆಸ್ಟ್ ಮಿಸಿಸ್ಟರ್ ಅಬೆ ಸೇರಿದಂತೆ ಇಡೀ ಬ್ರಿಟನ್‌ನಾದ್ಯಂತ ಎರಡು ನಿಮಿಷಗಳ ಮೌನವನ್ನು ಆಚರಣೆ ಮಾಡಲಾಗುತ್ತದೆ. ಆ ಬಳಿಕ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಕಿಂಗ್ ಜಾರ್ಜ್ VI ಸ್ಮಾರಕ ಚಾಪೆಲ್‌ನಲ್ಲಿ ಸಮಾಧಿ ಮಾಡಲಾಗುತ್ತದೆ.
ರಾಣಿಯ ಮರಣದ ಸುದ್ದಿಯಲ್ಲೂ ಶಿಷ್ಟಾಚಾರ ಪಾಲನೆ: ಮಾಹಿತಿಯ ಪ್ರಕಾರ, ರಾಣಿಯ ಮರಣದ ನಂತರ, ಪ್ರಧಾನಿ ಲಿಜ್ ಟ್ರಸ್ ಅವರಿಗೆ ಫೋನ್ ಮೂಲಕ ತಿಳಿಸಲಾಗಿದೆ. ಬಳಿಕ ಎಲ್ಲಾ ರಾಜಮನೆತನದ ಸಮ್ಮುಖದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಅವರ ಕಣ್ಣುಗಳನ್ನು ಮುಚ್ಚಲಾಗಿದೆ. ರಾಣಿ ನಿಧನದ ಬೆನ್ನಲ್ಲಿಯೇ ಪ್ರಿನ್ಸ್ ಚಾರ್ಲ್ಸ್ ಅವರನ್ನು ಹೊಸ ರಾಜ ಎಂದು ಘೋಷಿಸಲಾಗಿದೆ. ಹಾಗಿದ್ದರೂ, ಅವರ ಔಪಚಾರಿಕ ಪಟ್ಟಾಭಿಷೇಕ ಮುಂದಿನ ದಿನಗಳಲ್ಲಿ ನಡೆಯಲಿದ. ಹೊಸ ರಾಜ ಎಂದು ಘೋಷಣೆ ಆದ ಬಳಿಕ, ರಾಜನ ಕೈಗೆ ಮತ್ತನ್ನಿಟ್ಟು ಕುಡುಂಬದ ಸದಸ್ಯರು ಹೊಸ ರಾಜನಿಗೆ ಸ್ವಾಗತ ನೀಡುತ್ತಾರೆ. ಆದರೆ ರಾಣಿಯ ಸಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪ್ರಧಾನಿ ನಂತರ ಗವರ್ನರ್ ಜನರಲ್, ರಾಯಭಾರಿಗೆ ನೀಡಲಾಗುತ್ತದೆ.
Queen Elizabeth II Passes Away: ದೀರ್ಘ ಅವಧಿಯ ಕಾಲ ಬ್ರಿಟನ್ ರಾಣಿಯಾಗಿದ್ದ ಎಲಿಜಬೆತ್ II ನಿಧನ
ಪ್ರಧಾನಿಯ ಮೊದಲ ಹೇಳಿಕೆ: ರಾಣಿಯ ನಿಧನದ ಬಗ್ಗೆ ಪ್ರಧಾನಿ ಮೊದಲ ಹೇಳಿಕೆ ನೀಡಬೇಕು. ಈ ಸಂಪ್ರದಾಯವನ್ನು ಅನುಸರಿಸಿ, ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಮೊದಲ ಹೇಳಿಕೆಯನ್ನು ನೀಡಿದರು. ಅವರು ತಮ್ಮ ಹೇಳಿಕೆಯಲ್ಲಿ ರಾಣಿಗೆ ಗೌರವ ಸಲ್ಲಿಸಿ ಮಾತನಾಡಿದ್ದಾರೆ. ರಾಣಿ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಮತ್ತು ದೇಶಕ್ಕೆ "ಸ್ಥಿರತೆ ಮತ್ತು ಶಕ್ತಿಯನ್ನು" ಒದಗಿಸಿದ್ದಾರೆ ಎಂದು ಅವರು ಹೇಳಿದರು. ರಾಣಿಯ ಸಾವಿನಿಂದ ಬ್ರಿಟನ್ ಆಘಾತಕ್ಕೊಳಗಾಗಿದೆ ಎಂದು ಅವರು ಹೇಳಿದರು. ಆಧುನಿಕ ಬ್ರಿಟನ್ ದೇಶವನ್ನು ನಿರ್ಮಿಸಿದ ಬಂಡೆ ಎಂದು ಈ ವೇಳೆ ಹೇಳಿದ್ದಾರೆ.
96 ವರ್ಷದ Queen Elizabeth II ಆರೋಗ್ಯದ ಬಗ್ಗೆ ಇಡೀ ದೇಶಕ್ಕೆ ಚಿಂತೆಯಾಗಿದೆ: ಬ್ರಿಟನ್ ಪ್ರಧಾ
ಬಕಿಂಗ್ ಹ್ಯಾಂ ಅರಮನೆ ರಾಣಿಯ ಮರಣದ ನಂತರ, ಅರಮನೆಯ ಸಿಬ್ಬಂದಿ ಮುಖ್ಯ ದ್ವಾರದಲ್ಲಿ ಶೋಕ ಬಟ್ಟೆಯನ್ನು ಧರಿಸಿ ನಿಲ್ಲುತ್ತಾರೆ. ಅರಮನೆಯ ಬಾಗಿಲಿಗೆ ಇದರ ಸೂಚನೆಯ ನೋಟಿಸ್ ಕೂಡ ಹಾಕುತ್ತಾರೆ. ಯುಕೆ ಸಂಸತ್ತು, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಸಂಸತ್‌ಅನ್ನು ಮುಂದೂಡಲಾಗಿದೆ. ಈ ಸಮಯದಲ್ಲಿ ಅರಮನೆಯ ವೆಬ್‌ಸೈಟ್ ಸಂತಾಪ ಸಂದೇಶವಾಗಿ ಬದಲಾಗುತ್ತದೆ. ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳು ಕಪ್ಪು ಬ್ಯಾನರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಸುದ್ದಿ ಬರೆಯುವ ಹೊತ್ತಿಗೆ, ಯುನೈಟೆಡ್ ವೆಬ್‌ಸೈಟ್‌ಗಳಲ್ಲಿ ಕಪ್ಪು ಬ್ಯಾನರ್‌ಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿವೆ.