ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ.
ವಾಷಿಂಗ್ಟನ್: ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಈ ಸಂಚಿನಲ್ಲಿ ಭಾರತೀಯರ ಕೈವಾಡ ಇದೆ ಎಂದು ಗೊತ್ತಾಗಿ ಭಾರತ ಸರ್ಕಾರಕ್ಕೆ ಹತ್ಯೆಯ ಹುನ್ನಾರದ ಬಗ್ಗೆ ಬೈಡೆನ್ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಮೂಲಕ ಆತನ ಹತ್ಯೆ ಸಂಚನ್ನು ಅಮೆರಿಕ ವಿಫಲಗೊಳಿಸಿತು ಎಂದು ಅಮೆರಿಕ ಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.
ಇತ್ತೀಚೆಗೆ ಕೆನಡಾದಲ್ಲಿ ಹರದೀಪ್ ಸಿಂಗ್ ನಿಜ್ಜರ್ ಎಂಬ ಖಲಿಸ್ತಾನಿ ಉಗ್ರನನ್ನು ಅಪರಿಚಿತರು ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾರತೀಯರ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿತ್ತು. ಬಳಿಕ ಕೆನಡಾ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಪನ್ನುನ್, ಭಾರತದ ವಿರುದ್ಧ ಬೇಕಾಬಿಟ್ಟಿ ವಾಗ್ದಾಳಿ ನಡೆಸಿದ್ದ. ಇತ್ತೀಚೆಗೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ವೇಳೆ ವಿಮಾನವೊಂದನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.
ದೀಪಾವಳಿ ಆಚರಣೆ ವೇಳೆ ಕೆನಡಾದಲ್ಲಿ ಖಲಿಸ್ತಾನಿಗಳು ಭಾರತೀಯರ ನಡುವೆ ಹೊಯ್‌ಕೈ: ವೀಡಿಯೋ ವೈರಲ್
ಅಮೆರಿಕ ಪತ್ರಿಕೆಯ ಈ ವರದಿ ಬಗ್ಗೆ ಭಾರತ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ ಈ ವರದಿ ಬಗ್ಗೆ ಪನ್ನುನ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ನೆಲದಲ್ಲಿ ನನ್ನನ್ನು ಹತ್ಯೆ ಮಾಡುವ ಭಾರತದ ರಾಜತಾಂತ್ರಿಕರ ಸಂಚಿಗೆ ಅಮೆರಿಕ ಸರ್ಕಾರವೇ ಪ್ರತಿಕ್ರಿಯೆ ನೀಡಬೇಕು ಎಂದಿದ್ದಾನೆ. ಆದರೆ ಅಮೆರಿಕ ಸರ್ಕಾರ (US Govt) ಹತ್ಯೆ ಸಂಚಿನ ಬಗ್ಗೆ ಈ ಮುಂಚೆ ತಿಳಿಸಿತ್ತೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅಮೆರಿಕ ಸರ್ಕಾರ ಕೂಡ ಈ ಸಂಚಿಗೆ ಸಂಬಂಧಿಸಿ ಯಾರನ್ನಾದರೂ ಬಂಧಿಸಿದೆಯೇ ಎಂಬ ಮಾಹಿತಿಯೂ ಲಭ್ಯವಿಲ್ಲ.
2 ತಿಂಗಳ ಬಳಿಕ ಕೆನಡಾ ಜನರಿಗೆ ಇ ವೀಸಾ ಸೇವೆ ಪುನಾರಂಭ
ನವದೆಹಲಿ: ಕೆನಡಾ ಹಾಗೂ ಭಾರತದ ನಡುವಿನ ಸಂಘರ್ಷದ ಬಳಿಕ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಇ-ವೀಸಾ ಸೇವೆಯನ್ನು ಭಾರತ ಸರ್ಕಾರ ಮರಳಿ ಆರಂಭಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Truedo) ಆರೋಪಿಸಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಹೀಗಾಗಿ ಭಾರತ ಕೆನಡಾ ಪ್ರಜೆಗಳಿಗೆ ವೀಸಾ ನೀಡುವ ಪ್ರಕ್ರಿಯೆಗೆ ತಡೆ ನೀಡಿತ್ತು. ಈ ಮೊದಲು ರಾಯಭಾರಿ ಕಚೇರಿಯಲ್ಲಿ ವೀಸಾ ನೀಡಿಕೆಯನ್ನು ಆರಂಭಿಸಿದ್ದ ಭಾರತ ಇದೀಗ ಇ-ವೀಸಾ ಸೇವೆಯನ್ನು ಸಹ ಪುನಾರಂಭಗೊಳಿಸಿದೆ.
ನಿಜ್ಜರ್ ಹತ್ಯೆ ಸಾಕ್ಷ್ಯ ಎಲ್ಲಿ? ಮತ್ತೆ ಕೆನಡಾಕ್ಕೆ ಭಾರತ ಪ್ರಶ್ನೆ
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿ ದಾಳಿ
ನವದೆಹಲಿ: ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ಹಲವು ಡಿಜಿಟಲ್ ಮಾಹಿತಿಗಳನ್ನು (Digital Information) ವಶಪಡಿಸಿಕೊಂಡಿದೆ.
ಮಹಾರಾಷ್ಟ್ರದ ಪುಣೆ, ಹರ್ಯಾಣ ಮತ್ತು ಪಂಜಾಬ್‌ಗಳಲ್ಲಿನ 15 ಪ್ರದೇಶಗಳಲ್ಲಿ ಎನ್‌ಐಎ ಬುಧವಾರ ದಾಳಿ ನಡೆಸಿದೆ. ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಅತಿಕ್ರಮಣ, ಧ್ವಂಸ, ಸಾರ್ವಜನಿಕ ಆಸ್ತಿ ಹಾನಿ ಮತ್ತು ರಾಯಭಾರಿ ಸಿಬ್ಬಂದಿ ಮೇಲೆ ದಾಳಿ ಪ್ರಕರಣಗಳನ್ನು ದಾಖಲಿಸಿರುವ ಎನ್‌ಐಎ ಶೋಧ ಕಾರ್ಯ ನಡೆಸಿದೆ.
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಈ ವರ್ಷದ ಮಾ.19 ಮತ್ತು ಜು.2ರಂದು ದಾಳಿ ನಡೆದಿತ್ತು. ಈ ವೇಳೆ ಖಲಿಸ್ತಾನಿ ಬೆಂಬಲಿಗರು ರಾಯಭಾರ ಕಚೇರಿಗೆ ಬೆಂಕಿ ಹಚ್ಚಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಸಿಟೀವಿ ದೃಶ್ಯಾವಳಿಗಳನ್ನು ಆಧರಿಸಿ 45 ಮುಖಗಳನ್ನು ಎನ್‌ಐಎ ಗುರುತಿಸಿದೆ. ಅಲ್ಲದೇ 10 ಮಂದಿ ಆರೋಪಿಗಳ ಫೋಟೋವನ್ನು ಸೆ.21ರಂದು ಬಿಡುಗಡೆ ಮಾಡಿತ್ತು. ಇದೀಗ ದಾಳಿ ನಡೆಸಿದ್ದು ಹಲವು ಡಿಜಿಟಲ್ ಮಾಹಿತಿಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಹಮಾಸ್ ರೀತಿಯಲ್ಲೇ ಭಾರತದ ಮೇಲೆ ದಾಳಿ ಮಾಡ್ತೇವೆ, ಖಲಿಸ್ತಾನಿ ನಾಯಕ ಗುರುಪತ್ವಂತ್ ಪನ್ನು ಎಚ್ಚರಿಕೆ!