ಜಿ-20 ಶೃಂಗಸಭೆಗೆ ಬಂದು ಖಲಿಸ್ತಾನಿ ಪರ ಮಾತನಾಡಿದ್ದ ಕೆನಡಾ ಸಿಎಂ ಜಸ್ಟೀನ್ ಟ್ರುಡೋ ನಂತರ ನಡೆದ ಕೆಲ ವಿದ್ಯಮಾನಗಳಿಂದ ತೀವ್ರ ಮುಜುಗರಕ್ಕೊಳಗಾಗಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಈಗ ಭಾರತದ ವಿರುದ್ಧ ಕತ್ತಿ ಮಸೆಯಲು ಮುಂದಾಗಿದ್ದಾರೆ.
ಒಟ್ಟಾವ: ಜಿ-20 ಶೃಂಗಸಭೆಗೆ ಬಂದು ಖಲಿಸ್ತಾನಿ ಪರ ಮಾತನಾಡಿದ್ದ ಕೆನಡಾ ಸಿಎಂ ಜಸ್ಟೀನ್ ಟ್ರುಡೋ ನಂತರ ನಡೆದ ಕೆಲ ವಿದ್ಯಮಾನಗಳಿಂದ ತೀವ್ರ ಮುಜುಗರಕ್ಕೊಳಗಾಗಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಈಗ ಭಾರತದ ವಿರುದ್ಧ ಕತ್ತಿ ಮಸೆಯಲು ಮುಂದಾಗಿದ್ದಾರೆ. ಖಲಿಸ್ತಾನಿಗಳನ್ನು ಮಟ್ಟ ಹಾಕಲಾಗದು, ಅವರ ಪ್ರತಿಭಟನೆಯನ್ನು ನಿಲ್ಲಿಸಲಾಗದು ಎಂದು ಭಾರತಕ್ಕೆ ಬಂದಿದ್ದ ವೇಳೆ ಹೇಳಿಕೆ ನೀಡಿದ್ದ ಜಸ್ಟೀನ್ ಟ್ರುಡೋ ಅವರ ಸರ್ಕಾರ ಈಗ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿದೆ. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕಳೆದ ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಖಲಿಸ್ತಾನ್ ಉಗ್ರ ಹರ್‌ದೀಪ್ ಸಿಂಗ್ ನಜ್ಜರ್‌ನ ಹತ್ಯೆಯಾಗಿದ್ದು, ಈ ಹತ್ಯೆಯಲ್ಲಿ ಭಾರತದ ಪ್ರಮುಖ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ್ದು, ಇದಕ್ಕೆ ಪ್ರತೀಕಾರವಾಗಿ ಒಟ್ಟವಾದಲ್ಲಿರುವ ಭಾರತದ ಗುಪ್ತಚರ ಇಲಾಖೆ ಮುಖ್ಯಸ್ಥನ್ನು ತೆಗೆದು ಹಾಕಿದೆ. ಜಿ-20 ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈ ಮಧ್ಯೆ ಕೆನಡಾದ ಈ ನಿರ್ಧಾರ ಈಗ ಈ ಸಂಬಂಧವನ್ನು ಮತ್ತಷ್ಟು ಕೆಡಿಸಿದೆ.
ದರ್ಪದಿಂದ ಭಾರತದ ವಿಮಾನ ನಿರಾಕರಿಸಿ 36 ಗಂಟೆ ದೆಹಲಿಯಲ್ಲೇ ಕಳೆದ ಕೆನಡಾ ಪ್ರಧಾನಿ!
ಕಳೆದ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ (Khalistani terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar)ಹತ್ಯೆ ನಡೆದಿತ್ತು. ಈ ಹತ್ಯೆಗೂ ಭಾರತೀಯ ಏಜೆಂಟರಿಗೆ ಸಂಬಂಧವಿದೆ ಎಂದು ತಮ್ಮ ಸರ್ಕಾರವು ವಿಶ್ವಾಸಾರ್ಹ ಮೂಲಗಳಿಂದ ಆರೋಪಗಳನ್ನು ಹೊಂದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಸಂಸತ್ತಿನ ವಿರೋಧ ಪಕ್ಷದ ತುರ್ತು ಅಧಿವೇಶನದಲ್ಲಿ ಹೇಳಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಭಾರತ ತನ್ನ ನಿಲುವು ಸ್ಪಷ್ಟಪಡಿಸುವಂತೆ ಅವರು ಪ್ರಬಲವಾಗಿ ಆಗ್ರಹಿಸಿದ್ದಾರೆ.
ಕೆನಡಾ ವಿದೇಶಾಂಗ ಸಚಿವೆ (Foreign Minister) ಮೆಲಾನಿ ಜೋಲಿ (Melanie Jolie) ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಟ್ರುಡೊ ಸರ್ಕಾರವು ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ. ಇಂದು ನಾವು ಕೆನಡಾದಲ್ಲಿರುವವ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕಿತ್ತು ಹಾಕಿದ್ದೇವೆ ಎಂದು ಹೇಳಿದ ಮೆಲಾನಿ ಅಧಿಕಾರಿಯ ಹೆಸರು ಹೇಳಿಲ್ಲ. ಸೇವೆಯಿಂದ ತೆಗೆದು ಹಾಕಲ್ಪಟ್ಟ ಭಾರತೀಯ ಅಧಿಕಾರಿ ಕೆನಡಾದಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW)ನ ಮುಖ್ಯಸ್ಥರಾಗಿದ್ದಾರೆ ಎಂದು ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.
ಇತ್ತ ಜೂನ್‌ನಲ್ಲಿ ಹತ್ಯೆಯಾದ ಖಲಿಸ್ತಾನ್ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನನ್ನು ಭಾರತವೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ (Most wanted terrorist) ಎಂದು ಘೋಷಿಸಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪ್ರಮುಖ ಸಿಖ್ ಸಮುದಾಯದ (Sikh community) ನೆಲೆಯಾಗಿರುವ ವ್ಯಾಂಕೋವರ್‌ನ ( Vancouver) ಉಪನಗರವಾದ ಸರ್ರೆಯಲ್ಲಿ ಜೂನ್ 18 ರಂದು ಈತನ ಹತ್ಯೆ ನಡೆದಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಈತನ ಮೇಲಿತ್ತು.
ಭಾರತ ಮತ್ತು ಕೆನಡಾ ನಡುವೆ ಈ ಹತ್ಯೆ ಉದ್ವಿಗ್ನತೆಗೆ ಕಾರಣವಾಗಿದೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರರನ್ನು ಕೆನಡಾ ಸರ್ಕಾರ ಬೆಂಬಲಿಸುತ್ತಿರುವ ಬಗ್ಗೆ ಭಾರತೀಯರು ಅಸಮಾಧಾನಗೊಂಡಿದ್ದಾರೆ. ಖಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳ (activities of Khalistani) ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಭಾರತದ ಆರೋಪವಾಗಿದೆ.
ಖಲಿಸ್ತಾನಿಗಳ ಪರ ನಿಂತ ಕೆನಡಾ ಪ್ರಧಾನಿಗೆ ಮಂಗಳಾರತಿ, ದ್ವಿಪಕ್ಷೀಯ ಸಭೆಯಲ್ಲಿ ಮೋದಿ ವಾರ್ನಿಂಗ್!
ಕೆನಡಾದ ಈ ಆರೋಪವೂ ಜಗತ್ತಿನಾದ್ಯಂತ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಕೆನಡಾ ಪ್ರಧಾನಿ ಟ್ರುಡೊ ಅವರ ಮಾಜಿ ಸಲಹೆಗಾರ ಜೋಸೆಲಿನ್ ಕೌಲನ್ (Jocelyn Coulo) ಹೇಳಿದ್ದಾರೆ. 2018 ರಲ್ಲಿ ಟರ್ಕಿಯಲ್ಲಿ ಪತ್ರಕರ್ತ ಜಮಾಲ್ ಖಶೋಗಿ (amal Khashoggi Murder) ಹತ್ಯೆಯನ್ನು ಸೌದಿ ಅರೇಬಿಯಾ (Saudi Arabia)ಸರ್ಕಾರ ಯೋಜಿಸಿದಂತೆ ವಿದೇಶದಲ್ಲಿ ರಾಜಕೀಯ ವಿರೋಧಿಗಳನ್ನು ಹತ್ಯೆ ಮಾಡುವ ರಾಷ್ಟ್ರಗಳ ಗುಂಪಿಗೆ ಭಾರತ ಸೇರುತ್ತದೆ ಎಂದು ಈಗ ಸ್ವತಂತ್ರ ಸಂಶೋಧಕರಾಗಿರುವ ಜೋಸೆಲಿನ್ ಕೌಲನ್ ಆರೋಪಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಈವರೆಗೂ ಪ್ರತಿಕ್ರಿಯಿಸಿಲ್ಲ.
ಭಾರತದಲ್ಲಿ ತೀವ್ರ ಮುಜುಗರಕ್ಕೊಳಗಾಗಿದ್ದ ಟ್ರುಡೋ
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ನಡೆದ ಜಿ-20 ಶೃಂಗ ಸಭೆಗೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋಗೆ ಪ್ರಧಾನಿ ನರೇಂದ್ರ ಮೋದಿ ಖಲಿಸ್ತಾನ್ ಉಗ್ರರನ್ನು ಮಟ್ಟ ಹಾಕುವಂತೆ ಕೇಳಿದ್ದರು. ಖಲಿಸ್ತಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ತಮ್ಮ ಮತಬ್ಯಾಂಕ್‌ಗಾಗಿ ಖಲಿಸ್ತಾನ ಪರ ಹೇಳಿಕೆ ನೀಡುತ್ತಾ, ಭಾರತವನ್ನು ದೂಷಿಸುವ ಜಸ್ಟಿನ್ ಟ್ರುಡೋ, ಭಾರತದ ಪ್ರಧಾನಿ ಎಚ್ಚರಿಕೆ ಬಳಿಕವೂ ಮೃಧು ಧೋರಣೆ ತಳೆದಿದ್ದರು. ಇತ್ತ ಸಭೆ ಮುಗಿಸಿ ಕೆನಡಾ ತೆರಳಲು ಮುಂದಾದ ಜಸ್ಟಿನ್ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತ ಏರ್ ಇಂಡಿಯಾ ವಿಮಾನ ಸೇವೆ ಒದಗಿಸಲು ಮುಂದಾಗಿತ್ತು. ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವಂತೆ ಭಾರತ ಸೂಚಿಸಿತ್ತು. ಆದರೆ ದರ್ಪದಿಂದಲೇ ನಿರಾಕರಿಸಿದ ಜಸ್ಟಿನ್ ಟ್ರುಡೋ, ತಾಂತ್ರಿಕ ತಂಡ ಕೆಲವೇ ಸಮಯದಲ್ಲಿ ದುರಸ್ಥಿ ಮಾಡಲಿದ್ದಾರೆ ಎಂದಿದ್ದರು. ಆದರೆ ಕೆಲವೇ ಸಮಯ ಬರೋಬ್ಬರಿ 36 ಗಂಟೆ ತೆಗೆದುಕೊಂಡಿತ್ತು. ಇದರಿಂದ ಟ್ರುಡೋ ಮತ್ತಷ್ಟು ಮುಜುಗರಕ್ಕೆ ಒಳಗಾಗಿದ್ದರು.