Mahsa Amini Death: ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಮಹಿಳೆಯರ ಗುಂಡಿಕ್ಕಿ ಹತ್ಯೆ!

By Santosh NaikFirst Published Sep 28, 2022, 6:41 PM IST
Highlights

ಮಹ್ಸಾ ಅಮಿನಿಯ ಸಾವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇರಾನ್‌ ಸರ್ಕಾರ ನಿರಾಕರಿಸಿದ ಬೆನ್ನಲ್ಲಿಯೇ, ಇರಾನ್‌ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಇಳಿದಿದೆ. ಈ ನಡುವೆ ಇರಾನ್‌ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
 

ಟೆಹ್ರಾನ್‌ (ಸೆ. 28): ಸರ್ವಾಧಿಕಾರಿಯ ಸಾವನ್ನು ಬಯಸಿ ಮಾಡುತ್ತಿರುವ ಘೋಷಣೆಗಳು, ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋಗಳು, ಹಿಜಾಬ್‌ಅನ್ನು ಸುಡುವ ಪ್ರತಿಭಟನೆಗಳು ಇರಾನ್‌ನಲ್ಲಿ ತೀವ್ರವಾಗಿವೆ. ರಾಜಧಾನಿ ಟೆಹ್ರಾನ್‌ನಲ್ಲಿ ಆಗಿತ್ತಿದ್ದ ಈ ಪ್ರತಿಭಟನೆಗಳಿಗ ಇರಾನ್‌ನ ಇನ್ನಿತರ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಮಹ್ಸಾ ಅಮಿನಿಗೆ ನ್ಯಾಯ ನೀಡುವಂತೆ ಮಾಡುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್‌ ವಿಫಲವಾಗುವುದರೊಂದಿಗೆ ಸರ್ಕಾರದ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದೆ. ಅಮಿನಿ ಸೆಪ್ಟೆಂಬರ್ 16 ರಂದು ಸಾವು ಕಂಡಿದ್ದರು ಮತ್ತು ನೈತಿಕತೆಯ ಪೋಲೀಸ್‌ಗರಿಯ ವೇಳೆ ಅಮಿನಿ ತಲೆಗೆ ಗಾಯವಾಗಿತ್ತು ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಇರಾನ್‌ ಸರ್ಕಾರ ಹಾಗೂ ನೈತಿಕ ಪೊಲೀಸ್‌ಗಿರಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದವು. ಇದು ನಡೆದು 11 ದಿನಗಳ ನಂತರವೂ ಪ್ರತಿಭಟನೆಯ ತೀವ್ರತೆ ಕಡಿಮೆಯಾಗುವುದರ ಬದಲು ಇನ್ನಷ್ಟು ಹೆಚ್ಚಾಗಿದೆ. ಇರಾನ್ ಅಧಿಕಾರಿಗಳ ಕೈಯಲ್ಲಿ ಪ್ರತಿಭಟನಾಕಾರರ ಸಾವುಗಳು ಇರಾನ್ ಸರ್ಕಾರದ ಬಗ್ಗೆ ಸಾರ್ವಜನಿಕರ ಅಸಮಾಧಾನವನ್ನು ಹೆಚ್ಚಿಸಿವೆ. ಸೆಪ್ಟೆಂಬರ್ 17 ರಂದು ಆರಂಭವಾದ ಪ್ರತಿಭಟನೆಯಲ್ಲಿ ಈವರೆಗೂ 41 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಮತ್ತು ಪತ್ರಕರ್ತ ಅಸಾದ್ ಸ್ಯಾಮ್ ಹನ್ನಾ, ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ಇದರಲ್ಲಿ ವೃದ್ಧ ಮಹಿಳೆ, ಡೆತ್‌ ಟು ಖಮೇನಿ ಎಂದು ಘೋಷಣೆ ಕೂಗುತ್ತಾ, ಪ್ರತಿಭಟನಾ ಸ್ಥಳದಲ್ಲಿರುವ ಪೊಲೀಸರ ಬಳಿ ಸಾಗುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋ ಎಷ್ಟು ನಿಜ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದರ ನಡುವೆ ಇನ್ನೂ ಮೂವರು ಇರಾನ್‌ ಮಹಿಳೆಯರ ಹತ್ಯೆ ಆಗಿರುವುದು, ಪ್ರತಿಭಟನೆಯನ್ನು ಇನ್ನಷ್ಟು ತೀವ್ರ ಮಾಡಿದೆ.

3/. Hanane Kia, aged 23, shot and killed by Iranian security forces during the protests. pic.twitter.com/i8yDYnKBbw

— Omid Djalili (@omid9)

ಅಸಾದ್ ಸ್ಯಾಮ್ ಹನ್ನಾ ಮತ್ತು ಬ್ರಿಟಿಷ್ ನಟ ಒಮಿದ್ ಜಲಿಲಿ ಅವರು 23 ವರ್ಷದ ಹನಾನೆ ಕಿಯಾ,( Hijab) 32 ವರ್ಷದ ಗಜಲೆ ಚೆಲಾವಿ ಮತ್ತು 20 ವರ್ಷದ ಹದಿಸ್ ನಜಾಫಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ( Islamic Revolutionary Guard Corps)ಅವರೆಲ್ಲರೂ ಪ್ರತಿಭಟನೆಯ ಸಮಯದಲ್ಲಿ ಇರಾನ್ ಪೊಲೀಸರಿಂದ ಹತ್ಯೆಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಾವುಗಳ ಬಗ್ಗೆ ಇರಾನ್‌ ಜನರು ಕ್ರೋಧಗೊಂಡಿದ್ದು, ಪೊಲೀಸರು ಪ್ರತಿಭಟನಾನಿರತರ ಮೇಲೆ 20 ಸುತ್ತು ಗುಂಡು ಹಾರಿಸಿದ್ದಾರೆ ಈ ವೇಳೆ ಹದಿಸ್‌ ನಜಾಫಿ ಅವರ ಎದೆ, ಮುಖ ಮತ್ತು ತಲೆಗೆ ಗುಂಡು ತಗುಲಿದೆ ಎಂದು ಹನ್ನಾ ಮತ್ತು ಜಲಿಲಿ ಇಬ್ಬರೂ ಹೇಳಿದ್ದಾರೆ.

ಇರಾನ್‌ನಲ್ಲಿ ವಿರೋಧಿ ಹಿಜಾಬ್ ಹೋರಾಟಕ್ಕೆ 75 ಬಲಿ: ಇರಾನ್ ಅಧ್ಯಕ್ಷ ಆಡಳಿತ ಅಂತ್ಯಕ್ಕೆ ಕರೆ

ಪರ್ವತಾರೋಹಿಯೂ  (Iran Protest) ಆಗಿರುವ 32 ವರ್ಷದ ಗಜಾಲೆ ಚೆಲಾವಿ ಅವರಿಗೆ ಅಮೋಲ್‌ನಲ್ಲಿ ತಲೆಗೆ ಗುಂಡು ಹಾರಿಸಲಾಗಿದೆ. ಅದಲ್ಲದೆ, ಪೊಲೀಸರು ಹನಾನೆ ಕಿಯಾಳನ್ನು ಗುಂಡಿಕ್ಕಿ ಕೊಂಡಿದ್ದಾರೆ. ಆದರೆ, ಇರಾನ್‌ನ ಅಧಿಕಾರಿಗಳು ಈ ಸಾವುಗಳನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಈ ಸಾವುಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ವರದಿಯಾಗಿದೆ.

ಇರಾನ್‌ನಲ್ಲಿ ತೀವ್ರಗೊಂಡ Anti Hijab Protest; ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಟ್ಟ ಮಹಿಳೆಯರು

ಪ್ರತಿಭಟನೆಯ ಸಮಯದಲ್ಲಿ ಇಸ್ಫಹಾನ್ ನಗರದಲ್ಲಿ 18 ವರ್ಷದ ಹುಡುಗಿ ಮಹ್ಸಾ ಮೊಗೊಯ್ ಕೂಡ ಸಾವು ಕಂಡಿದ್ದಾರೆ. 2019ರಲ್ಲಿಇರಾನ್‌ನ (Iran) ಪ್ರತಿಭಟನೆಯ ಅಪ್ರತಿಮ ಫೋಟೋಕ್ಕಾಗಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಫೋಟೋ ಜರ್ನಲಿಸ್ಟ್ ಯಾಲ್ಡಾ ಮೊಯೇರಿ ಮತ್ತು ಆಸ್ಪತ್ರೆಗೆ ಹೋಗಿ ಅಮಿನಿಯ ಪ್ರಕರಣವನ್ನು ಬಹಿರಂಗಪಡಿಸಿದ ವರದಿಗಾರ ನಿಲುಫರ್ ಹಮೇದಿ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ ಮತ್ತು ಅಜ್ಞಾತ ಸ್ಥಳಗಳಲ್ಲಿ ಇವರನ್ನು ಸೆರೆಯಲ್ಲಿ ಇರಿಸಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಾಜಿ ಮುಖ್ಯಸ್ಥ ಹಾಗೂ 2020ರಲ್ಲಿ ಬಾಗ್ದಾದ್‌ನಲ್ಲಿ ಹತ್ಯೆಗೀಡಾದ ಖಾಸೆಮ್ ಸೊಲೈಮಾನಿ (Qasem Soleimani) ಅವರ ಚಿತ್ರಗಳನ್ನು ಸುಟ್ಟುಹಾಕಿದ ವೀಡಿಯೊಗಳು ಇರಾನ್‌ನ ಪ್ರತ್ಯೇಕ ಸ್ಥಳಗಳಿಂದ ವರದಿಯಾಗಿದೆ. 

click me!