ಗುಂಡಿಟ್ಟು ಇಸ್ರೇಲ್ ಪ್ರಧಾನಿ ಹತ್ಯೆ ಮಾಡಿ, ಕೇರಳ ರ‍್ಯಾಲಿಯಲ್ಲಿ ಕಾಂಗ್ರೆಸ್ ಸಂಸದನ ವಿವಾದ!

By Suvarna News  |  First Published Nov 18, 2023, 6:58 PM IST

ಕೇರಳದ ಗಲ್ಲಿ ಗಲ್ಲಿಯಲ್ಲಿ ಪ್ಯಾಲೆಸ್ತಿನ್ ಪರ ರ‍್ಯಾಲಿ ನಡೆಯುತ್ತಿದೆ. ಹಲವು ನಾಯಕರು ಈ ರ‍್ಯಾಲಿಯಲ್ಲಿ ಪಾಲ್ಗೊಂಡು ಇಸ್ರೇಲ್ ಹಾಗೂ ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸಂಸದ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹುವನ್ನು ಗುಂಡಿಕ್ಕು ಹತ್ಯೆ ಮಾಡಬೇಕು ಎಂದಿದ್ದಾರೆ.
 


ಕಾಸರಗೋಡು(ನ.18) ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಯಲ್ಲಿ ಪ್ಯಾಲೆಸ್ತಿನ್‌ನ ಹಲವು ಅಮಾಯಕರು ಬಲಿಯಾಗಿದ್ದಾರೆ. ಅಮಾಯಕರ ಸಾವು ನೋವಿಗೆ ಭಾರತ ಸೇರಿದಂತೆ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇಸ್ರೇಲ್ ದಾಳಿಯನ್ನು ವಿರೋಧಿಸಿ, ಹಮಾಸ್ ಉಗ್ರರ ದಾಳಿಯನ್ನು ಸಮರ್ಥಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಪ್ಯಾಲೆಸ್ತಿನ್ ಪರ ದಿನಕ್ಕೊಂದು ರ‍್ಯಾಲಿ ನಡೆಯುತ್ತಿದೆ. ಇದೀಗ ಕಾಸರಗೋಡಿನಲ್ಲಿ ಆಯೋಜಿಸಿದ ರ‍್ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.

ಎರಡನೇ ಮಹಾಯುದ್ಧದ ಬಳಿಕ ನ್ಯೂರೆಂಬರ್ಗ್ ಟ್ರಯಲ್ಸ್ ಸ್ಥಾಪಿಸಲಾಗಿತ್ತು. ಈ ಮೂಲಕ ಯುದ್ಧ ಅಪರಾಧದಲ್ಲಿ ಭಾಗಿಯಾದವರನ್ನು ಯಾವುದೇ ವಿಚಾರಣೆ ನಡೆಸದೇ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿತ್ತು. ಇದೀಗ ಬೆಂಜಮಿನ್ ನೇತಾನ್ಯಾಹು ಯುದ್ಧ ಅಪರಾಧಿಯಾಗಿದ್ದಾರೆ. ಹೀಗಾಗಿ ಯಾವುದೇ ವಿಚಾರಣೆ ಇಲ್ಲದೆ, ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ರಾಜಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದ್ದಾರೆ.

Tap to resize

Latest Videos

 

ಎಂಆರ್‌ಐ ಯಂತ್ರಗಳ ಅಡಿಯಲ್ಲಿ ಗನ್‌, ಗ್ರೇನೇಡ್‌, ಗಾಜಾದ ಅಲ್‌-ಶಿಫಾ ಆಸ್ಪತ್ರೆಯಲ್ಲಿ ಇಸ್ರೇಲ್‌ ಸೇನೆಯ ಬಿಗ್‌ ಸರ್ಚ್‌!

ಕಾಂಗ್ರೆಸ್ ಸಂಸದನ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಕೇರಳದಲ್ಲಿ ರಾಜಮೋಹನ್ ಹೇಳಿಕೆಯನ್ನು ಸಮರ್ಥಿಸಲಾಗಿದೆ. ಇತರೆಡೆ ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಮಾಸ್ ನಡೆಸಿ ಕ್ರೌರ್ಯಕ್ಕೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಇಸ್ರೇಲ್ ಎಚ್ಚರಿಕೆ ನೀಡಿದ ಬಳಿಕವಷ್ಟೇ ದಾಳಿ ನಡೆಸುತ್ತಿದೆ. ಶಾಲೆಗಳು, ಸರ್ಕಾರಿ ಕಟ್ಟಡ, ಸಾರ್ವಜನಿಕ ಕಟ್ಟಡಗಳಲ್ಲಿ ಹಮಾಸ್ ಉಗ್ರರು ನೆಲೆ ಕಟ್ಟಿಕೊಂಡಿದ್ದು ಹೇಗೆ? ಅನ್ನೋ ಪ್ರಶ್ನೆಗಳನ್ನು ಹಲವು ಎತ್ತಿದ್ದಾರೆ. ಇದೇ ವೇಳೆ ಹಮಾಸ್ ಹಾಗೂ ಇಸ್ರೇಲ್ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು, ಯುದ್ಧಕ್ಕೆ ಅಂತ್ಯಹಾಡಲಿ ಎಂದು ಹಲವರು ಒತ್ತಾಯಿಸಿದ್ದಾರೆ.

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ನ.23ರಂದು ಕೇರಳದ ಕಲ್ಲಿಕೋಟೆಯಲ್ಲಿ ಕಾಂಗ್ರೆಸ್‌ ಬೃಹತ್‌ ರ್‍ಯಾಲಿಯನ್ನು ಹಮ್ಮಿಕೊಂಡಿದೆ. ಕಲ್ಲಿಕೋಟೆ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಒಟ್ಟು 50,000 ಕ್ಕೂ ಹೆಚ್ಚು ಜನರು ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಇಸ್ರೇಲ್‌ ಪರವಾದ ನಿಲುವನ್ನು ಸರಿಪಡಿಸಲು ಕಾಂಗ್ರೆಸ್‌ ಏಕೈಕ ಪಕ್ಷವಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಪ್ಯಾಲೆಸ್ತೀನ್‌ ಪರ ಸಿಪಿಐ (ಎಂ) ಮತ್ತು ಮುಸ್ಲಿಂ ಲೀಗ್‌ ಪಕ್ಷಗಳು ರ್‍ಯಾಲಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್‌ ಮುಂದಾಗಿದೆ.

ಗಾಜಾ ನಾಗರಿಕರು ದಕ್ಷಿಣದತ್ತ ತೆರಳದಂತೆ ತಡೆದಿದ್ದ ಹಮಾಸ್ ಉಗ್ರನ ಹತ್ಯೆ: ಸಾವಿರಾರು ಮಂದಿ ಪಲಾಯನ

click me!