ಶ್ರೀಲಂಕಾ ಆಯ್ತು, ಈಗ ಇರಾಕ್‌ನಲ್ಲಿ ಎರಡನೇ ಬಾರಿ ಸಂಸತ್‌ ಭವನಕ್ಕೆ ನುಗ್ಗಿದ ಪ್ರತಿಭಟನಾಕಾರರು..!

By BK Ashwin  |  First Published Jul 30, 2022, 5:46 PM IST

ಶ್ರೀಲಂಕಾ ಅದ್ಯಕ್ಷರ ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದ ಘಟನೆಯ ಬಗ್ಗೆ ನಿಮಗೆ ನೆನಪಿದೆಯಲ್ಲವೇ. ಅದೇ ರೀತಿ, ಇರಾಕ್‌ನಲ್ಲೂ ಒಂದೇ ವಾರದಲ್ಲಿ ಎರಡನೇ ಬಾರಿ ಸಂಸತ್‌ ಭವನದ ಮೇಲೆ ದಾಳಿ ನಡೆದಿದೆ. ಇದಕ್ಕೆ ಕಾರಣ ನೂತನ ಪ್ರಧಾನಿಯ ನೇಮಕ ಪ್ರಯತ್ನ ಎಂದು ತಿಳಿದುಬಂದಿದೆ.


ಶ್ರೀಲಂಕಾ ಸರ್ಕಾರದ ವಿರುದ್ಧ ಜನರ ಆಕ್ರೋಶದ ವರದಿಗಳನ್ನು ನೀವು ನೋಡಿರಬೇಕಲ್ಲವೇ. ಶ್ರೀಲಂಕಾ ಅಧ್ಯಕ್ಷರ ಅಧಿಕೃತ ಮನೆಗೆ ಸಹಸ್ರಾರು ಸಂಖ್ಯೆಯಲ್ಲಿ ನುಗ್ಗಿದ್ದು, ಅಲ್ಲೇ ಕೆಲವು ದಿನಗಳ ಕಾಲ ತಂಗಿದ್ದ ಸುದ್ದಿ, ವಿಡಿಯೋಗಳನ್ನೆಲ್ಲ ನೋಡಿರುತ್ತೀರಿ. ಅಲ್ಲದೆ, ಶ್ರೀಲಂಕಾ  ಪ್ರಧಾನಿಯಾಗಿದ್ದ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೂ ಬೆಂಕಿ ಹಚ್ಚಲಾಗಿತ್ತು. ಈಗ ಇರಾಕ್‌ನಲ್ಲಿ ಅಂತದ್ದೇ ಪ್ರತಿಭಟನೆ ನಡೆಯುತ್ತಿದೆ. ಒಂದು ವಾರದಲ್ಲಿ ಎರಡನೇ ಬಾರಿ ಪ್ರತಿಭಟನಾಕಾರರು ಸಂಸತ್‌ ಭವನಕ್ಕೆ ನುಗ್ಗಿದ್ದು, ನೂತನ ಪ್ರಧಾನಿಯನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ. 

ಪ್ರಮುಖ ಶಿಯಾ ನಾಯಕ ಮುಖ್ತಾದಾ ಅಲ್‌ ಸದರ್‌ ಇರಾಕ್‌ನ ನೂತನ ಪ್ರಧಾನಿಯಾಗಬೇಕೆಂದು ಬೆಂಬಲಿಸಿ ಬೃಹತ್‌ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನುಗ್ಗಿದ್ದಾರೆ. ಬುಧವಾರವಷ್ಟೇ ಪ್ರತಿಭಟನಾಕಾರರು ಸಂಸತ್‌ ಭವನಕ್ಕೆ ನುಗ್ಗಿ, ನೂತನ ಪ್ರಧಾನಿಯ ನೇಮಕಕ್ಕೆ ಆಗ್ರಹಿಸಿ ಅಧಿವೇಶನವೊಂದನ್ನು ಅಮಾನತುಗೊಳಿಸಿದ್ದರು.ಇನ್ನು, ಪ್ರತಿಭಟನಾಕಾರರ ತಡೆಗೆ ಭದ್ರತಾ ಪಡೆಗಳು ಟಿಯರ್‌ ಗ್ಯಾಸ್‌ ಹಾಗೂ ಸೌಂಡ್‌ ಬಾಂಬ್‌ಗಳನ್ನು ಎಸೆದಿದ್ದಾರೆ. ಸರ್ಕಾರಿ ಕಟ್ಟಡಗಳಿಗೆ ಹಾಗು ವಿದೇಶಿ ರಾಯಭಾರಿ ಕಚೇರಿಗಳಿಗಿರುವ ಕಾಂಕ್ರೀಟ್‌ ಅಡೆತಡೆಗಳನ್ನು ದಾಟಲು ಪ್ರತಿಭಟನಾಕಾರರು ಪ್ರಯತ್ನ ಮಾಡಿದ ಹಿನ್ನೆಲೆ ಭದ್ರತಾ ಪಡೆಗಳು ಟಿಯರ್‌ ಗ್ಯಾಸ್‌, ಸೌಂಡ್‌ ಬಾಂಬ್‌ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.  

Tap to resize

Latest Videos

ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ ಹಂಗಾಮಿ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ

ನಾವು ಎಲ್ಲರೂ ನಿಮ್ಮೊಂದಿಗಿದ್ದೇವೆ ಸಯ್ಯಿದ್‌ ಮುಖ್ತಾದಾ ಎಂದು ಪ್ರತಿಭಟನಾಕಾರರು ಕೂಗಿಕೊಂಡಿದ್ದು, ಇವರನ್ನು ಪ್ರವಾದಿ ಮುಹಮ್ಮದ್ ಅವರ ವಂಶಸ್ಥರು ಎಂದು ಸಹ ಕರೆದಿದ್ದಾರೆ. ಸಂಸತ್‌ ಭವನ ಹಾಗೂ ಸರ್ಕಾರಿ ಕಚೇರಿಗಳತ್ತ ಪ್ರತಿಭಟನಾಕಾರರು ನುಗ್ಗಲು ಪ್ರಯತ್ನ ಮಾಡಿದ ಬಳಿಕ ಇರಾಕ್‌ ಪ್ರಧಾನಿ ಮುಸ್ತಾಫಾ ಅಲ್‌ ಕಧೀಮಿ ಮಾಧ್ಯಮ ಕಚೇರಿ ಹೇಳಿಕೆ ಹೊರಡಿಸಿದ್ದು,  ಸರ್ಕಾರಿ ಸಂಸ್ಥೆಗಳ ಭದ್ರತೆಯನ್ನು ಖಾತರಿಪಡಿಸಿಕೊಳ್ಳಿ ಎಂದು ಭದ್ರತಾ ಅಧಿಕಾರಿಗಳಿಗೆ ಹೇಳಿಕೆ ಹೊರಡಿಸಿದೆ. ಹಲವು ಪ್ರತಿಭಟನಾಕಾರರಿಗೆ ಗಾಯಗಳಾದರೂ, ಸಂಸತ್‌ ಭವನದ ಮೇಲೆ ದಾಳಿ ಮಾಡುವ ಯತ್ನವನ್ನು ಮಾತ್ರ ಅವರು ಬಿಡಲಿಲ್ಲ ಎಂದೂ ತಿಳಿದುಬಂದಿದೆ. 

ಆದರೆ, ಬುಧವಾರ ನಡೆದ ಪ್ರತಿಭಟನೆ ವೇಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಂಸತ್‌ ಭವನಕ್ಕೆ ನುಗ್ಗಿದ ಬಳಿಕ ಭದ್ರತಾ ಪಡೆಗಳು ಅವರನ್ನು ತಡೆಯಲು ಹೆಚ್ಚಿನ ಪ್ರಯತ್ನವನ್ನೇ ಮಾಡಲಿಲ್ಲ ಎಂದೂ ತಿಳಿದುಬಂದಿದೆ. ಇರಾಕ್‌ ಪ್ರಧಾನಿ ಮುಸ್ತಾಫಾ ಅಲ್‌ ಕಧೀಮಿಯಾಗಿದ್ದು, ಆದರೆ ಮೊಹಮ್ಮದ್‌ ಶಿಯಾ ಅಲ್‌ ಸುಧಾನಿಯನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಲು ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಪ್ರತಿಭಟನಾಕಾರರನ್ನು ಇದನ್ನು ವಿರೋಧಿಸುತ್ತಿದ್ದಾರೆ.  

ಇಂದು ಅಲ್‌ ಸುದಾನಿಯನ್ನು ಪ್ರಧಾನಿಯಾಗಿ ನೇಮಕ ಮಾಡುವ ಸಲುವಾಗಿ ಮತಕ್ಕೆ ಹಾಕಬೇಕಿತ್ತು. ಆದರೆ, ಬುಧವಾರ ಸಂಸತ್‌ ಭವನಕ್ಕೆ ಮುತ್ತಿಗೆಯ ಬಳಿಕ ಇದನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೂ ಸಹ ಇಂದು ಪ್ರತಿಭಟನಾಕಾರರು ನುಗ್ಗಿದ್ದು, ಮತಕ್ಕೆ ಹಾಕುವುದನ್ನು ಮುಂದೂಡಿಕೆ ಮಾಡಿದ್ದೇವೆ ಎಂದು ಅವರು ಹೇಳಿದರೂ ನಾವು ಅವರನ್ನು ನಂಬುವುದಿಲ್ಲ, ಅಧಿವೇಶನ ಮುಂದೂಡಿಕೆ ಎಂದು ಹೇಳಿ ಒಳಗೊಳಗೇ ನೂತನ ಪ್ರಧಾನಿಯ ನೇಮಕಕ್ಕೆ ಪ್ರಯತ್ನ ನಡೆಸಬಹುದು  ಎಂದು ಅಲ್‌ ಸದರ್‌ ಬೆಂಬಲಿಗರು ಹಾಗೂ ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಶ್ರೀಲಂಕಾದ ಹಾದಿಯಲ್ಲಿ ಪಾಕಿಸ್ತಾನ ಸೇರಿ 12 ರಾಷ್ಟ್ರಗಳು; ಜಗತ್ತನ್ನೇ ಆವರಿಸುತ್ತಿದೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು!

2021ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಲ್‌ ಸದರ್‌ ಬಣಕ್ಕೆ ಹೆಚ್ಚುವರಿ ಮತಗಳು ಬಂದರೂ ಬಹುಮತ ದೊರೆತಿರಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ 10 ತಿಂಗಳು ಕಳೆದರೂ ಹೊಸ ಸರ್ಕಾರವನ್ನು ಹಾಗೂ ನೂತನ ಪ್ರಧಾನಿಯನ್ನು ನೇಮಿಸುವ ಪ್ರಯತ್ನಗಳು ಇನ್ನೂ ಸಫಲವಾಗಿಲ್ಲ ಎಂದು ತಿಳಿದುಬಂದಿದೆ. 2003 ರಲ್ಲಿ ಅಮೆರಿಕ ಇರಾಕ್‌ ಮೇಲೆ ಆಕ್ರಮಣ ನಡೆದ ಬಳಿಕ ಅಲ್ಲಿನ ರಾಜಕೀಯ ಬದಲಾಗಿದ್ದು, 19 ವರ್ಷಗಳ ನಂತರ ಇದೇ ಮೊದಲ ಬಾರಿಗೆ 10 ತಿಂಗಳಾದರೂ ನೂತನ ಸರ್ಕಾರ ಸ್ಥಾಪನೆ ಮಾಡಲು ಆಗುತ್ತಿಲ್ಲ. 

click me!