ಬ್ರೆಸ್ಟ್ ಕ್ಯಾನ್ಸರ್ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮ್ಯಾಮೊಗ್ರಫಿ ನಂತ್ರವೂ ಅನೇಕ ಬಾರಿ ಕ್ಯಾನ್ಸರ್ ಪತ್ತೆ ಕಷ್ಟ. ಅದಕ್ಕೆ ನಿಮ್ಮ ಸ್ತನದ ಗಾತ್ರ ಕಾರಣವಾಗಿರ್ಬಹುದು. ಬ್ರೆಸ್ಟ್ ಸಾಂದ್ರತೆ ಮ್ಯಾಮೊಗ್ರಫಿ ದಾರಿತಪ್ಪಿಸುತ್ತೆ.
ಬ್ರೆಸ್ಟ್ ಕ್ಯಾನ್ಸರ್ (Breast cancer) ವಿಶ್ವದಲ್ಲಿ ಮಹಿಳೆಯರನ್ನು ಅತಿ ಹೆಚ್ಚಾಗಿ ಕಾಡ್ತಿರುವ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ಚಿಕ್ಕ ವಯಸ್ಸಿನ ಹುಡುಗಿಯರು ಕೂಡ ಈ ಭಯಾನಕ ಕ್ಯಾನ್ಸರ್ ಗೆ ತುತ್ತಾಗ್ತಿದ್ದಾರೆ. ಇದಕ್ಕೆ ಕಾರಣ ಹಾಗೂ ಚಿಕಿತ್ಸೆ ಬಗ್ಗೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಯುತ್ತಿದೆ. ಈ ಮಧ್ಯೆ ದಟ್ಟವಾದ ಸ್ತನಗಳು ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು ಎಂಬುದು ಪತ್ತೆಯಾಗಿದೆ. ಮ್ಯಾಮೊಗ್ರಫಿ (mammography) ಮೂಲಕ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತದೆ. ಆದ್ರೆ ದಟ್ಟವಾದ ಸ್ತನದ ಗಾತ್ರ ಹೊಂದಿರುವವರಿಗೆ ಮ್ಯಾಮೊಗ್ರಫಿ ಮೂಲಕ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವುದು ಕಷ್ಟ.
ಸ್ತನ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ಕಾರಣ, 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮ್ಯಾಮೊಗ್ರಫಿ ಮಾಡಿಸುವಂತೆ ಸಲಹೆ ನೀಡಲಾಗುತ್ತದೆ. ಅಚ್ಚರಿ ಅಂದ್ರೆ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 11ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಡ್ತಿದೆ. ಆರಂಭದಲ್ಲಿಯೇ ಕ್ಯಾನ್ಸರ್ ಪತ್ತೆಯಾದ್ರೆ ಚಿಕಿತ್ಸೆ (treatment) ಇದೆ. ಹಾಗಾಗಿಯೇ ಮಹಿಳೆಯರು ಸ್ವಯಂ ಪರೀಕ್ಷೆ ಹಾಗೂ ಮ್ಯಾಮೊಗ್ರಫಿ ಮೂಲಕ ಸ್ತನ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗಬೇಕೆಂದು ಸಲಹೆ ನೀಡಲಾಗುತ್ತದೆ. ಅನೇಕ ಬಾರಿ ಮಹಿಳೆಯರು ಮ್ಯಾಮೊಗ್ರಫಿ ಮಾಡಿಸಿದ್ರೂ ಕ್ಯಾನ್ಸರ್ ಇರೋದು ಪತ್ತೆಯಾಗೋದಿಲ್ಲ. ಅದಕ್ಕೆ ಕಾರಣ ಸ್ತನದ ಸಾಂದ್ರತೆ. ಸ್ತನದ ಸಾಂದ್ರತೆಯು ಮ್ಯಾಮೊಗ್ರಫಿಯಲ್ಲಿ ಬಿಳಿಯಾಗಿ ಕಾಣುತ್ತದೆ. ಕ್ಯಾನ್ಸರ್ ಗಡ್ಡ ಕೂಡ ಬಿಳಿಯದಾಗಿ ಕಾಣಿಸುತ್ತದೆ. ಇದ್ರಿಂದ ಕ್ಯಾನ್ಸರ್ ಪತ್ತೆ ಕಷ್ಟವಾಗುತ್ತದೆ.
undefined
ಮಕ್ಕಳಿಗೆ ಲೋಷನ್, ಸನ್‌ಸ್ಕ್ರೀನ್, ಹೇರ್ ಪ್ರೊಡಕ್ಟ್ ಬಳಸ್ತೀರಾ? ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬೆಳಕಿಗೆ!
ಯುನೈಟೆಡ್ ಸ್ಟೇಟ್ (United States) ಈಗ ಸ್ತನದ ಗಾತ್ರ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಗಂಭೀರ ಕ್ರಮತೆಗೆದುಕೊಳ್ಳಲು ಮುಂದಾಗಿದೆ. ಮ್ಯಾಮೊಗ್ರಫಿಗೆ ಒಳಗಾದ ಪ್ರತಿಯೊಬ್ಬ ಮಹಿಳೆಗೆ, ಈ ವರದಿ ಜೊತೆಯಲ್ಲಿ ಸ್ತನದ ಸಾಂದ್ರತೆಯ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ. ಸ್ತನ ಸಾಂದ್ರತೆ ಅಂದ್ರೆ, ಕೊಬ್ಬಿನ ಅಂಗಾಂಶಕ್ಕೆ ಹೋಲಿಸಿದರೆ ಮಹಿಳೆಯ ಸ್ತನದಲ್ಲಿ ಎಷ್ಟು ಫೈಬ್ರೊಗ್ಲಾಂಡ್ಯುಲರ್ ಅಂಗಾಂಶವಿದೆ ಎಂಬುದರ ಮಾಪನವಾಗಿದೆ. ಹೆಚ್ಚು ಫೈಬ್ರೊಗ್ಲಾಂಡ್ಯುಲರ್ ಅಂಗಾಂಶವಿದ್ದರೆ ಸ್ತನದ ಗಾತ್ರ ಹೆಚ್ಚಿರುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಅರ್ಧದಷ್ಟು ಮಹಿಳೆಯರು ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿದ್ದಾರೆ. ಮ್ಯಾಮೊಗ್ರಾಫಿಯನ್ನು ಮಾಡಿಸಿ, ವರದಿ ಪಡೆಯುವ ಅಮೇರಿಕನ್ ಮಹಿಳೆಯರು ಶೀಘ್ರದಲ್ಲೇ ತಮ್ಮ ಸ್ತನ ಸಾಂದ್ರತೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಸ್ತನದ ಸಾಂದ್ರತೆ ಹೆಚ್ಚಿದೆ ಎಂಬುದು ಗೊತ್ತಾದಲ್ಲಿ ಅವರು ಅದ್ರ ಬಗ್ಗೆ ಮತ್ತಷ್ಟು ಜಾಗೃತರಾಗಿರಬಹುದು. ಜೊತೆಗೆ ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಬೇರೆ ವಿಧಾನಗಳಾದ ಅಲ್ಟ್ರಾಸೌಂಡ್ ಮತ್ತು ಎಂಆರ್ ಐ ಆಯ್ಕೆ ಪಡೆಯಬಹುದು. ಮ್ಯಾಮೊಗ್ರಾಫಿಯಲ್ಲಿ ಪತ್ತೆಯಾಗದ ಕ್ಯಾನ್ಸರ್ ಕೋಶಗಳು ಅಲ್ಟ್ರಾಸೌಂಡ್ ಮತ್ತು ಎಂಆರ್ ಐನಲ್ಲಿ ಪತ್ತೆಯಾಗುತ್ತವೆ.
ದಟ್ಟ ಸ್ತನ ಹೊಂದಿದ್ದ ಕೆಲ ಮಹಿಳೆಯರು ಈಗಾಗಲೇ ಈ ಅನುಭವ ಹೊಂದಿದ್ದಾರೆ. ಮ್ಯಾಮೊಗ್ರಫಿಯಲ್ಲಿ ಅವರ ಕ್ಯಾನ್ಸರ್ ಕೋಶ ಪತ್ತೆಯಾಗಿರಲಿಲ್ಲ. ಸ್ತನದ ಗಾತ್ರ ಹೆಚ್ಚಿತ್ತು. ಸ್ತನದಲ್ಲಿ ಗಡ್ಡೆ ಇರುವ ಅನುಭವವಾಗಿತ್ತು. ಆದ್ರೆ ಮ್ಯಾಮೊಗ್ರಾಫಿ ಮಾಡಿದ ತಜ್ಞರು, ಯಾವುದೇ ಕೋಶ ಪತ್ತೆಯಾಗಿಲ್ಲ ಎಂದಿದ್ದರು. ನಂತ್ರ ಎಂಆರ್ ಐ ಮತ್ತು ಅಲ್ಟ್ರಾಸೌಂಡ್ ಮೂಲಕ ಅದನ್ನು ಪತ್ತೆ ಮಾಡಲಾಯ್ತು.
ಪ್ರತಿದಿನ 10-12 ಗಂಟೆ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುತ್ತೀರ? ಎಚ್ಚರ, ಈ ಅಂಗಗಳಿಗೆ ಹಾನಿ ತಪ್ಪಿದ್ದಲ್ಲ!
ಈ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡಿರುವ ಅಮೆರಿಕಾ ಸರ್ಕಾರ, ಈಗ, ಸ್ತನ ಸಾಂದ್ರತೆ ವರದಿ ನೀಡುವಂತೆ ಸೂಚನೆ ನೀಡಿದೆ. ಸಾಂದ್ರತೆ ಹೆಚ್ಚಿರುವ ಮಹಿಳೆಯರು ಇನ್ನೊಂದು ಪರೀಕ್ಷೆಗೆ ಒಳಗಾಗಿ, ಕ್ಯಾನ್ಸರ್ ಬಗ್ಗೆ ಸ್ಪಷ್ಟ ವರದಿ ಪಡೆಯಬಹುದು. ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರು ಜಾಗೃತರಾಗುವುದು ಬಹಳ ಮುಖ್ಯ. ಸ್ತನದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದರೂ ಅವರು ವೈದ್ಯರನ್ನು ಭೇಟಿಯಾಗ್ಬೇಕು. ಸ್ವಯಂ ಪರೀಕ್ಷೆ ಜೊತೆ ಮ್ಯಾಮೊಗ್ರಫಿಗೆ ಒಳಗಾಗಬೇಕು.