ಹಿಂದಿನ ಕಾಲದ ಕೆಲ ಪದ್ಧತಿಗಳು ಬರೀ ಧಾರ್ಮಿಕವಾಗಿರಲಿಲ್ಲ, ಅದಕ್ಕೆ ವೈಜ್ಞಾನಿಕ ಕಾರಣಗಳಿರುತಿದ್ದವು. ಆದ್ರೆ ಬರ್ತಾ ಬರ್ತಾ ಅವರ ಕಾರಣಗಳನ್ನು ತಿರುಚಲಾಯ್ತು. ಅದಕ್ಕೆ ಮುಟ್ಟು ಕೂಡ ಉತ್ತಮ ನಿದರ್ಶನ.
ನಿಯಮಗಳಿಲ್ಲದೆ ಮನುಷ್ಯ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಸುಸ್ತಿರ ಸಮಾಜಕ್ಕೆ ಕೆಲವೊಂದು ನಿಯಮಗಳು ಅನಿವಾರ್ಯವಾಗುತ್ತದೆ. ಪ್ರತಿಯೊಂದು ಧರ್ಮ, ಜಾತಿಗಳು ಕೂಡ ತಮ್ಮದೇ ಆದ ಪದ್ಧತಿ, ನಿಯಮ, ಚೌಕಟ್ಟಿನಲ್ಲಿ ಬದುಕುತ್ತಿದೆ. ಈ ನಿಯಮದ ವಿಷ್ಯ ಬಂದಾಗ ಮುಟ್ಟು ಕೂಡ ಮಹತ್ವ ಪಡೆಯುತ್ತದೆ. ಮಹಿಳೆಯಲ್ಲಿ ಆಗುವ ನೈಸರ್ಗಿಕ ಕ್ರಿಯೆ ಈ ಮುಟ್ಟು. ಈ ಮುಟ್ಟಿನ ಬಗ್ಗೆ ಹಿಂದಿನ ಕಾಲದಿಂದಲೂ ಅನೇಕ ನಂಬಿಕೆ, ಪದ್ಧತಿಗಳು ಜಾರಿಯಲ್ಲಿವೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು, ಪೂಜೆಗಳಲ್ಲಿ ಪಾಲ್ಗೊಳ್ಳಬಾರದು ಎನ್ನುವ ಪದ್ಧತಿ ಹಿಂದೂ ಧರ್ಮದಲ್ಲಿದೆ.
ಭಾರತ (India) ಆಧುನಿಕತೆಯತ್ತ ಮುಖ ಮಾಡ್ತಿದೆ. ಮುಟ್ಟು ಹಾಗೂ ನೈರ್ಮಲ್ಯದ ಬಗ್ಗೆ ಜನರನ್ನು ಜಾಗೃತಿಗೊಳಿಸಲಾಗ್ತಿದೆ. ಈ ಸಮಯದಲ್ಲೂ ಅನೇಕ ಕಡೆ ಪಿರಿಯಡ್ಸ್ (Period) ಆದ ಮಹಿಳೆಯನ್ನು ಅಶುದ್ಧಳಂತೆ ನೋಡಲಾಗ್ತಿದೆ. ಆಕೆಗೆ ಯಾವುದೇ ಸೌಲಭ್ಯ ನೀಡಲಾಗ್ತಿಲ್ಲ. ದೇವಸ್ಥಾನ (Temple), ಪೂಜೆ, ನದಿಯಲ್ಲಿ ಸ್ನಾನ ಎಲ್ಲವೂ ನಿಷಿದ್ಧವಾಗಿದೆ. ನಾವಿಂದು ಮುಟ್ಟಾದ ಮಹಿಳೆ ದೇವಸ್ಥಾನಕ್ಕೆ ಯಾಕೆ ಹೋಗಬಾರದು ಹಾಗೆ ಪೂಜೆಯನ್ನು ಏಕೆ ಮಾಡಬಾರದು ಎಂಬುದಕ್ಕೆ ವೈಜ್ಞಾನಿಕ (Scientific) ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಗರ್ಭಕಂಠದ ಕ್ಯಾನ್ಸರ್: ಗಂಭೀರ ಅನಾರೋಗ್ಯವನ್ನು ತಡೆಗಟ್ಟುವುದು ಹೇಗೆ?
ಮುಟ್ಟಾದ ಮಹಿಳೆಗೆ ದೇವಸ್ಥಾನ ಪ್ರವೇಶ ಏಕೆ ನಿಷೇಧ : ಮುಟ್ಟಿನ ಸಮಯದಲ್ಲಿ ದೇವಸ್ಥಾನ ಮತ್ತು ಪೂಜಾ ಸ್ಥಳಗಳಿಗೆ ಹೋಗುವುದನ್ನು ಹಿಂದೂ ಧರ್ಮ ನಿಷೇಧಿಸಲಾಗಿದೆ. ಇದು ಸಂಪೂರ್ಣ ಸತ್ಯ. ಅಡುಗೆ ಮನೆಗೆ ಹೋಗಬಾರದು, ನದಿಯಲ್ಲಿ ಸ್ನಾನ ಮಾಡಬಾರದು ಎಂಬುದನ್ನು ಕೂಡ ಹೇಳಲಾಗುತ್ತದೆ. ಇದಕ್ಕೆ ಧಾರ್ಮಿಕ ಕಾರಣಗಳು ಏನೇ ಇರಲಿ. ಇದಕ್ಕೆ ವೈಜ್ಞಾನಿಕ ಕಾರಣವೇನು ಎಂಬುದನ್ನು ನೋಡೋದಾದ್ರೆ ಹಾರ್ಮೋನ್ ಬದಲಾವಣೆ. ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಇದ್ರಿಂದ ಆಕೆ ಕಿರಿಕಿರಿ ಕೋಪಕ್ಕೆ ಒಳಗಾಗ್ತಾಳೆ. ಆಕೆಯ ಮನಸ್ಸು ನಕಾರಾತ್ಮಕತೆಯಿಂದ ಕೂಡಿರುತ್ತದೆ. ನದಿಯಲ್ಲಿ ಸ್ನಾನ ಮಾಡುವಾಗ ಆಕೆ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಮನಸ್ಸು ಸಾಮಾನ್ಯ ದಿನಕ್ಕಿಂತ ಸ್ವಲ್ಪ ಬದಲಾಗಿರುವ ಕಾರಣ ಅಡುಗೆ ಮನೆಯಲ್ಲಿ ಯಡವಟ್ಟಾಗು ಸಾಧ್ಯತೆಯಿರುತ್ತದೆ. ಹಿಂದೆ ಹತ್ತಾರು ಜನರಿಗೆ ಅಡುಗೆ ಮಾಡ್ಬೇಕಿತ್ತು. ಪಿರಿಯಡ್ಸ್ ಸಮಯದಲ್ಲಿ ನಿಂತು ಅಡುಗೆ ಮಾಡುವುದು ಕಷ್ಟವಾಗ್ತಿತ್ತು. ಹಾಗಾಗಿ ಅವರಿಗೆ ವಿಶ್ರಾಂತಿ ಸಿಗಲಿ ಎನ್ನುವ ಕಾರಣಕ್ಕೆ ಅಡುಗೆ ಮನೆಗೆ ಬರದಂತೆ ಹೇಳ್ತಿದ್ದರು. ಇನ್ನು ದೇವಸ್ಥಾನ ಎನ್ನುವುದು ಸಕಾರಾತ್ಮಕತೆ ತುಂಬಿರುವ ಸ್ಥಳ. ದೇವಸ್ಥಾನಕ್ಕೆ ಹೋದಾಗ ಮನಸ್ಸು ಧನಾತ್ಮಕತೆಯಿಂದ ಕೂಡಿರಬೇಕು. ಆದ್ರೆ ದೇವಸ್ಥಾನಕ್ಕೆ ಹೋದಾಗ ಕಿರಿಕಿರಿ ಅನುಭವಿಸಿದ್ರೆ ನೆಮ್ಮದಿ ಸಿಗೋದಿಲ್ಲ. ದೇವಸ್ಥಾನಕ್ಕೆ ಹೋಗಿಯೂ ಪ್ರಯೋಜನವಿಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಇಷ್ಟೇ ಅಲ್ಲ ಹಿಂದಿನ ಕಾಲದಲ್ಲಿ ಯಾವುದೇ ದೇವರ ಪೂಜೆ ಮಾಡುವಾಗ ಮಂತ್ರೋಚ್ಛಾರಕ್ಕೆ ಮಹತ್ವವಿತ್ತು. ಮಂತ್ರವನ್ನು ಉಚ್ಚರಿಸದೆ ಪೂಜೆ ಮಾಡ್ತಿರಲಿಲ್ಲ. ಮಂತ್ರವನ್ನು ಶ್ರದ್ಧೆಯಿಂದ ಹೇಳಬೇಕು. ಉಚ್ಚಾರದಲ್ಲಿ ತಪ್ಪಾಗಬಾರದು. ಆದ್ರೆ ಮುಟ್ಟಿನ ಸಮಯದಲ್ಲಿ ಮಹಿಳೆ ನೋವು ಹಾಗೂ ದಣಿವನ್ನು ಅನುಭವಿಸುತ್ತಾಳೆ. ಈ ಸಮಯದಲ್ಲಿ ತುಂಬಾ ಸಮಯ ಒಂದೇ ಕಡೆ ಕುಳಿತು ಪೂಜೆ ಮಾಡಲು, ಮಂತ್ರವನ್ನು ಉಚ್ಛರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಪೂಜೆ ಮಾಡುವುದನ್ನು ನಿಷೇಧಿಸಲಾಗಿತ್ತು.
ದೌರ್ಜನ್ಯವೆಂದರೆ ಮಹಿಳೆಯರೇ ಹೆಚ್ಚಾಗಿ ನೋವು ಅನುಭವಿಸೋದೇಕೆ?
ದೇವಸ್ಥಾನಕ್ಕೆ ಶುದ್ಧವಾಗಿ ಹೋಗ್ಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ ಹೋಗುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಅವರು ಮುಟ್ಟಿನ ಸಮಯದಲ್ಲಿ ಸ್ನಾನ ಕೂಡ ಮಾಡ್ತಿರಲಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಬರದಂತೆ ಸಲಹೆ ನೀಡಲಾಗ್ತಿತ್ತು. ಪೂಜೆ ಮಾಡುವ ಸಂದರ್ಭದಲ್ಲಿಯೇ ಪಿರಿಯಡ್ಸ್ ಆದ್ರೆ ಅಥವಾ ದೇವಸ್ಥಾನಕ್ಕೆ ಹೋದ ಸಮಯದಲ್ಲಿ ಮುಟ್ಟಾದ್ರೆ ಆತಂಕಪಡಬೇಕಾಗಿಲ್ಲ. ಇದ್ರಿಂದ ಯಾವುದೇ ಶಿಕ್ಷೆ ನಿಮಗಾಗುವುದಿಲ್ಲ.