ಮುಟ್ಟಿನ ಸಮಯದಲ್ಲಿ ಕೂದಲು ಕತ್ತರಿಸಿದ್ರೆ ಏನಾಗುತ್ತೆ?

By Suvarna News  |  First Published Nov 19, 2022, 5:23 PM IST

ಪಿರಿಯಡ್ಸ್ ಒಂದು ನೈಸರ್ಗಿಕ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೂ ಅನೇಕ ಕಡೆ ಈಗ್ಲೂ ಜನರು ಮುಟ್ಟನ್ನು ದೂರವಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಕೆಲಸ ಮಾಡದಂತೆ ನಿಷೇಧ ಹೇರಲಾಗಿದೆ. ಇದ್ರ ಬಗ್ಗೆ ವಿಜ್ಞಾನ ಏನು ಹೇಳುತ್ತೆ ಗೊತ್ತಾ?
 


ಭಾರತದಲ್ಲಿ ಈಗ್ಲೂ ಪಿರಿಯಡ್ಸ್ ನಿಷೇಧಿತ ವಿಷ್ಯ. ಅದ್ರ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುವುದಿಲ್ಲ. ಹಾಗೆ ಮುಟ್ಟಿನ ಬಗ್ಗೆ ಹಿಂದಿನ ಕಾಲದಿಂದಲೂ ಕೆಲ ನಂಬಿಕೆಗಳು ಹಾಗೂ ಪದ್ಧತಿಗಳು ಜಾರಿಯಲ್ಲಿವೆ.   ಉಪ್ಪಿನಕಾಯಿ ಮುಟ್ಟಬಾರದು, ನೀರಿನ ಹತ್ತಿರ ಹೋಗಬಾರದು, ಮನೆಯ ಒಳಗೆ ಹೋಗಬಾರದು, ಆಹಾರ ತಯಾರಿಸಬಾರದು, ಕೂದಲು ಕತ್ತರಿಸಬಾರದು ಹೀಗೆ ಅನೇಕ ಅಲಿಖಿತ ನಿಯಮಗಳಿವೆ. ಮುಟ್ಟಿನ ಸಂದರ್ಭದಲ್ಲಿ ಈಗ್ಲೂ ಅನೇಕ ಮಹಿಳೆಯರು ಮನೆಯ ಹೊರಗೆ ವಾಸ ಮಾಡುತ್ತಾರೆ. ಕೆಲವು ಕಡೆ ಊರಿನ ಹೊರಗೆ ಇರುವ ಪದ್ಧತಿಯಿದೆ. ಕೆಲವು ಊರುಗಳಲ್ಲಿ ಈಗ್ಲೂ ಈ ಪದ್ಧತಿಯನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಮುಟ್ಟಿನ ನೋವು, ಸೆಳೆತ ಒಂದು ಕಡೆಯಾದ್ರೆ ಇನ್ನೊಂದು ಕಡೆ ಅಲ್ಲಿ ನಿಲ್ಲಬಾರದು, ಅದನ್ನು ಮುಟ್ಟಬಾರದು ಎಂಬ ನಿಯಮ ಮಹಿಳೆಯರಿಗೆ ಮತ್ತಷ್ಟು ಹಿಂಸೆ ನೀಡುತ್ತದೆ.

ಮುಟ್ಟು (Periods) ಒಂದು ನೈಸರ್ಗಿಕ (Natural) ಕ್ರಿಯೆ. ಹಿಂದೂ (Hindu ) ಧರ್ಮದಲ್ಲಿ ಮುಟ್ಟನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಮುಟ್ಟಾದಾಗ ಪಾಲನೆ ಮಾಡ್ತಿದ್ದ  ಪದ್ಧತಿಗಳನ್ನು ಬಿಡಬೇಕು ಎಂಬ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ಈಗಲೂ ನಡೆಯುತ್ತಿವೆ. ಆದ್ರೆ ಮುಟ್ಟಿನ ಸಮಯದಲ್ಲಿ ವಿಶ್ರಾಂತಿ (rest) ನೀಡಬೇಕು ಎಂಬುದನ್ನು ಬಹುತೇಕ ಎಲ್ಲರೂ ಒಪ್ಪುತ್ತಾರೆ. ಇದಕ್ಕೆ ವಿಜ್ಞಾನ (Science) ದಲ್ಲಿ ಬೇರೆಯದೇ ಕಾರಣವಿದೆ.  ಮುಟ್ಟಿನ ಸಂದರ್ಭದಲ್ಲಿ ಕೂದಲು (Hair) ಕತ್ತರಿಸಬಾರದು ಎಂಬ ಹಿಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದನ್ನು ಅಶುಭ ಎನ್ನಲಾಗುತ್ತದೆ. ಆದ್ರೆ ಮುಟ್ಟಿನ ಸಂದರ್ಭದಲ್ಲಿ ಕೂದಲು ಕತ್ತರಿಸುವ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ನೋಡೋಣ. 

Latest Videos

undefined

ಪಿರಿಯಡ್ಸ್ ಮತ್ತು ಕೂದಲಿನ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? : ಮುಟ್ಟಿನ ಸಂದರ್ಭದಲ್ಲಿ ಕೂದಲು ಕತ್ತರಿಸಬಹುದಾ ಎಂದು ನೀವು ವೈದ್ಯರನ್ನು ಪ್ರಶ್ನೆ ಮಾಡಿದ್ರೆ ಬರುವ ಉತ್ತರ ಯಸ್. ಯಾವುದೇ ವೈದ್ಯರನ್ನು ಕೇಳಿದ್ರೂ, ಪಿರಿಯಡ್ಸ್ ಸಮಯದಲ್ಲಿ ಕೂದಲು ಕತ್ತರಿಬಹುದು ಎನ್ನುತ್ತಾರೆ. ಕೂದಲು ಕತ್ತರಿಸಲು ಹಾಗೂ ಪಿರಿಯಡ್ಸ್ ಗೂ ಯಾವುದೇ ಸಂಬಂಧವಿಲ್ಲ. 

ಮುಟ್ಟಾದಾಗ ಈ ತಪ್ಪು ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

ಮುಟ್ಟಿನ ಸಮಯದಲ್ಲಿ ಕೂದಲು ಕತ್ತರಿಸದಿರಲು ಒಂದೇ ಒಂದು ಕಾರಣವಿದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನುಗಳು ಏರುಪೇರಾಗುತ್ತವೆ. ದೇಹದ ಈಸ್ಟ್ರೊಜೆನ್ ಮಟ್ಟದಲ್ಲಿ ಬದಲಾವಣೆ ಕಂಡುಬರುತ್ತದೆ. ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗುತ್ತದೆ. ಕೂದಲು ಉದುರುವಿಕೆಯ ಮೇಲೆ ಈಸ್ಟ್ರೊಜೆನ್ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯ ನಂತರ ಮತ್ತು ಋತುಬಂಧದ ಸಮಯದಲ್ಲಿ ಈಸ್ಟ್ರೊಜೆನ್ ಕಡಿಮೆಯಾದಾದ್ರೆ ಕೂದಲು ಉದುರುವುದು ಹೆಚ್ಚಾಗುತ್ತದೆ. ಮುಟ್ಟಿನ ಸಮಯದಲ್ಲಿ ಕೂಡ ಕೂದಲು ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತದೆ. 

ಒಂದ್ವೇಳೆ ನೀವು ಮುಟ್ಟಿನ ಸಮಯದಲ್ಲಿ ಕೂದಲಿಗೆ ಚಿಕಿತ್ಸೆ ನೀಡಿದರೆ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ಬಿಟ್ಟರೆ ಮುಟ್ಟಿನ ಸಮಯದಲ್ಲಿ ಕೂದಲು ಕತ್ತರಿಸಬೇಡಿ ಎಂಬುದಕ್ಕೆ ಮತ್ತ್ಯಾವ ಕಾರಣವೂ ವಿಜ್ಞಾನದಲ್ಲಿ ಇಲ್ಲ. 
ಹಾರ್ಮೋನ್ ಏರುಪೇರಿನಿಂದಾಗಿ ಮುಟ್ಟಿನ ಸಮಯದಲ್ಲಿ ಕೂದಲು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಹಾಗಂತ ಎಲ್ಲರಿಗೂ ಒಂದೇ ರೀತಿ ಆಗ್ಬೇಕಾಗಿಲ್ಲ. ಕೆಲವರಿಗೆ ಮುಟ್ಟಿನ ಸಮಯದಲ್ಲಿ ಕೂದಲು ಹೆಚ್ಚಾಗಿ ಉದುರೋದಿಲ್ಲ. ನಿಮ್ಮ ದೇಹ ಪ್ರಕೃತಿ ಹೇಗಿದೆ ಎಂಬುದನ್ನು ಗಮನಿಸಿ ನೀವು ಕೂದಲು ಕತ್ತರಿಸುವ ನಿರ್ಧಾರ ತೆಗೆದುಕೊಳ್ಳಬಹುದು.   

ತುಂಬಾ ಬಿಗಿಯಾದ ಬ್ರಾ ಧರಿಸಿದ್ರೆ ಗಂಭೀರ ಅನಾರೋಗ್ಯ ಕಾಡುತ್ತೆ!

ಮುಟ್ಟಿನ ಸಮಯದಲ್ಲಿ ವ್ಯಾಕ್ಸಿಂಗ್ ಏಕೆ ನಿಷೇಧಿಸಲಾಗಿದೆ? : ಮುಟ್ಟಿನ ಸಮಯದಲ್ಲಿ ದೇಹ ನೋವಿನಿಂದ ಕೂಡಿರುತ್ತದೆ. ಹಾರ್ಮೋನುಗಳ ಬದಲಾವಣೆ ದೇಹವನ್ನು ಹೆಚ್ಚು ಸೂಕ್ಷ್ಮವಾಗಿಸುತ್ತದೆ. ಈ ಸಂದರ್ಭದಲ್ಲಿ  ವ್ಯಾಕ್ಸಿಂಗ್  ಮಾಡಿದ್ರೆ ನೋವು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ವ್ಯಾಕ್ಸಿಂಗ್ ವೇಳೆ ಚರ್ಮ ಮತ್ತಷ್ಟು ಎಳೆಯುವುದ್ರಿಂದ ಅಸ್ವಸ್ಥತೆ ಉಂಟಾಗಬಹುದು. ಹಾಗಾಗಿ ಹೆಚ್ಚಿನ ಮಹಿಳೆಯರು ಈ ಸಮಯದಲ್ಲಿ ವ್ಯಾಕ್ಸಿಂಗ್ ಮಾಡಲು ಹಿಂದೇಟು ಹಾಕ್ತಾರೆ.  
 

click me!