ಭಾರತದ ಕ್ಷಿಪಣಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾತ್ರ

By Suvarna News  |  First Published Mar 8, 2023, 6:02 PM IST

ಭಾರತದ ಕ್ಷಿಪಣಿ ಕಾರ್ಯಕ್ರಮಗಳು ಜಗತ್ತಿನ ಅತ್ಯಾಧುನಿಕ ಕ್ಷಿಪಣಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದರ ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ.


ಬೆಂಗಳೂರು: ಭಾರತದ ಕ್ಷಿಪಣಿ ಕಾರ್ಯಕ್ರಮಗಳು ಜಗತ್ತಿನ ಅತ್ಯಾಧುನಿಕ ಕ್ಷಿಪಣಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದರ ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಭಾರತದ ಕ್ಷಿಪಣಿ ಯೋಜನೆಗಳು ಆರಂಭವಾದಂದಿನಿಂದಲೂ ಮಹಿಳೆಯರು ಅದರಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ನಂತರದ ವರ್ಷಗಳಲ್ಲಿ ಅವರ ಪಾತ್ರಗಳೂ ಹೆಚ್ಚಾಗುತ್ತಾ ಬಂದಿವೆ. ಇಂದು ಮಹಿಳೆಯರು ಕ್ಷಿಪಣಿ ನಿರ್ಮಾಣ ನಡೆಸುವ ವಿವಿಧ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದು, ಅವುಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಳೂ ಸೇರಿವೆ.

ಭಾರತದ ಕ್ಷಿಪಣಿ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕೆಲವು ಮಹಿಳೆಯರ ಉದಾಹರಣೆಗಳು ಇಲ್ಲಿವೆ.

Tap to resize

Latest Videos

undefined

ಟೆಸ್ಸಿ ಥಾಮಸ್: "ಮಿಸೈಲ್ ವುಮನ್ ಆಫ್ ಇಂಡಿಯಾ" ಎಂದೂ ಹೆಸರುವಾಸಿಯಾಗಿರುವ ಟೆಸ್ಸಿ ಥಾಮಸ್ (Tessy Thomas) ಅವರು ಭಾರತದಲ್ಲಿ ಒಂದು ಕ್ಷಿಪಣಿ ಕಾರ್ಯಕ್ರಮದ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಅಗ್ನಿ-4, ಮತ್ತು ಅಗ್ನಿ-5 ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಈ ಕ್ಷಿಪಣಿಗಳು ದೀರ್ಘ ವ್ಯಾಪ್ತಿಯ, ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿಗಳಾಗಿವೆ.

ರಷ್ಯಾ ಎಷ್ಟು ವೇಗವಾಗಿ ಟ್ಯಾಂಕ್ ಪಡೆಗಳನ್ನು ಸಜ್ಜುಗೊಳಿಸಬಲ್ಲದು?

ಗೀತಾ ವರದನ್: ಗೀತಾ ವರದನ್ (Geeta Varadhan) ಅವರು ಭಾರತದ ಪ್ರಥಮ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5ರ ಇನರ್ಷ್ಯಲ್ ನ್ಯಾವಿಗೇಶನ್ ವ್ಯವಸ್ಥೆಯ ಅಭಿವೃದ್ಧಿಯ ಯೋಜನಾ ನಿರ್ದೇಶಕರಾಗಿದ್ದರು. ಅವರು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ವಿಮಾನದ ಏವಿಯಾನಿಕ್ಸ್ ವ್ಯವಸ್ಥೆಯ ಅಭಿವೃದ್ಧಿಯಲ್ಲೂ ಭಾಗಿಯಾಗಿದ್ದರು.

ಆರ್. ರಾಧಿಕಾ : ಆರ್ ರಾಧಿಕಾ (R. Radhika) ಅವರು ಡಿಆರ್‌ಡಿಓ ದಲ್ಲಿ ವಿಜ್ಞಾನಿಯಾಗಿದ್ದವರು. ಅವರು ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ನಾಗ್ ಅನ್ನು ಅಭಿವೃದ್ಧಿ ಪಡಿಸಿದ ತಂಡದ ಭಾಗವಾಗಿದ್ದರು. ಅವರು ಪಿನಾಕಾ ಮಲ್ಟಿಪಲ್ ರಾಕೆಟ್ ಲಾಂಚರ್ ಅಭಿವೃದ್ಧಿಯಲ್ಲೂ ಕೊಡುಗೆ ನೀಡಿದ್ದರು.

ಶುಭಾ ವಾರಿಯರ್ : ಡಿಆರ್‌ಡಿಓ ದಲ್ಲಿ ವಿಜ್ಞಾನಿಯಾಗಿದ್ದ ಶುಭಾ ವಾರಿಯರ್ (Shubha Warrier)ಅವರು ಕೆ-15 ಸಬ್‌ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಮಿಸೈಲ್ (ಎಸ್ಎಲ್‌ಬಿಎಂ) ಅಭಿವೃದ್ಧಿ ಪಡಿಸಿದ ತಂಡದ ಭಾಗವಾಗಿದ್ದರು. ಅವರು ಎಲ್‌ಸಿಎ ತೇಜಸ್ ವಿಮಾನದ ಏವಿಯಾನಿಕ್ಸ್ ವ್ಯವಸ್ಥೆ ಅಭಿವೃದ್ಧಿಯಲ್ಲೂ ಭಾಗಿಯಾಗಿದ್ದರು.

ಡಾ. ಶುಭಾ ತೋಲೆ : ಖಾಸಗಿ ವಲಯದ ನ್ಯೂರೋ ವಿಜ್ಞಾನಿಯಾದ ಡಾ. ಶುಭಾ (Dr. Shubha Tole) ಅವರು ಕ್ಷಿಪಣಿಗಳಿಗೆ ನಿರ್ದೇಶನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಮಿಲಿಟರಿ ಬಳಕೆಗೆ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಅಭಿವೃದ್ಧಿ ಪಡಿಸುವಲ್ಲಿ ಕಾರ್ಯ ನಿರ್ವಹಿಸಿದ್ದರು.

ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ

ಅನುರಾಧಾ ಟಿಕೆ : ಅನುರಾಧಾ (Anuradha TK) ಅವರು ಭಾರತದ ಪ್ರಥಮ ನ್ಯಾವಿಗೇಶನ್ ಉಪಗ್ರಹವಾದ ಐಆರ್‌ಎನ್ಎಸ್ಎಸ್-1ಎ ಉಡಾವಣೆಗೊಳಿಸಿದ ತಂಡದ ಭಾಗವಾಗಿದ್ದರು. ಅವರು ಭಾರತದ ಹಲವು ಕ್ಷಿಪಣಿ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಭಾರತದ ಕ್ಷಿಪಣಿ ಅಭಿವೃದ್ಧಿ (missile development) ಯೋಜನೆಗಳಲ್ಲಿ ಸಾಕಷ್ಟು ಮಹಿಳೆಯರು ಪಾತ್ರ ನಿರ್ವಹಿಸಿದ್ದು, ಅವರಲ್ಲಿ ಕೆಲವರನ್ನು ಉದಾಹರಣೆಯಾಗಿ ನೀಡಲಾಗಿದೆಯಷ್ಟೇ. ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬಿ ರಾಷ್ಟ್ರವಾಗುವಲ್ಲಿ ಅವರ ಕೊಡುಗೆಯೂ ಅತ್ಯಂತ ಮಹತ್ವದ್ದಾಗಿದೆ.
 

click me!