ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು
ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾವಲಂಬಿ ಜೀವನಕ್ಕೆ, ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮ ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಆದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚಿಕೆ ಎಂದರೆ ತಪ್ಪಾಗಲ್ಲ.
ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾವಲಂಬಿ ಜೀವನಕ್ಕೆ, ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮ ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಆದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚಿಕೆ ಎಂದರೆ ತಪ್ಪಾಗಲ್ಲ.
ನಿತ್ಯ ಕಿವಿಗೆ ಅಪ್ಪಳಿಸುವ ಕೌಟುಂಬಿಕ ಹಿಂಸೆ, ತಾರತಮ್ಯ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಸ್ತ್ರೀ ಸಶಕ್ತೀಕರಣಕ್ಕೆ, ಸಬಲೀಕರಣಕ್ಕೆ ಭಾರತ ಇನ್ನಷ್ಟುಕ್ರಮ ಜರುಗಿಸಬೇಕು ಎಂಬುದನ್ನು ಸಾರಿ ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಈಗಾಗಲೇ ಜಾರಿ ಮಾಡಿರುವ ಕೆಲ ಯೋಜನೆಗಳ ಪಟ್ಟಿಇಲ್ಲಿದೆ.
ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ಮಹತ್ತರ ಉದ್ದೇಶದಿಂದ ಜನವರಿ 22, 2015ರಂದು ಹರ್ಯಾಣದ ಪಾಣಿಪತ್ನಲ್ಲಿ ಈ ಯೋಜನೆಯನ್ನು ತರಲಾಯಿತು. ಈ ಯೋಜನೆಯು ವನ್ನು ಹೊಂದಿದೆ. ಮೊದಮೊಲಿಗೆ ಪುರುಷ-ಸ್ತ್ರೀ ಅನುಪಾತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಅನಂತರದಲ್ಲಿ ಹೆಣ್ಣು ಭ್ರೂಣ ಹತ್ಯೆ, ತಾರತಮ್ಯ ಆಧಾರಿತ ಶಿಕ್ಷಣ, ಲಿಂಗಾಧರಿತ ಅಬಾರ್ಷನ್ ಮುಂತಾದವುಗಳ ವಿರುದ್ಧ ಜಾಗೃತ ಮೂಡಿಸಲು ಬಳಸಲಾಯಿತು. ಈ ಯೋಜನೆಯಿಂದ ಅಲ್ಪಮಟ್ಟಿಗೆ ಮಹಿಳಾ ಸಾಕ್ಷರತೆ ಮತ್ತು ಸ್ತ್ರೀ-ಪುರುಷರ ಅನುಪಾತ ಹೆಚ್ಚಾಗಿದೆ ಎನ್ನಲಾಗಿದೆ.
ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಗೆದ್ದು ಬೀಗಿದ ಛಲಗಾತಿ ಶ್ರುತಿ ನಾಯ್ಡು!
ಮಹಿಳಾ ಇ-ಹಟ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2016ರಲ್ಲಿ ಈ ಯೋಜನೆಯನ್ನು ಜಾರಿ ಮಾಡಿತು. ಮಹಿಳಾ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಆನ್ಲೈನ್ನಲ್ಲಿ ಮಾರುಕಟ್ಟೆಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಮೂಲಕ ಮಾರಾಟಗಾರರು, ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳಾ ಉದ್ಯಮಿಯೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮಧ್ಯವರ್ತಿಗಳ ಸಹಾಯ ಇಲ್ಲದೆ ಮೊಬೈಲ್ ಮೂಲಕವೇ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆ ಜಾರಿಯಾದಾಗಿನಿಂದ 17 ಲಕ್ಷ ಜನರು ಈ ಪೋರ್ಟಲ್ಗೆ ಭೇಟಿ ನೀಡಿದ್ದಾರೆ. ಇದರಲ್ಲಿ 2000 ಉತ್ಪನ್ನಗಳಿದ್ದು, 24 ರಾಜ್ಯಗಳಲ್ಲಿ ಇದರ ಸೇವೆ ಲಭ್ಯವಿದೆ.
ಮಹಿಳಾ ಶಕ್ತಿ ಕೇಂದ್ರ
ಗ್ರಾಮೀಣ ಮಹಿಳೆಯರ ಸಬಲೀಕರಣ ಉದ್ದೇಶದಿಂದ 2017ರಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. 155 ಹಿಂದುಳಿದ ಜಿಲ್ಲೆಗಳ ಸ್ವಯಂ ಸೇವಕ ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಡಿಜಿಟಲ್ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಂತೆ ಅರಿವು ಮೂಡಿಸುವುದು ಇದರ ಉದ್ದೇಶ. ಪ್ರತಿ ರಾಜ್ಯ, ಜಿಲ್ಲಾ, ಬ್ಲಾಕ್ ಮಟ್ಟದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ವರ್ಕಿಂಗ್ ವುಮನ್ ಹಾಸ್ಟೆಲ್
ಉದ್ಯೋಗಸ್ಥ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಮತ್ತು ಸೂಕ್ತ, ವ್ಯವಸ್ಥಿತಿ ವಸತಿ ಒದಗಿಸುವ ದೃಷ್ಟಿಯಿಂದ ಜಾರಿಗೆ ತರಲಾದ ಯೋಜನೆ ಇದು. ಮಕ್ಕಳಿಗೆ ಡೇ ಕೇರ್ ವ್ಯವಸ್ಥೆಯನ್ನೂ ಒಳಗೊಂಡಿದ್ದು, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಈ ಸೌಲಭ್ಯವಿದೆ. ಮೆಟ್ರೋ ನಗರಗಳಲ್ಲಿ ತಿಂಗಳಿಗೆ 50,000ಕ್ಕಿಂತ ಕಡಿಮೆ ಆದಾಯ ಇರುವ ಹಾಗೂ ಉಳಿದ ಸ್ಥಳಗಳಲ್ಲಿ ತಿಂಗಳಿಗೆ 35,000 ಕಡಿಮೆ ಆದಾಯ ಇರುವ ಯಾವುದೇ ಮಹಿಳೆ ಈ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ 890 ಹಾಸ್ಟೆಲ್ಗಳು ಮಂಜೂರಾಗಿದ್ದು, 66,000 ಉದ್ಯೋಗಸ್ಥ ಮಹಿಳೆಯರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ.
ಮಹಿಳಾ ದಿನ ವಿಶೇಷ; ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಸಾಕೇ!
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯು ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಯೋಜನೆ. ಬಡ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡುವ ಯೋಜನೆಯಾಗಿದೆ. ಹೆಣ್ಣು ಮಗು ಜನಿಸಿದ ನಂತರ 10 ವರ್ಷದ ಒಳಗಾಗಿ ಯಾವುದೇ ಪæäೕಸ್ಟ್ ಆಫೀಸ್ ಅಥವಾ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು.
ಇದಕ್ಕೆ ತಂದೆ ತಾಯಿ ಅಥವಾ ಪೋಷಕರು ವರ್ಷಕ್ಕೆ ಎಷ್ಟಾದರೂ ಹಣ ಡೆಪಾಸಿಟ್ ಮಾಡಬಹುದು. ಈ ಹಣಕ್ಕೆ 8.6%ನಷ್ಟುಬಡ್ಡಿ ಬರುತ್ತದೆ ಮತ್ತು ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಹೆಣ್ಣು ಮಗುವಿಗೆ 10 ವರ್ಷ ತುಂಬಿದ ಬಳಿಕ ಉಳಿತಾಯ ಮಾಡಿದ ಹಣದಲ್ಲಿ 50% ಹಣವನ್ನು ಶೈಕ್ಷಣಿಕ ಖರ್ಚಿಗೆ ಬಳಸಿಕೊಳ್ಳಬಹುದು. ಸರ್ಕಾರ ಪ್ರತಿವರ್ಷ ಬಡ್ಡಿ ಆದಾಯ ಪ್ರಕಟಿಸುತ್ತದೆ. ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ತದನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.
ನಾರಿ ಶಕ್ತಿ ಪುರಸ್ಕಾರ
1999ರಲ್ಲಿ ಜಾರಿಗೆ ತರಲಾದ ಈ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಶಾಶ್ವತ ಕೊಡುಗೆ ನೀಡುವ, ದುಡಿಯುವ ಹೆಣ್ಣು ಮಕ್ಕಳನ್ನು ಗುರುತಿಸಿ ನೀಡುವ ಪುರಸ್ಕಾರವಾಗಿದೆ. ಇದು ಭಾರತದಲ್ಲಿ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದು. ಪ್ರತಿ ವರ್ಷ ಮಾಚ್‌ರ್ 8 ರಂದು ಅರ್ಹ ಸಾಧಕಿಯರಿಗೆ ದೇಶದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿ ಪತ್ರ ಮತ್ತು 1,00,000 ರು. ನಗದನ್ನು ಒಳಗೊಂಡಿರುತ್ತದೆ.
ಒನ್ ಸ್ಟಾಪ್ ಸೆಂಟರ್ ಯೋಜನೆ
ಖಾಸಗಿ ಅಥವಾ ಸಾರ್ವಜನಿಕ ವಲಯಗಳಲ್ಲಿ ದೌರ್ಜನ್ಯ ಎದುರಿಸುವ ಮಹಿಳೆಯರಿಗೆ ಒಂದೇ ಸೂರಿನಡಿ ಬೆಂಬಲ ಮತ್ತು ನೆರವು ನೀಡುವ ಯೋಜನೆ ಇದು. ಮಹಿಳೆಯರ ಮೇಲಿನ ಯಾವುದೇ ರೀತಿಯ ಹಿಂಸಾಚಾರದ ವಿರುದ್ಧ ಹೋರಾಡಲು ನೊಂದ ಹೆಣ್ಣುಮಕ್ಕಳಿಗೆ ವೈದ್ಯಕೀಯ, ಕಾನೂನು ಬೆಂಬಲ ಮತ್ತು ಸಮಾಲೋಚನೆಯಂಥ ತುರ್ತು ನೆರವನ್ನು ನೀಡಲಾಗುತ್ತದೆ. ನಿರ್ಭಯಾ ಫಂಡ್ ಮೂಲಕ ಈ ಯೋಜನೆಗೆ ಹಣ ಒದಗಿಸಲಾಗುತ್ತಿದೆ.
ಸ್ವಾಧಾರ್ ಗ್ರೇ ಸ್ಕೀಮ್
ಕೌಟುಂಬಿಕ ಸಮಸ್ಯೆ, ಅಪರಾಧ, ಹಿಂಸೆ, ಮಾನಸಿಕ ಒತ್ತಡ, ಸಾಮಾಜಿಕ ಬಹಿಷ್ಕಾರ ಮುಂತಾದ ಸಂದರ್ಭಗಳಲ್ಲಿ ಮಹಿಳೆಯರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಇದೇ ರೀತಿ ಉದ್ದೇಶವನ್ನು ಹೊಂದಿರುವ ಇನ್ನೊಂದು ಯೋಜನೆ ಶಾರ್ಟ್ ಸ್ಟೇ ಹೋಂ (ಎಎಸ್ಎಸ್ಎಚ್). ನಿರ್ಗತಿಕರಾದ ಮಹಿಳೆಯರಿಗೆ ಪ್ರಾಥಮಿಕವಾಗಿ ಆಹಾರ, ವಸತಿ, ಬಟ್ಟೆ, ಮೆಡಿಕಲ್ ಟ್ರೀಟ್‌ಮೆಂಟ್ ಒದಗಿಸಲಾಗುತ್ತದೆ. ಕುಟುಂಬ ಅಥವಾ ಸಮಾಜದಲ್ಲಿ ಅವರ ಮರು ಹೊಂದಾಣಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಅಪರಾಧ ಮುಕ್ತವಾಗಿ ಘನತೆಯಿಂದ ಬಾಳಲು ಈ ಯೋಜನೆ ಅನುವು ಮಾಡಿಕೊಡುತ್ತದೆ.
ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?
ಪ್ರಧಾನ ಮಂತ್ರಿ ಉಜ್ವಲಾ ಯೋಜನೆ
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆಯುಕ್ತ ಅಡುಗೆಮನೆಯಿಂದ ಮುಕ್ತಿ ನೀಡಿ, ಶುದ್ಧ ಇಂಧನವನ್ನು ಒದಗಿಸುವ ಮಹತ್ತರ ಉದ್ದೇಶದಿಂದ 2016ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಳೆಯುಳಿಕೆ ಇಂಧನಗಳು ಮತ್ತು ಇತರ ಇಂಧನಗಳನ್ನು ಅಡುಗೆಗಾಗಿ ಬಳಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿಗ್ರಹಿಸುವುದು, ಅಡುಗೆಗೆ ಬಳಸುವ ಅಶುದ್ಧ ಇಂಧನಗಳ ಪರಿಣಾಮವಾಗಿ ಸಂಭವಿಸುವ ಸಾವುನೋವುಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ. ಸದ್ಯ 3.4 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಶಿ-ಬಾಕ್ಸ್ ಪೋರ್ಟಲ್
ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಎದುರಿಸುವ ಮಹಿಳೆಯರಿಗೆ ಸೂಕ್ತ ಪರಿಹಾರ ಅಥವಾ ಸುರಕ್ಷಿತ ವಾತಾವರಣ ನಿರ್ಮಿಸುವ ಉದ್ದೇಶದಿಂದ 2018ರಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರಡಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಉದ್ಯೋಗ ಮಾಡುವ ಸ್ಥಳದಲ್ಲಿನ ಯಾವುದೇ ರೀತಿಯ ದೌರ್ಜನ್ಯದ ಬಗ್ಗೆ ದೂರು ನೀಡಬಹುದಾಗಿದೆ. ಈ ದೂರು ನೇರವಾಗಿ ಕೇಂದ್ರ ಮತ್ತು ರಾಜ್ಯದ ಸಂಬಂಧಿತ ಅಧಿಕಾರಿಗಳ ಬಳಿ ಹೋಗುವುದರಿಂದ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ.
ಸ್ಟೆಪ್ (ಎಸ್ಟಿಇಪಿ)
ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತ ಯೋಜನೆಯನ್ನು(ಸ್ಟೆಪ್) ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ 1986ರಲ್ಲಿ ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.