Pre menstrual syndrome: ಮುಟ್ಟಿನ ಸಮಯದಲ್ಲಿ ಕೋಪ, ಖಿನ್ನತೆ: ಹೀಗೇಕೆ, ಪರಿಹಾರ?

By Suvarna News  |  First Published Dec 10, 2021, 4:03 PM IST

ಮುಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರು ವ್ಯಗ್ರರಾಗಿರುವುದು, ದುಃಖ, ಖಿನ್ನತೆ ಮೊದಲಾದವುಗಳಿಂದ ಬಳಲುತ್ತಾರೆ. ಇದಕ್ಕೆ ಕಾರಣವೇನು, ಪರಿಹಾರಗಳೇನು ತಿಳಿಯೋಣ ಬನ್ನಿ.
 


ಮಾಸಿಕ ಋತುಸ್ರಾವದ (Menstruation) ಕೆಲವೇ ಮಹಿಳೆಯರಿಗೆ (Woman) ಮಾತ್ರ ಬಿಡುಗಡೆಯ ಅನುಭವ ಕೊಡುತ್ತದೆ. ಹೆಚ್ಚಿನವರಲ್ಲಿ ಅದು ಕೆಳಹೊಟ್ಟೆಯ ನೋವನ್ನು ಉಂಟುಮಾಡುತ್ತದೆ. ಇದು ಸಾಮಾನ್ಯ. ಇನ್ನು ಎದೆಯಲ್ಲಿ ಊತ, ತಲೆನೋವು (Headache), ಬೆನ್ನು ನೋವು (Backache), ಗ್ಯಾಸ್ಟ್ರಿಕ್ (Gastric) ಮುಂತಾದ ದೈಹಿಕ ಸಮಸ್ಯೆಗಳನ್ನು ಎದುರಿಸುವವರೂ ತುಂಬಾನೇ ಮಂದಿ. ಇದನ್ನು ಅನುಸರಿಸಿಯೇ ಮನಸ್ಸಿನ ಭಾವನೆಗಳು ಹತೋಟಿ ತಪ್ಪುವ ಅಪಾಯವೂ ಹಲವರಲ್ಲಿದೆ. ಇವೆಲ್ಲ ಆಗುವುದು ಹಾರ್ಮೋನ್‌ಗಳ (Harmone) ಏರುಪೇರಿನಿಂದ.   

ಇದನ್ನು ಪ್ರಿ ಮೆನ್‌ಸ್ಟ್ರುಯಲ್ ಸಿಂಡ್ರೋಮ್ (PMS) ಅಂತಲೂ ಹೇಳುತ್ತಾರೆ. ಆದರೆ ಇದೇನೂ ಒಂದು ಕಾಯಿಲೆಯಲ್ಲ. ಹೆಚ್ಚಿನ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು. ತುಂಬಾ ಮಂದಿಗೆ ಈ ಸಮಯದಲ್ಲಿ ಚಾಕೊಲೇಟ್ (chocolate) ತಿನ್ನುವ ಬಯಕೆಯೂ ಹೆಚ್ಚುವುದುಂಟು. ಅದಷ್ಟೇ ಅಲ್ಲ ಮೊಡವೆ, ಆಯಾಸ, ನಿದ್ರಾಹೀನತೆ, ಶಕ್ತಿಯ ಕೊರತೆ, ಖಿನ್ನತೆ (Depression) ಮತ್ತು ಮೂಡ್ ಸ್ವಿಂಗ್‌ಗಳೂ ಕಾಣಿಸಿಕೊಳ್ಳಬಹುದು. ಸಣ್ಣ ಸಣ್ಣ ಕಾರಣಕ್ಕೂ ರೇಗಬಹುದು, ಕೋಪಿಸಿಕೊಳ್ಳಬಹುದು. ದುಃಖಿಸಬಹುದು ಅಥವಾ ಖಿನ್ನತೆಗೆ ಒಳಗಾಗಬಹುದು. ಆಗಾಗ ಮೂಡ್ ಸ್ವಿಂಗ್ಸ್ ಉಂಟಾಗುವುದು ಮಹಿಳೆಯರ ಮೇಲೆ ನಕಾರಾತ್ಮಕ ಪ್ರಭಾವ ಉಂಟು ಮಾಡುತ್ತದೆ. ಇಂಥ ಸಂದರ್ಭದಲ್ಲಿ ಕುಟುಂಬದವರು ಆಕೆಗೆ ಸೂಕ್ತ ಸಮಾಧಾನ, ಆರೈಕೆ, ಸಾಂತ್ವನ ಹಾಗೂ ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ಒದಗಿಸಬೇಕು.

Tap to resize

Latest Videos

Hign BP and Pregnancy: ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ನಿರ್ವಹಿಸುವುದು ಹೇಗೆ ?

ಮೂಡ್ ಬದಲಾವಣೆಗಳು (Mood)
ವಾಸ್ತವವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಉಂಟಾಗುವ ಒತ್ತಡದಿಂದ ಮೆದುಳಿನಲ್ಲಿನ ಪಿಟ್ಯುಟರಿ ಮತ್ತು ಅಂಡಾಶಯದ ನಡುವಿನ ಸಂಪರ್ಕವು ತೊಂದರೆಗೊಳಗಾಗುತ್ತದೆ. ಇಂಥ ವೇಳೆಯಲ್ಲಿ ಮೂಡ್ಗಳು ಕ್ಷಿಪ್ರಗತಿಯಲ್ಲಿ ಬದಲಾಗಬಹುದು. ಇದು ದಿನಚರಿಯಲ್ಲಿ ಸಮಸ್ಯೆ ಉಂಟುಮಾಡಬಹುದು. ಈ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಾರದು, ಆದರೆ ಲಘು ವ್ಯಾಯಾಮ ಮಾಡಬೇಕು. ಮುಂಜಾನೆ ಅಥವಾ ಸಂಜೆ ವಾಕಿಂಗ್ ಒಳ್ಳೆಯದು. 

undefined

ಕೋಪ: ಮುಟ್ಟು ತುಂಬಾ ಅಹಿತಕರವಾಗಿದ್ದು, ಈ ದಿನಗಳಲ್ಲಿ ಹಾರ್ಮೋನುಗಳು ಅನೇಕ ರೀತಿಯಲ್ಲಿ ಏರಿಳಿತಗೊಳ್ಳುತ್ತವೆ. ಈ ಕಾರಣದಿಂದಾಗಿ ಭಾವನೆಗಳು ಬದಲಾಗುತ್ತವೆ ಮತ್ತು ಕೋಪಕ್ಕೆ ಕಾರಣವಾಗುತ್ತದೆ. ಆದರೆ ಈ ದಿನಗಳಲ್ಲಿ ನೀವು ಯಾರ ಮೇಲೆ ಕೋಪಗೊಳ್ಳುತ್ತೀರೋ ಅವರ ವಿಷಯದಲ್ಲಿ ಹೆಚ್ಚು ತಾಳ್ಮೆಯಿಂದಿರಬೇಕು. ಸಾಧ್ಯವಾದರೆ ಅವರಿಂದ ಸ್ವಲ್ಪ ದೂರ ಇರಿ. 

ದುಃಖ: ದೇಹದಲ್ಲಿನ ಕಡಿಮೆ ಎಂಡಾರ್ಫಿನ್ ಮತ್ತು ಹೆಚ್ಚಿನ ಸಿರೊಟೋನಿನ್ ಕಾರಣದಿಂದಾಗಿ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವಾಕಿಂಗ್ ಇತ್ಯಾದಿಗಳನ್ನು ಮಾಡಿದರೆ ಉತ್ತಮ. ವ್ಯಾಯಾಮ ಮಾಡುವುದರಿಂದ ಮುಟ್ಟಿನ ನೋವು ಕಡಿಮೆಯಾಗಿ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.

ಕಿರಿಕಿರಿ: ಮುಟ್ಟಿನ ಕಾಲದಲ್ಲಿ ನೀವು ಸಾಕಷ್ಟು ವಿಶ್ರಾಂತಿ ಪಡೆಯದಿದ್ದಾಗ ಇದು ಮುಖ್ಯವಾಗಿ ಸಂಭವಿಸುತ್ತದೆ. ನಿದ್ರೆಯು ಹಾರ್ಮೋನ್‌ ಸಮಸ್ಯೆಗಳನ್ನು ಬಹುಮಟ್ಟಿಗೆ ನಿಭಾಯಿಸಲು ಸಹಾಯ ಮಾಡುತ್ತದೆ. ನಿದ್ರೆಯ ಸಂದರ್ಭದಲ್ಲಿ ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ ಮತ್ತು ದೇಹದ ಹಾರ್ಮೋನ್ ಸ್ರಾವಗಳು ಮಂದಗತಿಯಲ್ಲಿ ಇರುತ್ತವೆ. ಹಾಗಾಗಿ ಹೆಚ್ಚಿನ ಏರುಪೇರುಗಳು ಇರುವುದಿಲ್ಲ. 

ಆತಂಕ: ಈ ದಿನಗಳಲ್ಲಿ ನೀವು ನಿಮ್ಮ ಬಗ್ಗೆ ಚಿಂತಿತರಾಗಿರುತ್ತೀರಿ. ತಾಂತ್ರಿಕವಾಗಿ ಇದನ್ನು ಪ್ರೀ ಮೆನ್ಸ್ಟ್ರುವಲ್ ಡಿಸ್ಫೊರಿಕ್ ಡಿಸಾರ್ಡರ್ ಅಥವಾ ಪಿಎಮ್​ಡಿಡಿ (PMDD) ಎಂದು ಕರೆಯಲಾಗುತ್ತದೆ. ನಿಮ್ಮ ಮೆದುಳಿನಲ್ಲಿರುವ ರಿಸೆಪ್ಟರ್‌ಗಳು ಏರಿಳಿತಗೊಳ್ಳುವ ಹಾರ್ಮೋನುಗಳಿಗೆ ಅಸಹಜವಾಗಿ ಪ್ರತಿಕ್ರಿಯಿಸಿದಾಗ ಇದು ಮುಖ್ಯವಾಗಿ ಸಂಭವಿಸುತ್ತದೆ. 

Pregnancy Tips: ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಯಾವಾಗ ಮಾಡಬೇಕು?

ಏನು ಮಾಡಬೇಕು? 
- ಪ್ರೊಟೀನ್ (Proteine) ಸಾಕಷ್ಟು ಇರುವ ಆಹಾರವನ್ನು ಸೇವಿಸಿ. ದೇಹದಲ್ಲಿ ಉಷ್ಣತಾಮಾನ ಹೆಚ್ಚು ಇರುವುದರಿಂದ ಶಮನಕಾರಕ ಆಹಾರ, ಎಳನೀರು ಇತ್ಯಾದಿ ಸೇವಿಸಿ.
- ದಾಳಿಂಬೆ (Pomgranate) , ಕಿವಿ (Kiwi) ಮುಂತಾದ ರಕ್ತಪುಷ್ಟಿದಾಯಕವಾದ ಹಣ್ಣುಗಳನ್ನು ಸೇವಿಸಿ. 
- ದಿನಕ್ಕೆ 7-8 ಗಂಟೆ ನಿದ್ರೆ ಮಾಡಿ.
- ಹೆಚ್ಚು ಕಷ್ಟದ ಕೆಲಸಗಳನ್ನು ಮಾಡುವ ಬದಲು, ವಾಕಿಂಗ್‌ನಂಥ ಲಘು ವ್ಯಾಯಾಮಗಳನ್ನು ಮಾಡಿ. 
- ನಿತ್ಯದ ಕೆಲಸದ ಅವಧಿಯನ್ನು ಒಂದು ಗಂಟೆ ಕಡಿಮೆ ಮಾಡಿ.   

click me!